ಪ್ರದೋಷ

ಹಿಂದೂ ಪಂಚಾಂಗದಲ್ಲಿನ ದ್ವಿಮಾನ ಸಂದರ್ಭ

ಪ್ರದೋಷ ಪದವು ಹಿಂದೂ ಪಂಚಾಂಗದಲ್ಲಿ ಪ್ರತಿ ಪಕ್ಷದ ಹದಿಮೂರನೇ ದಿನ ನಡೆಯುವ ಅರ್ಧಮಾಸಿಕ ಘಟನೆಯನ್ನು ಸೂಚಿಸುತ್ತದೆ.[] ಇದು ಹಿಂದೂ ದೇವತೆಯಾದ ಶಿವನ ಪೂಜೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಈ ಮಂಗಳಕರವಾದ ೩ ಗಂಟೆಯ ಅವಧಿ, ಅಂದರೆ ಸೂರ್ಯಾಸ್ತಕ್ಕೆ ೧.೫ ಗಂಟೆ ಮೊದಲು ಮತ್ತು ನಂತರದ ಅವಧಿಯು ಶಿವನ ಪೂಜೆಗಾಗಿ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ಮಾಡಲಾದ ಉಪವಾಸ ಅಥವಾ ವ್ರತವನ್ನು "ಪ್ರದೋಷ ವ್ರತ"ವೆಂದು ಕರೆಯಲಾಗುತ್ತದೆ.[] ಭಕ್ತನು ರುದ್ರಾಕ್ಷಿ, ವಿಭೂತಿಗಳನ್ನು ಧರಿಸಿ ಶಿವನನ್ನು ಅಭಿಷೇಕ, ಗಂದದ ಲೇಪನ ದ್ರವ್ಯ, ಬಿಲ್ವಪತ್ರೆ, ಸುಗಂಧ ದ್ರವ್ಯ, ದೀಪ ಮತ್ತು ನೈವೇದ್ಯದಿಂದ ಪೂಜಿಸಬೇಕು.

ವ್ಯುತ್ಪತ್ತಿ

ಬದಲಾಯಿಸಿ

ಪ್ರದೋಷ ಪದದ ವ್ಯುತ್ಪತ್ತಿ ಹೀಗಿದೆ - ಪ್ರದೋಷನು ಕಲ್ಪ ಮತ್ತು ದೋಷ ಇವರ ಮಗನಾಗಿದ್ದಾನೆ. ಅವನಿಗೆ ನಿಶಿತ ಮತ್ತು ವ್ಯುಸ್ಥ ಎಂಬ ಹೆಸರಿನ ಇಬ್ಬರು ಸೋದರರಿದ್ದಾರೆ. ಈ ಮೂರು ಹೆಸರುಗಳ ಅರ್ಥ ರಾತ್ರಿಯ ಆರಂಭ, ಮಧ್ಯಭಾಗ ಮತ್ತು ಅಂತ್ಯ ಎಂಬುದಾಗಿದೆ.[] ಪ್ರತಿ ತಿಂಗಳಲ್ಲಿ ಮತ್ತು ಪ್ರತಿ ಪಕ್ಷದ ಅವಧಿಯಲ್ಲಿ, ತ್ರಯೋದಶಿಯು ದ್ವಾದಶಿಯ ಅಂತ್ಯವನ್ನು ಸೇರುವಾಗಿನ ಸಮಯ ಬಿಂದುವನ್ನು ಪ್ರದೋಷ ಎಂದು ಕರೆಯಲಾಗುತ್ತದೆ.[]

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ

http://www.speakingtree.in/blog/pradoshrudra-poojan-and-vrata http://www.thirukalukundram.in thirukalukundram

"https://kn.wikipedia.org/w/index.php?title=ಪ್ರದೋಷ&oldid=972877" ಇಂದ ಪಡೆಯಲ್ಪಟ್ಟಿದೆ