ಪ್ರದೀಪ್ ಕುಮಾರ್ ಮೊಹಾಂತಿ

ಪ್ರದೀಪ್ ಕುಮಾರ್ ಮೊಹಾಂತಿ ಅವರು ಒಬ್ಬ ಭಾರತೀಯ ವಕೀಲ ಮತ್ತು ನ್ಯಾಯಶಾಸ್ತ್ರಜ್ಞ. ಇವರು ಜೂನ್ ೧೦, ೧೯೫೫ರಲ್ಲಿ ಜನಿಸಿದರು. ಪ್ರಸ್ತುತ ೨೩ ಮಾರ್ಚ್ ೨೦೧೯ ರಿಂದ ಲೋಕಪಾಲ್ ಸಮಿತಿಯ ನ್ಯಾಯಾಂಗ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ೭೦ ನೇ ವಯಸ್ಸಿನಲ್ಲಿ ಹುದ್ದೆಯಿಂದ ನಿವೃತ್ತರಾದರು. ಅವರು ಝಾರ್ಖಂಡ್ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾದೀಶರು.

ನ್ಯಾಯಾಧೀಶರು
ಪ್ರದೀಪ್ ಕುಮಾರ್ ಮೊಹಾಂತಿ
ನ್ಯಾಯಾಂಗ ಸದಸ್ಯ,ಲೋಕಪಾಲ್

ಲೋಕ್‍ಪಾಲ್‍ನ ಹಾಲಿ ಅಧ್ಯಕ್ಷರು
ಹಾಲಿ
ಅಧಿಕಾರ ಸ್ವೀಕಾರ 
೨೮ ಮೇ ೨೦೨೨
Appointed by ರಾಮ್‍ನಾಥ್ ಕೋವಿಂದ್
ಪೂರ್ವಾಧಿಕಾರಿ ಪಿನಾಕಿ ಚಂದ್ರ ಘೊಷ್

ನ್ಯಾಯಾಂಗ ಸದಸ್ಯ ಲೋಕ್‍ಪಾಲ್
ಹಾಲಿ
ಅಧಿಕಾರ ಸ್ವೀಕಾರ 
ಮಾರ್ಚ್ ೨೩, ೨೦೧೯
Appointed by ರಾಮ್‍ನಾಥ್ ಕೋವಿಂದ್
ವೈಯಕ್ತಿಕ ಮಾಹಿತಿ
ಜನನ (1955-06-10) ೧೦ ಜೂನ್ ೧೯೫೫ (ವಯಸ್ಸು ೬೯)
ಕಟಕ್, ಒಡಿಶಾ, ಭಾರತ
ಅಭ್ಯಸಿಸಿದ ವಿದ್ಯಾಪೀಠ ಮಧುಸೂಧನ್ ಲಾ ಕಾಲೇಜು, ಕಟಕ್

ಆರಂಭಿಕ ಜೀವನ ಮತ್ತು ಕುಟುಂಬ

ಬದಲಾಯಿಸಿ

ಮೊಹಾಂತಿ ಅವರು ಕಟಕ್‌ನಲ್ಲಿ ವಕೀಲರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ದಿವಂಗತ ಜುಗಲ್ ಕಿಶೋರ್ ಮೊಹಾಂತಿ ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು ಮತ್ತು ತಾಯಿಯ ಅಜ್ಜ ದಿವಂಗತ ರಾಜಕಿಶೋರ್ ದಾಸ್ ಕೂಡ ಒರಿಸ್ಸಾ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು . ಮೊಹಾಂತಿ ಅವರು ಕಟಕ್‌ನ ರಾವೆನ್‌ಶಾ ಕಾಲೇಜಿಯೇಟ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು ಮತ್ತು ೧೯೭೪ ರಲ್ಲಿ ರಾವೆನ್‌ಶಾ ಕಾಲೇಜಿನಿಂದ ಪದವಿ ಪಡೆದರು. ಅವರು ಕಟಕ್‌ನ ಮಧುಸೂದನ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಾಸು ಮಾಡಿದರು. []

ವೃತ್ತಿ

ಬದಲಾಯಿಸಿ

ಮೊಹಾಂತಿ ಒರಿಸ್ಸಾ ಹೈಕೋರ್ಟ್‌ನಲ್ಲಿ ಸಾಂವಿಧಾನಿಕ ಕ್ರಿಮಿನಲ್ ಮತ್ತು ಸಿವಿಲ್ ವಿಷಯಗಳಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದರು ಮತ್ತು ಒರಿಸ್ಸಾ ಹೈಕೋರ್ಟ್ ವಕೀಲರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅವರು ವಿವಿಧ ಪುರಸಭೆಗಳ ಪರವಾಗಿ ಹಾಜರಾಗಿದ್ದರು ಮತ್ತು ಹೈಕೋರ್ಟ್‌ನಲ್ಲಿ ಹೆಚ್ಚುವರಿ ಸರ್ಕಾರಿ ವಕೀಲರಾದರು. ಮೊಹಾಂತಿ ಅವರು ಗ್ರಹಾಂ ಸ್ಟೇನ್ಸ್ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು. ಮಾರ್ಚ್ ೭, ೨೦೦೨ ರಂದು ಅವರು ಒರಿಸ್ಸಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು ನಂತರ ೨೦೦೪ ರಲ್ಲಿ ಖಾಯಂ ನ್ಯಾಯಾಧೀಶರಾದರು. ಹಲವು ಬಾರಿ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಭದ್ರತಾ ಕಾಯಿದೆ ೧೯೮೦ ರ ಅಡಿಯಲ್ಲಿ ರಚಿಸಲಾದ ಎನ್ಎಸ್ಎ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಮೊಹಾಂತಿ ನಾಮನಿರ್ದೇಶನಗೊಂಡರು. ಅಕ್ಟೋಬರ್ ೭, ೨೦೧೬ ರಂದು ಅವರನ್ನು ಜಾರ್ಖಂಡ್ ಹೈಕೋರ್ಟ್‌ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಯಿತು. ಮಾರ್ಚ್ ೨೪, ೨೦೧೭ ರಂದು ಅವರು ಜಾರ್ಖಂಡ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು . [] [] ನ್ಯಾಯಮೂರ್ತಿ ಮೊಹಾಂತಿ ಅವರು ಜೂನ್ ೯, ೨೦೧೭ ರಂದು ಹುದ್ದೆಯಿಂದ ನಿವೃತ್ತರಾದರು. []

ಅವರನ್ನು ಮಾರ್ಚ್ ೨೩, ೨೦೧೯ ರಂದು ೩ ಇತರ ನ್ಯಾಯಾಂಗ ಸದಸ್ಯರೊಂದಿಗೆ ಲೋಕಪಾಲ್ ಸಮಿತಿಯ ನ್ಯಾಯಾಂಗ ಸದಸ್ಯರನ್ನಾಗಿ ನೇಮಿಸಲಾಯಿತು. ಮೇ ೨೮, ೨೦೨೨ ರಂದು ಮೊದಲ ಲೋಕಪಾಲ್ ಅಧ್ಯಕ್ಷರಾದ ಪಿನಾಕಿ ಚಂದ್ರ ಘೋಸ್ ಅವರ ನಿವೃತ್ತಿಯ ನಂತರ ಅವರನ್ನು ಲೋಕಪಾಲ್‌ನ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. []

ಉಲ್ಲೇಖಗಳು

ಬದಲಾಯಿಸಿ
  1. "Hon'ble The Chief Justice Pradip Kumar Mohanty". Retrieved 27 November 2018.
  2. "Justice Pradip Kumar Mohanty appointed as Chief Justice of Jharkhand HC". Retrieved 27 November 2018.
  3. Saran, Bedanti (25 March 2017). "Justice P K Mohanty takes charge as JHC CJ". Hindustan Times. Retrieved 5 May 2019.
  4. "Justice Pradip Kumar Mohanty becomes CJ of Jharkhand HC". outlookindia.com. Retrieved 27 November 2018.
  5. "Justice Mohanty gets additional charge of Lokpal chairperson". Hindustan Times (in ಇಂಗ್ಲಿಷ್). 28 May 2022. Retrieved 9 June 2022.