ಪ್ರತಿಭಟನೆ
ಪ್ರತಿಭಟನೆಯು ಶಬ್ದಗಳ ಅಥವಾ ಕ್ರಿಯೆಗಳ ಮೂಲಕ ನಿರ್ದಿಷ್ಟ ಘಟನೆಗಳು, ನೀತಿಗಳು ಅಥವಾ ಸನ್ನಿವೇಶಗಳಿಗೆ ಆಕ್ಷೇಪದ ಒಂದು ಅಭಿವ್ಯಕ್ತಿ. ಪ್ರತಿಭಟನೆಗಳು, ವೈಯಕ್ತಿಕ ಹೇಳಿಕೆಗಳಿಂದ ಹಿಡಿದು ಸಾಮಾಹಿಕ ಪ್ರದರ್ಶನಗಳವರೆಗೆ, ಹಲವು ವಿಭಿನ್ನ ರೂಪಗಳನ್ನು ಪಡೆಯಬಹುದು. ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸಾರ್ವಜನಿಕ ಅಭಿಪ್ರಾಯ ಅಥವಾ ಸರ್ಕಾರಿ ಕಾರ್ಯನೀತಿಯ ಮೇಲೆ ಪರಿಣಾಮವುಂಟುಮಾಡುವ ಪ್ರಯತ್ನದಲ್ಲಿ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಕೇಳುವಂತೆ ಮಾಡುವ ಒಂದು ಮಾರ್ಗವಾಗಿ ಸಂಘಟಿಸಬಹುದು, ಅಥವಾ ಅವರು ಅಪೇಕ್ಷಿತ ಬದಲಾವಣೆಗಳನ್ನು ತಾವೇ ನೇರವಾಗಿ ಜಾರಿಗೆ ತರುವ ಪ್ರಯತ್ನವಾಗಿ ನೇರ ಕ್ರಮವನ್ನು ಆರಂಭಿಸಬಹುದು. ಪ್ರತಿಭಟನೆ ಮತ್ತು ಸಂಕಟಗಳನ್ನು ವ್ಯಕ್ತಪಡಿಸಲು ಬ್ಲಾಗ್ ಮತ್ತು ಸಾಮಾಜಿಕ ಸಂಪರ್ಕಜಾಲ ತಾಣಗಳು ಪರಿಣಾಮಕಾರಿ ಸಾಧನಗಳಾಗಿವೆ. ಪ್ರತಿಭಟನೆ ಎಂದರೆ ಸಾರ್ವಜನಿಕರು ಒಂದು ಹೇಳಿಕೆಗಾಗಿ ಅಥವಾ ನೀತಿಗೆ ಅಸಮ್ಮತಿ ಅಥವಾ ಆಕ್ಷೇಪಣೆ ವ್ಯಕ್ತಪಡಿಸುವುದು ಅಥವಾ ಒಂದು ನಿರ್ದಿಷ್ಟ ಗುರಿ ಸಾಧಿಸಲು ಶಾಂತಿಯುತ ಪ್ರಚಾರ ಎಂದು ಕರೆಯಲಾಗಬಹುದು . ಪ್ರತಿಭಟನೆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸ ಬಹುದು . ಪ್ರತಿಭಟನೆ ಮಾಡುವವರನ್ನು ಪ್ರತಿಭಟಾನಕರರು ಎಂದು ಕರೆಯುತ್ತಾರೆ. ಪ್ರತಿಭಟನೆ ಎಂದರೆ ಒಂದು ಹಿಂಸಾತ್ಮಕ ಬೆದರಿಕೆಯಲ್ಲ ಆದರೆ ಶಾಂತಿಯುತವಾಗಿ ಜನರು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಪ್ರಚಾರ. ಬಹುತೇಕ ಪ್ರತಿಭಟನೆಗಳು ಸರ್ಕಾರದ ಕಾನೂನು ವಿರುದ್ದ ನಡೆಯುತ್ತದೆ .ಪ್ರತಿಭಟನೆ ಅನ್ಯಾಯದ ವಿರುದ್ದ ಮತ್ತು ಸಾರ್ವಜನಿಕರ ಸುರಕ್ಷತೆ ಹಿತಾಸಕ್ತಿಗಳಿಗೆ ನಡೆಯುತ್ತದೆ . ಪ್ರತಿಭಟನೆ ಎಂದರೆ ಸರ್ಕಾರದ ಆಸ್ತಿಯನ್ನು ನಾಶಮಾಡುವುದು ಅಥವಾ ನಿಯಮಗಳನ್ನು ಉಲ್ಲಂಘಿಸಿ ಸಮಸ್ಯೆ ಸೃಷ್ಟಿಸುವುದು ಅಲ್ಲ ಆದರೆ ಒಂದು ಗುಂಪನ್ನು ಸೃಷ್ಟಿಸಿ ಸಲಾಗಿ ನಡೆಯುತ್ತ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಚಳುವಳಿ.ಪ್ರತಿಭಟನೆ ಮಾನವನ ಹಕ್ಕು ಎಂದು ಗುರುತಿಸಲಾಗಿದೆ . ಸಮಾಜದ ಅನ್ಯಯದ ವಿರುದ್ದ ಪ್ರತಿಭಟಿಸಲು ಪ್ರತಿ ಒಬ್ಬ ಮನುಷ್ಯನ ಕರ್ತವ್ಯ ಅಥವಾ ಜವಾಬ್ದಾರಿ .ಜನರು ಪ್ರತಿಭಟನೆಯನ್ನು ಮಾಡಬಹುದದ ವಿಧಗಳು : ರ್ಯಾಲಿ,ಮಾರ್ಚ್ ಮತ್ತು ಮುಂತಾದವು .[೧]
ಪ್ರತಿಭಟನಾ ವಿಧಗಳು
ಬದಲಾಯಿಸಿ− ೧]ರ್ಯಾಲಿ : ಅಂದರೆ ಪ್ರತಿಭಟನಕಾರರು ಅಥವಾ ಹೋರಾಟಕ್ಕೆ ಬೆಂಬಲ ತೋರಿಸುವವರು ಗುಂಪಾಗಿ ಸಭೆಯ ಮೂಲಕ ಅಥವಾ ವೇದಿಕೆಯ ಮೇಲೆ ಭಾಷಣ ಮೂಲಕ ಪ್ರತಿಭಟನೆ ಮಾಡುವುದು. ಉದಾಹರಣೆ : ಕಾವೇರಿ ಹೋರಾಟ .
− ೨] ಕಾಲ್ನಡಿಗೆ : ಎಂದೆರೆ ಕಾಲು ನಡಿಗೆಯಲ್ಲಿ ಒಂದು ಸ್ಥಳಯಿಂದ ಮತ್ತೊಂದು ಸ್ಥಳಕ್ಕೆ ನಡೆಯುತ್ತ ಪ್ರತಿಭಟನೆ ಮಾಡುವುದು. ಉದಾಹರಣೆ : ಸತ್ಯಾಗ್ರಹ .
− ೩] ಅಹಿಂಸಾತ್ಮಕ ಪ್ರತಿರೋಧ ಅಥವಾ ಅಹಿಂಸಾತ್ಮಕ ಕ್ರಿಯೆ : ಹಿಂಸೆ ಬಳಸದೆ , ಸಾಂಕೇತಕ ಪ್ರತಿಭಟನೆ ಅಥವಾ ಇತರ ವಿಧಾನಗಳ ಮೂಲಕ ಪ್ರತಿಭಟಿಸುವುದು .
− ೪] ಸಾಮಾಜಿಕ ಪ್ರತಿಭಟನೆ : ಸಾಮಾಜಿಕ ಅಥವಾ ರಾಜಕೀಯ ಮತ್ತು ಅನೇಕ ಸಂಸ್ಥೆಯ ನೀತಿಗಳನ್ನು ಬದಲಾವಣೆ ಮಾಡುವ ಉದ್ದೇಶ .
− ೫]ಉಪವಾಸ ಮುಷ್ಕರ : ಜನರು ಗುಂಪಾಗಿ ಅನ್ನ ನೀರನ್ನು ಸೇವಿಸಲಾರದೆ ಅಥವಾ ಕೆಲಸಕ್ಕೆ ಹೋಗದೆ ಸಂಸ್ಥೆಯ ನೀತಿಗಳನ್ನು ಬದಲಾವಣೆ ಮಾಡಲು ಪ್ರತಿಭಟನೆ ಮಾಡುತ್ತಾರೆ. ಉದಾಹರಣೆ : ಕಾರ್ಮಿಕರ ಪ್ರತಿಭಟನೆ.
_
ಉಪಸಂಹಾರ
ಬದಲಾಯಿಸಿಪ್ರತಿಭಟನೆಯು ಶಬ್ದಗಳ ಅಥವಾ ಕ್ರಿಯೆಗಳ ಮೂಲಕ ನಿರ್ದಿಷ್ಟ ಘಟನೆಗಳು, ನೀತಿಗಳು ಅಥವಾ ಸನ್ನಿವೇಶಗಳಿಗೆ ಆಕ್ಷೇಪದ ಒಂದು ಅಭಿವ್ಯಕ್ತಿ. ಪ್ರತಿಭಟನೆಗಳು, ವೈಯಕ್ತಿಕ ಹೇಳಿಕೆಗಳಿಂದ ಹಿಡಿದು ಸಾಮಾಹಿಕ ಪ್ರದರ್ಶನಗಳವರೆಗೆ, ಹಲವು ವಿಭಿನ್ನ ರೂಪಗಳನ್ನು ಪಡೆಯಬಹುದು. ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸಾರ್ವಜನಿಕ ಅಭಿಪ್ರಾಯ ಅಥವಾ ಸರ್ಕಾರಿ ಕಾರ್ಯನೀತಿಯ ಮೇಲೆ ಪರಿಣಾಮವುಂಟುಮಾಡುವ ಪ್ರಯತ್ನದಲ್ಲಿ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಕೇಳುವಂತೆ ಮಾಡುವ ಒಂದು ಮಾರ್ಗವಾಗಿ ಸಂಘಟಿಸಬಹುದು, ಅಥವಾ ಅವರು ಅಪೇಕ್ಷಿತ ಬದಲಾವಣೆಗಳನ್ನು ತಾವೇ ನೇರವಾಗಿ ಜಾರಿಗೆ ತರುವ ಪ್ರಯತ್ನವಾಗಿ ನೇರ ಕ್ರಮವನ್ನು ಆರಂಭಿಸಬಹುದು. ಪ್ರತಿಭಟನೆ ಮತ್ತು ಸಂಕಟಗಳನ್ನು ವ್ಯಕ್ತಪಡಿಸಲು ಬ್ಲಾಗ್ ಮತ್ತು ಸಾಮಾಜಿಕ ಸಂಪರ್ಕಜಾಲ ತಾಣಗಳು ಪರಿಣಾಮಕಾರಿ ಸಾಧನಗಳಾಗಿವೆ.