ಪ್ರಜಾಪ್ರಭುತ್ವದ ವಿಧಗಳು
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪ್ರಜಾಪ್ರಭುತ್ವದ ವಿಧಗಳು :- ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಜಾಪ್ರಭುತ್ವ ಎಂದು ಎರಡು ವಿಧಗಳು
ಪ್ರತ್ಯಕ್ಷ ಪ್ರಜಾಪ್ರಭುತ್ವ (Direct Democracy) :
ಈ ಪ್ರಕಾರದ ಸರ್ಕಾರದಲ್ಲಿ ಜನರು ತಮ್ಮದೇ ಸರ್ಕಾರವನ್ನು ಚುನಾವಣೆ ಮೂಲಕ ರಚಿಸಿಕೊಂಡು ಅವರ ಪ್ರಗತಿಗೆ ಸಹಕಾರಿಯಾಗುವ ನಿಯಮ,ಕಾನೂನುಗಳನ್ನು ರೂಪಿಸಿಕೊಳ್ಳುತ್ತಾರೆ .
- ಇದನ್ನು ನಿಯಮಿತ ವ್ಯಾಪ್ತಿಯನ್ನು ಹೊಂದಿರುವ ದೇಶಗಳು ಪಾಲಿಸುತ್ತವೆ .
- ಈ ವ್ಯವಸ್ಥೆಗಳು ಪ್ರಾಚೀನ ಗ್ರೀಕ್ ಮತ್ತು ಪ್ರಸ್ತುತ ಸ್ವಿಜ್ಜರ್ಲೆಂಡ್ ದೇಶಗಳಲ್ಲಿ ಚಾಲ್ತಿಯಲ್ಲಿವೆ.
- ಭಾರತದಲ್ಲಿ ಇದು ಜನಸಂಖ್ಯೆ ಪ್ರಮಾಣದಿಂದಾಗಿ ರೂಢಿಸಿಕೊಳ್ಳುವುದು ಅಸಾಧ್ಯವಾದುದಾಗಿದೆ.
ಅಪ್ರತ್ಯಕ್ಷ ಪ್ರಜಾಪ್ರಭುತ್ವ (Indirect Democracy) :
ಈ ಪ್ರಕಾರದ ಸರ್ಕಾರದಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಆವರ್ತಿತ ಚುನಾವಣೆಯಲ್ಲಿ ಚುನಾಯಿಸಿ ಶಾಸನ ಸಭೆಗಳಿಗೆ ಕಳುಹಿಸಿಕೊಡುತ್ತಾರೆ. ಚುನಾಯಿತ ಸದಸ್ಯರುಗಳು ಶಾಸನಗಳನ್ನು ಅಥವಾ ಕಾನೂನುಗಳನ್ನು ರೂಪಿಸಿಕೊಂಡು ಆಡಳಿತ ನಿರ್ವಹಣೆ ಮಾಡುತ್ತಾರೆ. ಹೀಗೆ ಚುನಾಯಿತಗೊಂಡ ಪ್ರತಿನಿಧಿಗಳು ತಮ್ಮ ರಾಷ್ಟ್ರ ನಾಯಕರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ರೀತಿಯ ಸರ್ಕಾರವು ಭಾರತ ,ಅಮೇರಿಕಾ ಸಂಯುಕ್ತ ಸಂಸ್ಥಾನಗಳಂತಹ ರಾಷ್ಟ್ರಗಳಿಗೆ ಅತ್ಯಂತ ಸೂಕ್ತವಾದದ್ದಾಗಿದೆ.