ಪ್ಯಾರಿಸ್ ನಲ್ಲಿರುವ ಚಾರ್ಲಿ ಹೆಬ್ಡೊಗೆ ಧಾಳಿ/7-1-2015
ದಿ.7-1-2015ರ ಪ್ಯಾರಿಸ್ ಧಾಳಿ
ಬದಲಾಯಿಸಿ- ಪ್ಯಾರಿಸ್ ನ ಕೇಂದ್ರ ಭಾಗದಲ್ಲಿ'ಚಾರ್ಲಿ ಹೆಬ್ಡೊ' ಎಂಬ ಫ್ರಾನ್ಸಿನ ವಿಡಂಬನಾತ್ಮಕ ವಾರಪತ್ರಿಕೆಯ ಮುಖ್ಯ ಕಚೇರಿ ಮೇಲೆ ಬುಧವಾರ ದಾಳಿ ನಡೆದಿದೆ. ಆದರೆ ಈ ಪತ್ರಿಕೆಗೆ ದಾಳಿ ಮತ್ತು ಬೆದರಿಕೆಗಳು ಹೊಸತೇನಲ್ಲ.
- ವಿಡಂಬನೆಗೆ ಮೀಸಲಾದ ಫ್ರಾನ್ಸ್‌ನ ಈ ವಾರಪತ್ರಿಕೆಯು ಡೆನ್ಮಾರ್ಕ್‌ನ ದಿನಪತ್ರಿಕೆ ಜೈಲಾಂಡ್ ಪೋಸ್ಟ್ ಪ್ರಕಟಿಸಿದ್ದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಕಾರ್ಟೂನ್ ಅನ್ನು 2006ರಲ್ಲಿ ಮರು ಮುದ್ರಿಸುವುದರ ಮೂಲಕ ಪ್ರಚಾರದ ಮುಂಚೂಣಿಗೆ ಬಂದಿತ್ತು.
ಪ್ರತೀಕಾರ
ಬದಲಾಯಿಸಿಫ್ರೆಂಚ್ ವಿಡಂಬನಾತ್ಮಕ ವಾರಪತ್ರಿಕೆ ‘ಚಾರ್ಲಿ ಹೆಬ್ಡೊ’ ಕಚೇರಿಯಲ್ಲಿ ಬುಧವಾರ ಇಬ್ಬರು ಮುಸುಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕ, ನಾಲ್ವರು ವ್ಯಂಗ್ಯಚಿತ್ರಕಾರರು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.
‘ಚಾರ್ಲಿ ಹೆಬ್ಡೊ’ ಪತ್ರಿಕೆಯಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನಕಾರಿಯಾಗಿ ಬಣ್ಣಿಸಿದ್ದ ಕಾರಣಕ್ಕೆ ಮುಸುಕುಧಾರಿಗಳು ಈ ದಾಳಿ ನಡೆಸಿದ್ದಾಗಿ ತಿಳಿದುಬಂದಿದೆ.
ಹಿನ್ನೆಲೆ
ಬದಲಾಯಿಸಿ- ಈ ಪತ್ರಿಕೆಗೆ ದಾಳಿ ಮತ್ತು ಬೆದರಿಕೆಗಳು ಹೊಸತೇನಲ್ಲ.
- ವಿಡಂಬನೆಗೆ ಮೀಸಲಾದ ಫ್ರಾನ್ಸ್‌ನ ಈ ವಾರಪತ್ರಿಕೆಯು ಡೆನ್ಮಾರ್ಕ್‌ನ ದಿನಪತ್ರಿಕೆ ಜೈಲಾಂಡ್ ಪೋಸ್ಟ್ ಪ್ರಕಟಿಸಿದ್ದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಕಾರ್ಟೂನ್ ಅನ್ನು 2006ರಲ್ಲಿ ಮರು ಮುದ್ರಿಸುವುದರ ಮೂಲಕ ಪ್ರಚಾರದ ಮುಂಚೂಣಿಗೆ ಬಂದಿತ್ತು.
- 2011ರಲ್ಲಿ ಮತ್ತೆ ಅದೇ ಕಾರ್ಟೂನನ್ನು ಪತ್ರಿಕೆ ಪ್ರಕಟಿಸಿತ್ತು. ಆಗ ಪತ್ರಿಕೆ ಕಚೇರಿಯ ಮೇಲೆ ಬಾಂಬ್ ದಾಳಿಯಾಗಿತ್ತು. ಅಲ್ಲದೆ ಪತ್ರಿಕೆಯ ಮೇಲೆ ಹತ್ತಾರು ಜನಾಂಗೀಯ ನಿಂದನೆಯ ಮೊಕದ್ದಮೆಗಳು ದಾಖಲಾಗಿದ್ದವು.
- 2012ರಲ್ಲಿ 'ಇನೋಸೆನ್ಸ್ ಆಫ್ ಮುಸ್ಲಿಂ' ಎಂಬ ಚಿತ್ರವೊಂದು ತಮ್ಮ ಧರ್ಮದ ಮೂಲಪುರುಷನನ್ನು ಅವಮಾನಿಸಿದೆ ಎಂದು ಹತ್ತಾರು ದೇಶಗಳಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಪ್ರವಾದಿಯ ವ್ಯಂಗ್ಯಚಿತ್ರ ಕಾಣಿಸಿಕೊಂಡಿತ್ತು. ಆಗ ಪತ್ರಿಕೆ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದವು. ಪ್ರತೀಕಾರ ದಾಳಿಗೆ ಬೆದರಿ ಫ್ರಾನ್ಸಿನ ಶಾಲೆ ಕಾಲೇಜುಗಳು, ರಾಯಭಾರ ಕಚೇರಿಗಳು, 20 ಮುಸ್ಲಿಂ ದೇಶಗಳಿಗೆ ಸೇರಿದ ಸಾಂಸ್ಕೃತಿಕ ಕೇಂದ್ರಗಳನ್ನು ಮುಚ್ಚಲಾಗಿತ್ತು.
ಘಟನೆಯ ವಿವರ
ಬದಲಾಯಿಸಿ- ದಿ.7-1-2015 >ಸಂಪಾದಕೀಯ ಸಭೆ ನಡೆಯುತ್ತಿತ್ತು
- -
- ಪತ್ರಿಕೆಯ ಸಂಪಾದಕ ಸ್ಟಿಫಾನಿ ಚರ್‌ಬೋನಿಯರ್ ಅವರಿಗೆ ಜೀವ ಬೆದರಿಕೆ ಇತ್ತು. ಅವರು ಸದಾ ಪೊಲೀಸರ ಸರ್ಪಗಾವಲಿನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ದಾಳಿ ನಡೆದಾಗ ಕಚೇರಿಯಲ್ಲಿ ವಾರದ ಸಂಪಾದಕೀಯ ಸಭೆ ನಡೆಯುತ್ತಿತ್ತು. ದಾಳಿಯಲ್ಲಿ ಸಂಪಾದಕ ಸ್ಟಿಫಾನಿ ಕೂಡ ಕೊನೆಯುಸಿರೆಳೆದಿದ್ದಾರೆ.
- ದಾಳಿ ಮಾಡಿದ ವ್ಯಕ್ತಿಗಳು ಗುಂಡು ಹಾರಿಸುವಾಗ 'ಅಲ್ಲಾ ಹು ಅಕ್ಬರ್' ಎಂದು ಕೂಗುತ್ತಿದ್ದರು. ಪ್ರವಾದಿಯನ್ನು ಅವಮಾನಿಸಿದವರ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ ಎಂಬುದಾಗಿ ಘೋಷಣೆ ಕೂಗುತ್ತಿದ್ದರು. ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಳಿಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಯೊಬ್ಬರು ದಾಳಿಕೋರರು ಮಾತುಗಳನ್ನು ಆಲಿಸಿದ್ದಾಗಿ ಹೇಳಿದ್ದಾರೆ.
- ದಾಳಿ ನಡೆಯುವ ಒಂದು ಗಂಟೆಗೂ ಮುನ್ನಾ ಐಎಸ್ ಮುಖ್ಯಸ್ಥ ಅಬೂಬಕರ್ ಅಲ್‌ಬಗ್ದಾದಿ ವ್ಯಂಗ್ಯ ಚಿತ್ರವೊಂದನ್ನು ಪತ್ರಿಕೆಯು ಟ್ವೀಟ್ ಮಾಡಿತ್ತು.
- ಗುಂಡಿನ ದಾಳಿ ನಡೆಸಿದ ಬಳಿಕ ‘ಪ್ರತೀಕಾರ ತೀರಿತು’ ಎಂಬ ಘೋಷಣೆಗಳನ್ನು ಕೂಗುತ್ತಾ, ವಾಹನ ನಿಲುಗಡೆ ಪ್ರದೇಶದಿಂದ ಕಪ್ಪು ಬಣ್ಣದ ಕಾರಿನಲ್ಲಿ ದುಷ್ಕರ್ಮಿಗಳು ಪರಾರಿಯಾಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವ್ಯಂಗ್ಯದ ನೋಟ
ಬದಲಾಯಿಸಿ- 'ಚಾರ್ಲಿ ಹೆಬ್ಡೊ' ಪತ್ರಿಕೆ ಸಂಪಾದಕ ಸ್ಟಿಫಾನಿ ಚರ್‌ಬೋನಿಯರ್ ಎಲ್ಲವನ್ನೂ ವ್ಯಂಗ್ಯಗೆರೆಗಳ ಮೂಲಕ ನೋಡುತ್ತಿದ್ದ ವ್ಯಕ್ತಿ. ಪೋಪ್‌ಗಳು, ಅಧ್ಯಕ್ಷರು, ಪ್ರವಾದಿ ಮೊಹಮ್ಮದ್- ಹೀಗೆ ಎಲ್ಲರತ್ತ ವ್ಯಂಗ್ಯ ವಿಡಂಬನೆಯ ನೋಟ ಅವರದು. ಚಾರ್ಬ್ ಎಂಬ ಅಡ್ಡ ಹೆಸರಿನಲ್ಲಿ ಅವರು ಬರೆಯುತ್ತಿದ್ದರು.
- ನಮ್ಮ ವ್ಯಂಗ್ಯಚಿತ್ರಗಳನ್ನು ನೋಡಿ ಮುಸ್ಲಿಮರು ನಗುವುದೇ ಇಲ್ಲ ಎಂದು ನಾನು ಅವರ ಮೇಲೆ ಆರೋಪ ಹೊರಿಸುವುದಿಲ್ಲ. ನಾನು ಫ್ರಾನ್ಸ್ ಕಾನೂನುಗಳಿಗೆ ಬದ್ಧನಾಗಿ ಬದುಕುತ್ತಿದ್ದೇನೆಯೇ ಹೊರತು, ಕುರಾನ್ ಕಾನೂನು ಅಡಿಯಲ್ಲಿ ಅಲ್ಲ, ಎಂದು ಹೇಳುತ್ತಿದ್ದರು.
- 2011ರಲ್ಲಿ ಪ್ರವಾದಿಯ ಕ್ಯಾರಿಕೇಚರ್‌ಗಳನ್ನು ಮುಖಪುಟದಲ್ಲಿ ಪ್ರಕಟಿಸುವ ಮಟ್ಟಕ್ಕೂ ಅವರು ಹೋಗಿದ್ದರು. ಒಂದೆಡೆ ಈ ಪತ್ರಿಕೆಯ ವಿರುದ್ಧ ಮುಸ್ಲಿಮರ ಆಕ್ರೋಶ ನಿಗಿನಿಗಿ ಎನ್ನುತ್ತಿದ್ದರೂ ಫ್ರಾನ್ಸ್ ಸರಕಾರ ಮಾತ್ರ ಪತ್ರಿಕಾ ಸ್ವಾತಂತ್ರ್ಯದ ಪರ ಅಚಲವಾಗಿ ನಿಂತಿತ್ತು. ಹಾಗೆಂದು ಈ ಪತ್ರಿಕೆಗೆ ಭಾರಿ ಪ್ರಸಾರವೇನೂ ಇಲ್ಲ. 1970ರಲ್ಲಿ ಆರಂಭವಾಗಿದ್ದ ಈ ಪತ್ರಿಕೆಯ ಪ್ರಸರಣ ಸಂಖ್ಯೆ 45 ಸಾವಿರ ಇತ್ತು.
- ನಾವು ಸುದ್ದಿಯನ್ನು ಪಕ್ಕಾ ವೃತ್ತಿಪರರಂತೆ ನೋಡುತ್ತೇವೆ. ಕೆಲವರು ಕ್ಯಾಮೆರಾ ಬಳಸಬಹುದು, ಕೆಲವರು ಗಣಕಯಂತ್ರ ಬಳಸುತ್ತಾರೆ. ನಾವು ಪೇಪರ್ ಮತ್ತು ಪೆನ್ಸಿಲ್ ಬಳಸುತ್ತೇವೆ. ಹಾಗೆಂದು ಪೆನ್ಸಿಲ್ ಆಯುಧವಲ್ಲ. ಅದೊಂದು ಅಭಿವ್ಯಕ್ತಿಯ ಸಾಧನ, ಎಂದು 2012ರಲ್ಲಿ ಸ್ಟಿಫಾನಿ ಹೇಳಿಕೊಂಡಿದ್ದರು.
- ಈ ಪತ್ರಿಕೆಯಲ್ಲಿ ಫ್ರಾನ್ಸ್ ಅಧ್ಯಕ್ಷರಾಗಿದ್ದ ನಿಕೋಲಸ್ ಸರ್ಕೋಜಿ ಅವರನ್ನು ರಕ್ತ ಹೀರುವ ಪಿಶಾಚಿಯಂತೆ ಚಿತ್ರಿಸಲಾಗಿತ್ತು. ಪೋಪ್ ಬೆನೆಡಿಕ್ಟ್ ಕೂಡ ಈ ಪತ್ರಿಕೆಯ ವ್ಯಂಗ್ಯದ ಹೊಡೆತದಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ.
- ಜಿಲ್ಲಂಡ್ಸ್-ಪೋಸ್ಟ್ ಪತ್ರಿಕೆಯು 2005ರ ಸೆಪ್ಟೆಂಬರ್ 30ರಂದು 12 ಕಾರ್ಟೂನ್‌ಗಳನ್ನು ಪ್ರಕಟಿಸಿತ್ತು(ಇವೇ ಕಾರ್ಟೂನ್‌ಗಳನ್ನು ಫ್ರಾನ್ಸ್‌ನ 'ಚಾರ್ಲಿ ಹೆಬ್ದೊ' 2006ರಲ್ಲಿ ಮರು ಪ್ರಕಟಿಸಿತ್ತು). ಇವು ವಿಶ್ವವ್ಯಾಪಿ ಪ್ರತಿಭಟನೆ, ಹಿಂಸಾಚಾರ ಮತ್ತು ಸಾವುಗಳಿಗೆ ಕಾರಣವಾಗಿದ್ದವು. ಇವುಗಳನ್ನು ಬರೆದಿದ್ದ ವ್ಯಂಗ್ಯಚಿತ್ರಕಾರ ಕುರ್ಟ್ ವೆಸ್ಟರ್‌ಗಾರ್ಡ್ ಮೇಲೆ ಹತ್ಯೆ ಪ್ರಯತ್ನ 2010ರಲ್ಲಿ ನಡೆದಿತ್ತು. ಆದರೆ, ನನಗೆ ಈಗ ಜೀವ ಬೆದರಿಕೆ ಇಲ್ಲ. ರಕ್ಷಣೆ ನೀಡಿದ ಪೊಲೀಸರಿಗೆ ಧನ್ಯವಾದ. ಫ್ರಾನ್ಸ್‌ನಲ್ಲಿ ನಡೆದ ದಾಳಿಯು ಭಯಾನಕ. ದಾಳಿಕೋರರು ಮುಸ್ಲಿಮರೋ, ಕ್ಯಾಥೋಲಿಕ್ಕರೋ ಅಥವಾ ರಾಜಕಾರಣಿಗಳೋ ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಎಂದು ಕುರ್ಟ್ ಬುಧವಾರ ಒತ್ತಾಯಿಸಿದ್ದಾರೆ.
ತರಬೇತಿ ಪಡೆದವರು
ಬದಲಾಯಿಸಿಚಾರ್ಲಿ ಹೆಬ್ದೊ’ ವಾರಪತ್ರಿಕೆ ಮೇಲೆ ದಾಳಿ ನಡೆಸಿದ ಉಗ್ರರ ಧಾರ್ಷ್ಟ್ಯ, ದೃಢ ನಿಶ್ಚಯ ಮತ್ತು ಅಪಾಯಕಾರಿ ದಕ್ಷತೆಗಳನ್ನು ಗಮನಿಸಿದರೆ ಅವರು ಸೇನಾ ಶೈಲಿಯಲ್ಲಿ ತರಬೇತಿ ಪಡೆದಿರಬಹುದು ಎಂಬ ಅನುಮಾನವನ್ನು ಪ್ಯಾರಿಸ್ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಉಗ್ರರ ದಾಳಿ ಅತ್ಯಂತ ಯೋಜಿತ ಮತ್ತು ವೃತ್ತಿಪರ ಕಾರ್ಯಾಚರಣೆ ಎಂಬುದನ್ನು ವಾರಪತ್ರಿಕೆ ಕಚೇರಿ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಮೊಬೈಲ್ ಪೋನ್‌ಗಳಲ್ಲಿ ತೆಗೆದ ಚಿತ್ರ ತೋರಿಸುತ್ತವೆ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
‘ಉಗ್ರರು ಬಂದೂಕು ಹಿಡಿದಿದ್ದ ರೀತಿ, ಅತ್ಯಂತ ಶಾಂತವಾಗಿ ಆದರೆ ದೃಢವಾಗಿ ದಾಳಿ ನಡೆಸಿದ ವಿಧಾನವನ್ನು ಗಮನಿಸಿದರೆ ಅವರಿಗೆ ಸೇನಾ ಶೈಲಿಯ ತರಬೇತಿ ದೊರೆತಿದೆ ಎಂದು ಹೇಳಬಹುದು. ಈ ದಾಳಿ ಆ ಕ್ಷಣದ ಭಾವೋದ್ರೇಕ ಅಲ್ಲವೇ ಅಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಲಾಶ್ನಿಕೋವ್ ಬಂದೂಕುಗಳನ್ನು ಅವರು ದೇಹಕ್ಕೆ ಹತ್ತಿರವಾಗಿ ಹಿಡಿದುಕೊಂಡಿದ್ದರು. ನಿರಂತರವಾಗಿ ಗುಂಡಿನ ಹಾರಾಟ ನಡೆಸದೆ ಗುರಿ ನೋಡಿ ಗುಂಡು ಹಾರಿಸುತ್ತಿದ್ದರು. ಇದು ಅವರಿಗೆ ಬಂದೂಕು ಬಳಕೆ ಗೊತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.
ಗಮನಾರ್ಹ ಅಂಶವೆಂದರೆ ಅವರ ನಿರ್ದಯತೆ. ಅವರಿಗೆ ಸಿರಿಯಾ, ಇರಾಕ್ ಅಥವಾ ಬೇರೆಲ್ಲಾದರೂ ತರಬೇತಿ ದೊರೆತಿರಬೇಕು. ಫ್ರಾನ್ಸ್‌ನಲ್ಲಿಯೇ ಅವರು ತರಬೇತಿ ಪಡೆದಿರುವ ಸಂಭವವೂ ಇದೆ. ಅವರಿಗೆ ದಕ್ಷವಾದ ತರಬೇತಿ ದೊರೆತಿದೆ ಎಂಬುದಂತೂ ಸ್ಪಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.
ದಾಳಿಯ ನಂತರ ಉಗ್ರರು ಪಲಾಯನ ಮಾಡುವಾಗಲೂ ದ್ವಿಚಕ್ರ ವಾಹನದಲ್ಲಿ ಬಂದ ಪೊಲೀಸ್ ಸಿಬ್ಬಂದಿಯನ್ನು ಕಂಡು ಕಾರು ನಿಲ್ಲಿಸಿದರು. ಅದರಿಂದ ಇಳಿದು ಪೊಲೀಸ್ ಸಿಬ್ಬಂದಿಗೆ ಗುಂಡು ಹಾರಿಸಿ, ಅವರನ್ನು ಕೊಂದು ಪರಾರಿಯಾದರು ಎಂಬುದು ವಾರಪತ್ರಿಕೆ ಕಚೇರಿಯ ಪಕ್ಕದ ಕಟ್ಟಡದ ಮೇಲಿನಿಂದ ತೆಗೆದ ವಿಡಿಯೊದಲ್ಲಿ ದಾಖಲಾಗಿದೆ.
ಉಗ್ರರು ಪರಾರಿ?: ಪತ್ರಿಕೆ ಕಚೇರಿಯಲ್ಲಿ ಹಲವು ನಿಮಿಷ ಕಾಲ ಗುಂಡಿನ ದಾಳಿ ನಡೆಸಿದ ಉಗ್ರರು ಅತ್ಯಂತ ಯೋಜಿತವಾಗಿ ಪರಾರಿಯಾಗಿದ್ದಾರೆ. ಕಪ್ಪು ದಿರಿಸು ಧರಿಸಿದ್ದ ಅವರು ಪತ್ರಿಕೆ ಕಚೇರಿಯ ಹೊರಭಾಗದಲ್ಲಿ ಓಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ತಮ್ಮ ಕಾರು ಏರುವುದಕ್ಕೆ ಮೊದಲು ಗಾಯಗೊಂಡಿದ್ದ ಪೊಲೀಸರತ್ತ ಮತ್ತೆಯೂ ಗುಂಡು ಹಾರಿಸಿದ್ದಾರೆ.
ಪ್ಯಾರಿಸ್‌ಗೆ ಭಾರಿ ಭದ್ರತೆ: ದಾಳಿ ನಡೆಸಿದ ಉಗ್ರರು ಪರಾರಿಯಾಗಿರುವುದರಿಂದ ಪ್ಯಾರಿಸ್ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸಶಸ್ತ್ರ ಪೊಲೀಸರ ಭಾರಿ ಭದ್ರತೆ ಒದಗಿಸಲಾಗಿದೆ. ರೈಲು ನಿಲ್ದಾಣಗಳು, ಪೂಜಾ ಸ್ಥಳಗಳು, ಪತ್ರಿಕಾ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಐಫೆಲ್ ಗೋಪುರದ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ.ಡೆದವರು
ಜಗತ್ತಿನ ಪ್ರತಿಕ್ರಿಯೆಗಳು
ಬದಲಾಯಿಸಿ- ಸುನ್ನಿ ಮುಸ್ಲಿಮರ ಪ್ರತಿಷ್ಠಿತ ಕಲಿಕಾ ಕೇಂದ್ರಗಳಾದ ಅರಬ್ ಲೀಗ್ ಮತ್ತು ಅಲ್-ಅಜರ್‌ಗಳು ಫ್ರಾನ್ಸ್ ದಾಳಿಯನ್ನು ಖಂಡಿಸಿವೆ. ಈ ಕ್ರಿಮಿನಲ್ ದಾಳಿ ಖಂಡನೀಯ. ಇಸ್ಲಾಂ ಎಂದಿಗೂ ಯಾವುದೇ ಹಿಂಸಾಚಾರವನ್ನು ಸಮರ್ಥಿಸುವುದಿಲ್ಲ. ಎಂದು ಅಲ್ ಅಜರ್ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
- ಪವಿತ್ರ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವ ಯತ್ನಗಳನ್ನು ಯಾರು ಮಾಡಿದರೂ, ನಮ್ಮ ಸಂಸ್ಥೆಯು ಹಿಂಸಾಚಾರವನ್ನು ಎಂದಿಗೂ ಒಪ್ಪುವುದಿಲ್ಲ.
- - ಅಬ್ಬಾಸ್ ಶೋಮನ್, ಅಲ್ ಅಜರ್ ಹಿರಿಯ ಅಧಿಕಾರಿ
- ಉಗ್ರವಾದದ ಯಾವುದೇ ರೀತಿಯ ಹಿಂಸೆಯಾದರೂ, ಅದನ್ನು ಖಂಡಿಸುತ್ತೇವೆ. ಯುರೋಪ್‌ನಲ್ಲಿ ನಮ್ಮ ಮೌಲ್ಯಗಳಿಗೆ ಬೆದರಿಕೆಯೊಡ್ಡುವ ವರ್ಣಭೇದದ ಹಿಂಸಾಚಾರ, ಅನ್ಯದ್ವೇಷ ಮತ್ತು ಇಸ್ಲಾಮೋಪೋಬಿಯಾ ಘಟನೆಗಳು ಹೆಚ್ಚುತ್ತಿವೆ. ಎಲ್ಲ ರೀತಿಯ ಉಗ್ರವಾದದ ವಿರುದ್ಧ ನಾವು ಸೆಣಸಬೇಕು. ಇಸ್ಲಾಂ ಜತೆ ಭಯೋತ್ಪಾದನೆ ನಂಟು ಬೆಸೆಯುವುದು ಸರಿಯಲ್ಲ.
- ಮೆವ್‌ಲಟ್ ಕಾವುಸೋಗ್ಲ್, ಟರ್ಕಿ ವಿದೇಶಾಂಗ ಸಚಿವ
- ಫ್ರಾನ್ಸ್ ದೇಶವು ಅಮೆರಿಕದ ಹಳೆಯ ಗೆಳೆಯ. ಅಲ್ಲಿ ಪತ್ರಿಕಾಲಯದ ಮೇಲೆ ನಡೆದ ದಾಳಿ ಖಂಡನೀಯ. ಈ ಉಗ್ರರನ್ನು ನಿಗ್ರಹಿಸಲು ಫ್ರಾನ್ಸ್‌ಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ.
- - ಬರಾಕ್ ಒಬಾಮಾ, ಅಮೆರಿಕ ಅಧ್ಯಕ್ಷ
- ಇದೊಂದು ರೋಗ್ರಗಸ್ಥ ಮನಸ್ಥಿತಿ ಹೊಂದಿದವರ ಕೃತ್ಯ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಜತೆ ಇಂಗ್ಲೆಂಡ್ ಜತೆಯಾಗಿ ನಿಲ್ಲುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇವೆ.
- - ಡೇವಿಡ್ ಕ್ಯಾಮರಾನ್, ಬ್ರಿಟನ್ ಪ್ರಧಾನಿ
- ತೀವ್ರವಾದ ಮತ್ತು ಅಸಹಿಷ್ಣತೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಸಾಧ್ಯವಿಲ್ಲ. ಇದರಿಂದ ಕೇವಲ ಹಿಂಸಾಚಾರವಷ್ಟೇ ಸಾಧ್ಯ.
- -ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ.
ನಂತರದ ಬೆಳವಣಿಗೆ
ಬದಲಾಯಿಸಿ- ಫ್ರಾನ್ಸ್‌ನ ‘ಚಾರ್ಲಿ ಹೆಬ್ದೊ’ ವಾರಪತ್ರಿಕೆಯ ಕಚೇರಿ ಮೇಲೆ ದಾಳಿ ನಡೆದ ಮರುದಿನವೇ ಉಗ್ರರು ದಕ್ಷಿಣ ಪ್ಯಾರಿಸ್‌ನಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
- ಗುಂಡಿನ ದಾಳಿಯಲ್ಲಿ ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತೊಬ್ಬ ಉದ್ಯೋಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ವಯಂಚಾಲಿತ ಬಂದೂಕಿನಿಂದ ಆಗಂತುಕರು ಹಾರಿಸಿದ ಗುಂಡಿನಿಂದ ಅವರಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
- ಚಾರ್ಲಿ ಹೆಬ್ದೊ’ ವಾರಪತ್ರಿಕೆ ಕಚೇರಿ ಮೇಲೆ ದಾಳಿ ಮಾಡಿದವರ ಪೈಕಿ ಒಬ್ಬ ಪೊಲೀಸರಿಗೆ ಶರಣಾಗಿದ್ದು, ಇನ್ನಿಬ್ಬರು ಸಹೋದರರಿಗಾಗಿ ಹುಡುಕಾಟ ನಡೆಯುತ್ತಿದೆ.
- ಪೊಲೀಸರಿಗೆ ಶರಣಾದ ದಾಳಿಕೋರನನ್ನು ಮೌರದ್ ಹಮೀದ್ (18ವರ್ಷ-1996 ರಲ್ಲಿ ಜನಿಸಿದವ ) ಎಂದು ಗುರುತಿಸಲಾಗಿದೆ. ದಾಳಿಕೋರರು ಯೆಮನ್ ಉಗ್ರ ಜಾಲದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- ಉಳಿದ ಇಬ್ಬರು ಗುರುವಾರ ಬೆಳಿಗ್ಗೆ ಉತ್ತರ ಫ್ರಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಪೆಟ್ರೋಲ್ ಬಂಕ್ ವ್ಯವಸ್ಥಾಪಕರು ಇವರನ್ನು ಗುರುತಿಸಿದ್ದಾಗಿ ಮೂಲಗಳು ತಿಳಿಸಿವೆ. ಇವರಿಬ್ಬರಲ್ಲಿ ಷರೀಫ್ ಕವೊಚಿ (32) ಎಂಬಾತನ ವಿರುದ್ಧ ಪೊಲೀಸರು ಬಂಧನ ವಾರಂಟ್ ಹೊರಡಿಸಿದ್ದಾರೆ.
- ಇರಾಕ್‌ಗೆ ದಾಳಿಕೋರರನ್ನು ರವಾನೆ ಮಾಡಿದ ಜಾಲದಲ್ಲಿ ಇದ್ದ ಕಾರಣ 2008ರಲ್ಲಿ ಕವೊಚಿ ಶಿಕ್ಷೆಗೆ ಒಳಗಾಗಿದ್ದ. ಈ ಸಹೋದರರು ಪ್ಯಾರಿಸ್ನಲ್ಲಿಯೇ ಹುಟ್ಟಿದವರು.[೪]
ಕೊಲ್ಲಲ್ಪಟ್ಟವರು
ಬದಲಾಯಿಸಿ- ಫ್ರೆಡೆರಿಕ್ ಬೋಯಿಸು 42,. ಸೊಡೆಕ್ಸೊ ನಿರ್ವಹಣೆ ಕೆಲಸಗಾರ, ಕಟ್ಟಡ ಲಾಬಿಯಲ್ಲಿ ಕೊಲ್ಲಲ್ಪಟ್ಟರು
- ಫ್ರಾಂಕ್ ಬಿನ್ಸೋಲೋರೊ 49, ಛಾರ್ಬನ ಅಂಗರಕ್ಷಕ; ರಕ್ಷಣಾ ಪೊಲೀಸ್ (ಎಸ್ಡಿಎಲ್ಪಿ) ಅಧಿಕಾರಿ.
- ಕಾಬೂ (ಜೀನ್ ಕಬುಟ್,), 76, ವ್ಯಂಗ್ಯಚಿತ್ರಕಾರ.
- ಎಲ್ಸಾ ಕಾಯತ್, 54, ಮನೋವಿಶ್ಲೇಷಕಿ ಮತ್ತು ಅಂಕಣಕಾರ್ತಿ.
- ಛಾರ್ಬ್(ಸ್ಟೀಫನ್ ಛರ್ಬೋನರ್, ), 47, ವ್ಯಂಗ್ಯಚಿತ್ರಕಾರ, ಅಂಕಣಕಾರ, ಮತ್ತು ಮುಖ್ಯ ಸಂಪಾದಕನಾದ ಚಾರ್ಲಿ ಹೆಬ್ಡೊ.
- ಫಿಲಿಪ್ ಹೊನೊರೆ, 74, ವ್ಯಂಗ್ಯಚಿತ್ರಕಾರ.
- ಬರ್ನಾರ್ಡ್ ಮೇರಿಸ್, 68, ಅರ್ಥಶಾಸ್ತ್ರಜ್ಞ, ಸಂಪಾದಕ, ಮತ್ತು ಅಂಕಣಕಾರ
- ಅಹ್ಮದ್ ಮೆರಾಬೆಟ್, , 42, ಪೊಲೀಸ್ ಅಧಿಕಾರಿ, ಅವರು ಹೊರಗೆ ನೆಲದ ಮೇಲೆ ಗಾಯಗೊಂಡರು ಲೇ ತಲೆಗೆ ಗುಂಡು, ಮುಸ್ಲಿಂ .
- ಮುಸ್ತಫ ಮೌಸ್ತಾಫ ಪ್ರತಿಗಳ ಸಂಪಾದಕ
- ಮೈಕೆಲ್ ರಿನಾಡ್ 69, ಸಭೆಯಲ್ಲಿ ಅತಿಥಿ.
- ಟಿಗ್ನೊಯಸ್, (ಬರ್ನಾರ್ಡ್‍ವೆಲ್ರಿಯಾಕ್), 57, ವ್ಯಂಗ್ಯಚಿತ್ರಕಾರ
- ಜಾರ್ಜಸ್ ವೋಲಿನಿಸ್ಕಿ, 80, ವ್ಯಂಗ್ಯಚಿತ್ರಕಾರ
ಕೊಲ್ಲಲ್ಪಟ್ಟವರ ಫೊಟೋಗಳು
ಬದಲಾಯಿಸಿ|left/೧.ಛಾರ್ಬ್|left/೨.ಕಾಬು|center ಹೊನರೇ-ತೆಗೆದಿದೆ|೩.right ಟಿಗ್ನೊಯಿಸ್|೪.right ವೊಲಿನಸ್ಕಿ .
ದಿನಾಂಕ 8-ಮತ್ತು 9-1-2015ರ ದಾಳಿ
ಬದಲಾಯಿಸಿ- ಸಯೀದ್ ಕೌಆಚಿ (1980 ಸೆಪ್ಟೆಂಬರ್ 7 - 2015 ಜನವರಿ 9) ಮತ್ತು ಚೆರೆಫ್ ಕೌಆಚಿ (1982 ರ ನವೆಂಬರ್ 29 - 9 2015 ಜನವರಿ) ಚಾರ್ಲಿ ಹೆಬ್ಡೋ ಮೇಲೆ ದಾಳಿಮಾಡಿದ ಮುಖವಾಡ ಧರಿಸಿದ ಇವರನ್ನು ಗುರುತಿಸಾಗಿದೆ ಮತ್ತು ಅಡಗಿದ ಇವರನ್ನು ಫ್ರೆಂಚ್ ಯೋಧರು ಹೊಡೆದುರುಳಿಸಿದ್ದಾರೆ.
- ಇವರು ಡಮ್ಮರ್‌ಟಿನ್ ಗೊಲೆ ಪಟ್ಟಣದ ಮುದ್ರಣ ಘಟಕವನ್ನು ಒತ್ತೆಸೆರೆ ಇರಿಸಿಕೊಂಡಿದ್ದರು. ಈ ಉಗ್ರ ಸಹೋದರರಾದ ಶರೀಫ್ ಕೌಚಿ ಹಾಗೂ ಸಯೀದ್ ಅವರನ್ನು ಹೊಡೆದುರುಳಿಸುವಲ್ಲಿ ಯೋಧರು ಸಫಲರಾಗಿದ್ದಾರೆ.
- ಗುರುವಾರ ಮಹಿಳಾ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದ ಇನ್ನೊಬ್ಬ ಉಗ್ರ ಸೂಪರ್ ಮಾರ್ಕೆಟ್‌ಗೆ ನುಗ್ಗಿ ಅಲ್ಲದ್ದವರನ್ನು ಒತ್ತೆಯಿರಿಸಿಕೊಂಡಿದ್ದ. ಆತನನ್ನೂ ಕಮಾಂಡೊಗಳು ಕೊಂದು ಹಾಕಿ, ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ.
- ಬೆಳಗ್ಗೆಯಿಂದ ಪ್ಯಾರಿಸ್‌ನಲ್ಲಿ ರುದ್ರನಾಟಕವೇ ನಡೆದಿತ್ತು. ಬೆಳಗ್ಗೆ ಪೆಟ್ರೋಲ್ ಬಂಕ್‌ಗೆ ನುಗಿದ್ದ ಉಗ್ರ ಸಹೋದರರು ಅಲ್ಲಿದ್ದ ಸಮಸ್ತವನ್ನೂ ದೋಚಿದ್ದರು. ವಿಷಯ ತಿಳಿಯುತ್ತಿದ್ದಂತೆ ಅವರನ್ನು ಸೇನಾ ಯೋಧರು ಬೆನ್ನಟ್ಟಿದರು. ಆದರೆ, ಅವರಿಂದ ತಪ್ಪಿಸಿಕೊಂಡು ಪಲಾಯನ ಮಾಡಿದ ಉಗ್ರರು ಮುದ್ರಣ ಘಟಕಕ್ಕೆ ನುಗ್ಗಿ ಅಲ್ಲಿದ್ದವರನ್ನು ಒತ್ತೆಯಿರಿಸಿಕೊಂಡ್ಡಿದ್ದರು. ಹಲವು ಗಂಟೆಗಳ ಕಾರ‌್ಯಾಚರಣೆ ಬಳಿಕ ಉಗ್ರರಿಬ್ಬರನ್ನೂ ಹೊಡೆದುರುಳಿಸುವಲ್ಲಿ ಸೇನಾ ಕಮಾಂಡೊಗಳು ಸಫಲರಾದರು.
- ಸೂಪರ್ ಮಾರ್ಕೆಟ್ ಒತ್ತೆಸೆರೆ
ಇನ್ನೊಂದು ಕಡೆ ನಗರದ ಕೊಶೆರ್ ಸೂಪರ್ ಮಾರ್ಕೆಟ್‌ನೊಳಕ್ಕೆ ನುಗ್ಗಿದ್ದ ಪೊಲೀಸ್ ಅಧಿಕಾರಿಯ ಹಂತಕ ಅಲ್ಲಿದ್ದವರನ್ನು ಒತ್ತೆಯಿರಿಸಿಕೊಂಡಿದ್ದ. ಪತ್ರಕರ್ತರ ಹಂತಕರನ್ನು ಸದೆಬಡಿದ ತಕ್ಷಣ ಇತ್ತ ಗಮನ ಹರಿಸಿದ ಕಮಾಂಡೊಗಳು, ಆತನನ್ನೂ ಕೊಂದರು. ಮಾರುಕಟ್ಟೆಯಲ್ಲಿ ಗ್ರಾಹಕರು ಕಿಕ್ಕಿರಿದು ತುಂಬಿರುವಾಗಲೇ ಈ ಘಟನೆ ನಡೆದಿದೆ. ಬಂಧೂಕುಧಾರಿ ಮೊದಲು ಗುಂಡು ಹಾರಿಸಿದ. ನಂತರ ನಾನು ಯಾರು ಗೊತ್ತೆ? ಎಂದು ಅಬ್ಬರಿಸಿದ, ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿ ಹತ್ಯೆಯಲ್ಲಿ ಒಟ್ಟು ಇಬ್ಬರು ಶಂಕಿತರಿದ್ದು ಒಬ್ಬ ಮಹಿಳೆಯೂ ಇದರಲ್ಲಿ ಶಾಮೀಲಾಗಿದ್ದಾಳೆ ಆಕೆಯನ್ನು ಅಮದಿ ಕೌಲಿಬಾಲಿ ಎಂದು ಗುರುತಿಸಲಾಗಿದೆ. ಸೂಪರ್ ಮಾರ್ಕೆಟ್ ಕಾರ‌್ಯಾಚರಣೆಯಲ್ಲಿ ಆಕೆಯೂ ಹತಳಾಗಿದ್ದಾಳೆಯೇ ಎಂಬುದು ಖಚಿತಪಟ್ಟಿಲ್ಲ.
- ಉಗ್ರರ ಕಾರ‌್ಯಾಚರಣೆಯ ಕ್ರಮ
- ಸಹೋದರರು ಮುದ್ರಣ ಘಟಕಕ್ಕೆ ನುಗ್ಗಿದರು. ಘಟಕದ ಮಾಲೀಕ ಡಿಡಿಯರ್‌ಗೆ ತಕ್ಷಣ ಇವರು ಯಾರು ಎಂಬುದು ಗೊತ್ತಾಗಲಿಲ್ಲ. ಏಕೆಂದರೆ ಸಹೋದರರಿಬ್ಬರು ಧರಿಸಿದ್ದ ಉಡುಪು ಫ್ರೆಂಚ್ ವಿಶೇಷ ಪಡೆಯ ಉಡುಪನ್ನು ಹೋಲುತ್ತಿತ್ತು. ಇವರಲ್ಲಿ ಒಬ್ಬಾತ ತನ್ನನ್ನು ಪೊಲೀಸ್ ಎಂದು ಪರಿಚಯಿಸಿಕೊಂಡ. ನೀನು ಇಲ್ಲಿಂದ ಹೊರಡು, ನಾಗರಿಕರನ್ನು ನಾವು ಕೊಲ್ಲುವುದಿಲ್ಲ , ಎಂದು ಹೇಳಿದ.ಡಿಡಿಯರ್ ಅಲ್ಲಿಂದ ಹೊರಬಿದ್ದ ಪೊಲೀಸರಿಗೆ ಸುದ್ದಿಮುಟ್ಟಿಸಿದ.
- ಗುರುವಾರ ಈ ಪಟ್ಟಣದ ಪೆಟ್ರೋಲ್ ಸ್ಟೇಷನ್‌ವೊಂದರಲ್ಲಿ ಈ ಜೋಡಿ, ಬಂದೂಕು ತೋರಿಸಿ, ಬೆದರಿಸಿ ಇದ್ದಬದ್ದ ದುಡ್ಡನ್ನೆಲ್ಲ ದೋಚಿ ಪರಾರಿಯಾಗಿದ್ದರು. ನಾವು ಆತ್ಮಾಹುತಿ ಮಾಡಿಕೊಳ್ಳುವುದರ ಮೂಲಕ ಹುತಾತ್ಮರಾಗುತ್ತೇವೆ ಎಂದು ಅವರು ಸಂಧಾನಕಾರರಿಗೆ ಹೇಳಿದ್ದರು.
- 9 ಮಂದಿ ವಶಕ್ಕೆ
- ಎರಡು ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರು ಅಡಗಿಕೊಂಡು ಕೆಲವರನ್ನು ಒತ್ತೆ ಇರಿಸಿಕೊಂಡಿರುವ ಮಧ್ಯೆ ಶುಕ್ರವಾರ ಪೊಲೀಸರು ಕೌಚಿ ಸಹೋದರರ ಜತೆ ನಂಟಿದೆ ಎಂದು ನಂಬಲಾದ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಗ್ರರು ಉಪಟಳವನ್ನು ತಡೆಯಲು ಭಾರಿ ಬಂದೋಬಸ್ತ್ ಮಾಡಲಾಗಿದೆ. ಆಯಕಟ್ಟಿನ ಜಾಗಗಳಲ್ಲಿ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ.
ಚಾರ್ಲಿ ಹಬ್ಡೋ ಮೇಲಿನ ದಾಳಿಯ ನಂತರ ಪ್ಯಾರಿಸ್ಸಿನಲ್ಲಿ ರಾತ್ರಿ ಸೇರಿದ ಹತ್ತು ಲಕ್ಷಕ್ಕೂ ಹೆಚ್ಚಿನ ಪ್ರದರ್ಶನಕಾರರು^^^ |
ನಂತರದ ಬೆಳವಣಿಗೆ
ಬದಲಾಯಿಸಿ- ಉಗ್ರರ ನರಮೇಧದಿಂದ ಕಂಗೆಡದ ಫ್ರಾನ್ಸ್‌ನ ವಿಡಂಬನಾತ್ಮಕ ನಿಯತಕಾಲಿಕ ಚಾರ್ಲಿ ಹೆಬ್ಡೊ, ದಾಳಿಯ ನಂತರ ಹೊರತಂದ ಮೊದಲ ಸಂಚಿಕೆಯ ಮುಖಪುಟದಲ್ಲಿ ಮತ್ತೆ ಪ್ರವಾದಿ ಪೈಗಂಬರ್ ಅವರ ಕಾರ್ಟೂನ್ ಪ್ರಕಟಿಸಿ ಕೆಚ್ಚು ಪ್ರದರ್ಶಿಸಿದೆ.
- ಪ್ರವಾದಿಯನ್ನು ಕೆಟ್ಟದಾಗಿ ಚಿತ್ರಿಸಿ ಕಾರ್ಟೂನ್ ಪ್ರಕಟಿಸಿದ್ದಕ್ಕಾಗಿ ನಿಯತಕಾಲಿಕದ ಕಚೇರಿ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರು ಪತ್ರಕರ್ತರ ಸಹಿತ 12 ಮಂದಿಯನ್ನು ಹತ್ಯೆ ಮಾಡಿದ್ದರು.
- ಸೋಮವಾರ ರಾತ್ರಿ ಚಾಲಿ ಹೆಬ್ಡೊ ಮುಖಪುಟ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ನಿಯತಕಾಲಿಕ ಬುಧವಾರ ಮಾರುಕಟ್ಟೆಗೆ ಬರಲಿದೆ. ಈ ವಿಶೇಷ ಸಂಚಿಕೆ ನಾನಾ ಭಾಷೆಗಳಲ್ಲಿ 10 ಲಕ್ಷ ಪ್ರತಿ ಮುದ್ರಣವಾಗಲಿದೆ.
- ವ್ಯಂಗ್ಯಚಿತ್ರದಲ್ಲಿ ,ಬಿಳಿ ಮುಂಡಾಸು ಸುತ್ತಿರುವ ಗಡ್ಡಧಾರಿ 'ಜೆ ಸ್ಯೂಸ್ ಚಾರ್ಲಿ' (ನಾನು ಚಾರ್ಲಿ) ಎಂಬ ಫಲಕ ಹಿಡಿದಿದ್ದಾರೆ. ಅದರ ಮೇಲೆ 'ಟೌಟ್ ಎಸ್ಟ್ ಪಾರ್ಡನ್' (ಎಲ್ಲವನ್ನೂ ಮನ್ನಿಸಲಾಗಿದೆ) ಎಂಬ ಬರಹ ವಿದೆ. ತನ್ನನ್ನು ಕೆಟ್ಟದಾಗಿ ಬಿಂಬಿಸಿದ್ದ ವ್ಯಂಗ್ಯಚಿತ್ರಕಾರರನ್ನು ಮೊಹಮ್ಮದ್ ಮನ್ನಿಸಿದ್ದಾರೆ ಎಂಬ ಅರ್ಥ ನೀಡುವ ಚಿತ್ರವದು ಎಂದು ಫ್ರೆಂಚ್ ಮಾಧ್ಯಮಗಳು ವಿಶ್ಲೇಷಿಸಿವೆ.
ಉಗ್ರ ದಾಳಿಯನ್ನು ಖಂಡಿಸಿ ಪ್ಯಾರಿಸ್‌ನಲ್ಲಿ ರ್‍ಯಾಲಿ
ಬದಲಾಯಿಸಿ- 11-1-2015
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಉಗ್ರ ದಾಳಿಯನ್ನು ಖಂಡಿಸಿ ಭಾನುವಾರ ಪ್ಯಾರಿಸ್‌ನಲ್ಲಿ ನಡೆದ 'ಏಕತೆಯ ರ‌್ಯಾಲಿ'ಯಲ್ಲಿ 40ಕ್ಕೂ ಹೆಚ್ಚು ದೇಶಗಳ ಮುಖಂಡರು ಭಾಗವಹಿಸಿ ಒಗ್ಗಟ್ಟು ಮೆರೆದರು. ಈ ರ‌್ಯಾಲಿಯಲ್ಲಿ ವಿಶ್ವದ ಮೂಲೆಮೂಲೆಯಿಂದ ಆಗಮಿಸಿದ 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಚಾರ್ಲಿ ಹೆಬ್ಡೊ ನಿಯತಕಾಲಿಕದ ಮೇಲೆ ನಡೆದ ಉಗ್ರರ 7-1-2015ರ ದಾಳಿಯನ್ನು ಖಂಡಿಸಿ ನಡೆದ ರ‌್ಯಾಲಿಯ ನೇತೃತ್ವನ್ನು ಫ್ರಾನ್ಸ್‌ನ ಅಧ್ಯಕ್ಷ ಹೊಲಾನ್ದ್ ವಹಿಸಿದ್ದರು. ರಷ್ಯಾ, ಜರ್ಮನಿ, ಉಕ್ರೇನ್ ದೇಶಗಳು ಮುಖಂಡರೂ ಸೇರಿದಂತೆ ಹಲವು ದೇಶಗಳ ಮುಖಂಡರು ಭಾಗವಹಿಸಿದ್ದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾಂತು ಮತ್ತು ಪ್ಯಾಲಿಸ್ತೇನ್ ಅಧ್ಯಕ್ಷ ಮೊಹಮೂದ್ ಅಬ್ಬಾಸ್ ಇಲ್ಲಿ ಜತೆಯಾದದ್ದು ಗಮನಾರ್ಹ.
ಫ್ರಾನ್ಸ್‌ನ ರಸ್ತೆಗಳಲ್ಲಿ ಕಣ್ಣುಹಾಯಿಸಿದಷ್ಟು ದೂರವೂ ಜನಸಾಗರ ತುಂಬಿತ್ತು. 'ದಾಳಿಯಿಂದ ಎದೆಗುಂದುವುದಿಲ್ಲ', 'ನಾನು ಚಾರ್ಲಿ', ಎಂಬ ಸಂದೇಶ ಹೊತ್ತ ಭಿತ್ತಿ ಪತ್ರಗಳು ರಾರಾಜಿಸಿದವು.
ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಮೆಯಾಗಿರುವ ಪೆನ್ಸಿಲ್ ಮಾದರಿಯೊಂದರ ಮೇಲೆ 'ನಾಟ್ ಅಫ್ರೈಡ್' ಎಂದು ಬರೆದಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ರಕ್ತಪಾತದಿಂದ ನಮ್ಮನ್ನು ಹೆದರಿಸಲಾಗದು ಎಂಬ ಸಂದೇಶ ಉಗ್ರರಿಗೆ ರವಾನಿಸಲೆಂದೇ ನಾನಿಲ್ಲಿಗೆ ಬಂದಿದ್ದೇನೆ, ಎಂದು ರ‌್ಯಾಲಿಯಲ್ಲಿ ಭಾಗವಹಿಸಿದ್ದ 70ರ ಹರೆಯದ ಮಹಿಳೆ ನುಡಿದರು.-
- ಜೋರ್ಡನ್ ರಾಣಿಯ ಹೇಳಿಕೆ
- ಇದು ಇಸ್ಲಾಂಗಾಗಿಯೂ ಅಲ್ಲ, ಚಾರ್ಲಿ ಹೆಬ್ಡೊ ನಿಯತಕಾಲಿಕದ ವಿರುದ್ಧವೂ ಅಲ್ಲ. ಕೆಲವು ಉಗ್ರರು ಯಾವ್ಯಾವುದೋ ಕಾರಣಕ್ಕೆ ಜನರನ್ನು ಕೊಚ್ಚಿ ಹಾಕಬೇಕೆಂದಿದ್ದರು ಅಷ್ಟೆ. ಇಸ್ಲಾಂ ಶಾಂತಿ, ಸಹಿಷ್ಣುತೆ ಮತ್ತು ಕರುಣೆಯನ್ನು ಪ್ರತಿಪಾದಿಸುತ್ತದೆ.
(ಉಲ್ಲೇಖ: ವಿಜಯ ಕರ್ನಾಟಕ ಜನವರಿ,12, 2015),
ದಾಳಿ ನಂತರ "ಚಾರ್ಲಿ ಹೆಬ್ಡೊ" ಸಂಚಿಕೆ ಪ್ರಕಟ
ಬದಲಾಯಿಸಿ- ದಿ.7-1-2015ರ ಭಯೋತ್ಪಾದಕರ ದಾಲಿಯ ನಂತರ "ಚಾರ್ಲಿ ಹೆಬ್ಡೊ" ಸಂಚಿಕೆ ನಿಲ್ಲದೆ ಪುನಃ ಪ್ರಕಟವಾಗಿದೆ. ಫ್ರಾನ್ಸ್‌ನ ಈ ವಿಡಂಬನಾ ವಾರಪತ್ರಿಕೆ ‘ಚಾರ್ಲಿ ಹೆಬ್ಡೊ’ ಮೊದಲ ಸಂಚಿಕೆಯ ಪ್ರತಿಗಳಿಗೆ ಭಾರಿ ಬೇಡಿಕೆ ಬಂದಿದ್ದು, ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಎಲ್ಲ ಪ್ರತಿಗಳೂ ಮಾರಾಟವಾಗಿವೆ.
- ಈ ಸಂಸ್ಥೆ, ಬೇಡಿಕೆ ಹೆಚ್ಚಾಗಿದ್ದರಿಂದ 50 ಲಕ್ಷ ಪ್ರತಿಗಳನ್ನು ಮುದ್ರಿಸಿದೆ. ಪ್ರತಿಗಳನ್ನು ಪಡೆಯಲು ಜನರು ಬೆಳಿಗಿನ ಜಾವ ಅಂಗಡಿಗಳ ಮುಂದೆ ಸರದಿಯಲ್ಲಿ ನಿಂತಿದ್ದರು, ಎಂದು ಮಾಧ್ಯಮಗಳು ಹೇಳಿವೆ.ಕೆಲವೇ ತಾಸಲ್ಲಿ 50 ಲಕ್ಷ ಪ್ರತಿ ಮಾರಾಟವಾಗಿದೆ.
- ವಿಚಿತ್ರ ಪ್ರತಿಭಟನೆಯ ಬೇಡಿಕೆ
- ಆನ್‌ಲೈನ್ ಮಾರಾಟ ಜಾಲತಾಣ ‘ಇ–ಬೇ’ ಯಲ್ಲೂ ಈ ಸಂಚಿಕೆಯ ಪ್ರತಿಗಳಿಗೆ ಭಾರಿ ಬೇಡಿಕೆ ಬಂದಿದ್ದು, ವ್ಯಕ್ತಿಯೊಬ್ಬರು ಪ್ರತಿಯೊಂದಕ್ಕೆ 15 ಸಾವಿರ ಯೂರೊ (ಸುಮಾರು ರೂ.11 ಲಕ್ಷ) ನಿಗದಿಪಡಿಸಿದ್ದಾರೆ. ಆದರೆ ಚಾರ್ಲಿ ಹೆಬ್ಡೊ ಪ್ರತಿಯೊಂದರ ಮುಖಬೆಲೆ ಮೂರು ಯೂರೊ (ಸುಮಾರು ರೂ.225/-). ಈ ಬಗ್ಗೆ ಫ್ರಾನ್ಸ್‌ನ ಮಾಧ್ಯಮ ಜಾಗೃತಿ ಸಂಸ್ಥೆ (ರಿಪೋರ್ಟರ್‌್ಸ್ ವಿದೌಟ್ ಬಾರ್ಡರ್ಸ್) ಆಕ್ಷೇಪ ವ್ಯಕ್ತಪಡಿಸಿದೆ. ಇದು ಅಸಭ್ಯ, ಅವಕಾಶವಾದಿತನ ಎಂದು ಸಂಸ್ಥೆ ಹೇಳಿದೆ.
ಇರಾನ್ ವಿರೋಧ-ಪ್ರಚೋದನಾಕಾರಿ ಎಂದು ಹೇಳಿಕೆ
ಬದಲಾಯಿಸಿ‘ಚಾರ್ಲಿ ಹೆಬ್ಡೊ’ ಪತ್ರಿಕೆಯ ಹೊಸ ಸಂಚಿಕೆ ‘ಪ್ರಚೋದನಾಕಾರಿ’ ಎಂದು ಇರಾನ್ ಹೇಳಿದೆ. ಸಂಚಿಕೆಯ ಮುಖಪುಟದಲ್ಲಿ ಪ್ರಕಟಿಸಲಾಗಿರುವ ವ್ಯಂಗ್ಯಚಿತ್ರವು ಇಸ್ಲಾಂ ಮತ್ತು ಪ್ರವಾದಿ ಮಹಮ್ಮದ್ ಅವರಿಗೆ ಮಾಡಿದ ಅವಮಾನ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮರ್ಜೀ ಅಫಖಮ್ ಹೇಳಿದ್ದಾರೆ.
ಇಬ್ಬರು ಉಗ್ರರು ಕಳೆದ ವಾರ ‘ಚಾರ್ಲಿ ಹೆಬ್ಡೊ’ ಪತ್ರಿಕೆಯ ಮೇಲೆ ನಡೆಸಿದ ದಾಳಿ ಇಸ್ಲಾಂ ಬೋಧನೆಗೆ ವಿರುದ್ಧವಾಗಿದೆ. ಹಾಗೆಯೇ ಇತ್ತೀಚಿನ ಸಂಚಿಕೆಯ ಮುಖಪುಟದ ವ್ಯಂಗ್ಯಚಿತ್ರ ಇಸ್ಲಾಂಗೆ ಅವಮಾನಕಾರಿಯಾಗಿದೆ ಎಂದು ಅಫ್‌ಕಮ್ ಹೇಳಿದ್ದಾರೆ.
ಅಲ್‌ಕೈದಾ ಹೇಳಿಕೆ- ಮತ್ತು ಲೇವಡಿ
ಬದಲಾಯಿಸಿ- ಫ್ರಾನ್ಸ್‌ನ ‘ಚಾರ್ಲಿ ಹೆಬ್ಡೊ’ ಪತ್ರಿಕೆ ಮೇಲೆ ನಡೆದ ಉಗ್ರರ ದಾಳಿಯ ಹೊಣೆಯನ್ನು ಯೆಮನ್‌ನ ಅಲ್ ಕೈದಾ ಸಂಘಟನೆ ಹೊತ್ತುಕೊಂಡಿದೆ. ಪ್ರವಾದಿ ಮಹಮ್ಮದ್ ಅವರಿಗೆ ಅವಮಾನ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲು ಸಂಘಟನೆಯು ಆದೇಶಿಸಿತು ಎಂದು ಬುಧವಾರ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾದ ವಿಡಿಯೊದಲ್ಲಿ ಹೇಳಲಾಗಿದೆ.
- ಇಬ್ಬರು ಉಗ್ರರು ಕಳೆದ ವಾರ ಪ್ಯಾರಿಸ್‌ನ ‘ಚಾರ್ಲಿ ಹೆಬ್ಡೊ’ ಪತ್ರಿಕೆಯ ಕಚೇರಿಗೆ ದಾಳಿ ನಡೆಸಿ 17 ಜನರನ್ನು ಹತ್ಯೆ ಮಾಡಿದ್ದರು. ಈ ದಾಳಿಯ ಬಗ್ಗೆ ಇದೇ ಮೊದಲ ಬಾರಿಗೆ ಸಂಘಟನೆಯೊಂದು ಹೊಣೆ ಹೊತ್ತುಕೊಂಡಿದೆ.
ಅಲ್ ಕೈದಾ ಯೆಮನ್ ವಿಭಾಗದ ಮುಖ್ಯಸ್ಥ ನಾಸರ್ ಅಲಿ ಅಲ್ ಅನ್ಸಿ ಎಂಬಾತ ‘ದೇವದೂತನನ್ನು ಅವಮಾನಿಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ’ ಎಂದು ವಿಡಿಯೊದಲ್ಲಿ ಹೇಳಿದ್ದಾನೆ. ಅಲ್ ಕೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ ಆದೇಶದಂತೆಯೇ ಈ ದಾಳಿ ನಡೆಸಲಾಗಿದೆ ಎಂದು ಆತ ಹೇಳಿದ್ದಾನೆ.
- ಸಮಾವೇಶಕ್ಕೆ ಲೇವಡಿ
- ಭಾನುವಾರ ಪ್ಯಾರಿಸ್‌ನಲ್ಲಿ ನಡೆಸಲಾದ ಭಾರಿ ಏಕತಾ ಸಮಾವೇಶವನ್ನು ಉಗ್ರರ ಸಂಘಟನೆ ಗೇಲಿ ಮಾಡಿದೆ. ಸಮಾವೇಶದಲ್ಲಿ ಅಭಿವ್ಯಕ್ತಿಗೊಂಡ ಆಘಾತ ಅವರ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಅಲ್ ಕೈದಾ ಹೇಳಿದೆ.(prajavani/Thu, 15/01/2015)
ನಿಯಾಮೆನ -ನೈಗರ್`ನಲ್ಲಿ
ಬದಲಾಯಿಸಿ- ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರ ಪ್ರಕಟಿಸಿದ ಫ್ರಾನ್ಸ್‌ನ ವಿಡಂಬನಾ ವಾರಪತ್ರಿಕೆ ‘ಚಾರ್ಲಿ ಹೆಬ್ಡೊ’ ವಿರುದ್ಧ ನಿಯಾಮೆನ -ನೈಗರ್`ನಲ್ಲಿ, ಇಲ್ಲಿ ನಡೆಯುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರಿದಿದ್ದು, ಈವರೆಗೆ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿದೆ.
- ಶನಿವಾರ ನಡೆದಿದ್ದ ಪ್ರತಿಭಟನೆಯಲ್ಲಿ 4 ಮಂದಿ ಬಲಿಯಾಗಿದ್ದರು. ಬೆಂಕಿಗೆ ಆಹುತಿಯಾಗಿದ್ದ ಚರ್ಚ್ವೊಂದರಲ್ಲಿ ಭಾನುವಾರ ಮತ್ತೊಂದು ಶವ ಪತ್ತೆಯಾಗಿದೆ. ನಿಯಾಮಿಯಲ್ಲಿರುವ ಎಂಟು ಚರ್ಚ್‌ಗಳು, ಪ್ರಾನ್ಸ್ ಮೂಲದ ಸಂಸ್ಥೆಗಳ ಕಟ್ಟಡಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
- ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಶ್ಚಿಯನ್ ಒಬ್ಬರು, ‘ನಾವೆಲ್ಲರೂ ಮನೆಯ ಒಳಗೇ ಇದ್ದೇವೆ. ನನ್ನ ಜೀವನದಲ್ಲಿ ನಾನು ಇಷ್ಟು ಹೆದರಿದ್ದು ಇದೇ ಮೊದಲು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನೈಗರ್ ಅಧ್ಯಕ್ಷ ಮಹಮ್ಮದ್ ಯೂಸುಫ್, ‘ಚರ್ಚ್‌ಗಳಿಗೆ ಬೆಂಕಿಯಿಟ್ಟು, ಅವನ್ನು ಲೂಟಿ ಹೊಡೆಯುತ್ತಿರುವ, ಅಪವಿತ್ರಗೊಳಿಸುತ್ತಿರುವ ಮತ್ತು ಕ್ರಿಶ್ಚಿಯನ್ನರನ್ನು ಕೊಲ್ಲುತ್ತಿರುವವರಿಗೆ ಇಸ್ಲಾಂ ಬಗ್ಗೆ ಕಿಂಚಿತ್ತೂ ತಿಳಿದಿಲ್ಲ’ ಎಂದು ಹೇಳಿದ್ದಾರೆ.
- ಝಿಂಡರ್‌ನಲ್ಲಿ 255 ಮಂದಿ ಕ್ರಿಶ್ಚಿಯನ್ನರು ಸೇನೆಯ ರಕ್ಷಣೆ ಪಡೆದಿದ್ದಾರೆ. ನಿಯಾಮಿಯಲ್ಲಿರುವ ಚರ್ಚ್ ಮೊದಲಾದ ಕ್ರಿಶ್ಚಿಯನ್ ಧಾರ್ಮಿಕ ಕಟ್ಟಡಗಳಿಗೆ ಭದ್ರತೆ ಒದಗಿಸಲಾಗಿದೆ. ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರ ಪ್ರಕಟಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕ ಎಂದು ಫ್ರಾನ್ಸ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಲಾರೆಂಟ್ ಫೇಬಿಯಸ್, ‘ಚಾರ್ಲಿ ಹೆಬ್ಡೊ’ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.:ದಿ.19/01/2015/ಎಎಫ್‌ಪಿ/ವರದಿ/prajavani/):
ನೋಡಿ
ಬದಲಾಯಿಸಿತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ (ಟಿಟಿಪಿ)