ಪ್ಯಾರಾಚೂಟ್ ಪತ್ರಿಕೋದ್ಯಮ
ಕಡಿಮೆ ಜ್ಞಾನ ಮತ್ತು ಕಡಿಮೆ ಅನುಭವವಿರುವ ವರದಿಗಾರರನ್ನು ವರದಿ ಮಾಡಲು ಯಾವುದಾದರೂ ಒಂದು ಪ್ರದೇಶಕ್ಕೆ ಕಳುಹಿಸುವುದಕ್ಕೆ ಪ್ಯಾರಾಚೂಟ್ ಪತ್ರಿಕೋದ್ಯಮ ಎನ್ನುತ್ತಾರೆ.[೧][೨][೩] ಬ್ರೇಕಿಂಗ್ ನ್ಯೂಸ್ ಸಮಯದಲ್ಲಿ ಇಲ್ಲಿನ ವರದಿಗಾರನಿಗೆ ಜ್ಞಾನದ ಕೊರತೆ ಮತ್ತು ಸಮಯದ ಅಭಾವವಿರುವುದರಿಂದ, ತಪ್ಪಾದ ಸುದ್ದಿಯ ವರದಿಗಳಿಗೆ ಕಾರಣವಾಗುತ್ತದೆ. ಪರಿಣಿತ ವರದಿಗಾರರನ್ನು ಹೊರತುಪಡಿಸಿ, ಸುದ್ದಿ ಸಂಸ್ಥೆಗಳು ಕೆಲವೊಮ್ಮೆ (ಪ್ಯಾರಾಚೂಟ್ ಮೂಲಕ) ಸಾಮಾನ್ಯ ವರದಿಗಾರರು ಅಥವಾ ಅನುಭವವಿರುವ ಪತ್ರಕರ್ತರನ್ನು ಪರಿಚಯವಿಲ್ಲದ ಪ್ರದೇಶಗಳಿಗೆ ಕಳುಹಿಸುತ್ತವೆ.
ಪ್ಯಾರಾಚೂಟ್ ಪತ್ರಿಕೋದ್ಯಮ ಎಂಬ ಪದವನ್ನು ಸಾಮಾನ್ಯವಾಗಿ ವಿಮರ್ಶಕರು ಬಳಸುತ್ತಾರೆ. ಯಾಕೆಂದರೆ ಈ ಪತ್ರಿಕೋದ್ಯಮವು ಸಾಮಾನ್ಯವಾಗಿ ಆ ಪ್ರದೇಶದ ಮೂಲಭೂತ ವಿವರಗಳನ್ನು ವರದಿ ಮಾಡುತ್ತದೆ. ಕಡಿಮೆ ಜ್ಞಾನ ಮತ್ತು ಅನುಭವ ಇರುವ ವರದಿಗಾರರು ನಿಖರವಾದ ಮಾಹಿತಿ ಕೊಡದೆ ಅಲ್ಲಿನ ಸಮಸ್ಯೆಗಳ ಬಗ್ಗೆ ತಪ್ಪಾಗಿ ವರದಿ ಮಾಡುತ್ತಾರೆ ಎಂದು ವಾದಿಸುತ್ತಾರೆ. ಪತ್ರಕರ್ತನಿಗೆ ಪರಿಸ್ಥಿತಿಯ ಆಳವಾದ ಜ್ಞಾನ ಇರುವುದಿಲ್ಲ ಮತ್ತು ಆ ಪರಿಸರದ ಬಗ್ಗೆ ತಿಳಿದುಕೊಂಡಿರುವುದಿಲ್ಲ, ಹೀಗಾಗಿ ಸುದ್ದಿಗಳನ್ನು ಇತರ ಸುದ್ದಿ ಸಂಸ್ಥೆಗಳಿಂದ ತಿಳಿದುಕೊಳ್ಳುತ್ತಾರೆ ಅಥವಾ ಸುದ್ದಿಯು ಪ್ರಚಾರವನ್ನು ಒಳಗೊಂಡಿರುವ ಅಧಿಕೃತ ಅಥವಾ ಅಧಿಕಾರಶಾಹಿ ಮೂಲಗಳಿಂದ ಮಾತ್ರ ಲಭ್ಯವಾಗಿರುತ್ತದೆ.
ಪತ್ರಕರ್ತರನ್ನು ಬೇರೆ ಪ್ರದೇಶಗಳಿಗೆ ವರದಿ ಮಾಡಲು ಕಳುಹಿಸಿದಾಗ ಅಲ್ಲಿ ಅವರಿಗೆ ಯಾವುದೇ ಸಂಪರ್ಕಗಳಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಯಾವುದೇ ಮಾಹಿತಿಯನ್ನು ಪಡೆಯಲು ಅವರು ಸ್ಟ್ರಿಂಜರ್‌ಗಳನ್ನು ಅವಲಂಬಿಸಬಹುದು. ಆದರೆ ಕೆಲವೊಂದು ಸಲ ಪತ್ರಕರ್ತನು ಅವರಿಂದ ಹೆಚ್ಚಿನ ಮನ್ನಣೆ ಅಥವಾ ಮಾಹಿತಿ ಪಡೆಯುವುದು ವರದಿ ಮಾಡುವಿಕೆಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದು ಪ್ಯಾರಾಚೂಟರ್ ಮತ್ತು ಸ್ಟ್ರಿಂಜರ್ ನಡುವಿನ ಸಂಬಂಧವನ್ನು ಹದಗೆಡಿಸಬಹುದು.
ಸಮಯ ಮತ್ತು ಜ್ಞಾನದ ಕೊರತೆಯಿಂದಾಗಿ, ಸ್ಥಳದಲ್ಲಿ ನಡೆಯುವ ಘಟನೆಗಳ ಹಿನ್ನೆಲೆ, ಸಂಶೋಧನೆ ಮತ್ತು ಸ್ವತಂತ್ರ ತನಿಖೆಯು ಅಸ್ತಿತ್ವದಲ್ಲಿರುವುದಿಲ್ಲ. ಹೆಚ್ಚಿನ ಸಂಶೋಧನೆ, ಅಥವಾ ಯಾವುದೇ ಮಾಹಿತಿ ಬೇಕಿದ್ದರೆ ಅವರು ಅ ಪ್ರದೇಶಕ್ಕೆ ಹೊರಡುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು. ಮತ್ತೊಂದು ನ್ಯೂನತೆಯೆಂದರೆ ಪ್ಯಾರಾಚೂಟರ್‌ಗಳು ಪ್ಯಾಕ್ ಜರ್ನಲಿಸಂನಲ್ಲಿ ತೊಡಗಿಸಿಕೊಳ್ಳುತ್ತಾರೆ.
ಈ ರೀತಿಯ ಪತ್ರಿಕೋದ್ಯಮದ ಒಂದು ಪ್ರಯೋಜನವೆಂದರೆ, ಪ್ಯಾರಾಚೂಟರ್ ಒಬ್ಬ ಹೊರಗಿನ ವ್ಯಕ್ತಿಯಾಗಿರುತ್ತಾರೆ. ಅವರು ಬೇರೆ ಯಾವುದೇ ಪ್ರದೇಶಗಳಿಗೆ ಸುದ್ದಿಗಾಗಿ ಹೋದಾಗ ಘಟನೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಮತ್ತು ವಿಷಯಗಳನ್ನು ಗಮನಿಸಲು ಅಥವಾ ಸ್ಟ್ರಿಂಜರ್ ಗಳಿಂದ ಯಾವುದೇ ಸಹಾಯ ಪಡೆಯದೇ ವರದಿ ಮಾಡಲು ಕಲಿಯುತ್ತಾರೆ. ಇದು ಜಾಗತಿಕ ಪ್ರೇಕ್ಷಕರು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಗುರುತಿಸಲು ಸಹಾಯವಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Erickson, Emily; Hamilton, John Maxwell (2006). "Foreign Reporting Enhanced by Parachute Journalism". Newspaper Research Journal. 27 (1): 33–47. doi:10.1177/073953290602700104.
- ↑ Musa, Aliyu Odamah; Yusha’u, Muhammad Jameel (2013). "Conflict reporting and parachute journalism in Africa: A study of CNN and Al Jazeera's coverage of the Boko Haram insurgency". Journal of Arab & Muslim Media Research. 6 (2–3): 251–267. doi:10.1386/jammr.6.2-3.251_1.
- ↑ Wizda, Sharyn (1997). "Parachute journalism". American Journalism Review. 19 (6): 40 ff.