ಪೋಲ್ ಪೋಟ್

20 ನೇ ಶತಮಾನದ ಕಾಂಬೋಡಿಯನ್ ಕ್ರಾಂತಿಕಾರಿ ಮತ್ತು ರಾಜಕಾರಣಿ

ಪೋಲ್ ಪೋಟ್ ಕಾಂಬೋಡಿಯ ದೇಶದ ನಾಯಕ.೧೯೬೩ರಿಂದ ೧೯೮೧ರವರೆಗೆ ಕಾಂಬೋಡಿಯ ದೇಶದ ಮುಖ್ಯಸ್ಥರಾಗಿದ್ದರು. ಸರ್ವಾಧಿಕಾರಿ ಆಡಳಿತದ ರೂವಾರಿಯಾಗಿ, [೧]ಸರಿಸುಮಾರು ೩೦ ಲಕ್ಷ ನಾಗರಿಕರ ಹತ್ಯೆಯ ಕಾರಣೀಭೂತಾರಾದದ್ದು ಪೋಲ್ ಪೋಟ್ ಆಡಳಿತದ ವೈಫಲ್ಯ.[೨]

ಹುಟ್ಟುಸಂಪಾದಿಸಿ

೧೯ ಮೇ ೧೯೨೫ರಂದು ಪೆನ್ ಸಲೋತ್ ಮತ್ತು ಸಾಕ್ ನೇಮ್ ಎಂಬ ಭತ್ತದ ಕೃಷಿಕ ದಂಪತಿಗಳಿಗೆ ೮ನೇ ಮಗುವಾಗಿ ಜನಿಸಿದ ಸಲೋತ್ ಸಾರ್ ಎಂಬ ಹೆಸರಿನಲ್ಲಿ ಜನಿಸಿದ ಪೋಲ್ ಪೋಟ್, ಬಾಲ್ಯದಲ್ಲಿ ಬಹಳ ಅಂದವಾಗಿದ್ದರು. ಅವರ ಬೆಳ್ಳನೆಯ ರೂಪಿನ ಸಲುವಾಗಿ ಅವರಿಗೆ ಸಾರ್ ಎಂದು ಹೆಸರು ನೀಡಲಾಯಿತು. ಸಾರ್ ಎಂಬುದರ ಅರ್ಥ, ಖ್ಮೇರ್ ಭಾಷೆಯಲ್ಲಿ ಅಚ್ಚ ಬಿಳಿ ಎಂದು.


ಸಲೋತ್ ಸಾರ್ ರ ಅಕ್ಕ ರೋ ಉ ಎಂಗ್ ಕಾಂಬೋಡಿಯಾದ ಮಹಾರಾಜ ಮೋನಿವಿಂಗ್ ಆ ಆಂತಃಪುರ ಸೇರಿದರು. ಅಕ್ಕನನ್ನು ನೋಡಲೋಸುಗ ಸಲೋತ್ ಸಾರ್, ಆಗಾಗ ಅರಮನೆಗೆ ತೆರಳುತ್ತಿದ್ದರು.

ಓದುಸಂಪಾದಿಸಿ

೧೯೩೫ರವರೆಗೆ ಬೌದ್ಧ ದಮ್ಮಾಶಾಲೆಯೊಂದರಲ್ಲಿ ಕಲಿತ ಸಲೋತ್ ಸಾರ್, ೧೯೩೫ರಲ್ಲಿ ಕೆಥೋಲಿಕ್ ಶಾಲೆಗೆ ಸೇರಿದರು. ತಾಂತ್ರಿಕ ಶಾಲೆಯಲ್ಲಿ ಓದಲು ಸೇರಿದ ಸಲೋತ್ ಸಾರ್, ವಿದ್ಯಾರ್ಥಿ ವೇತನ ಪಡೆದು, ಎಲೆಕ್ಟ್ರಾನಿಕ್ಸ್ ಓದಲು ಪ್ಯಾರಿಸ್ಸಿಗೆ ತೆರಳಿದರು. ೧೯೪೯-೫೩ರ ಅವಧಿಯಲ್ಲಿ ರೇಡಿಯೋ ಎಲೆಕ್ಟ್ರಾನಿಕ್ಸ್ ಓದಿದ ಸಲೋತ್ ಸಾರ್, ಯುಗೋಸ್ಲಾವಿಯಾಕ್ಕೆ ತೆರಳಿ ರಸ್ತೆ ನಿರ್ಮಾಣ ಕಾರ್ಯಕ್ರಮದ ಅನುಭವ ಪಡೆದರು. ೧೯೫೦ರಲ್ಲಿ ವಿಯೆಟ್ನಾಂ ನಲ್ಲಿ ಕ್ರಾಂತಿ ನಡೆದಾಗ, ರಷ್ಯಾ ದೇಶವು ಕಮ್ಯುನಿಸ್ಟ್ ಕ್ರಾಂತಿಕಾರಿಗಳಿಗೆ ಸಹಾಯ ಒದಗಿಸಿತು. ರಷ್ಯಾದ ಈ ವಸಾಹತು ವಿರೋಧಿ ಧೋರಣೆ ಮತ್ತು ಜನಪರ ಹೋರಾಟಕ್ಕೆ ಪ್ರೇರಣೆ-ಸಹಾಯ ವಿಯೆಟ್ನಾಂ ನಾ ಪಕ್ಕದ ದೇಶ ಕಾಂಬೋಡಿಯಾದ ಯುವಕರಲ್ಲಿ ಕೆಚ್ಚು ಮೂಡಿಸಿತು. ೧೯೫ರಲ್ಲಿ ಖ್ಮೇರ್ ವಿದ್ಯಾರ್ಥಿ . ಸಂಘಟನೆ ಸೇರಿದ ಸಲೋತ್ ಸಾರ್, ಕೆಲವೇ ತಿಂಗಳುಗಳಲ್ಲಿ ಫ್ರೆಂಚ್ ಕಮ್ಯುನಿಸ್ಟ್ ಪಕ್ಷ ಸೇರಿದರು. ಸತತವಾಗಿ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಂಡು, ಓದಿನಲ್ಲಿ ಆಸಕ್ತಿ ಕಳೆದುಕೊಂಡ ಸಲೋತ್ ಸಾರ್ರನ್ನು ಉಚ್ಚಾಟಿಸಲಾಯಿತು. ಸಲೋತ್ ಸಾರ್ ಕಾಂಬೋಡಿಯಕ್ಕೆ ಮರಳಿದರು.[೩]

ಕ್ರಾಂತಿಕಾರಿ ಬದುಕುಸಂಪಾದಿಸಿ

ಫ್ರೆಂಚ್ ಕಮ್ಯುನಿಸ್ಟ್ ಪಕ್ಷದ ವಿಚಾರಧಾರೆ, ಖ್ಮೇರ್ ಜನಕ್ರಾಂತಿ ಪಕ್ಷದ ವಿಚಾರಗಳು ಕಾಂಬೋಡಿಯಾಕ್ಕಿಂತಲೂ ವಿಯೆಟ್ನಾಂನ ಹಿತಾಸಕ್ತಿಗಳಿಗೆ ಪಕ್ಕಾಗಿರುವುದನ್ನು ಮನಗಂಡ ಸಲೋತ್ ಸಾರ್ ಆಡಳಿತವಿರೋಧಿ ಚಳುವಳಿಯಲ್ಲಿ ಸಕ್ರಿಯರಾದರು. ೧೯೫೪ರಲ್ಲಿ ಫ್ರೆಂಚರ ಆಡಳಿತದಿಂದ ಸ್ವಾತಂತ್ರ್ಯ ಪಡೆದಾಗ, ಸಾರ್ ಚಳುವಳಿಯ ಮಂಚೂಣಿಯಲ್ಲಿದ್ದರು. ೧೯೫೪ರಿಂದ ೧೯೬೨ರವರೆಗೆ ಸಲೋತ್ ಸಾರ್, ಫ್ರೆಂಚ್ ಸಾಹಿತ್ಯವನ್ನು ಬೋಧಿಸುವ ಶಿಕ್ಷಕರಾಗಿದ್ದರು.

೧೯೬೨ರಲ್ಲಿ ಆಡಳಿತವಿರೋಧಿ ದಂಗೆ ನಡೆದಾಗ, ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ (ಸರ್ವೋಚ್ಚ ಪದವಿ) ತೌ ಸಾಮೌತ್ ಕೊಲೆಯಾದರು. ತೌ ರ ನಂತರ ಸ್ಥಾನದಲ್ಲಿದ್ದ ಸಲೋತ್ ಸಾರ್ ಭೂಗತರಾಗಿ ಚಳುವಳಿಯನ್ನು ಜೀವಂತವಾಗಿಟ್ಟರು.

ವಿಯೆಟ್ನಾಂನ ನೆರವಿ ಕೋರಿದ ಸಲೋತ್ ಸಾರ್, ನಿರಾಶರಾಗಬೇಕಾಯಿತು. ೧೯೫೬ರಲ್ಲಿ ಮತ್ತೆ ದಂಗೆ ನಡೆಸಲು ಉದ್ದೇಶಿಸಿದ ಸಲೋತ್ ಸಾರ್, ಪಕ್ಷದ ಹೆಸರನ್ನು ಕಾಂಪೂಚಿಯ ಕಮ್ಯುನಿಸ್ಟ್ ಪಕ್ಷ ಎಂದು ಬದಲಿಸಿದರು. ೧೯೬೭ರ ಹೊತ್ತಿಗೆ ಸಶಸ್ತ್ರ ಯುದ್ಧಕ್ಕೆ ಎಲ್ಲ ತರಬೇತಿಯನ್ನು ನೀಡಿ, ತಮ್ಮದೆಯೇ ಸೇನೆ ಕಟ್ಟಿದ ಸಲೋತ್ ಸಾರ್, ಕಾಂಬೋಡಿಯಾದ ರಾಜ ಸಿಂಹನೌಕ ವಿರುದ್ಧ ದಂಗೆಗೆ ಕರೆಯಿತ್ತರು.

ಚೈನಾ ಮತ್ತು ವಿಯೆಟ್ನಾಮ್ ಸಂಧಾನ ಮಾತುಕತೆ ಫಲಪ್ರದವಾಗದ ಕಾರಣ, ಅಂತರ್ಯುದ್ಧ ಅನಿವಾರ್ಯವಾಯಿತು. ೧೯೭೦ರ ಹೊತ್ತಿಗೆ ಸಿಂಹನೌಕ್, ಬದಲಾದ ಸಂದರ್ಭದಲ್ಲಿ ಮಹಾರಾಜ ಸಿಂಹನೌಕ್ ಮತ್ತು ಸಲೋತ್ ಸಾರ್ ಒಂದಾದರು.

ಖ್ಮೇರ್ ರೋಗ್ ಎಂದೇ ಹೆಸರುವಾಸಿಯಾದ ಬಂಡುಕೋರ ಪಡೆಯ ನಾಯಕರಾಗಿ ೧೯೭೩ರವರೆಗೆ ವಿರೋಧಿಗಳೊಡನೆ ಸೆಣಸಿದ ಸಲೋತ್ ಸಾರ್, ರಾಜಧಾನಿ ನೋಮ್ ಪೇಯ ಮೇಲೆ ದಿಗ್ಭಂಧನ ವಿಧಿಸಿದರು. ಕಟುವಾದ ಶಿಕ್ಷೆಯನ್ನು, ವಿಧವಿಧ ಚಿತ್ರಹಿಂಸೆಗಳಿಗೆ ಗುರಿಮಾಡಿಸಿ, ವಿರೋಧಿಗಳನ್ನು ಸಲೋತ್ ಸಾರ್ ಸದೆಬಡಿದರು.[೪]

ವಿಯೆಟ್ನಾಂ ಸಹಾಯದಿಂದ ಆಡಳಿತ ನಡೆಸುತ್ತಿದ್ದ ಕಾಂಬೋಡಿಯ ಸರ್ಕಾರವನ್ನು ಸೋಲಿಸಿ, ೧೭ ಏಪ್ರಿಲ್ ೧೯೭೫ರಂದು ಖ್ಮೇರ್ ಭಾಷೆಯಲ್ಲಿ "ನೆಚ್ಚಿನ ಅಣ್ಣ" ಎಂಬ ಅರ್ಥ ಬರುವ ಪೋಲ್ ಪೋಟ್ ಎಂದು ಕರೆಸಿಕೊಂಡ ಸಲೋತ್ ಸಾರ್, ಪ್ರಧಾನಿ ಹುದ್ದೆಗೆ ಏರಿದರು.

ಖ್ಮೇರ್ ರೋಗ ನರಮೇಧಸಂಪಾದಿಸಿ

ಸಮಾಜವಾದಿ ಧೋರಣೆಯ ಹೊಸ ಸಂವಿಧಾನವನ್ನು ಜಾರಿಗೆ ತಂದಪೋಲ್ ಪೋಟ್, ಕಡ್ಡಾಯವಾಗಿ ರಾಜಧಾನಿಯಿಂದ ಹೊರಕಳಿಸತೊಡಗಿದರು. ವಿರೊಧಿಗಳು, ಬೂರ್ಜ್ವಾಗಳು, ವರ್ಗವಿರೋಧಿಗಳು ಎಂದು ಪೋಲ್ ಪೋಟ್ ತಾವು ಪರಿಗಣಿಸಿದ ಎಲ್ಲರನ್ನೂ, ರಾಜಧಾನಿಯಿಂದ ದೂರ ನೂಕಲು ಇಚ್ಚಿಸಿದ ಪೋಲ್ ಪೋಟ್, ೨೦ ಶತಮಾನದ ಅತಿ ದೊಡ್ಡ ನರಮೇಧಕ್ಕೆ ಕಾರಣರಾದರು. ೧೯೭೬ರವರೆಗೆ ನಡೆದ ಈ ಕಾರ್ಯದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧ ಬಿಕ್ಷುಗಳು ಎನ್ನದೆಯೇ ಹತರಾದರು.

ಜೀವಂತವಾಗಿಹೂಳಲ್ಪಟ್ಟ ನಾಗರಿಕರು, ಹಸಿವಿನಿಂದ ನರಳಿ ಸತ್ತವರು, ಹೀಗೆ, ಹೊಸ ಸಮಾಜ ಕಟ್ತಲು ಪೋಲ್ ಪೋಟ್ ಆಡಳಿತದಲ್ಲಿ ಸತ್ತವರು ಸರಿಸುಮಾರು ೩೦ ಲಕ್ಷ ಮಂದಿ ಎಂಬುದು ಎಂದು ಅಂದಾಜು. ನಿಖರ ಮಾಹಿತಿ ಎಲ್ಲಿಯೂ ಇಲ್ಲ. ತಮ್ಮ ಕನಸಿನ ಸಮಾಜವಾದಿ ರಾಷ್ಟ್ರ ಕತ್ತಲು ಅಡ್ಡಿಯಾದವರನ್ನೆಲ್ಲ, ಹೀಗೆಯೇ ಮುಗಿಸಿದ ಪೋಲ್ ಪೋಟ್, ಜನ ಹಸಿವಿನಿಂದ ಸಾಯುತ್ತಿದ್ದ ಸಮಯದಲ್ಲಿಯೂ, ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡಿದರು.

ಸಂಪತ್ತು, ಶಿಕ್ಷಣ, ಕಡೆಗೆ ಜನ ತಿನ್ನುವ ಊಟವನ್ನೂ ಸಹಿತ ರಾಷ್ಟ್ರೀಕರಣಗೊಳಿಸಿದ ಪೋಲ್ ಪೋಟ್, ಯಾರೊಬ್ಬರೂ ಮನೆಯಲ್ಲಿ ಸ್ವತಃ ಅಡಿಗೆ ಮಾಡಬಾರದು ಎಂದು ಫರ್ಮಾನು ಹೊರಡಿಸಿದರು. ಕೂಡಿಯೇ ಉಣ್ಣಬೇಕು ಎಂಬ ಆದೇಶ ವಿರೋಧಿಸಿದವರಿಗೆ ಕಠಿಣ ಚಿತ್ರಹಿಂಸೆ, ರಾಜಕೀಯ ವಿರೋಧಿ ಎಂಬ ಸಂಶಯ ಮಾತ್ರಕ್ಕೇನೆ ಸೆರೆಮನೆ ಶಿಕ್ಷೆ, ಹೀಗೆ ಹಲವು ಬಗೆಯಲ್ಲಿ ಪೋಲ್ ಪೋಟ್, ಸರ್ವಾಧಿಕಾರಿ ಆಡಳಿತ ನಡೆಸಿದರು.

ವಿಯೆಟ್ನಾಂನೊಂದಿಗೆ ಯುದ್ಧಸಂಪಾದಿಸಿ

೧೯೭೬ರಿಂದ ಲಾವೋಸ್ ಮತ್ತು ವಿಯೆಟ್ನಾಂ ನಡುವೆ, ವಿಯೆಟ್ನಾಂ ಮತ್ತು ಕಾಂಬೋಡಿಯಾದ ಮಧ್ಯೆ ಸಂಬಂಧ ಹದಗೆಟ್ಟು, ೧೯೭೮ ಮೇನಲ್ಲಿ ವಿಯೆಟ್ನಾಂ ಪೋಲ್ ಪೋಟ್ ಸರ್ಕಾರವನ್ನು ಸೋಲಿಸಿತು. ಥಾಯ್ ಲಾಂಡ್ ನಲ್ಲಿ ತಲೆಮರೆಸಿಕೊಂಡ ಪೋಲ್ ಪೋಟ್, ಚೈನಾದ ನೆರವಿನಿಂದ ನಿರಂತರ ಹೋರಾಟ ಮಾಡುತ್ತಲೇ ಇದ್ದ
ರು.

ಸಾವುಸಂಪಾದಿಸಿ

೧೯೮೫ರಲ್ಲಿ ಅಸ್ತಮಾ ಕಾರಣ ನೀಡಿ ನಿವ್ಱುತ್ತಿ ಘೋಷಿಸಿದ ಪೋಲ್ ಪೋಟ್, ೧೯೯೫ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ೧೯೯೮ರ ಏಪ್ರಿಲ್ ೧೫ರMದು ಕೊನೆಯ ಉಸಿರು ಎಳೆದರು.

  1. http://www.paulbogdanor.com/left/cambodia/locard.pdf
  2. http://www.mekong.net/cambodia/deaths.htm
  3. https://web.archive.org/web/20090126135726/http://www.time.com/time/asia/asia/magazine/1999/990823/pol_pot1.html
  4. http://www.phnompenhpost.com/national/debating-genocide