ಪೊಕ್ಕು ಆಟ
ಅಲ್ಲಮಂಡ ಕ್ಯಾಥರ್ಟಿಕಾ [೧] | |
---|---|
Scientific classification | |
Unrecognized taxon (fix): | ಅಲ್ಲಮಂಡ |
ಪ್ರಜಾತಿ: | ಅ. ಕ್ಯಾಥರ್ಟಿಕಾ [೧]
|
Binomial name | |
ಅಲ್ಲಮಂಡ ಕ್ಯಾಥರ್ಟಿಕಾ [೧] |
ಪೊಕ್ಕು ಆಟ
ಪೊಕ್ಕು ಆಟ
ಬದಲಾಯಿಸಿಪೊಕ್ಕು ಆಟ ಆಟಿ ತಿಂಗಳಿನಲ್ಲಿ ಬಿಡದೆ ಧಾರಕಾರವಾಗಿ ಮಳೆ ಸುರಿಯುವಾಗ ಹೆಚ್ಚಾಗಿ ಹೆಣ್ಣು ಮಕ್ಕಳು, ಹೆಂಗಸರು ಮನೆಯ ಒಳಗೆ ಆ ಮಳೆಗಾಲದಲ್ಲಿ ಉಂಟಾಗುವ ಬೇಸರತನವನ್ನು ದೂರ ಮಾಡುಲು ಆಡುವ ಆಟ.
ಪೊಕ್ಕು ಆಟ ಆಡಲು ಬೇಕಾಗುವ ಕಾಯಿ
ಬದಲಾಯಿಸಿಪೊಕ್ಕು ಆಡಲು ಬೇಕಾಗುವ ಕಾಯಿ ಮಿಠಾಯಿ ಹೂವಿನ ಕಾಯಿ ತುಳುವಿನಲ್ಲಿ ಗಜ್ಜಿಗೆದ ಕಾಯಿ ಅಂತ ಕರೆಯುತ್ತಾರೆ. ಈ ಹೂವಿನ ಇಂಗ್ಲಿಷ್ ಹೆಸರು ಗೋಲ್ಡನ್ ಟ್ರಂಪೆಟ್. ಹಾಗೆಯೇ ಅದರ ವೈಜ್ಞಾನಿಕ ಹೆಸರು ಅಲ್ಲಮಂಡ ಕತಾರ್ಟಿಕ. [೨]
ಪೊಕ್ಕು ಆಟ ಆಡುವ ವಿಧಾನ
ಬದಲಾಯಿಸಿಹತ್ತು ಕಾಯಿಗಳನ್ನು ಒಂದು ಕೈಯಲ್ಲಿ ಹಿಡಿದು ಅದೇ ಕೈಯಲ್ಲಿ ಎಲ್ಲಾ ಹತ್ತು ಕಾಯಿಗಳನ್ನು ಗಾಳಿಯಲ್ಲಿ ಹಾರಿಸಿ ಹಿಂಗೈಗೆ ಹಾಕಬೇಕು. ಮತ್ತು ಪುನಃ ಎಲ್ಲಾ ಕಾಯಿಗಳನ್ನು ಗಾಳಿಯಲ್ಲಿ ಹಾರಿಸಿ ಅಂಗೈ ಯಲ್ಲಿ ಹಿಡಿಯಬೇಕು. ಹಿಡಿದ ಕಾಯಿ ಬಿಟ್ಟು ಉಳಿದ ಕಾಯಿಗಳೆಲ್ಲ ನೆಲದಲ್ಲಿ ಬೀಳುತ್ತವೆ, ಕೆಳಗೆ ಬಿದ್ದ ಕಾಯಿಗಳನ್ನು ಒಂದು ಒಂದರಂತೆ , ಒಂದು ಕಾಯಿಯನ್ನು ಗಾಳಿಯಲ್ಲಿ ಹಾರಿಸಿ ಅದೇ ಕೈಯಲ್ಲಿ ಎಲ್ಲಾ ಕಾಯಿಯನ್ನು ಹಿಡಿಯಬೇಕು. ಅವನ್ನು ಒಂದೊಂದು ಕಾಯಿಯನ್ನು ಹೆಕ್ಕಬೇಕು. ಹಾಗೆ ಹೆಕ್ಕಿದ ನಂತರ ಅವರಿಗೆ ಒಂದು ಕಾಯಿ ಅಂದರೆ ಒಂದು ಕಾಯಿ ಅವರ ಪಾಲಾಗುತ್ತದೆ. ಹೀಗೇಯೇ ಆಡುತ್ತಾ ಹೋಗಬೇಕು. ಪೊಕ್ಕು ಆಟದಲ್ಲಿ ಬೇರೆ ಬೇರೆ ವಿಧದ ಆಟಗಳಿವೆ.ಹಾಗೇಯೇ ಬೇರೆ ಬೇರೆ ಕಾಯಿಗಳನ್ನೂ ಈ ಆಟಕ್ಕೆ ಉಪಯೋಗಿಸುತ್ತಾರೆ.
ಆಟದ ಆಶಯ
ಬದಲಾಯಿಸಿಮನೆಯ ಒಳಗೆ ಕುಳಿತು ಆಡುವ ಯಾವುದೇ ಒಂದು ಆಟವಾಗಲಿ, ಅವುಗಳು ಮನೆಯವರನೆಲ್ಲಾ ಒಂದು ಜಾಗದಲ್ಲಿ ಸೇರಿಸುತ್ತದೆ ಅಷ್ಟೆ ಅಲ್ಲಾ ಮನೆಯವರನ್ನೂ ಅವರ ಮನಸ್ಸನ್ನೂ ಒಂದು ಮಾಡಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "Allamanda cathartica". Germplasm Resources Information Network. Agricultural Research Service, United States Department of Agriculture. Retrieved 2 September 2014.
- ↑ https://teredamanasinaputagalu.blogspot.com/2012/08/blog-post_5.html?m=1