ಕಾಗದ
(ಪೇಪರ್ ಇಂದ ಪುನರ್ನಿರ್ದೇಶಿತ)
ಪರಿಚಯ
ಬದಲಾಯಿಸಿಆಧುನಿಕ ಕಾಗದವು ತೆಳುವಾದ ಪದರವಾಗಿದ್ದು ಮರದ ಎಳೆಗಳನ್ನು ಒತ್ತಾಗಿ ಸೇರಿಸುವುದರಿಂದಾಗಿದೆ. ಜನರು ಕಾಗದವನ್ನು ಬರೆಯಲು, ಪುಸ್ತಕವನ್ನು ತಯಾರಿಸಲು ಉಪಯೋಗಿಸುತ್ತಾರೆ. ಕಾಗದವು ನೀರಿನಂತಹ ದ್ರವ ವಸ್ತುಗಳನ್ನು ಹೀರುವ ಗುಣವುಳ್ಳದ್ದರಿಂದ ಸ್ವಚ್ಛಗೊಳಿಸಲು ಕೂಡ ಕಾಗದವನ್ನು ಉಪಯೋಗಿಸುತ್ತಾರೆ.
ಕಾಗದ ಮಾಡುವ ವಿಧಾನ
ಬದಲಾಯಿಸಿಆಧುನಿಕ ಕಾಗದವು ಮರದ ತಿರುಳಿನಿಂದ ಮಾಡಲ್ಪಟ್ಟಿರುತ್ತದೆ. ಮರದ ತಿರುಳನ್ನು ಅರೆದು ಅದನ್ನು ನೀರು ಮತ್ತು ಇತರ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಿ ಕಾಗದದ ತಿರುಳು ಎನ್ನುವ ತೆಳುವಾದ ದ್ರವವನ್ನು ತಯಾರಿಸುತ್ತಾರೆ. ಕಾಗದದ ತಿರುಳನ್ನು ಬ್ಲೀಚಿಂಗೆ ಒಳಪಡಿಸಿದಾಗ ಅದು ಬಿಳಿಯ ಬಣ್ಣದ ಕಾಗದ ತಯಾರಾಗುತ್ತದೆ. ಇದೆ ಕಾಗದದ ತಿರುಳಿಗೆ ಬಣ್ಣಗಳನ್ನು ಸೇರಿಸಿದಾಗ ಬಣ್ಣದ ಕಾಗದ ತಯಾರಾಗುತ್ತದೆ. ಕಾಗದದ ತಿರುಳನ್ನು ಯಂತ್ರದಲ್ಲಿ ಒತ್ತಿದಾಗ ಕಾಗದದ ಆಳೆಗಳು ತಯಾರಾಗುತ್ತವೆ. ಈ ಆಳೆಗಳನ್ನು ಒಣಗಿಸಿ ನಂತರ ಬೇಕಾದ ಗಾತ್ರಕ್ಕೆ ಆಳೆಗಳಾಗಿ ಕತ್ತರಿಸುತ್ತಾರೆ.