ಪೂನಾ ಒಪ್ಪಂದ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ನಡುವಿನ ಒಪ್ಪಂದ

ಸ್ವಾತಂತ್ರ್ಯ ಪೂರ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗು ಮಹಾತ್ಮ ಗಾಂಧಿಯವರ ನಡುವೆ ಬ್ರಿಟಿಷ್ ಸರ್ಕಾರದ ಚುನಾವಣಾ ಕ್ಷೇತ್ರಗಳ ಹಿಂದುಳಿದ ಪಂಗಡಗಳ ಮೀಸಲಾತಿಯ ಕುರಿತು ಉಂಟಾದ ಒಪ್ಪಂದವೇ ಪೂನಾ ಒಪ್ಪಂದ. ಹಿಂದುಳಿದ ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳಲ್ಲಿ ಮೀಸಲಾತಿ ಒದಗಿಸುವಂತೆ ಕೋರಿ ಗಾಂಧೀಜಿ ಪುಣೆಯ ಜೈಲಿನಲ್ಲಿಯೇ ಉಪವಾಸ ನಡೆಸುತ್ತಿದ್ದರು. ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ರಾಮ್ಸಯ್ ಮೆಕ್ಡೊನಾಲ್ಡ್ ಹಿಂದುಳಿದ ಪಂಗಡಗಳಿಗೆಂದೇ ಮೀಸಲಾಗಿರುವ ಚುನಾವಣಾ ಕ್ಷೇತ್ರಗಳ ಕೋರಿಕೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಇದರ ವಿರುದ್ಧ ಗಾಂಧೀಜಿ ಪುಣೆಯರವಾಡದ ಜೈಲಿನಲ್ಲಿ ಉಪವಾಸ ನಡೆಸಿದ್ದರು. ಉಪವಾಸ ಅಂತ್ಯಗೊಳಿಸಲೋಸುಗ ೧೯೩೨ರ ಸೆಪ್ಟೆಂಬರ್ ೨೪ರಂದು ಡಾ.ಬಿ.ಆರ್.ಅಂಬೇಡ್ಕರ್, ಮದನ ಮೋಹನ ಮಾಳವೀಯ ಹಾಗು ಇನ್ನಿತರ ಆಗಿನ ಪ್ರಭಾವಿ ಭಾರತೀಯ ನಾಯಕರು ಪೂನಾ ಒಪ್ಪಂದಕ್ಕೆ ಸಹಿ ಮಾಡುತ್ತಾರೆ. ಒಪ್ಪಂದದ ಮುಖೇನ ಬ್ರಿಟಿಷ್ ಸರ್ಕಾರ ೪೮ ಚುನಾವಾಣಾ ಕ್ಷೇತ್ರಗಳಿಗೆ ಮೀಸಲಾತಿ ನೀಡಲು ಒಪ್ಪುತ್ತದೆ.[]

ಒಪ್ಪಂದದ ಕರಾರುಗಳು

ಬದಲಾಯಿಸಿ
  • ಹಿಂದುಳಿದ ವರ್ಗಗಳಿಗೆಂದೇ ಮೀಸಲಾದ ಚುನಾವಣಾ ಕ್ಷೇತ್ರಗಳನ್ನು ವಿಂಗಡಿಸಲಾಯಿತು. ಬ್ರಿಟಿಷ್ ಅಧಿಪತ್ಯವಿದ್ದ ಪ್ರತಿಯೊಂದು ಸಂಸ್ಥಾನದಲ್ಲೂ ಈ ಕೆಳಕಂಡಂತೆ ಮೀಸಲು ಕ್ಷೇತ್ರಗಳನ್ನು ಕೊಡ ಮಾಡಲಾಗಿತ್ತು.[] []
ಮದ್ರಾಸು ೩೦
ಬಾಂಬೆ(ಸಿಂಧ್ ಪ್ರಾಂತವನ್ನು ಸೇರಿ) ೧೫
ಪಂಜಾಬ್
ಬಿಹಾರ ಮತ್ತು ಒರಿಸ್ಸಾ ೧೮
ಕೇಂದ್ರೀಯ ಸಂಸ್ಥಾನಗಳು ೨೦
ಅಸ್ಸಾಮ್
ಬಂಗಾಳ ೩೦
ಸಂಯುಕ್ತ ಸಂಸ್ಥಾನಗಳು ೨೦
ಒಟ್ಟು ೧೪೮
  • ಆ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಅನುಸರಿಸಿದ ವಿಧಾನ, ಹಿಂದುಳಿದ ವರ್ಗದ ಎಲ್ಲ ಸದಸ್ಯರನ್ನು ಒಳಗೊಂಡ ಚುನಾವಣಾ ಕ್ಷೇತ್ರಕ್ಕೆ ಒಂದು ಎಲೆಕ್ಟೊರಲ್ ಕಾಲೇಜ್ ಅನ್ನು ನಿರ್ಣಯಿಸಲಾಗುತ್ತದೆ. ಆ ಎಲೆಕ್ಟೊರಲ್ ಕಾಲೇಜ್ ಹಿಂದುಳಿದ ವರ್ಗದ ನಾಲ್ಕು ಜನರನ್ನು ಮತಗಳ ಮೂಲಕ ಆರಿಸಲಾಗುತ್ತದೆ(ಪ್ರಾಥಮಿಕ ಚುನಾವಣೆ). ಅತೀ ಹೆಚ್ಚು ಮತಗಳನ್ನು ಪಡೆದ ನಾಲ್ಕು ವ್ಯಕ್ತಿಗಳನ್ನು ಸಾಮಾನ್ಯ ಚುನಾವಣೆಯಲ್ಲಿ ಅಭ್ಯರ್ಥಿಗಳೆಂದು ಘೋಷಿಸಲಾಗುತ್ತದೆ.
  • ಮೇಲೆ ತಿಳಿಸಿದ ಪ್ರಾಥಮಿಕ ಚುನಾವಣೆ ಕೇಂದ್ರದ ಶಾಸನ ಸಭೆಗೂ ಅನ್ವಯವಾಗುತ್ತದೆ.
  • ಬ್ರಿಟಿಷ್ ಭಾರತದ ಕೇಂದ್ರ ಶಾಸನ ಸಭೆಯಲ್ಲಿ ಹಿಂದುಳಿದ ವರ್ಗಗಳಿಗೆಂದೇ ೧೯% ಸ್ಥಾನಗಳನ್ನು ಮೀಸಲು ಕೊಡಲಾಯಿತು.
  • ಕೇಂದ್ರ ಶಾಸನ ಸಭೆ ಹಾಗು ಸ್ಥಳೀಯ ಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಡೆಯುವ ಪ್ರಾಥಮಿಕ ಚುನಾವಣೆಗಳ ವಾಯಿದೆ ಆರಂಭದ ಕೇವಲ ಹತ್ತು ವರ್ಷಗಳು ಮಾತ್ರವಾಗಿತ್ತು. ಅಂದರೆ ಪೂನಾ ಒಪ್ಪಂದದ ಮೊದಲ ಹತ್ತು ವರ್ಷ ಮಾತ್ರ ಈ ನಿಯಮ ಪಾಲಿಸಲು ಒಪ್ಪಿಗೆ ನೀಡಲಾಗಿತ್ತು.
  • ಕೇಂದ್ರ ಶಾಸನ ಸಭೆ ಹಾಗಿ ಸ್ಥಳೀಯ ಸಭೆಗಳಿಗೆ ನಡೆಯುವ ಚುನಾವಣೆಯಲ್ಲಿ ಬ್ರಿಟಿಷ್ ಸರ್ಕಾರ ಕೊಡಮಾಡಿರುವ ಮೀಸಲಾತಿಯು ಜಾರಿಯಲ್ಲಿರುತ್ತದೆ. ಚುನಾವಣಾ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರೊಂದಿಗೆ ಮಾತುಕತೆಯ ಮುಖಾಂತರ ಆ ನಿಯಮದಲ್ಲಿ ಸ್ವಪ್ರೇರಿತ ಸಡಿಲಿಕೆ ಮಾಡಿಕೊಳ್ಳಲು ಅವಕಾಶ ನೀಡುವುದು.
  • ಕೇಂದ್ರ ಹಾಗು ಸ್ಥಳೀಯ ಶಾಸನ ಸಭೆಗಳಲ್ಲಿ ಹಿಂದುಳಿದ ವರ್ಗವನ್ನು ಪ್ರತಿನಿಧಿಸುವ ಸದಸ್ಯರ ಪಾಲುದಾರಿಕೆಯು ಲೋಥಿಯನ್ ಸಮಿತಿ ವರದಿಯ ಪ್ರಕಾರವಿರುವಂತಹುದು.
  • ಹಿಂದುಳಿದ ವರ್ಗಗಳಿಂದ ಆಯ್ಕೆಯಾಗುವ ಸದಸ್ಯರುಗಳಲ್ಲಿ ಯಾವುದೇ ದೃಷ್ಟಿಯಿಂದಲೂ ಕುಂಠಿತ ಅಂಶಗಳು ಇರಬಾರದು. ಸಾರ್ವಜನಿಕ ಸೇವೆಗೆ ಅವರನ್ನು ನಿಯೋಜಿಸುವ ಮೊದಲು ಶೈಕ್ಷಣಿಕ ಅರ್ಹತೆಗಳನ್ನು ಯಥಾವತ್ತಾಗಿ ಪರಿಗಣಿಸುವುದು.
  • ಬ್ರಿಟಿಷ್ ಆಡಳಿತವಿರುವ ಎಲ್ಲ ಸಂಸ್ಥಾನಗಳಲ್ಲೂ ಹಿಂದುಳಿದ ವರ್ಗಗಳ ಶಿಕ್ಷಣಕ್ಕೆಂದೇ ಸಾಕಷ್ಟು ಹಣವನ್ನು ಮೀಸಲಿಡುವುದು.

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಪೂನಾ ಒಪ್ಪಂದದ ಮೂಲ ಅಂಶಗಳು".
  2. "ಇಂಡೋ ಹಿಸ್ಟರಿ - ಪೂನಾ ಒಪ್ಪಂದದ ಕುರಿತಾದ ಆಂಗ್ಲ ಮಾಹಿತಿ ತಾಣ". Archived from the original on 2018-11-05. Retrieved 2018-12-31.
  3. "ಬ್ರಿಟಾನಿಕಾ ಎನ್ಸೈಕ್ಲೋಪಿಡಿಯಾದ ಪೂನಾ ಒಪ್ಪಂದದ ಮಾಹಿತಿ".