ಪುಷ್ಪಾ ಅನಿಲ್
'ಕಾದಂಬರಿ ಕಣಜದ ಕಲಾವತಿ' ಪಾತ್ರಾಭಿನಯದಿಂದ ಟೆಲಿವಿಶನ್ ರಸಿಕರಿಗೆ ಮತ್ತಷ್ಟು ಪರಿಚಿತರಾಗಿರುವ 'ಪುಷ್ಪಾ ಅನಿಲ್',[೧] ಹಲವು ತರಹದ ಪಾತ್ರಗಳನ್ನು ಮಾಡಲು ಹಿಂಜರಿಯುವ ಸ್ವಭಾವದವರಲ್ಲ. ತಮ್ಮ ವಯಸ್ಸಿಗೆ ಮೀರಿದ ಪಾತ್ರಗಳನ್ನೂ ಅತ್ಯಂತ ಸಲೀಸಾಗಿ ಮಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಬ್ಬಿಂಗ್ ಕಲಾವಿದೆಯಾಗಿ ಯಶಸ್ವಿಯಾಗಿದ್ದಾರೆ
ಬದಲಾಯಿಸಿಡಬ್ಬಿಂಗ್ ನಲ್ಲಿ ಅವರು ಒಳ್ಳೆಯ ಹೊಂದಿದ್ದರೂ ನಿಜವಾಗಿ ಅವರನ್ನು ಕೇಳಿದರೆ ಡಬ್ಬಿಂಗ್ ನ ಬಗ್ಗೆ ಒಲವಿಲ್ಲವೆಂದು ಹೇಳಿ ಅಚ್ಚರಿ ಮೂಡಿಸುತ್ತಾರೆ. ಅವರು ಕೊಡುವ ಕಾರಣ, ಡಬ್ಬಿಂಗ್ ವಲಯದಲ್ಲಿ ೪ ಜನಕ್ಕೆ ಕೆಲಸ ಸಿಕ್ಕರೆ ನಾಲ್ಕುಸಾವಿರ ಕಲಾವಿದರು, ತಂತ್ರಜ್ಞರು ಕೆಲಸ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಒಬ್ಬರು ಊಟಮಾಡುವುದೇ ಮುಖ್ಯವಲ್ಲ. ಇದಲ್ಲದೆ ಡಬ್ಬಿಂಗ್ ನ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಪ್ರತಿಭಾಷೆಗೂ ಅದರದೇ ಆದ ಧ್ವನಿಯ ಹಾವಭಾವ ಇರುತ್ತದೆ. ಬೇರೆಭಾಷೆಗಳ ತುಟಿಚಲನೆಗೆ ಕನ್ನಡವನ್ನು ತುರುಕಲು ಹೋದಾಗ ಕನ್ನಡ ಭಾಷೆಯ ಎಲ್ಲಾ ಪದಗಳೂ ಹೊಂದಾಣಿಕೆ ಯಾಗದೆ ಕೆಲವೇ ಪದಗಳನ್ನು ಪದೇ ಪದೇ ಬಳಸುವ ಗೊಂದಲ ಇರುವ ಸಾಧ್ಯತೆಗಳಿವೆ. ಒಂದು ಭಾಷೆಯ ಅಸಂಖ್ಯ ಪದಗಳು ಬಳಕೆಗೇ ಬರದೇ ಹೋದರೆ, ಕ್ರಮೇಣ ಅವು ಈ ಮಾಧ್ಯಮದಲ್ಲಿ ನಶಿಸಿಹೋಗುವ ಆತಂತಕದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.
ಜನನ, ವಿದ್ಯಾಭ್ಯಾಸ, ವೃತ್ತಿಜೀವನ
ಬದಲಾಯಿಸಿಬೆಂಗಳೂರಿನಲ್ಲಿ ಜನಿಸಿದ ಪುಷ್ಪಾ,ರವರ ತಂದೆ ಬಿ.ಎಂ.ಟಿ.ಸಿ. ಕಂಡಕ್ಟರ್, ಆಗಿದ್ದರು. ಅಮ್ಮ ಲತಾ. ಅನಿಲ್ ಕುಮಾರ್ ಅವರ ಪತಿ. ಪುಷ್ಪಾ, ಬಿ.ಕಾಂ ಪದವಿಗಳಿಸಿದಬಳಿಕ ನಟನೆಯನ್ನು ಆರಿಸಿಕೊಂಡರು. ಶಾಲಾ ಕಾಲೇಜುಗಳಲ್ಲಿ ನಾಟಕಗಳಲ್ಲಿ ಪಾತ್ರವಹಿಸಿದ್ದರಿಂದ ಮುಂದೆ ನಟನೆಯೇನೂ ಸಮಸ್ಯೆಯಾಗಲಿಲ್ಲ. ಪುಷ್ಪಾ ಮಾತೃಭಾಷೆ ತೆಲುಗು. ಪತಿಯ ಮಾತೃಭಾಷೆ ತಮಿಳು. ಆದರೆ ಕನ್ನಡವನ್ನು ಮನೆಯಲ್ಲಿ ಚೆನ್ನಾಗಿ ಬಳಸುತ್ತಾರೆ.
ಕಾಲೇಜ್ ದಿನಗಳಲ್ಲಿ ನಾಟಕಗಳಲ್ಲಿ ಪಾತ್ರಾಭಿನಯದ ಗೀಳಿತ್ತು
ಬದಲಾಯಿಸಿಪಿ.ಯು.ಸಿ.ಓದುವ ಸಮಯದಲ್ಲಿ 'ಅಂತರ ಕಾಲೇಜ್ ನಾಟಕ ಸ್ಪರ್ಧೆಯಲ್ಲಿ ಅವರ ಕಾಲೇಜನ್ನು ಪ್ರತಿನಿಧಿಸಬೇಕಾಗಿ ಬಂತು.ಆಗ ಆಡಿದ ನಾಟಕ, 'ಟಿಪ್ಪೂಸುಲ್ತಾನ್' ನಲ್ಲಿ ಪಾತ್ರವಹಿಸಿದ್ದರು. 'ದಂಡುಪಾಳ್ಯ' ಎನ್ನುವ ಚಿತ್ರದಲ್ಲಿ 'ಪೂಜಾಗಾಂಧಿ'ಗೆ ಕಂಠದಾನ ಮಾಡುವ ಯೋಗ ದೊರೆಯಿತು. ಮುಂದೆ 'ತಂಗಾಳಿ' ಎನ್ನುವ ಧಾರಾವಾಹಿಯ ನಾಯಕಿ, 'ನವ್ಯಾ'ಗೆ ಕಂಠದಾನ ಕ್ಕೆ ಕರೆಬಂತು. 'ಗೋಧೂಳಿ' ಎನ್ನುವ ಚಿತ್ರದಲ್ಲಿ ನಟಿಸಿದರು. 'ಗೀತ ಪ್ರಿಯ'ರ ನಿರ್ದೇಶನದ 'ಶ್ರಾವಣದ ಸಂಭ್ರಮ' ಎನ್ನುವ ಧಾರಾವಾಹಿಯ ನಾಯಕಿ ನಟಿ,'ದಾಮಿನಿ'ಯವರಿಗೆ ಕಂಠದಾನದ ಅವಕಾಶ ಒದಗಿ ಬಂತು.
ಟೆಲಿವಿಶನ್ ಧಾರಾವಾಷಿಗಳಲ್ಲಿ
ಬದಲಾಯಿಸಿ'ಮಾರಿಕಣಿವೆ ರಹಸ್ಯ' ವೆಂಬ ಮಕ್ಕಳ ಧಾರಾವಾಹಿ, ಅವರ ಮೊದಲ ಧಾರಾವಾಹಿಯಿಂದ ಆತ್ಮವಿಶ್ವಾಸ ಗಳಿಸಿಕೊಂಡರು. ಇದರಿಂದ ಶುರುವಾದ ಟೆಲಿವಿಶನ್ ಪಯಣ ನಿರಂತರವಾಗಿ ಸಾಗಿದೆ. ಅಜ್ಜಿಯ ಪಾತ್ರದಿಂದ ತಮ್ಮ ಪಾಲಿಗೆ ಬಂದ ಅದೆಷ್ಟೋ ಪಾತ್ರಗಳನ್ನು (ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕಂಠದಾನಮಾಡಿದ್ದಾರೆ) ತಕರಾರಿಲ್ಲದೆ ನಿಭಾಯಿಸಿ ನಿರ್ದೇಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2018-08-25. Retrieved 2014-03-14.
'ನನ್ನ ಕಪ್ಪು ನಿನ್ನ ಕಣ್ಣಲ್ಲಿ', ನಾಗು, ಸುಧಾ ಪತ್ರಿಕೆ,೨೦, ೨೦೧೪, ಪು.೪೯