ಪುಂಡಿ ಗಸಿ ಕರ್ನಾಟಕದ ಕರಾವಳಿ ಭಾಗದಲ್ಲಿ ಪುಂಡಿ ಗಸಿ ಅನ್ನೋದು ಉಪಹಾರದ ಸಮಯಕ್ಕೆ ಮಾಡುವ ತಿಂಡಿ.‌ ಹಿಂದೆಲ್ಲ ಗ್ರಾಮೀಣ ಭಾಗದ ರೈತರ ಮನೆಯಲ್ಲಿ ಬೆಳಗಿನ ತಿಂಡಿಗೆ ಬಹುತೇಕ ಪುಂಡಿಯೇ ಉಪಹಾರ.

ತಯಾರಿಸಲು ಬೇಕಾದ ಸಾಮಾಗ್ರಿಗಳು

ಬದಲಾಯಿಸಿ

ಪುಂಡಿಯನ್ನು ಕುಚಲಕ್ಕಿ, ಬೆಳ್ತಿಗೆ ಹಾಗೂ ಇತ್ತೀಚೆಗೆ ರೆಡಿಮೇಡ್‌ ಆಗಿ ಸಿಗುವ ಅಕ್ಕಿ ಹುಡಿ, ರವಾ ಹುಡಿಗಳಿಂದಲೂ ತಯಾರು ಮಾಡುತ್ತಾರೆ. ಕುಚಲಕ್ಕಿಯಿಂದ ತಯಾರಿಸುವವರು ಮೊದಲು ಅಕ್ಕಿಯನ್ನು ನೆನೆಯಲು ಹಾಕುತ್ತಾರೆ. ನಂತರ ಅದನ್ನ ಗ್ರೈಂಡರ್​ಗೆ ಹಾಕಿ ಗ್ರೈಂಡ್‌ ಮಾಡ್ತಾರೆ. ಹೀಗೆ ಮಾಡ್ಬೇಕಾದರೆ ಪದೇ ಪದೇ ನೀರು ಹಾಕುತ್ತಾ ಹೆಚ್ಚು ಅಂಟು ಅಂಟು ಆಗಿರುವಂತೆ ನೋಡಿಕೊಳ್ಳುತ್ತಾರೆ.[]

ಮಾಡುವ ವಿಧಾನ

ಬದಲಾಯಿಸಿ

ಹೆಚ್ಚು ಸಣ್ಣಗೆ ಗ್ರೈಂಡ್‌ ಮಾಡದೇ, ಒಂದು ಹಂತಕ್ಕೆ ಹುಡಿಯಾದ ಬಳಿಕ ಅದನ್ನು ಗ್ರೈಂಡರ್‌ ನಿಂದ ತೆಗೆದು ತಕ್ಕಮಟ್ಟಿಗೆ ಅಂಟು ಹೋಗುವ ತನಕ ಬಿಸಿ ಮಾಡ್ತಾರೆ. ಈ ಸಮಯದಲ್ಲೇ ರುಚಿ ಬೇಕಿದ್ದರೆ ತೆಂಗಿನಕಾಯಿ ತುರಿ ಹಾಕಿಕೊಳ್ಳುತ್ತಾರೆ. ನಂತರ ಬಿಸಿಯಾದ ಹಿಟ್ಟನ್ನು ಚೆಂಡಿನಂತೆ ಅಥವಾ ಉದ್ದವಾಗಿ ತಟ್ಟಿ ಅದನ್ನು ತೊಂದೂರು ಅನ್ನೋ ಪಾತ್ರೆಯಲ್ಲಿಟ್ಟು (ಅದರ ಅಡಿ ಭಾಗದಲ್ಲಿ ನೀರು, ಮೇಲಿನ ಕವಚದಲ್ಲಿ ಪುಂಡಿಯನ್ನು ಇಡುತ್ತಾರೆ) ಬಿಸಿ ಮಾಡುತ್ತಾರೆ. ಬೆಂದ ಈ ಪುಂಡಿಯನ್ನು ನಂತರ ಪಾತ್ರೆಯಿಂದ ತೆಗೆದು ತಮ್ಮಿಷ್ಟದ ಸಾರಿನೊಂದಿಗೆ ತಿನ್ನುತ್ತಾರೆ. ಇನ್ನು ಅಕ್ಕಿ ಹುಡಿಯಿಂದ ಪುಂಡಿ ಮಾಡುವವರು ನೇರವಾಗಿ ಕೊಂಚ ಬಿಸಿ ಮಾಡಿ ಪುಂಡಿ ತಟ್ಟುತ್ತಾರೆ.

ಗಸಿ ಮಾಡುವ ವಿಧಾನ

ಬದಲಾಯಿಸಿ

ಪುಂಡಿಗೆ ಗಸಿ ಮಾಡಲು ತರಕಾರಿ ಆಥವಾ ಕೋಳಿ ಸಾರಿಗೆ ತಯಾರಿಸಿದ ಸಾರನ್ನು ಪುಂಡಿಗೆ ಮಿಶ್ರಣ ಮಾಡುವುದರಿಮದ ಅದನ್ನು ಪುಂಡಿ ಗಸಿ ಎಂದು ಕರೆಯುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "Pundi Gasi Recipe: ಪುಂಡಿ ಬೇಯಿಸ್ಬೇಡಿ, ಮನೆಯಲ್ಲೇ ಮಾಡ್ಕೊಂಡು ತಿನ್ನಿ! ರೆಸಿಪಿ ಇಲ್ಲಿದೆ". News18 ಕನ್ನಡ. 15 April 2023. Retrieved 16 July 2024.