ಪೀಳಿಗೆ (ತಲೆಮಾರು) ಎಂದರೆ ಸುಮಾರು ಒಂದೇ ಸಮಯಕ್ಕೆ ಹುಟ್ಟಿ ಜೀವಿಸುತ್ತಿರುವ, ಒಟ್ಟಾಗಿ ಪರಿಗಣಿಸಲ್ಪಟ್ಟ ಎಲ್ಲ ಜನರು. ಮನುಷ್ಯರಲ್ಲಿ ಪೀಳಿಗೆಯಿಂದ ಪೀಳಿಗೆಯ ವ್ಯತ್ಯಾಸ (ಸರಾಸರಿ ಅವಧಿ) ಸಾಮಾನ್ಯವಾಗಿ ಸುಮಾರು ಮೂವತ್ತು ವರ್ಷಗಳು ಎಂದು ಪರಿಗಣಿಸಲ್ಪಟ್ಟಿದೆ, ಅಂದರೆ ಈ ಅವಧಿಯಲ್ಲಿ ಮಕ್ಕಳು ಹುಟ್ಟಿ ಬೆಳೆದು, ವಯಸ್ಕರಾಗಿ, ತಮ್ಮ ಸ್ವಂತ ಮಕ್ಕಳನ್ನು ಹೆರುತ್ತಾರೆ.

ಪೀಳಿಗೆ ಪದವನ್ನು ಹಲವುವೇಳೆ ಸಮಾಜ ವಿಜ್ಞಾನದಲ್ಲಿ ಕೋಹಾರ್ಟ್‌ಗೆ (ಜನರ ತಂಡ/ಬಳಗ) ಸಮಾನಾರ್ಥಕವಾಗಿ ಬಳಸಲಾಗುತ್ತದೆ; ಈ ಸೂತ್ರೀಕರಣದಡಿ ಇದರರ್ಥ "ಒಂದು ನಿರ್ದಿಷ್ಟ ಜನರ ತಂಡದೊಳಗೆ ಒಂದು ನಿರ್ದಿಷ್ಟ ಸಮಯದ ಅವಧಿಯಲ್ಲಿ ಮಹತ್ವದ ಸಮಾನ/ಅದೇ ಘಟನೆಗಳನ್ನು ಅನುಭವಿಸುವ ಜನರು".[] ಸಮಾನ ಜನನದ ಜನರ ತಂಡದ ಈ ಅರ್ಥದಲ್ಲಿ ಪೀಳಿಗೆಗಳನ್ನು "ಸಾಮಾಜಿಕ ಪೀಳಿಗೆಗಳು" ಎಂದೂ ಕರೆಯಲಾಗುತ್ತದೆ, ಮತ್ತು ಜನಪ್ರಿಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಮತ್ತು ಸಮಾಜಶಾಸ್ತ್ರ ಸಂಬಂಧಿ ವಿಶ್ಲೇಷಣೆಗೆ ಆಧಾರವಾಗಿವೆ. ಪೀಳಿಗೆಗಳ ಗಂಭೀರ ವಿಶ್ಲೇಷಣೆಯು ಹತ್ತೊಂಬತ್ತನೇ ಶತಮಾನದಲ್ಲಿ ಆರಂಭವಾಯಿತು, ಮತ್ತು ಶಾಶ್ವತ ಸಾಮಾಜಿಕ ಬದಲಾವಣೆ ಹಾಗೂ ಸ್ಥಾಪಿತವಾದ ಸಮಾಜ ವ್ಯವಸ್ಥೆಯ ವಿರುದ್ಧ ಯುವಕರ ಬಂಡಾಯದ ಕಲ್ಪನೆಯ ಸಾಧ್ಯತೆಯ ಹೆಚ್ಚುತ್ತಿರುವ ಅರಿವಿನಿಂದ ಉದ್ಭವಿಸಿತು.

ಉಲ್ಲೇಖಗಳು

ಬದಲಾಯಿಸಿ
  1. Pilcher, Jane (September 1994). "Mannheim's Sociology of Generations: An undervalued legacy" (PDF). British Journal of Sociology. 45 (3): 481–495. doi:10.2307/591659. JSTOR 591659. Retrieved 10 October 2012.


"https://kn.wikipedia.org/w/index.php?title=ಪೀಳಿಗೆ&oldid=969425" ಇಂದ ಪಡೆಯಲ್ಪಟ್ಟಿದೆ