ಪೀನ ಮಸೂರ
ಪೀಠಿಕೆ
ಬದಲಾಯಿಸಿಮಸೂರ ಒಂದು ಪಾರದರ್ಶಕ ವಸ್ತು ಅದು ಎರಡು ಮೇಲ್ಮೈಗಳಿಂದ ಕೂಡಿದ್ದು ಒಂದಾದರೂ ವಕ್ರಮೇಲ್ಮೈ ಇರಬೇಕು.ಅದು ಈ ವಕ್ರಮೇಲ್ಮೈಗಳು ಬೆಳಕನ್ನು[೧][೨] ನಿರ್ಧಿಷ್ಟ ವಿನ್ಯಾಸದಲ್ಲಿ ವಕ್ರೀಭವಿಸುತ್ತವೆ..ಕೆಲವು ಮಸೂರಗಳು ಬೆಳಕನ್ನು ಕೇಂದ್ರಿಕರಿಸುತ್ತವೆ ಮತ್ತೆ ಕೆಲವು ವಿಕೇಂದ್ರಿಕರಿಸುತ್ತವೆ.ಈ ಮಸೂರಗಳನ್ನು ಮಸೂರದ ಎರಡು ಮೇಲ್ಮೈಗಳ ಆಕಾರಗಳಲನ್ನು ಆಧರಿಸಿ ಅವುಗಳನ್ನು ಹೆಸರಿಸಲಾಗಿದೆ. ಮಸೂರಗಳಲ್ಲಿ ಎರಡು ವಿಧಗಳು.೧.ಪೀನ ಮಸೂರ ಮತ್ತು ೨.ನಿಮ್ನ ಮಸೂರ.ಈ ಎರಡು ವಿಧದ ಮಸೂರಗಳನ್ನು ನಾವೂ ಕನ್ನಡಕಗಳಲ್ಲಿ ಮತ್ತು ವಾಹನಗಳಲ್ಲಿ ಮತ್ತು ಸೂಕ್ಷ್ಮದರ್ಶಕ ಯಂತ್ರಗಳಲ್ಲಿ ಮತ್ತು ಟೆಲೆಸ್ಕೋಪಗಳಲ್ಲಿ ಬಳಸುತ್ತೇವೆ.ಪೀನ ಮಸೂರವು ಮಧ್ಯಭಾಗದಲ್ಲಿ ದಪ್ಪನಾಗಿದ್ದು,ತುದಿಗಳಲ್ಲಿ ತೆಳುವಾಗಿರುತ್ತದೆ.ನಿಮ್ನ ಮಸೂರವು ಮಧ್ಯಭಾಗದಲ್ಲಿ ತೆಳುವಾಗಿದ್ದು ತುದಿಗಳಲ್ಲಿ ದಪ್ಪನಾಗಿರುತ್ತದೆ.ಮಸೂರವು ಒಂದು ವಕ್ರೀಭವನ ಮಾಧ್ಯಮ.
ಪೀನ ಮಸೂರ ಅಥವಾ ಕೇಂದ್ರಿಕಾರಕ ಮಸೂರ
ಬದಲಾಯಿಸಿಪೀನ ಮಸೂರವು ಅಥವಾ ಕೇಂದ್ರಿಕಾರಕ ಮಸೂರವು ಮಧ್ಯಭಾಗದಲ್ಲಿ ದಪ್ಪನಾಗಿದ್ದು,ತುದಿಗಳಲ್ಲಿ ತೆಳುವಾಗಿರುತ್ತದೆ.ಈ ಮಸೂರವು ಬೆಳಕಿನ ಕಿರಣಗಳನ್ನು ಕೇಂದ್ರಿಕರಣಗೊಳಿಸುತ್ತದೆ.ಈ ಮಸೂರವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
- ಸಮತಲ ಪೀನಮಸೂರ
- ನಿಮ್ನ-ಪೀನ ಮಸೂರ
ಉಪಯೋಗಗಳು
ಬದಲಾಯಿಸಿಈ ಮಸೂರಗಳನ್ನು ನಮ್ಮ ನಿತ್ಯ ಜೀವನದಲ್ಲಿ ಉಪಯೋಗಿಸುವ ಉಪಕರಣಗಳಾದ ಕ್ಯಾಮೆರ,ಸೂಕ್ಷ್ಮದರ್ಶಕ ಯಂತ್ರ,ಬೈನಾಕುಲರ್ಸ,ದ್ಯುತಿ ಉಪಕರಣ, ಇತ್ಯಾದಿಗಳ ರಚನೆಯಲ್ಲಿ,ವಾಹನಗಳಲ್ಲಿ, ಮತ್ತು ಕಣ್ಣಿನ ದೋಷಗಳ ನಿವಾರಣೆಗಾಗಿ ಬಳಸುತ್ತೇವೆ.
ಪೀನ ಮಸೂರದ ಪದಗಳು
ಬದಲಾಯಿಸಿ- ಪೀನ ಮಸೂರದಲ್ಲಿ ವಕ್ರೀಭವನವಾಗುವ ಮೇಲ್ಮೈಯನ್ನು ರಂಧ್ರವೆನ್ನುತ್ತಾರೆ.
- ಮಸೂರದ ಮಧ್ಯಬಿಂದುವನ್ನು ದೃಕ್ ಕೇಂದ್ರ ಎನ್ನುತ್ತಾರೆ.ಇದನ್ನು 'O'ಅಕ್ಷರದಿಂದ ಸೂಚಿಸುತ್ತಾರೆ.
- ಮಸೂರದ ದೃಕ್ ಕೇಂದ್ರದ ಮೂಲಕ ಹಾದು ಹೋಗುವ ಹಾಗೂ ರಂಧ್ರಕ್ಕೆ ಲಂಬವಾಗಿರುವ ಕಾಲ್ಪನಿಕ ರೇಖೆಯನ್ನು ಪ್ರಧಾನಾಕ್ಷ ಎನ್ನುತ್ತಾರೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ International Lighting Vocabulary
- ↑ "ಆರ್ಕೈವ್ ನಕಲು". Archived from the original on 2015-03-07. Retrieved 2016-01-13.