ಪೀನಟ್ ಬಟರ್
ಹುರಿದ ಕಡಲೆಬೀಜದಿಂದ ತಯಾರಿಸಲ್ಪಡುವ ಪಾಕ
ಅನೇಕ ದೇಶಗಳಲ್ಲಿ ಜನಪ್ರಿಯವಿರುವ ಪೀನಟ್ ಬಟರ್ ಪ್ರಧಾನವಾಗಿ ರುಬ್ಬಿದ, ಒಣವಾಗಿ ಹುರಿದ ಶೇಂಗಾದಿಂದ ತಯಾರಿಸಲಾದ ಒಂದು ಆಹಾರ ಪೇಸ್ಟ್. ಕೆಲವು ವಿಧಗಳು ಸೇರಿಸಿದ ಉಪ್ಪು, ಬೀಜ ಎಣ್ಣೆಗಳು, ಇಮಲ್ಸಫ಼ಾಯರ್ಗಳು, ಮತ್ತು ಸಕ್ಕರೆಯನ್ನು ಹೊಂದಿದ್ದರೆ, ಪೀನಟ್ ಬಟರ್ನ ನೈಸರ್ಗಿಕ ಬಗೆಗಳು ಕೇವಲ ರುಬ್ಬಿದ ಶೇಂಗಾಗಳನ್ನು ಹೊಂದಿರುತ್ತವೆ. ಅದನ್ನು ಮುಖ್ಯವಾಗಿ ಸ್ಯಾಂಡ್ವಿಚ್ ಸ್ಪ್ರೆಡ್ಆಗಿ, ಕೆಲವೊಮ್ಮೆ ಜ್ಯಾಮ್, ಜೇನು, ಚಾಕಲೇಟ್, ತರಕಾರಿಗಳು ಅಥವಾ ಗಿಣ್ಣಿನಂತಹ ಇತರ ಸ್ಪ್ರೆಡ್ಗಳ ಸಂಯೋಜನೆಯೊಂದಿಗೆ, ಬಳಸಲಾಗುತ್ತದೆ. ಅಮೇರಿಕಾ ಪೀನಟ್ ಬಟರ್ನ ಪ್ರಮುಖ ರಫ್ತುದಾರವಾಗಿದೆ ಮತ್ತು ವಾರ್ಷಿಕ ೮೦೦ ಮಿಲಿಯ ಡಾಲರ್ ಮೌಲ್ಯದಷ್ಟು ಸೇವಿಸುತ್ತದೆ.