ಪೀಡೊಫಿಲಿಯಾ (ಶಿಶುಕಾಮ)

ಪೀಡೊಫಿಲಿಆ [ಇಂಗ್ಲಿಷ್: Pedophilia / Paedophilia ಪೀಡೊಫಿಲಿಆ] ಎನ್ನುವುದು ವಯಸ್ಕರು ಮಗುವಿನ ಅಥವಾ ಮಕ್ಕಳ ಮೇಲೆ ಹೊಂದಿದಂತ ಲೈಂಗಿಕ ದೃಷ್ಟಿಕೋನ ಅಥವಾ ವಯಸ್ಕರು ಹಾಗು ಮಕ್ಕಳ ನಡುವಿನ ಲೈಂಗಿಕ ಚಟುವಟಿಕೆಯಾಗಿದೆ. [೧]

ಪೀಡೊಫಿಲಿಆವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ಯಾರಾಫಿಲಿಆ (paraphilia) (ಅಂದರೆ ಅಸಾಧಾರಣ ಲೈಂಗಿಕ ವ್ಯಾಮೋಹ ಮತ್ತು/ಅಥವಾ ಲೈಂಗಿಕ ಚಟುವಟಿಕೆ) ಎಂತಲೂ ಹಾಗೂ ಅದರ ಪುನಾರವರ್ತಿತ ಹಾಗು ತೀವ್ರ ಸ್ವರೂಪದ ಸ್ಥಿತಿಯನ್ನು ಒಂದು ಅಸ್ತವ್ಯಸ್ತತೆ (disorder) ಎಂತಲೂ ಪರಿಗಣೆಸಲಾಗುತ್ತದೆ. [೨] ವಿಶ್ವ ಆರೋಗ್ಯ ಸಂಘಟನೆಯ (WHO) ಐಸಿಡಿ-೧೦ರ (ICD-10) ೨೦೧೫ನೇ ಆವೃತ್ತಿಯಲ್ಲಿ ಇದನ್ನು "ಸಾಮಾನ್ಯವಾಗಿ ಪ್ರಾಯಕ್ಕೆ ಮುಂಚಿನ ಅಥವಾ ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ, ಹುಡುಗರ ಅಥವಾ ಹುಡುಗಿಯರ ಅಥವಾ ಇಬ್ಬರ ಮೇಲಿನ ಒಂದು ಲೈಂಗಿಕ ವ್ಯಾಮೋಹ" ["A sexual preference for children, boys or girls or both, usually of prepubertal or early pubertal age".] ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. [೩]

ವ್ಯುತ್ಪತ್ತಿ ಬದಲಾಯಿಸಿ

  • 'ಪೀಡೊಫಿಲಿಆ' ಎಂಬ ಪದದ ಮೂಲ ಗ್ರೀಕ್‌ನ 'ಪೈಡೊಫಿಲಿಆ' (παιδοφιλια paidophilia) - 'ಪೈಸ್' (παις pais : ಮಗು) ಮತ್ತು 'ಫಿಲಿಆ' (φιλια philea : ಒಲವು, ಇಚ್ಚೆ) ಎಂಬುದಾಗಿದೆ.
  • ಪೈಡೊಫಿಲಿಆ ಎಂಬ ಪದವು ಗ್ರೀಕ್ ಕವಿಗಳಿಂದ ಪೈಡೆರಾಸ್ಟಿಆ (paiderastia) ಎಂಬ ಪದದ ಪರ್ಯಾಯವಾಗಿ ರಚನೆಯಾಯಿತು.
  • ೧೮೮೬ ರಲ್ಲಿ 'ಪೀಡೊಫಿಲಿಆ ಏರೋಟಿಕಾ' (paedophilia erotica) ಎಂಬ ಪದವನ್ನು ಆಸ್ಟ್ರೋ-ಜರ್ಮನಿಯ ಮನೋವೈದ್ಯ ರಿಚರ್ಡ್ ವೊನ್ ಕ್ರಾಫ಼್ಟ್-ಎಬಿಂಗ್ (Richard Von Krafft-Ebing) ಎಂಬುವವರು ಅವರ ಸೈಕೊಪಾತಿಆ ಸೆಕ್ಸ್ಯ್^ಆಲಿಸ್ (Psychopathia Sexualis) ಎಂಬ ಬರಹದಲ್ಲಿ ಬಳಸಿದರು.
  • ೨೦ನೇ ಶತಮಾನದಿಂದ 'ಫಿಡೊಫಿಲಿಆ' ಎಂಬ ಪದವನ್ನು ಈಗಿನ ಅರ್ಥದಂತೆ ಬಳಸಲಾಗುತ್ತಿದೆ. [೪]

ವಿಧಗಳು ಬದಲಾಯಿಸಿ

  • ಹೆಬೀಫಿಲಿಆ (hebephilia) : ಇದು ವಯಸ್ಕರು ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ (ಸಾಮಾನ್ಯವಾಗಿ ೧೧-೧೪ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ. [೫]
  • ನೆಪಿಒಫಿಲಿಆ ಅಥವಾ ಇನ್^ಫ್ಯಾ಼ನ್ಟೊಫಿಲಿಆ (nepiophilia or infantophilia) : ಇದು ವಯಸ್ಕರು ಎಳೆಯ ಮಕ್ಕಳ (ಸಾಮಾನ್ಯವಾಗಿ ೦-೩ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ. [೬] ಇದು ಸಾಮಾನ್ಯವಾಗಿ ಅತ್ಯಂತ ವಿರಳವಾಗಿ ಕಂಡುಬರುತ್ತದೆ.

ಪೀಡೊಫೈಲ್ ಬದಲಾಯಿಸಿ

ಮಗು ಅಥವಾ ಮಕ್ಕಳ ಮೇಲೆ ಲೈಂಗಿಕ ದೃಷ್ಟಿಕೋನವನ್ನು ಹೊಂದಿರುವ ವಯಸ್ಕನನ್ನು ಪೀಡೊಫೈಲ್ (pedophile or paedophile) ಎನ್ನಲಾಗುತ್ತದೆ. [೭] ಪೀಡೊಫೈಲ್ ಪುರುಷ ಅಥವಾ ಸ್ತ್ರೀ ಆಗಿರಬಹುದು ಆದರೆ ಸಾಮಾನ್ಯವಾಗಿ ಪೀಡೊಫೈಲ್^ಗಳಲ್ಲಿ ಹೆಚ್ಚಿನವರು ಪುರುಷರಾಗಿರುತ್ತಾರೆ.

ಜನಸಂಖ್ಯೆ ಬದಲಾಯಿಸಿ

ಸಾಮಾಜಿಕ ನೋಟ ಬದಲಾಯಿಸಿ

ಪೀಡೊಫಿಲಿಆವು ಸಮಾಜ ಹಾಗು ಕಾನೂನು ಬಾಹಿರವಾದಂತ ಒಂದು ಪ್ರಕಾರದ ಲೈಂಗಿಕತೆಯಾಗಿದ್ದು, ಸಮಾಜಗಳಲ್ಲಿ ಇದನ್ನು ಒಂದು ಅತ್ಯಂತ ಹೀನ ಕೃತ್ಯ ಹಾಗು ಅಪರಾಧ ಎಂಬಂತೆ ಪರಿಗಣೆಸಲಾಗುತ್ತದೆ. ಈ ರೀತಿಯ ಲೈಂಗಿಕತೆಯಲ್ಲಿ ತೂಡಗುವ ವ್ಯಕ್ತಿಗಳ ವಿರುದ್ಧ ಹೆಚ್ಚಿನ ಆಕ್ರೋಶ ವ್ಯಕ್ತವಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ ಪೀಡೊಫಿಲಿಆ ಹಾಗೂ ಮಕ್ಕಳ ಲೈಂಗಿಕ ಅತ್ಯಚಾರಕ್ಕು ಸಾಕಷ್ಟು ವ್ಯತ್ಯಾಸಗಳಿದ್ದಾಗ್ಯೂ ಸಮಾಜಗಳಲ್ಲಿ ಅವೆರಡನ್ನೂ ಸಾಮಾನ್ಯವಾಗಿ ಒಂದೇ ರೀತಿಯಾಗಿ ಪರಿಗಣಿಸಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. ನಿಘಂಟುಗಳಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ ೧) ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ www.oxfordlearnersdictionaries.com/definition/english/pedophilia, ೨) ವಿಕಿಟಿಅನರಿ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ en.m.wiktionary.org/wiki/pedophilia#English.
  2. ೧) www.newworldencyclopedia.org/entry/Pedophilia, ೨) the-medical-dictionary.com/triptorelin_article_5.htm.
  3. ಐಸಿಡಿ-೧೦ರ ೨೦೧೫ನೇ ಆವೃತ್ತಿಯಲ್ಲಿ ಎಫ಼್೬೫.೪ ಅನ್ನು ನೋಡಿ apps.who.int/classifications/icd10/browse/2015/en#/F65.4
  4. ೧)ವಿಕಿಟಿಅನರಿ ಇಂಗ್ಲಿಷ್ ನಿಘಂಟಿನಲ್ಲಿ ತಿಳಿಸಿರುವಂತೆ en.m.wiktionary.org/wiki/pedophilia#English, ೨) ನ್ಯೂ ವರ್ಲ್ಡ್ ವಿಶ್ವಕೋಶದಲ್ಲಿ ತಿಳಿಸಿರುವಂತೆ www.newworldencyclopedia.org/entry/Pedophilia.
  5. ೧) www.psychologytoday.com/basics/hebephilia
  6. ೧) psychology.wikia.com/wiki/Nepiophilia, ೨) www.thefreedictionary.com/Nepiophilia.
  7. ನಿಘಂಟುಗಳಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ : ೧) ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ www.oxfordlearnersdictionaries.com/definition/english/paedophile, ೨) ಕೇಂಬ್ರಿಡ್ಜ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ dictionary.cambridge.org/dictionary/british/paedophile.