ಪಿ. ಮಹಮ್ಮದ್ 'ವಿಜಯಕರ್ನಾಟಕ ದಿನಪತ್ರಿಕೆ'ಯಲ್ಲಿ 'ಹಾಸ್ಯಚಿತ್ರಾಂಕಣಕಾರ'ರು. ವ್ಯಂಗಚಿತ್ರಕಾರರೆನ್ನುವುದಕ್ಕಿಂತಲೂ ತಮ್ಮನ್ನು 'ಕಾರ್ಟುನಿಸ್ಟ್' ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಮಹಮ್ಮದ್ ದೇಶದ ಅಗ್ರ ಕಾರ್ಟೂನಿಸ್ಟ್ ರ ಸಾಲಿಗೆ ಸೇರಬಹುದಾದ ಒಂದು ಪ್ರತಿಭೆ. ಅವರ ಕಾರ್ಟೂನ್‌ಗಳಲ್ಲಿ ರಾಜಕೀಯ ವಿಶ್ಲೇಷಣೆ, ವಿಡಂಬನೆ, ಅಮಾಯಕ ಮತದಾರನ ಪ್ರಶ್ನೆ, ಟೀಕೆ, ಮೂದಲಿಕೆ.. ಹೀಗೆ ಎಲ್ಲವೂ ಇರುತ್ತವೆ. ಕನ್ನಡದ ಓದುಗರು ಅವರ ಕಾರ್ಟೂನ್ ಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಜನರು ಅಷ್ಟು ಮೆಚ್ಚಿದ್ದಾರೆ.

ಜನನ ವಿದ್ಯಾಭ್ಯಾಸ, ವೃತ್ತಿ ಬದಲಾಯಿಸಿ

'ಪಡುಬಿದ್ರಿ ಮಹಮ್ಮದ್', ಜನಿಸಿದ್ದು, ಮಂಗಳೂರಿನ ಹತ್ತಿರದ ಪಡುಬಿದ್ರೆಯಲ್ಲಿ. ಪದವಿ ಪರೀಕ್ಷೆ ಅವರಿಗೆ ಸಾಧ್ಯವಾಗದೆ 'ಎಂ.ಟಿ.ವಿ. ಆಚಾರ್ಯ ಕಲಾ ಶಾಲೆ'ಯ ಅಂಚೆ ಕೋರ್ಸ್ ಗೆ ಭರ್ತಿಯಾಗಿ ವ್ಯಂಗ್ಯ ಚಿತ್ರದ ಮೂಲಾಕ್ಷರಗಳನ್ನು ಅಭ್ಯಾಸಮಾಡಿದರು. 'ರೇಡಿಯೋ ರಿಪೇರಿ' ಅವರಿಗೆ ಬಾಲ್ಯದಿಂದಲೂ ಪ್ರಿಯವಾದ ಹವ್ಯಾಸ. 'ಮಹಮ್ಮದ್' ರವರಿಗೆ ಪ್ರಿಯರಾದ ರಾಜಕಾರಣಿಗಳು, ಪಿ. ವಿ. ನರಸಿಂಹ ರಾವ್ ಮತ್ತು ದೇವೇಗೌಡರು.