ಪಿ.ಸುಬ್ರಹ್ಮಣ್ಯ ಆಚಾರ್ಯ

ರಸಿಕ ಪುತ್ತಿಗೆ’ ಎಂದೇ ಖ್ಯಾತರಾದ ಪಿ.ಸುಬ್ರಹ್ಮಣ್ಯ ಆಚಾರ್ಯರು ೧೯೩೨ ಜೂನ ೧೫ರಂದು ಕಾರ್ಕಳ ತಾಲೂಕಿನ ಪುತ್ತಿಗೆಯಲ್ಲಿ ಜನಿಸಿದರು. ಇವರ ತಾಯಿ ನಾಗವೇಣಿ ಅಮ್ಮ; ತಂದೆ ವೆಂಕಟರಮಣಾಚಾರ್ಯ.

ಶಿಕ್ಷಣ ಹಾಗು ವೃತ್ತಿ ಬದಲಾಯಿಸಿ

ಹಿಂದಿ ಭಾಷೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹಿಂದಿ ಶಿಕ್ಷಕರಾದ ಆಚಾರ್ಯರು,ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.(ಕನ್ನಡ) ಪದವಿ ಹಾಗು ಭಾಷಾ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದರು.

ಸಾಹಿತ್ಯ ಸೇವೆ ಬದಲಾಯಿಸಿ

‘ರಸಿಕ ಪುತ್ತಿಗೆ’ ಹೆಸರಿನಲ್ಲಿ ಆಚಾರ್ಯರು ಮಕ್ಕಳಿಗಾಗಿ ಅನೇಕ ಕಥೆ, ಕಾದಂಬರಿ, ನಾಟಕ ಹಾಗು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಮಕ್ಕಳಿಂದ ನಾಟಕಗಳನ್ನು ಆಡಿಸಿದ್ದಾರೆ. ಆಕಾಶವಾಣಿಯಲ್ಲಿ ಕಥೆ ಹಾಗು ಕವನಗಳನ್ನು ಓದಿದ್ದಾರೆ.

ಕೃತಿಗಳು ಬದಲಾಯಿಸಿ

ಕಥಾಸಂಕಲನ ಬದಲಾಯಿಸಿ

  • ಕೊಂಬಿನ ಕಂಬಯ್ಯ
  • ಇಲಿಗೆ ಅಂಜಿದ ಹುಲಿ
  • ನೀತಿ ಕಥೆಗಳು
  • ತುಂಟಾಟದ ಕಥೆಗಳು
  • ಸುಕ್ಕಿನುಂಡೆ ಸುಬ್ಬ ಮತ್ತು ಇತರ ಕಥೆಗಳು
  • ತಪೋವನದ ಸಾಹಸಿಗಳು

ನಾಟಕ ಬದಲಾಯಿಸಿ

  • ಸತಿ ಅನುಸೂಯಾ
  • ತಿಲೋತ್ತಮೆ
  • ವೀರ ಜಟಾಯು
  • ಮರೆವೊ ಮರೆವು
  • ಸುಂದೋಪಸುಂದ
  • ಅಗ್ನಿಪರೀಕ್ಷೆ

ಕಾದಂಬರಿ ಬದಲಾಯಿಸಿ

  • ಪಿತ್ರಾರ್ಜಿತ

ಮಕ್ಕಳ ಕಾದಂಬರಿ ಬದಲಾಯಿಸಿ

  • ಕೆಂಪು ಕಾದಂಬರಿ
  • ಮಾರುತಿ ಶಾಲೆ ಹುಡುಗರು
  • ಮೂವರು ಮಾಣಿಗಳು

ಜೀವನಚರಿತ್ರೆ ಬದಲಾಯಿಸಿ

  • ಸೂರದಾಸ
  • ತುಳಸಿದಾಸ
  • ಸುಭದ್ರಾಕುಮಾರಿ ಚೌಹಾಣ
  • ಟಿ.ಎಲ್.ವಾಸ್ವಾನಿ
  • ಕುರಿಯ ವಿಠ್ಠಲಶಾಸ್ತ್ರಿ
  • ಕೋಟಿ ಚನ್ನಯ್ಯ

ಪರಿಚಯ ಕೃತಿ ಬದಲಾಯಿಸಿ

  • ಕಂಬಳ-ಕೊಳಿ ಅಂಕ

ಪುರಸ್ಕಾರ ಬದಲಾಯಿಸಿ

  • ಇವರ ‘ಕೆಂಪು ಕಾರು’ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ (NCERT) ಲಭಿಸಿದೆ.