ಪಿರಾನಾ
A piranha at the Newport, Kentucky Aquarium
Scientific classification
ಸಾಮ್ರಾಜ್ಯ:
ವಿಭಾಗ:
Chordata
ವರ್ಗ:
Subclass:
ಕೆಳವರ್ಗ:
ಗಣ:
ಕುಟುಂಬ:
ಉಪಕುಟುಂಬ:
Géry, 1972
ಪಂಗಡ:
Piranha
Genera

Catoprion
Pristobrycon
Pygocentrus
Pygopristis
Serrasalmus
Megapiranha

ಅಪಾಯಕಾರಿ ಜಲಚರ

ಬದಲಾಯಿಸಿ

ಪ್ರಪಂಚದ ಅತ್ಯಂತ ಅಪಾಯಕಾರಿ ಜಲಚರಗಳು ಎಂದರೆ ಕೂಡಲೇ ನಮಗೆ ಸಾಧಾರಣವಾಗಿ ನೆನಪಾಗುವುದು ಸಮುದ್ರದ ಶಾಕು‍ಗಳು. ದೋಣಿಗಳು ತಲೆಕೆಳಗಾದಾಗಲೋ, ಹಡಗುಗಳು ಒಡೆದು ಪಯಣಿಗರು ರಬ್ಬರ್ ದೋಣಿಗಳಲ್ಲಿ ಪ್ರಾಣ ರಕ್ಚಣೆಗೆ ಯತ್ನಿಸುವಾಗ ಸಮುದ್ರದ ಮಧ್ಯೆ ಅಪಘಾತ ಸಂಭವಿಸಿ ವಿಮಾನದಿಂದ ಪ್ಯಾರಾಚೂಟ್ ಗಳಲ್ಲಿ ವೈಮಾನಿಕ ಧುಮುಕಿದಾಗಲೂ ಅವರಿಗೆ ಇರುವ ಮೊದಲು ಅಪಾಯ ಎಂದರೆ ಸಮುದ್ರದ ಶಾಕು‍ಗಳು ಸಮುದ್ರದ ಭಯಜನಕ ಜೀವಿಗಳೆಂದು ಶಾಕು‍ಗಳು ಹೆಸರಾಗಿವೆ. ಇವುಗಳನ್ನು ಬಿಟ್ಟರೆ ಆನಂತರದ ಸ್ಥಾನ ಕಿಲ್ಲರ್ ವೇಲ್ ಗಳಿಗೆ ದೊರೆಯುತ್ತದೆ. ಆದರೆ ದಕ್ಷಿಣ ಅಮೆರಿಕಾದ ಅಮೆಜಾನ್ ನದಿಯ ಸಿಹಿನೀರಿನ ಮೀನುಗಳಲ್ಲಿ ಒಂದಾದ ಪಿರಾನ್ಯ ಎನ್ನುವ ಚಿಕ್ಕ ಮೀನು ಎಷ್ಟು ಭೀಕರವಾದುದೆಂದರೆ ತನ್ನ ನಾಮಮಾತ್ರದಿಂದಲೇ ಅಲ್ಲಿನ ಜನರಿಗೆ ಭಯಹಿಡಿಸುತ್ತದೆ.

ಈ ಪಿರಾನಾ ಅಥವಾ ಪಿರಾನ್ಹಾ (Piranha) ಮೀನು ನೋಡುವುದಕ್ಕೇನೂ ಅಷ್ಟೊಂದು ಭಯಂಕರವಾಗಿಲ್ಲ. ಅದನ್ನು ಅದರ ರೂಪಕ್ಕಾಗಿ ಅನೇಕರು ತಮ್ಮ ಅಕ್ವೇರಿಯಂನಲ್ಲಿ ಇಟ್ಟುಕೊಂಡು ಸಾಕುತ್ತಾರೆ. ಇದು ನೋಡುವುದಕ್ಕೆ ನಮ್ಮ ಎಂಜಲ್ ಮೀನಿನಂತೆಯೇ ಇದೆ. ಚಪ್ಪಟೆಯಾದ ಇದರ ಮೈ ನೀರನ್ನು ಸೀಳಿಕೊಂಡು ನುಗ್ಗಲು ಹದವಾಗಿದೆ. ಆದರೆ ಇದರ ಸೌಮ್ಯತೆ ಎಲ್ಲ ಇದರ ರೂಪ ಆಕಾರಗಳಲ್ಲೇ ಹೊರತು ಇದರ ನಡವಳಿಕೆಯ ಕ್ರೂರತೆಯನ್ನು ನೋಡಿದವರು ಇದನ್ನೆಂದೂ ಮುಟ್ಟಲೂ ಹೋಗುವುದಿಲ್ಲ.ಸುಮಾರು ಒಂದು ಅಡಿಯವರೆಗೆ ಬೆಳೆಯುವ ಈ ಮೀನಿನ ತಲೆಬುರುಡೆಯೇ ಇದರ ಮೈ ಅರ್ಧದಷ್ಟು ಇದ್ದು ಕಬ್ಬಿಣದಷ್ಟು ಗಟ್ಟಿಯಾಗಿದೆ. ಇದರ ಕಣ್ಣುಗಳು ರಕ್ತದಷ್ಟು ಕೆಂಪಗಿರುತ್ತವೆ. ಇದು ಬಾಯಿ ತೆರೆದರೆ ಮೇಲೂ ಕೆಳಗೂ ಎರಡೆರಡು ಸಾಲು ಹಲ್ಲುಗಳು ಹಜಾಮರ ಕ್ಷೌರದ ಕತ್ತಿಗಿಂತ ಹರಿತವಾಗಿರುತ್ತದೆ. ಇದರ ಫಲಿತಾಂಶ ಎಂದರೆ ಈ ಜೋಡಿ ಹಲ್ಲುಗಳ ದಂತ ಪಂಕ್ತಿಗಳ ನಡುವೆ ಏನಾದರೂ ಸಿಕ್ಕಿದರೆ ಒಂದೇ ಸಾರಿಗೆ ಕತ್ತರಿಸಿ ತುಂಡಾಗುತ್ತವೆ. ದಕ್ಷಿಣ ಅಮೇರಿಕಾದ ಕಾಡಿನ ಜನರ ಭಾಷೆಯಲ್ಲಿ ಪಿರಾನ್ಯ ಎಂದರೆ ನರಭಕ್ಷಕ ಎಂದೇ ಅರ್ಥ‍. ಒಮ್ಮೆ ಕೆಲವರು ಸಂಶೋಧನೆಗೆಂದು ಹೋದವರು ಅಮೆಜಾನ್ ನದಿಯಲ್ಲಿ ಒಂದು ಕಡೆ ಗಾಳಕ್ಕೆ ಹಸಿಮಾಂಸದ ತುಂಡು ಚುಚ್ಚಿ ಗಾಳ ಹಾಕಿದರು. ತಕ್ಷಣವೇ ಯಾವುದೋ ಒಂದು ಮೀನು ಗಾಳ ನುಂಗಿ ಎಳಯಲಾರಂಭಿಸಿತು. ಸಂಶೋಧಕರಲ್ಲೊಬ್ಬರು ದಾರ ಎಳೆದು ಮೀನನ್ನು ದೋಣಿಯೊಳಗೆ ಎತ್ತಿಹಾಕಿದರು. ಅದನ್ನು ನೋಡಿದ್ದೆ ಮಿಕ್ಕೆಲ್ಲರೂ " ಅದು ಪಿರಾನ್ಯ ಕೋಂಚ ಜಾಗ್ರತೆ ' ಎಂದು ಎಚ್ಚರಿಕೆ ಕೊಟ್ಟಿದ್ದರಿಂದ ಅದನ್ನು ಹಿಡಿದವರು ಅದನ್ನು ಮುಟ್ಟಿದ ದೋಣಿಯ ಹುಟ್ಟಿನಿಂದ ಅದನ್ನು ಹೊಡೆಯಲೆತ್ನಿಸಿದಾಗ. ಅಷ್ಟರೊಳಗೆ ಪಿರಾನ್ಯ ಬಾಯಿಯಿಂದ ಗಾಳ ತಪ್ಪಿಹೋಗಿತ್ತು. ಆ ಮೀನು ನೆಗೆದು ಹುಟ್ಟಿನ ಒಂದು ತುದಿಗೆ ಬಾಯಿಹಾಕಿತು. ಅದು ಒಮ್ಮೆ ಕಚ್ಚಿದ ಕೂಡಲೇ ಹುಟ್ಟಿನ ತುದಿ ಪುಡಿಯಾಗಿ ಆ ಹುಲ್ಲುಗಳ ಅಸಮಬಲವನ್ನು ನೋಡಿದ ಸಂಶೋದಕರು ದಂಗಾದರು. ಗಾಳದಿಂದ ತಪ್ಪಿದ್ದ ಆ ಮೀನು ದೋಣಿಯಿಂದ ಚಿಮ್ಮಿ ಹೊರ ಹಾರಿ ನೀರಿನಲ್ಲಿ ಮಾಯವಾಯ್ತು. ಸಂಶೋಧಕರಿಗೆ ಆಗ ಅಥ‍ವಾಯ್ತು ದಕ್ಷಿಣ ಅಮೆರಿಕಾದ ಅನೇಕರಿಗೆ ಕೈ ಬೆರಳುಗಳ ತುದಿ ಯಾಕೆ ತುಂಡಾಗಿರುತ್ತದೆ ಎಂದು.ಈ ಪಿರಾನ್ಯಗಳು ಸಾಧಾರಣವಾಗಿ ಗುಂಪು ಗುಂಪಾಗಿಯೇ ಚಲಿಸುವುದರಿಂದ ಅವುಗಳು ಮಾಡುವ ಹಾನಿ ಮತ್ತು ಅಪಾಯ ಭಯಂಕರವಾಗಿರುತತದೆ. ಅವುಗಳ ಆಕ್ರಮಣ ವೇಗವಂತೂ ಊಹಿಸಲಸಾಧ್ಯ.ಒಬ್ಬ ಬ್ರೆಸಿಲಿನ ಶಿಕಾರಿದಾರ ಕೆಫೈಭ್ರಾ ಎನ್ನುವ ಪ್ರಾಣಿಯ್ಒಂದನ್ನು ಒಮ್ಮೆ ಶಿಕಾರಿ ಮಾಡಿದ (ಕೆಫೈಭ್ರಾ ಎಂದರೆ ಮೂಷಿಕದ ಜಾತಿಗೆ ಸೇರಿದ ಜಗತ್ತಿನ ಅತಿದೊಡ್ಡ ಹೆಗ್ಗಣ. ಇದು ಒಂದು ಹಂದಿಯಷ್ಟು ಎತ್ತರಕ್ಕೆ ಬೆಳೆಯುತ್ತದೆ. ಇವು ದಕ್ಷಿಣ ಅಮೆರಿಕಾದಲ್ಲಿ ಮಾತ್ರ ಇವೆ. ಇವುಗಳ ಮಾಂಸ ಎಂದರೆ ದಕ್ಷಿಣ ಅಮೆರಿಕಾದಲ್ಲಿ ಜನ ಪ್ರಾಣಬಿಡುತ್ತಾರೆ.) ಆ ಕೆಫೈಭ್ರಾ ಕೋವಿಯ ಈಡಿನಿಂದ ತಪ್ಪಿಸಿಕೊಂಡು ಹೊಳೆಗೆ ನೆಗೆದು ಹಾರಿ ವೇಗವಾಗಿ ಆಚೆ ದಡದತ್ತ ಈಜಲಾರಂಭಿಸಿತು. ಇದ್ದಕ್ಕಿದ್ದಂತೆ ಕೆಫೈಭ್ರಾದ ಸುತ್ತ ನೀರು ಕುದಿಯಲಾರಂಭಿಸಿದಂತೆ ಭಾಸವಾಯಿತು. ನೂರಾನು ಪಿರಾನ್ಯಗಳು ಈ ಕೆಫೈಭ್ರಾವನ್ನು ಮುತ್ತಿಬಿಟ್ಟದ್ದವು. ಕೆಫೈಭ್ರಾದ ಸುತ್ತ ನೀರೆಲ್ಲಾ ಕೆಂಪಾಗಿ ಕೆಲವೇ ಸೆಕೆಂಡುಗಳೊಳಗೆ ಕೇವಲ ಕೆಫೈಭ್ರಾ ಅಸ್ಥಿಪಂಜರ ಮಾತ್ರ ಉಳಿಯಿತು.

ಹೊರ ಜಗತ್ತಿಗೆ ತಿಳಿದದ್ದು

ಬದಲಾಯಿಸಿ

೧೯೧೪ ರಲ್ಲಿ ಅಮೆರಿಕಾದ ಅಧ್ಯಕ್ಷರಾದ ಥಿಯೋಡೋರ್ ರೂಸ್ವೆಲ್ಟ್ ಅಮೆಜಾನಿನ ಕಾಡುಗಳಲ್ಲಿ ಸಾಗುತ್ತಿದ್ದಾಗ ಕುದುರೆಯ ಮೇಲೆ ನದಿಯೊಂದನ್ನು ದಾಟುತ್ತಿದ್ದರು. ಹಠಾತ್ತಾಗಿ ಕಾಲಿಗೆ ಏನೋ ಕಚ್ಚಿದಂತಾಗಿ ರೂಸ್ವೆಲ್ಟ ರ ಸಂಗಡಿಗ ಸಾಗುತ್ತಿದ್ದ ಕುದುರೆ ಚಿಮ್ಮಿ ನೆಗೆದು ಸವಾರ ನೀರಿಗೆ ಬಿದ್ದ. ರೂಸ್ವೆಲ್ಟ್ ರ ಕಣ್ಣೆದುರಿಗೇ ಭಯಬೀತನಾದ ಆ ಮನುಷ್ಯನನ್ನು ಪಿರಾನ್ಯಗಳು ಮುತ್ತಿ ಅವನನ್ನು ಅಸ್ಥಿಪಂಜರ ಮಾಡಿದವು. ಥಿಯೋಡೋರ್ ರೂಸ್ವೆಲ್ಟ ರು ಇದನ್ನು ಹೊರಜಗತ್ತಿಗೆ ತಿಳಿಸಿದಂದಿನಿಂದ ಪಿರಾನ್ಯಗಳ ಭಯಾನಕ ನಡವಳಿಕೆಗಳು ಜಗತ್ತಿನಾದ್ಯಂತ ಪ್ರಚಾರವಾಯ್ತು. ೧೯೭೬ ರಲ್ಲಿ ಉರೂಬು ನದಿಯನ್ನು ದಾಟುತ್ತಿದ್ದ ಬಸ್ಸೊಂದು ಡ್ರೈವರ್ ನ ಅಚಾತುಯ‌ದಿಂದ ಸೇತುವೆಯೊಂದರ ಬಳಿ ನದಿಯೊಂದಕ್ಕೆ ಉರುಳಿತು. ಆ ಬಸ್ಸಿನ ಪ್ರಯಾಣಿಕರನ್ನು ರಕ್ಷಿಸಿ ಸಹಾಯ ಮಾಡಲು ಜನರು ಬರುವುದರೊಳಗೆ ಪಿರಾನ್ಯಗಳು ಆ ಬಸ್ ಪ್ರಯಾಣಿಕರಷ್ಟೂ ಜನರನ್ನು ಕೇವಲ ಮೂಳೆ ಮಾತ್ರವನ್ನಾಗಿ ಮಾಡಿದ್ದವು. ಪಿರಾನ್ಯಗಳ ಅಪಕೀತಿ‍ ಇಷ್ಟೊಂದು ಇದ್ದರೂ ಕೆಲವು ತಜ್ಞರು ಇವುಗಳಿಂದ ಮಾನವರಿಗೆ ಉಂಟಾಗುವ ಅಪಾಯವನ್ನು ತುಂಬ ಉತ್ರ್ಪೇಕ್ಷೆ ಮಾಡಲಾಗಿದೆ. ಎಂದೆನ್ನುತ್ತಾರೆ.

ಪಿರಾನಾಗಳು ಮತ್ತು ಅವುಗಳ ಭೀಕರತೆ

ಬದಲಾಯಿಸಿ

ಅವರ ಪ್ರಕಾರ ಈ ಪಿರಾನ್ಯಗಳು ಕಡಿಮೆ ಆಳದ ನೀರಿನಲ್ಲಿ ಅತ್ಯಂತ ಅಪಾಯಕಾರಿಗಳಾಗಿ ಪರಿಣಮಿಸುತ್ತವೆ. ಬೇಸಿಗೆಯಲ್ಲಿ ನೀರಿನ ಮಟ್ಟದಲ್ಲಿ ಈ ಪಿರಾನ್ಯಗಳು ಕಣ್ಣಿಗೆ ಕಂಡಿದ್ದನ್ನು ಹಿಡಿಯುತ್ತವೆ. ಅನೇಕ ಕಡೆಗಳಲ್ಲಿ ಸಣ್ಣ ಸಣ್ಣ ಕಾಲುವೆಗಳನ್ನೂ ಹಳ್ಳಗಳನ್ನೂ ದನಗಳು ದಾಟಬೇಕಾದಾಗ ಅಲ್ಲೇ ಕಾದಿದ್ದ ಪಿರಾನ್ಯಗಳ ಗುಂಪು ಅವುಗಳ ಕೆಚ್ಚಲುಗಳನ್ನೂ, ಕಾಲುಗಳನ್ನೂ ತಿಂದುಹಾಕಿರುವ ಉದಾಹರಣೆಗಳುಂಟು. ಬ್ರೆಸಿಲ್ಲಿನ ಒಂದೊಂದು ಜಿಲ್ಲೆಯಲ್ಲೂ ಸುಮಾರು ೧೨೦೦ ದನಗಳು ಪ್ರತಿವರ್ಷ‍ ಯಾವುದಾದರೂ ಪ್ರಾಣಿಯ ಮೇಲೆರಗುವುದಕ್ಕೆ ಮೊದಲು ಅದು ತನಗಿಂತ ಚಿಕ್ಕದಿದೆಯೋ ದೊಡ್ಡದಿದೆಯೇ ಎಂದಾದರೂ ಪರೀಕ್ಷಿಸುತ್ತದೆ. ಆದರೆ ಪಿರಾನ್ಯ ಕ್ಕೆ ಆ ತಾರತಮ್ಯವೇ ಇಲ್ಲ. ಚಿಕ್ಕದಿರಲಿ, ದೊಡ್ಡದಿರಲಿ ಅದರ ಮೇಲೆರಗಿ ಆ ಪ್ರಾಣಿಯನ್ನು ಮುಗಿಸಿಬಿಡುತ್ತವೆ. ಮೀನುಗಳೇನಾದರೂ ತುಂಬಾ ದೊಡ್ಡದಿದ್ದರೆ ಆ ಮೀನುಗಳ ರೆಕ್ಕೆಪುಕ್ಕಗಳನ್ನು ಮೊದಲು ತಿಂದು ಹಾಕಿ ಆ ಮೀನು ನೀರಿನಲ್ಲಿ ಚಲಿಸದಂತೆ ಮಾಡಿಬಿಡುತ್ತವೆ. ಆನಂತರ ಮೊದಲ ಮೀನು ಕಚ್ಚಿದ ಜಾಗದಲ್ಲೇ ಒಂದಾದ ನಂತರ ಇನ್ನೊಂದು ಮೀನು ಸರಗಟ್ಟಿ ತಿನ್ನಲಾರಂಭಿಸುತ್ತದೆ. ಇದನ್ನು ಎಷ್ಟೊಂದು ವೇಗದಲ್ಲಿ ಮಾಡುತ್ತವೆಂದರೆ ಕ್ಷಣಾಧ‌ದಲ್ಲಿ ಆ ಪ್ರಾಣಿಯ ಬಿಳಿಚಿಕೊಂಡ ಅಸ್ಥಿಪಂಜರ ಮಾತ್ರ ಉಳಿಯುತ್ತದೆ. ಅನೇಕ ವೇಳೆ ನೀರಿಗೆ ಸಮೀಪದಲ್ಲಿ ಕೆಳಮಟ್ಟದಲ್ಲಿ ಹಾರಿಕೊಂಡು ಹೋಗುವ ಮಿಂಚುಳ್ಳಿ ಕೊಕ್ಕರೆ ಬಾತುಗಳನ್ನೂ ಸಹ ಪಿರಾನ್ಯಗಳು ನೀರಿನಿಂದ ನೆಗೆದು ಅಪ್ಪಳಿಸಿ ನೀರಿಗೆ ಬೀಳಿಸಿ ತಿಂದು ಬಿಡುತ್ತವೆ.

ಈ ಭೀಕರತೆಗೆ ಕಾರಣಗಳು

ಬದಲಾಯಿಸಿ

ಬಹುಶ: ಪಿರಾನ್ಯಗಳು ಈ ರೀತಿ ಅಪಾಯಕಾರಿಗಳಾಗಲು ಮೂರು ನಾಲ್ಕು ಕಾರಣಗಳ ಸಮ್ಮಿಳನ ಒಳ್ಳೆಯ ಪರಿಸ್ಥಿತಿಯನ್ನು ಒದಗಿಸಲುಬಹುದು. ಆಹಾರವಿಲ್ಲದೇ ಬಹಳ ದಿನಗಳ ಹಸಿವು, ಕಡಿಮೆ ನೀರಿರುವುದು ರಕ್ತದ ವಾಸನೆ ಮತ್ತು ಗಾಯಗೊಂಡ ಜೀವಿಗಳು ಒದ್ದಾಡುವಾಗ ಏಳಿಸುವ ವಿಚಿತ್ರ ಕಂಪನ ತರಂಗಗಳು ಇವಿಷ್ಟೂ ಒಟ್ಟಿಗೆ ಮೇಳವಿಸಿದರೆ ಪಿರಾನ್ಯಗಳು ಖಂಡಿತ ಮೇಲೆ ಬೀಳುತ್ತವೆಂದು ತಿಳಿಯಬಹುದು. ತಮ್ಮ ವಾಸನೆ ಮತ್ತು ಕಂಪನಗಳನ್ನು ಗುರುತಿಸುವ ಕಿವಿ, ಇವಿಷ್ಟರ ಸಹಾಯದಿಂದ ಪಿರಾನ್ಯಾಗಳು ಅಪ್ರತಿಮ ವೇಗದಲ್ಲಿ ಜೀವಿಗಳನ್ನು ಅಸ್ಥಿಪಂಜರ ಮಾತ್ರವನ್ನಾಗಿ ಪರಿವತಿ‍ಸುತ್ತವೆ. ಪಿರಾನ್ಯಾಗಳ ಗುಂಪುಗಳು ನೀರಿನಲ್ಲಿ ವೇಗವಾಗಿ ಚಲಿಸಿದರೆ ಮನುಷ್ಯರ ಕಣ್ಣಿಗೆ ಅಸ್ಪಷ್ಟ ರೇಖೆಯಂತೆ ಮಾತ್ರ ಕಾಣುತ್ತವೆ. ಪಿರಾನ್ಯಗಳು ಮನುಷ್ಯರನ್ನು ಕಬಳಿಸಿದಂತೆಯೇ ಮನುಷ್ಯರೂ ಪಿರಾನ್ಯಗಳನ್ನು ಕಬಳಸತೊಡಗಿದ್ದಾರೆ. ಅಮೇರಿಕದ ಇಂಡಿಯನ್ನರು ಟಿಂಬೋ ಎನ್ನು ಬಳ್ಳಿಯನ್ನು ಜಜ್ಜಿ ಅದನ್ನು ನೀರಿಗೆ ಕದಡುತ್ತಾರೆ. ಆಗ ಪಿರಾನ್ಯಗಳು ತಲೆತಿರುಗಿ ನೀರಿನಿಂದ ಮೇಲಕ್ಕೆ ತೇಲುತ್ತವೆ. ಇಂಡಿಯನ್ನರು ಅದನ್ನು ಕೆಂಡದ ಮೇಲಿಟ್ಟು ಬೇಯಿಸಿಕೊಂಡು ತಿನ್ನುತ್ತಾರೆ. ಅವುಗಳ ಹಲ್ಲುಗಳನ್ನು ಕತ್ತರಿಗಳಂತೆ ಹಾಗೂ ಬಾಣದ ಅಲಗಿಗೂ ಉಪಯೋಗಿಸುತ್ತಾರೆ.ಇಂಡಿಯನ್ನರೇನೋ ಈ ಪಿರಾನ್ಯದ ಉಪಯುಕ್ತತೆಯನ್ನರಿತಿದ್ದಾರೆ.

ಮುಂದಾಗ ಬಹುದಾದ ಅನಾಹುತಗಳು

ಬದಲಾಯಿಸಿ

ಪರಿಸರ ತಜ್ಞರು ಪಿರಾನ್ಯಾದ ಬಗ್ಗೆ ತುಂಬಾ ಚಿಂತಾಕ್ರಾಂತರಾಗಿದ್ದಾರೆ. ಏಕೆಂದರೆ ಉತ್ತರದ ಅಮೆರಿಕಾ ಸಂಯುಕ್ತಾ ಸಂಸ್ಥಾನದ ಪ್ಲೋರಿಡಾ ಮುಂತಾದ ರಾಜ್ಯಗಳಲ್ಲಿ ಪಿರಾನ್ಯ ಅಭಿವೃದ್ದಿಯಾಗಲು ಬೇಕಾದ ಎಲ್ಲಾ ಹವಾಮೂನವು ಇದೆ. ಆದ್ದರಿಂದ ಅಧಿಕಾರಿಗಳು ತೀರಾ ಎಚ್ಚರಿಕೆಯಿಂದ ಗಮನಿಸುತ್ತಾರೆ. ದಕ್ಷಿಣ ಅಮರಿಕಾದಿಂದ ಉತ್ತರ ಅಮೇರಿಕಕ್ಕೆ ಮನೆಗಳಲ್ಲಿ ಸಾಕಲು ಪಿರಾನ್ಯ ಗಳು ಅನೇಕ ಬಾರಿ ಇತರ ಮೀನುಗಳೊಂದಿಗೆ ಸಾಗಣಿಕೆಯಾಗುತ್ತಿದೆ. ಯಾವುದಾದರೂ ಹಲವು ಪಿರಾನ್ಯಾಗಳು ಅಕಸ್ಮಾತ್ತಾಗಿ ಅಮೆರಿಕಾದ ನದಿ ಮತ್ತು ಸರೋವರಗಳನ್ನು ತಲುಪಿಬಿಟ್ಟರೆ ಮುಂದೆ ಅವುಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ.

ಹೆಚ್ಚಿನ ಓದಿಗೆ ಪ್ಹಿರಾನಾಮೀನು

ಬದಲಾಯಿಸಿ

ಹೊರಗಿನ ಕೊಂಡಿಗಳು

ಬದಲಾಯಿಸಿ
  1. http://www.themost10.com/10-most-dangerous-sea-creatures/
  2. http://www.britannica.com/EBchecked/topic/461541/piranha