ಪಿಯರೆ ನ್ಯಾಂಟೆರ್ಮೆ
ಪಿಯರೆ ನ್ಯಾಂಟೆರ್ಮೆ (೭ ಸೆಪ್ಟೆಂಬರ್ ೧೯೫೯[೧] - ೩೧ ಜನವರಿ ೨೦೧೯) ಒಬ್ಬ ಫ್ರೆಂಚ್ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದರು. ಅವರು ಜಾಗತಿಕ ನಿರ್ವಹಣಾ ಸಲಹಾ ಮತ್ತು ವೃತ್ತಿಪರ ಸೇವಾ ಸಂಸ್ಥೆಯಾದ ಆಕ್ಸೆಂಚರ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದರು.
ಪಿಯರೆ ನ್ಯಾಂಟೆರ್ಮೆ | |
---|---|
ಜನನ | ಲಿಯಾನ್, ಫ್ರಾನ್ಸ್ | ೭ ಸೆಪ್ಟೆಂಬರ್ ೧೯೫೯
ಮರಣ | ೩೧ ಜನವರಿ ೨೦೧೯ (ವಯಸ್ಸು ೫೯) ಪ್ಯಾರಿಸ್, ಫ್ರಾನ್ಸ್ |
ಶಿಕ್ಷಣ ಸಂಸ್ಥೆ | ಇಎಸ್‌ಎಸ್‌ಇಸಿ ಬಿಸಿನೆಸ್ ಸ್ಕೂಲ್ |
ಗಮನಾರ್ಹ ಕೆಲಸಗಳು | ಆಕ್ಸೆಂಚರ್ ನ ಅಧ್ಯಕ್ಷ ಮತ್ತು ಸಿಇಒ (೨೦೧೧-೨೦೧೯) |
ಮಕ್ಕಳು | ೧ |
ಆರಂಭಿಕ ಜೀವನ
ಬದಲಾಯಿಸಿನ್ಯಾಂಟೆರ್ಮೆ ೧೯೫೯ ರಲ್ಲಿ ಫ್ರಾನ್ಸ್‌ನಲ್ಲಿ ಜನಿಸಿದರು.[೨] ಅವರು ಪ್ಯಾರಿಸ್‌ನ ಇಎಸ್‌ಇಸಿ ಬಿಸಿನೆಸ್ ಸ್ಕೂಲ್ (ಎಕೋಲ್ ಸೂಪರಿಯೇರ್ ಡೆಸ್ ಸಯಾನ್ಸ್ ಎಕೋನಾಮಿಕ್ಸ್ ಎಟ್ ಕಾಮರ್ಶಿಯೇಲ್ಸ್)ನಲ್ಲಿ ಶಿಕ್ಷಣ ಪಡೆದು ೧೯೮೧ ರಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದರು.[೨] ಪದವಿಯ ನಂತರ, ಅವರು ಫ್ರಾನ್ಸ್‌ನಲ್ಲಿ ತಮ್ಮ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದರು.[೩]
ಆಕ್ಸೆಂಚರ್‌ನಲ್ಲಿ ವೃತ್ತಿ
ಬದಲಾಯಿಸಿ೧೯೮೩ ರಲ್ಲಿ, ನ್ಯಾಂಟೆರ್ಮೆ ಅವರು ಸಮಾಲೋಚನಾ ಸಂಸ್ಥೆಯಾದ ಅಕ್ಸೆಂಚರ್ (ಆಂದು ಅದನ್ನು ಆಂಡರ್ಸನ್ ಕನ್ಸಲ್ಟಿಂಗ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.[೩][೪] ಕಂಪನಿಯಲ್ಲಿನ ಅವರ ಆರಂಭಿಕ ವೃತ್ತಿಜೀವನದ ಪಾತ್ರಗಳಲ್ಲಿ ಫ್ರಾನ್ಸ್‌ನಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಅಭ್ಯಾಸದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.[೪] ಅವರು ೧೯೯೩ ರಲ್ಲಿ ಆ ಸಂಸ್ಥೆಯಲ್ಲಿ ಪಾಲುದಾರರಾದರು.[೫] ೧೯೯೩ ಮತ್ತು ೨೦೦೫ ರ ನಡುವೆ, ಯುರೋಪ್, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ವ್ಯವಸ್ಥಾಪಕ ನಿರ್ದೇಶಕರು ಮತ್ತು ವಿಮಾ ಉದ್ಯಮ ಗುಂಪಿನ ಜಾಗತಿಕ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಸಂಸ್ಥೆಯ ಹಣಕಾಸು ಸೇವೆಗಳ ಅಭ್ಯಾಸದಲ್ಲಿ ನ್ಯಾಂಟೆರ್ಮೆ ಹಲವಾರು ಸ್ಥಾನಗಳನ್ನು ಹೊಂದಿದ್ದರು.[೨]
ನವೆಂಬರ್ ೨೦೦೫ ರಲ್ಲಿ, ಫ್ರಾನ್ಸ್‌ನಲ್ಲಿನ ಆಕ್ಸೆಂಚರ್‌ನ ರಾಷ್ಟ್ರೀಯ ವ್ಯವಸ್ಥಾಪಕ ನಿರ್ದೇಶಕರಾಗಿ ನ್ಯಾಂಟೆರ್ಮೆ ಅವರನ್ನು ನೇಮಿಸಲಾಯಿತು.[೫] ಮುಂದಿನ ವರ್ಷ, ಅವರು ಆಕ್ಸೆಂಚರ್‌ನ ಜಾಗತಿಕ ನಾಯಕತ್ವ ತಂಡವನ್ನು ಸೇರಿಕೊಂಡರು ಮತ್ತು ಕಂಪನಿಯ ಮುಖ್ಯ ನಾಯಕತ್ವ ಅಧಿಕಾರಿಯಾದರು, ಮತ್ತು ಅದರ ನಾಯಕತ್ವದ ಬೆಳವಣಿಗೆಯನ್ನು ನಿರ್ವಹಿಸಿದರು.[೨][೫][೬]
೨೦೦೭ ರಲ್ಲಿ, ನಾಂಟರ್ಮೆ ಅವರನ್ನು ಬ್ಯಾಂಕಿಂಗ್, ವಿಮೆ ಮತ್ತು ಬಂಡವಾಳ ಮಾರುಕಟ್ಟೆಗಳಲ್ಲಿ ಕ್ಲೈಂಟುಗಳ ಮೇಲೆ ಕೇಂದ್ರೀಕರಿಸಿದ ಅಕ್ಸೆಂಚರ್‌ನ ಜಾಗತಿಕ ಹಣಕಾಸು ಸೇವೆಗಳ ಕಾರ್ಯಾಚರಣೆ ಗುಂಪಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಯಿತು.[೪][೭][೮][೯] ಅಕ್ಟೋಬರ್ ೨೦೧೦ ರಲ್ಲಿ, ಆಕ್ಸೆಂಚರ್‌ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಾಂಟೆರ್ಮೆ ಕಾರ್ಯನಿರ್ವಹಿಸುತ್ತಾರೆ ಎಂದು ಕಂಪನಿಯು ಘೋಷಿಸಿತು, ಆ ಸಮಯದಲ್ಲಿ ಅವರು ನಿರ್ದೇಶಕರ ಮಂಡಳಿಯ ಸದಸ್ಯರಾದರು.[೧೦]ಅವರು ೧ ಜನವರಿ ೨೦೧೧ ರಂದು ಅಧಿಕೃತವಾಗಿ ಸಿಇಒ ಆಗಿ ಅಧಿಕಾರವನ್ನು ವಹಿಸಿಕೊಂಡರು.[೭][೮][೧೦] ಮತ್ತು ಫೆಬ್ರವರಿ ೨೦೧೩ ರಲ್ಲಿ ಅಧ್ಯಕ್ಷರ ಹೆಚ್ಚುವರಿ ಪಾತ್ರವನ್ನು ವಹಿಸಿಕೊಂಡರು.[೨]
೧೧ ಜನವರಿ ೨೦೧೯ ರಂದು, ಆರೋಗ್ಯ ಕಾಳಜಿಯನ್ನು ಉಲ್ಲೇಖಿಸಿ ನ್ಯಾಂಟೆರ್ಮೆ ಅಧ್ಯಕ್ಷ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದರು.[೧೧] ಅವರು ಒಟ್ಟು ೩೬ ವರ್ಷಗಳ ಕಾಲ ಆಕ್ಸೆಂಚರ್ ನಲ್ಲಿ ಕೆಲಸ ಮಾಡಿದರು.[೧೨]
ಇತರ ಚಟುವಟಿಕೆಗಳು
ಬದಲಾಯಿಸಿನ್ಯಾಂಟೆರ್ಮೆ ಫ್ರಾನ್ಸ್‌ನ ಅತಿದೊಡ್ಡ ಉದ್ಯೋಗ ದಾತರ ಸಂಘಟನೆಯಾದ ಮೂವ್ಮೆಂಟ್ ಡೆಸ್ ಎಂಟ್ರಪ್ರೈಸಸ್ ಡೆ ಫ್ರಾನ್ಸ್ (ಎಮ್‌ಇಡಿಇಎಫ್) ನಲ್ಲಿ ಭಾಗವಹಿಸಿದ್ದರು ಮತ್ತು ೨೦೦೫ ರಿಂದ ೨೦೧೩ ರವರೆಗೆ ಈ ಸಂಘಟನೆಯ ಆರ್ಥಿಕ ವ್ಯವಹಾರಗಳು ಮತ್ತು ಸಾರ್ವಜನಿಕ ಹಣಕಾಸುಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.[೫] ಅವರು ಎಮ್‌ಇಡಿಇಎಫ್ ನ ಕಾರ್ಯಕಾರಿ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದರು.[೫]
೨೦೦೭ ಮತ್ತು ೨೦೧೧ ರ ನಡುವೆ, ನ್ಯಾಂಟೆರ್ಮೆ ಅವರು ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಸಂಶೋಧನೆ ಮತ್ತು ಸಲಹಾ ಕ್ಷೇತ್ರಗಳಿಂದ ಸದಸ್ಯ ಕಂಪನಿಗಳನ್ನು ಹೊಂದಿರುವ ಫ್ರೆಂಚ್ ಸಲಹಾ ಸಂಘ ಎಸ್‌ವೈಎನ್‌ಟಿಇಸಿ ನ ಅಧ್ಯಕ್ಷರಾಗಿದ್ದರು.[೮][೧೩][೧೪]
ನಾಂಟೆರ್ಮ್ ಬಿ೨೦ ಸಮ್ಮಿಟ್‌ಗಳ ಕೆಲವು ಕಾರ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಬಿ೨೦ ಗ್ರೀನ್ ಗ್ರೋತ್ ಆಕ್ಷನ್ ಅಲ್ಲಿನ ನಿರ್ವಾಹಕ ಸಮಿತಿಯ ಸದಸ್ಯರಾಗಿದ್ದಾರೆ. ಈ ಸಮಿತಿಯು ಪರಿಸರ ಹಾಗೂ ಸಾಮಾಜಿಕ ನ್ಯಾಯದ ಕ್ಷೇತ್ರದಲ್ಲಿ ಖಾಸಗಿ ನಿಧಿಯ ಅಗತ್ಯತೆಯ ಕುರಿತು ಕಾರ್ಯ ನಡೆಸಲು ವಿಶ್ವ ಆರ್ಥಿಕ ವೇದಿಕೆಯ ಮೂಲಕ ಪ್ರಾರಂಭಗೊಂಡಿದೆ.[೫][೧೫] ಅವರು ಅಲಯನ್ಸ್‌ನ ಎನರ್ಜಿ ಎಫಿಷಿಯನ್ಸಿ ವರ್ಕಿಂಗ್ ಗ್ರೂಪ್‌ನ ಸಹ-ಅಧ್ಯಕ್ಷರಾಗಿದ್ದರು ಮತ್ತು ಆರ್ಥಿಕ ನೀತಿ ಕಾರ್ಯ ಗುಂಪಿನ ಸದಸ್ಯರಾಗಿ ಸೇವೆ ಸಲ್ಲಿಸಿದರು.[೫]
ಮೇಲಿನ ಪಾತ್ರಗಳ ಜೊತೆಗೆ, ಯುರೋಪಿಯನ್ ಕಮಿಷನ್ ನ ಯುರೋಪಿಯನ್ ಕ್ಲೌಡ್ ಪಾಲುದಾರಿಕೆಯ ಸ್ಟೀರಿಂಗ್ ಬೋರ್ಡ್‌ನಲ್ಲಿ ನ್ಯಾಂಟೆರ್ಮೆ ಸೇವೆ ಸಲ್ಲಿಸಿದರು, ಇದು ಯುರೋಪ್‌ನಲ್ಲಿ ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸಲು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ಬಳಸಲು ಸಾರ್ವಜನಿಕ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.[೨][೧೬][೧೭] ಯುರೋಪ್ ಮತ್ತು ಅಮೆರಿಕದ ನಡುವಿನ ವ್ಯಾಪಾರವನ್ನು ಉತ್ತೇಜಿಸಲು ನೀತಿಗಳನ್ನು ರೂಪಿಸುವ ಸಿಇಒಗಳ ಸಮೂಹವಾದ ಟ್ರಾನ್ಸ್‌ಅಟ್ಲಾಂಟಿಕ್ ಬಿಸಿನೆಸ್ ಡೈಲಾಗ್‌ನ ಮಂಡಳಿಯ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದರು.[೨]
ಗುರುತಿಸುವಿಕೆ
ಬದಲಾಯಿಸಿ೨೦೧೦ ರಲ್ಲಿ, ನ್ಯಾಂಟೆರ್ಮೆ ಅವರಿಗೆ ಫ್ರೆಂಚ್ ವ್ಯಾಪಾರದ ನಾಯಕರಾಗಿ ಕೆಲಸ ಮಾಡಿದ್ದಕ್ಕಾಗಿ ಲೀಜನ್ ಆಫ್ ಆನರ್ ನ "ಚೆವಲಿಯರ್" ಚಿಹ್ನೆಯನ್ನು ನೀಡಲಾಯಿತು.[೨]
೨೦೧೪ ಫೆಬ್ರವರಿ ೧೧ ರಂದು, ನಾನ್ಟೆರ್ಮ್ ಅವರು ಯು.ಎಸ್. ಅಧ್ಯಕ್ಷ ಬಾರಾಕ್ ಒಬಾಮಾ ಅವರ ಆಡಳಿತದಲ್ಲಿ ಫ್ರಾನ್ಸಿಸ್ ಹೊಲ್ಲಾಂಡ್ ರಾಷ್ಟ್ರಪತಿಯ ಗೌರವಾರ್ಥವಾಗಿ ವೈಟ್ ಹೌಸ್ ನಲ್ಲಿ ಆಯೋಜಿಸಲ್ಪಟ್ಟ ಡನ್ನರ್‌ಗೆ ಹಾಜರಾಗಿದ್ದರು.[೧೮]
ಆರೋಗ್ಯ ಕಾಳಜಿ ಮತ್ತು ಸಾವು
ಬದಲಾಯಿಸಿ೨೦೧೬ ರಲ್ಲಿ ನಾಂಟೆರ್ಮೆಗೆ ಕೊಲೊನ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಸಿಇಒ ಆಗಿ ಕೆಳಗಿಳಿದ ಇಪ್ಪತ್ತು ದಿನಗಳ ನಂತರ, ೩೧ ಜನವರಿ ೨೦೧೯ ರಂದು, ಪ್ಯಾರಿಸ್‌ನಲ್ಲಿ ೫೯ ನೇ ವಯಸ್ಸಿನಲ್ಲಿ ನ್ಯಾಂಟೆರ್ಮೆ ನಿಧನರಾದರು.[೧೯]
ಉಲ್ಲೇಖಗಳು
ಬದಲಾಯಿಸಿ- ↑ "Search results". www.google.com. ಟೆಂಪ್ಲೇಟು:Better source needed
- ↑ ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ Anna Teo (30 March 2013). "The global Chevalier". Business Times. Retrieved 30 June 2013.
- ↑ ೩.೦ ೩.೧ Dibyendu Ganguly (17 June 2011). "How Accenture's new CEO Pierre Nanterme wants to make the company truly global". The Economic Times. Archived from the original on 6 ಜೂನ್ 2016. Retrieved 30 June 2013.
- ↑ ೪.೦ ೪.೧ ೪.೨ Alain Ruello (17 November 2005). "Un entrepreneur à la tête d'Accenture France". Les Echos. Archived from the original on 21 ಅಕ್ಟೋಬರ್ 2013. Retrieved 30 June 2013.
- ↑ ೫.೦ ೫.೧ ೫.೨ ೫.೩ ೫.೪ ೫.೫ ೫.೬ "Pierre Nanterme". Bloomberg BusinessWeek. Bloomberg. Archived from the original on 6 June 2013. Retrieved 29 April 2013.
- ↑ "B20 Working Groups' Contributors" (PDF). B20 Business Summit. November 2011. Archived from the original (PDF) on 26 April 2012. Retrieved 29 June 2013.
- ↑ ೭.೦ ೭.೧ Virgile Juhan (24 October 2010). "Les nominations du 26 octobre 2010 : acteurs IT". Journal du Net. Retrieved 30 June 2013.
- ↑ ೮.೦ ೮.೧ ೮.೨ Cyrille Chausson (21 October 2010). "Pierre Nanterme prendra les rênes d'Accenture en 2011". LeMagIT. Retrieved 30 June 2013.
- ↑ "Accenture Names Pierre Nanterme Chief Leadership Officer". WebWire. 13 June 2013. Retrieved 30 July 2013.
- ↑ ೧೦.೦ ೧೦.೧ Matthew Monks (24 November 2010). "New Financial Group Chief at Accenture". American Banker. Retrieved 30 June 2013.
- ↑ Stacey Jones (11 January 2019). "Accenture Chairman & CEO Pierre Nanterme Steps Down for Health Reasons David Rowland Appointed Interim Chief Executive Officer Marge Magner Named Non-Executive Chair". Retrieved 11 January 2019.
- ↑ "Accenture Announces Passing of Former Chairman and CEO Pierre Nanterme | Accenture Newsroom". accntu.re (in ಇಂಗ್ಲಿಷ್). Retrieved 31 January 2019.
- ↑ Carole Bellemare (1 July 2009). "Hélène Pelosse: a French Agency for Renewable Energy". Le Figaro. Retrieved 30 June 2013.
- ↑ "Federation Syntec elects Jean-Luc Placet president" (Press release). Corporate IT Update. 26 July 2011. Retrieved 5 August 2013.
- ↑ Brindusa Fidenza (28 June 2013). "Accelerating investment in green growth". Korea Times. Retrieved 30 June 2013.
- ↑ Manon Malhère (3 December 2012). "INFORMATION SOCIETY : NEW PARTNERSHIP TO BOOST PUBLIC SECTOR USE OF CLOUD SERVICES". Europolitics. Retrieved 30 June 2013.(subscription required)
- ↑ "European Cloud Partnership". Digital Agenda for Europe. Retrieved 29 July 2013.
- ↑ Expected Attendees at Tonight’s State Dinner Office of the First Lady of the United States, press release of 11 February 2014.
- ↑ "Accenture's former CEO Nanterme dies". Reuters. 31 January 2019. Retrieved 31 January 2019.