ಪಾರ್ಶ್ವನಾಥ ಸ್ವಾಮಿ ಬಸದಿ ಹಚ್ಚಾಡಿ

ಪಾರ್ಶ್ವನಾಥ ಸ್ವಾಮಿ ಬಸದಿ ಹಚ್ಚಾಡಿ

ಸ್ಥಳ ಬದಲಾಯಿಸಿ

ಬೆಳ್ತಂಗಡಿ ತಾಲೂಕಿನ ಜೈನ ಬಸದಿಗಳಲ್ಲಿ ಒಂದಾದ ಹಚ್ಚಾಡಿ ಬಸದಿಯು ಬೆಳ್ತಂಗಡಿ ತಾಲೂಕಿನಿಂದ ಹನ್ನೆರಡು ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಹೋಗಬೇಕಾದರೆ ಬೆಳ್ತಂಗಡಿಯಿಂದ ಮೂಡಬಿದ್ರೆಗೆ ಹೋಗುವ ಬಸ್ಸಿನಲ್ಲಿ ಕುಳಿತುಕೊಂಡು ಮುಮದೆ ಪೊಯ್ಯಗುಡ್ಡೆ ಎಂಬಲ್ಲಿರುವ ಹೈಸ್ಕೂಲಿನ ಹತ್ತಿರ ಇಳಿದರೆ ಅಲ್ಲಿಯೇ ಹತ್ತಿರದಲ್ಲಿ ‘ದಿಗಂಬರ ಜೈನ ಮಂದಿರ, ಹಚ್ಚಾಡಿ’ ಎಂಬ ನಾಮಫಲಕ ಕಾಣುತ್ತದೆ. ಆ ನಾಮಫಲಕವಿರುವ ಬದಿಯಲ್ಲಿ ಸಿಗುವ ಒಳರಸ್ತೆಯಲ್ಲಿ ಮುಂದಕ್ಕೆ ಹೋಗಬೇಕು. ಅಲ್ಲಿ ಹಚ್ಚಾಡಿ ಬಸದಿ ಸಿಗುತ್ತದೆ. ಇದು ಗರ್ಡಾಡಿ ಎಂಬ ಗ್ರಾಮಕ್ಕೆ ಸೇರಿದೆ.[೧]

ಶಿಲಾ ವಿನ್ಯಾಸ ಬದಲಾಯಿಸಿ

ಈ ಬಸದಿಯಲ್ಲಿ ಪೋಜೆಗೊಳ್ಳುವ ಮೂಲ ನಾಯಕ ಶ್ರೀ ಪಾರ್ಶ್ವನಾಥ ತೀರ್ಥಾಂಕರರು. ಸ್ವಾಮಿಯ ಮೂರ್ತಿಯು ಪಂಚ ಲೋಹದ್ದಾಗಿದ್ದು ಅದರ ಪ್ರಭಾವಳಿಯೂ ಮಕರ ತೋರಣದೊಂದಿಗೆ ಅತೀ ಸುಂದರವಾಗಿದೆ. ಈ ಮೂರ್ತಿ ಖಡ್ಗಾಸನ ಭಂಗಿಯಲ್ಲಿದೆ. ಇದರ ಸಿಂಹ ಪೀಠವು ಚೌಕಾಕೃತಿಯಲ್ಲಿದ್ದು ಬಿಂಬಕ್ಕೆ ಅಭಿಷೇಕ ಮಾಡಿದ ನೀರು ಹೊರಗೆ ಹೋಗಲು ವ್ಯವಸ್ಥೆಯಿದೆ. ಬಿಂಬದ ಬದಿಯಲ್ಲಿ ಧರಣೇಂದ್ರ ಮತ್ತು ಪದ್ಮಾವತಿ ಯಕ್ಷ ಯಕ್ಷಿಯರಿದ್ದಾರೆ. ಅದೇ ರೀತಿ ಈ ಪಾರ್ಶ್ವನಾಥ ತೀರ್ಥಾಂಕರರ ಮೂರ್ತಿಗೆ ಅಷ್ಠ ಮಹಾಪರ್ವತಿಹಾರ್ಯಗಳಾದ ಚಾಮರ, ಮುಕ್ಕುಡೆ, ಪುಷ್ಪವೃಷ್ಠಿ, ದಿವ್ಯವದ್ವನಿ ಇತ್ಯಾದಿಗಳನ್ನು ತೋರಿಸಲಾಗಿದೆ. ಅಭೀಷೇಕ ಮಾಡುವಾಗ ಜಲ, ಕ್ಷೀರ, ಗಂಧ, ಸೀಯಾಳ ಮುಂತಾದ ದೃವ್ಯಗಳನ್ನು ಉಪಯೋಗಿಸುತ್ತಾರೆ. ಈ ಬಸದಿಯಲ್ಲಿ ಬ್ರಹ್ಮದೇವ ಮೂರ್ತಿ ಇದೆ. ಇದು ಕುದುರೆಯ ಮೇಲೆ ಕುಳಿತುಕೊಂಡಿರುವ ಭಂಗಿಯಲ್ಲಿದೆ. ಬಸದಿಯ ಗರ್ಭಗೃಹದಿಂದ ಹೊರಗೆ ಗಂಧ ಕುಟಿ, ತೀರ್ಥಾಂಕರ ಮಂಟಪ, ಘಂಟಾ ಮಂಟಪ ಮತ್ತು ಪ್ರಾರ್ಥನಾ ಮಂಟಪಗಳಿವೆ.

ಆಚರಣೆ ಬದಲಾಯಿಸಿ

ಈ ಹಚ್ಚಾಡಿ ಬಸದಿಯು ಸುಮಾರು ೧೫೦ ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇಲ್ಲಿ ದಿನಕ್ಕೆ ಒಂದು ಸಲ ಅಭಿಷೇಕ, ಪೂಜೆ ನಡೆಯುತ್ತದೆ. ಬಸದಿಯ ಗಂಧಕುಟಿಯಲ್ಲಿ ಶ್ರುತ, ಗಣಧರ ಪಾದ, ಚವ್ವೀಸ ತೀರ್ಥಾಮಕರರು, ರ್ಸಾಹ್ಣ ಯಕ್ಷ ಮತ್ತು ಬ್ರಹ್ನ ಯಕ್ಷ ಮೂರ್ತಿಗಳಿವೆ. ಈ ಮೂರ್ತಿಗಳಿಗೆ ಪ್ರತಿನಿತ್ಯ ಪೂಜೆ ಮಾಡಲಾಗುತ್ತದೆ. ಅದೇ ರೀತಿ ಉತ್ತರ ದಿಕ್ಕಿಗೆ ಮುಖಮಾಡಿಕೊಂಡು ಶ್ರೀ ಪದ್ನಾವತಿ ಅಮ್ಮನವರ ಮೂರ್ತಿ ಇದೆ. ಈ ಮೂರ್ತಿಯು ಲೋಹದ್ದೇ ಆಗಿರುತ್ತದೆ. ಅಮ್ಮನವರ ಮೂರ್ತಿಗೆ ಸೀರೆ ಉಡಿಸಿ, ಕರಿಮಣಿ, ಬಳೆಗಳನ್ನು ಹಾಕಲಾಗುತ್ತದೆ. ಮೂರ್ತಿಯ ಸಂದರ್ಭದಲ್ಲಿ ಪದ್ಮಾವತಿ ಅಮ್ಮನವರಿಗೆ ನೈವೇದ್ಯ, ಚರು, ಫಲವಸ್ತುಗಳನ್ನು ಸಮರ್ಪಣೆ ಮಾಡಲಾಗುತ್ತದೆ. ಇಲ್ಲಿರುವ ತೀರ್ಥಾಂಕರ ಮಂಟಪದಲ್ಲಿ ಹೋಮ, ನಿತ್ಯ ವಿಧಿ, ಆರಾಧನೆಗಳನ್ನು ಮಾಡಲಾಗುತ್ತದೆ. ಈಗ ಈ ಬಸದಿಯಲ್ಲಿ ಹಿಂದಿಗಿಂತ ವಿಷೇಷ ಪೂಜೆಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಇಲ್ಲಿ ನಡೆಯುವ ಅತ್ಯಂತ ವಿಶೇಷ ಸೇವೆ ಪದ್ಮಾವತಿ ಅಮ್ಮನವರ ಪೂಜೆ.

ಬಸದಿಯ ವೈಶಿಷ್ಠತೆ ಬದಲಾಯಿಸಿ

ಘಂಟಾ ಮಂಟಪದಲ್ಲಿರುವ ಘಂಟೆ ಬಹು ಪಾಚೀನ ಕಾಲದ್ದಾಗಿದೆ. ಪ್ರಾರ್ಥನಾ ಮಂಟಪದ ನೆಲ ಶಿಲೆಯದ್ದಾಗಿದೆ. ಈ ಬಸದಿಯ ಗರ್ಭ ಗೃಹಕ್ಕೆ ಮೇಗಿನ ನೆಲೆ ಇದೆ. ಇಲ್ಲಿ ಆದಿನಾಥ ತೀರ್ಥಾಂಕರರ ಮೂರ್ತಿಯನ್ನು ಪೂಜಿಸಲಲಾಗುತ್ತದೆ. ಗರ್ಭಗೃಹ ಸುತ್ತಲೂ ಅಂಗಳ ಇದೆ. ಈ ಅಂಗಳದ ಪರಿಸರದಲ್ಲಿ ಪಾರಿಜಾತದ ಮರ, ಬಲಬದಿಯಲ್ಲಿ ಕ್ಷೇತ್ರಪಾಲನ ಸನ್ನಿದಿ ಇದೆ. ಈ ಕ್ಷೇತ್ರಪಾಲನ ಮೂರ್ತಿಯು ಕಲ್ಲಿನದಾಗಿದೆ. ಈ ಬಸದಿಯಲ್ಲಿ ಅಷ್ಠದಿಕ್ಪಾಲಕ ಸಾನ್ನಿದ್ದಾನವಿದೆ. ಇದು ಕಾರ್ಕಳದ ಮಠಕೆ ಸೇರಿದ ಬಸದಿಯಾಗಿದೆ. ಈ ಹಚ್ಚಾಡಿ ಬಸದಿ ಮುಂಭಾಗದಲ್ಲಿ ಹಳೆಯದಾದ ಮತ್ತು ಬೃಹದಾಕಾರದ ಕಂಬದ ಮೇಲೆ ಒಂದು ಘಂಟೆಯನ್ನು ಜೋಡಿಸಲಾಗಿದೆ. ಈ ಘಂಟೆಯು ತೀರ ಹಳೆಯದಾಗಿದ್ದು ಇದರ ನಾದವು ಸುಮಾರು ೮ ಕಿ.ಮಿ ನಷ್ಟು ದೂರಕ್ಕೆ ಕೇಲುತ್ತದೆಯಂತೆ. ಹಾಗೆಯೇ ಈ ಬಸದಿಯ ಮುಂಭಾಗದಲ್ಲಿ ಅತೀ ಎತ್ತರದ ಧ್ವಜಸ್ತಂಭ ಕೂಡಾ ಇದೆ. ಇಲ್ಲಿ ವರ್ಷಂಪ್ರತಿ ಡಿಸೆಂಬರ್ ತಿಂಗಳಿನಲ್ಲಿ ರಥೋತ್ಸವವು ನಡೆಯುತ್ತದೆ. ಆ ಸಮಯ ಈ ಧ್ವಜಸ್ತಂಭದಲ್ಲಿ ಸರ್ವಾಹ್ಣ ಯಕ್ಷನ ದ್ವಜಾರೋಹಣ ನಡೆಯುತ್ತದೆ, ಬಸದಿಯ ಒಳಾಂಗಣದಲ್ಲಿ ಈಶಾನ್ಯ ದಿಕ್ಕಿನಲ್ಲಿ ದೊಡ್ಡದಾದ ಒಂದು ತೀರ್ಥ ಬಾವಿಯೂ ಇದೆ. ಹೊರಾಂಗಣದಲ್ಲಿ ಒಂದು ರಥವಿದೆ. ಇದನ್ನು ರಥೋತ್ಸವ ಸಂದರ್ಭದಲ್ಲಿ ಎಳೆಯಲಾಗುತ್ತದೆ. ಈ ಬಸದಿಯು ಪ್ರಮುಖವಾಗಿ ಪ್ರಾಕೃತಿಕ ಪರಿಸರದ ನಡುವೆ ಬಹು ಸುಂದರವಾಗಿ ಕಂಗೊಳಿಸುತ್ತದೆ. ಈ ಜಿನಾಲಯದ ಇನ್ನೊಂದು ವೈಶಿಷ್ಠತೆ ಏನೆಂದರೆ ಇದು ಎರಡು ಮಹಡಿಗಳನ್ನು, ಮೂರು ಗರ್ಭಗೃಹಗಳನ್ನೂ ಹೊಂದಿದೆ.

ಪುರಾವೆಗಳು ಬದಲಾಯಿಸಿ

ಈ ಬೃಹತ್ ಬಸದಿಯ ನಿರ್ಮಾಣದ ಬಗ್ಗೆ ಪುರಾವೆಗಳನ್ನು ಹುಡುಕುತ್ತಾ ಹೋದಾಗ ಗರ್ಭಗೃಹದಲ್ಲಿ ಪಾರ್ಶ್ವನಾಥ ಬಿಂಬದ ಪೀಠದಲ್ಲಿ ಶಕ ೧೪೮೦ರ ಕಾಳಯುಕ್ತಿ ಸಂವತ್ಸರದ ಜ್ಯೇಷ್ಠ ಬಹುಳ ಷಷ್ಠಿ ಮಂಗಳವಾರ (ಅಂದರೆ ೧೫೫೮ನನೇ ಇಸವಿ ಜೂನ್ ತಿಂಗಳ ೭ನೇ ತಾರೀಕು)ಕ್ಕೆ ಸಂಬಂಧಿಸಿದು. ಆ ಶುಭದಿನದಂದು ಬೈಂಗಡಿಯ ಪಾರ್ಶ್ವನಾಥನೆಂಬುವವನು ತನ್ನ ಕರ್ಮಕ್ಷಯ ನಿಮಿತ್ತವಾಗಿ ಈ ಜಿನಬಿಂಬವನ್ನು ಪ್ರತಿಷ್ಠಾಪಿಸಿದರೆಂದು ಹೇಳುತ್ತದೆ. ಇನ್ನೊಂದು ಆದಿನಾಥ ಬಿಂಬದ ಪೀಠದ ಮೇಲೆ ಶಕವರ್ಷ ೧೫೨೫ನೇ ಶೋಭಕ್ರತು ಸಂಚತ್ಸರದ ಫಾಲ್ಗುಣ ಬಃಲ ಸಪ್ತಮಿ ಚಂದ್ರವಾರ (೧೬೦೪ನೇ ಇಸವಿ ಮಾರ್ಚ್ ೧೨ನೇ ತಾರೀಕು) ಇನ್ನೊಂದು ಶಾಸನವು ಸಿಗುತ್ತದೆ. ಇವೆರಡು ಶಾಸನಗಳು ಈ ಬಸದಿಯ ನಿರ್ಮಾಣದ ಪ್ರಾಚೀನತೆಗೆ ಸಾಕ್ಷಿಗಳೇ ಎಂದು ಈಗಿನ ನಮ್ಮ ಅನುಭವದ ಆಧಾರದಿಂದ ಹೇಳಲು ಸಾದ್ಯವಾಗುವುದಿಲ್ಲ. ಯಾಕೆಂದರೆ ಈ ಬಸದಿಗೆ ಸಂಬಂಧಿಸಿದ ಈಗಿನ ವ್ಯಕ್ತಿಗಳು ಹೇಳುವಂತೆ ಕ್ರಿ.ಶ೧೯೧೦ರಲ್ಲಿ ಹಚ್ಚಾಡಿ ಬೀಡಿನ ದೇವರಾಜ ಬುಣ್ಣು ಮತ್ತು ಅವರ ಪತ್ನಿ ಪದ್ಮಾವತಿ ಅಮ್ಮ ಎಂಬ ದಂಪತಿಗಳು ಈ ಜಿನಾಲಯವನ್ನು ನಿರ್ಮಿಸಿದರು. ಈ ಪರಿಸರದ ಜಿನಾಲಯದ ವಿವರಣೆ ಕೊಡುವ ಕ್ರಿ.ಶ೧೮೨೮ರ “ಜೈನಾಚಾರ” ಗ್ರಂಥವು ಈ ಬಸದಿಯನ್ನು ಉಲ್ಲೇಖಿಸಿಲ್ಲ ಪ್ರಾಯಶ ಈ ಸಮಯದಲ್ಲಿ ಈ ಬಸದಿ ಅಸ್ತಿತ್ವದಲ್ಲಿ ಇರಲಿಲ್ಲ. ಆದ್ದುದರಿಂದ ಈ ಬಸದಿಯು ಕ್ರಿ.ಶ೧೯೧೦ರಲ್ಲಿ ನಿರ್ಮಾಣಗೊಂಡಿತು ಎಂದು ಹೇಳಿಕೆ ಇದೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (1 ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. p. ೧೮೮-೧೮೯.