ಪಾರ್ಶ್ವನಾಥ ಸ್ವಾಮಿ ಬಸದಿ ಮಾರೂರು
ಮಾರೂರಿನ ಪಾಶ್ರ್ವನಾಥ ಸ್ವಾಮಿ ಬಸದಿಯು ಕರ್ನಾಟಕದ ಪುರಾತನ ಬಸದಿಗಳಲ್ಲಿ ಒಂದಾಗಿದೆ.
ಸ್ಥಳ
ಬದಲಾಯಿಸಿಬಸದಿಯು ಮಂಗಳೂರು ತಾಲೂಕು ಮಾರೂರು ಗ್ರಾಮದಲ್ಲಿದೆ. ಬಸದಿಯ ಹತ್ತಿರ ಮಾರೂರು (ಹೊಸಂಗಡಿ) ಅರಮನೆಯಿದೆ. ಈ ಬಸದಿಗೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ಶ್ರೀ ಪುಷ್ಪದಂತಸ್ವಾಮಿ ಬಸದಿ, ಪೆರಿಂಜೆ. ಇಲ್ಲಿಂದ ಅದು ಸುಮಾರು ಮೂರು ಕಿ. ಮೀ. ದೂರದಲ್ಲಿದೆ. ಬಸದಿಯು ಮೂಡುಬಿದಿರೆ ಮಠಕ್ಕೆ ಸೇರಿದೆ. ಇದು ಮೂಡುಬಿದಿರೆಯಿಂದ ವೇಣೂರಿಗೆ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿದೆ. ಬಸದಿಯು ಮೂಡುಬಿದಿರೆಯ 18 ಬಸದಿಗಳಲ್ಲಿ ಒಂದಾಗಿದೆ.[೧]
- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜುಶೀ ಪ್ರಿಂಟರ್ಸ್. p. ೨೯೧.
ಇತಿಹಾಸ
ಬದಲಾಯಿಸಿಈ ಬಸದಿಯನ್ನು ಯಾರು ಕಟ್ಟಿಸಿದ್ದರೆಂದು ತಿಳಿದಿಲ್ಲ. ಸಾಮಾನ್ಯ ಸುಮಾರು ವರ್ಷಗಳ ಹಿಂದೆ ಕಟ್ಟಿದ್ದಾಗಿದೆ. ಈ ಬಸದಿ ಹಿಂದೆ ಶಿಲಾಮಯವಾಗಿತ್ತು. ಅದು ಆಕಸ್ಮಿಕವಾಗಿ ಬೆಂಕಿ ಹಿಡಿದು ನಾಶವಾದ್ದರಿಂದ ಈಗ ಹಂಚಿನ ಮಾಡಿನದ್ದಾಗಿದೆ . ಬಸದಿ ಇತ್ತೀಚೆಗೆ 1989ರಲ್ಲಿ ಜೀರ್ಣೋದ್ದಾರಗೊಂಡಿದೆ. ಈ ಬಸದಿಯ ಇತಿಹಾಸದ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಬಸದಿಯಲ್ಲಿ ಮೇಗಿನ ನೆಲೆ ಇದೆ. ಬಸದಿಯಲ್ಲಿ ಯಾರೂ ಚಾತುರ್ಮಾಸ ನಡೆಸಿಲ್ಲ.
ದೈವ
ಬದಲಾಯಿಸಿಇಲ್ಲಿ ಶ್ರೀ ಚಂದ್ರಪ್ರಭ ತೀಥರ್ಂಕರರ ಪೂಜೆ ನಡೆಯುತ್ತದೆ. ಇಲ್ಲಿ ಬೇರೆ ಕಂಚಿನ ಹಾಗೂ ಶಿಲೆಯ ಮೂರ್ತಿಗಳಿವೆ. ಪದ್ಮಾವತೀ ಅಮ್ಮನವರ ಶಿಲೆಯ ಮೂರ್ತಿ ಇದೆ. ಬ್ರಹ್ಮದೇವರ ಶಿಲೆಯ ಮೂರ್ತಿ ಇದೆ.ಗಂಧಕುಟಿಯ ಬಳಿಯಲ್ಲಿ ಗಣಧರ ಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳು ಇವೆ. ಇದಕ್ಕೆ ಯಾವಾಗಲೂ ಪೂಜೆ ನಡೆಯುತ್ತದೆ,
ಮೂಲನಾಯಕ ಶ್ರೀ ಪಾಶ್ರ್ವನಾಥ ಸ್ವಾಮಿ
ಬದಲಾಯಿಸಿಮೂಲನಾಯಕ ಶ್ರೀ ಪಾಶ್ರ್ವನಾಥ ಸ್ವಾಮಿಯ ಮೂರ್ತಿ ಶಿಲೆಯಾಗಿದ್ದು. 18 ಇಂಚು ಎತ್ತರವಿದೆ. ಖಡ್ಗಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಳಿಯಿದೆ. ದಿನವೂ ಮೂಲಸ್ವಾಮಿಗೆ ಕ್ಷೀರಾಭಿಷೇಕ, ಜಲಾಭಿಷೇಕ ಹಾಗೂ ಪಂಚಾಮೃತ ಅಭಿಷೇಕಗಳು ನಡೆಯುತ್ತವೆ.
ಪದ್ಮಾವತೀ ಅಮ್ಮನವರು
ಬದಲಾಯಿಸಿಪದ್ಮಾವತೀ ಮಾತೆಯ ಮೂರ್ತಿಯಿದ್ದು, ಪೂಜೆ ನಡೆಯುತ್ತದೆ. ಈ ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖಮಾಡಿಕೊಂಡಿದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇಲ್ಲ. ಈ ಬಸದಿಯಲ್ಲಿ ಹೊಂಬುಚದಂತೆ ಅಮ್ಮನವರ ಎದುರು ಹೂ ಹಾಕಿ ನೋಡುವ ಕ್ರಮ ಇದೆ.
ವಿಶೇಷತೆಗಳು
ಬದಲಾಯಿಸಿಶ್ರೀ ಪಾಶ್ರ್ವನಾಥ ಸ್ವಾಮಿಗೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ವಜ್ರಲೇಪನ ಮಾಡಲಾಗಿಲ್ಲ.ಇಲ್ಲಿಯ ಬ್ರಹ್ಮದೇವರಿಗೆ ಹಾಗೂ ಪದ್ಮಾವತೀ ಅಮ್ಮನವರಿಗೆ ವಿಶೇಷ ಹರಕೆಗಳನ್ನು ಹೇಳಿ ಪೂಜೆಗಳು ನಡೆಯುತ್ತವೆ. ಪರಿಣಾಮವಾಗಿ ಇಷ್ಟಾರ್ಥಗಳು ಈಡೇರುತ್ತವೆ. ಬಸದಿಯಲ್ಲಿ ಒಂದು ದಿನದಲ್ಲಿ ಒಂದು ಹೊತ್ತು ಪೂಜೆ ನಡೆಯುತ್ತದೆ. ಬಸದಿಯಲ್ಲಿ ವಾರ್ಷಿಕೋತ್ಸವ, ಪರ್ವದಿನಗಳು ಹಾಗೂ ಇತರ ಆಚರಣೆಗಳು ನಡೆಯುತ್ತವೆ.
ಪ್ರಾಂಗಣ
ಬದಲಾಯಿಸಿಬಸದಿಯ ಎದುರು ಮಾನಸ್ಥಂಭವಿಲ್ಲ. ಅದರ ಬದಲಿಗೆ ಕನ್ನಡಿಕಲ್ಲು ಎಂಬ ಕಟ್ಟಡವಿದೆ. ಅದು ಮೂರು ಭಾಗ ತೆರೆದಿದ್ದು, ಒಂದು ಭಾಗದಲ್ಲಿ ಶಿಲಾಶಾಸನವಿದೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡಬಲ ಬದಿಗಳಲ್ಲಿರುವ ಗೋಪುರವನ್ನು ಶ್ರಾವಕ ಬಂಧುಗಳಿಗೆ ಆಸೀನರಾಗಲು ಉಪಯೋಗಿಸುತ್ತಾರೆ. ಹಿಂದೆ ಇಲ್ಲಿ ಯಾವ ಮುನಿಗಳೂ ಇರಲಿಲ್ಲ, ಆದರೆ ಗೋಪರಕ್ಕೆ ತಾಗಿಕೊಂಡು ಮುನಿವಾಸ ಅಥವಾ ಮುನ್ಯಾಸೋ ಎಂಬ ಕೋಣೆ ಇದೆ. ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡಯ ಮೇಲೆ ದ್ವಾರಪಾಲಕರ ಚಿತ್ರಗಳಿವೆ. ಎಡಭಾಗದಲ್ಲಿ ಸಮ್ಮೇದ ಶಿಖರ್ಜಿಗಳು ಹಾಗೂ ಬಲಭಾಗದಲ್ಲಿ ವಿಶ್ವನಾಥ ತೀಥರ್ಂಕರರ ಸಮವಸರಣದ ಚಿತ್ರಗಳಿವೆ. ಪ್ರಾರ್ಥನಾ ಮಂಟಪದಲ್ಲಿ ಎರಡು ಕಂಬಗಳಿವೆ. ಅಲ್ಲಿ ಜಯಘಂಟೆಗಳನ್ನು ತೂಗುಹಾಕಲಾಗಿದೆ. ಅಲ್ಲಿಂದ ಮುಂದುವರಿದು ತೀಥರ್ಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ಘಂಟಾಮಂಟಪ ಹಾಗೂ ಮುಂದೆ ಸಿಗುವ ಮಂಟಪವನ್ನು ತೀಥರ್ಂಕರ ಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯು ಈ ತೀಥರ್ಂಕರ ಮಂಟಪದಲ್ಲಿ ಇದೆ. ಅದರ ಮುಂದೆ ಇರುವ ಮಂಟಪವನ್ನು ಗರ್ಭಗುಡಿಯೆಂದು ಕರೆಯುತ್ತಾರೆ. ಬಸದಿಯ ಅಂಗಳದ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಇದೇ ಅಂಗಳದಲ್ಲಿ ಬೇರೆ ಶಿಲಾಸನ ಇದೆ. ದಶದಿಕ್ಪಾಲಕರ ಕಲ್ಲು ಇದೆ. ಇದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದೆ. ಅದು ಜೀರ್ಣಾವಸ್ಥೆಯಲ್ಲಿದೆ. ಅದನ್ನು ಮುರಕಲ್ಲುಗಳಿಂದ ನಿರ್ಮಿಸಲಾಗಿತ್ತು.
ಉಲ್ಲೇಖಗಳು
ಬದಲಾಯಿಸಿ