ಪಾರ್ಶ್ವನಾಥ ಸ್ವಾಮಿ ಬಸದಿ ಪಡಂಗಡಿ
ಪಾರ್ಶ್ವನಾಥ ಸ್ವಾಮಿ ಬಸದಿ ಪಡಂಗಡಿ
ಪರಿಚಯ
ಬದಲಾಯಿಸಿಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯು ೧೦೦ ವರ್ಷದ ಮೊದಲು ನಿರ್ಮಾಣಗೊಂಡ ಬಸದಿಯಾಗಿದೆ. ಆಗ ಮಣ್ಣಿನ ೧೮ ಇಂಚು ದಪ್ಪದ ಗೋಡೆ ಇತ್ತು. ಮತ್ತು ಮುಳಿ ಹುಲ್ಲಿನ ಮಾಡು ಇತ್ತು. ಈ ಬಸದಿಯಲ್ಲಿ ಪೂರ್ಣಗೊಳ್ಳುವ ಮೂಲನಾಯಕ ೨೩ನೇ ತೀರ್ಥಾಂಕರರಾದ ಭಗವಾನ್ ಪಾರ್ಶ್ವನಾಥ ಸ್ವಾಮಿ. ಈ ಮೂರ್ತಿಯು ಭಮಗಿಯಲ್ಲಿದೆ. ಮೂರ್ತಿ ಬಹಳ ಸುಂದರವಾಗಿದ್ದು, ಬೃಹತ್ತಾದ ಪದ್ಮಪೀಠದ ಮೇಲೆ ಪ್ರತಿಷ್ಠಾಪಿತವಾಗಿದೆ.
ಹಿನ್ನಲೆ
ಬದಲಾಯಿಸಿಬಸದಿಯು ಶಿತಿಲಾವಸ್ಥೆಯಲ್ಲಿದ್ದುದನ್ನು ಕಂಡು ಪಡಂಗಡಿ ಈ ಬಸದಿಯ ಸ್ಥಾಪಕ ಮನೆತನದವರಾದ ಶ್ರೀ ಶಾಂತಿನಾಥ ಶೇಟ್ಟರು ೧೯೩೦ ನೇ ಇಸವಿಯಲ್ಲಿ ಜೀರ್ನೋದ್ದಾರ ಮಾಡಲು ಪ್ರಯತ್ನಿಸಿದರು. ಗರ್ಭಗೃಹದ ನಿರ್ಮಾಣಕ್ಕೆ ಬೇಕಾದ ಮರದ ಪರಿಕರಗಳನ್ನೂ, ಶಿಲೆಕಲ್ಲುಗಳನ್ನೂ ಜನರೇ ನೀಡಿ ಸಹಕರಿಸಿದರು. ಆದರೆ ಅವರ ಪತ್ನಿಯ ಅನಾರೋಗ್ಯದಿಂದ ಜೀರ್ನೋದ್ದಾರವನ್ನು ಮಾಡಲು ಆಗಲಿಲ್ಲ. ೧೯೪೩ರಲ್ಲಿ ಪುನಃ ಎಷ್ಟೇ ಕಷ್ಟವಾದರೂ ಜೀರ್ಣೋದ್ದಾರವನ್ನು ಮಾಡಲೇ ಬೇಕೆನ್ನುವ ಮನಸ್ಸು ಮಾಡಿ ಮೂಡಬಿದ್ರೆಯ ಮಠಾದೀಶರಾದ ಶ್ರೀ ಚಾರುಕೀರ್ತಿ ಪಂಡಿತಾಚರ‍್ಯರನ್ನು ಬರಮಾಡಿಕೊಂಡು ಅವರ ಆಶಿರ್ವಾದದಿಂದ ಈ ಬಸದಿಯಲ್ಲಿ ಪೂಜೆಮಾಡುತ್ತಿದ್ದ ಬ್ರಹ್ಮಯ್ಯ ಇಂದ್ರರು ಹಾಗು ಅವರ ಮಗ ವಿಷ್ಣುಸೇನರು ಎರ್ಮಾಳ ಬಸದಿಯ ಜೋಯಿಸರ ಮೂಲಕ ಶ್ಯಾಸ್ತೋಕ್ತರ ರೀತಿಯಲ್ಲಿ ದೇವರನ್ನು ಬಸದಿಯಿಂದ ಹೊರತೆಗೆದು ಬಸದಿಯ ಈಶಾನ್ಯ ಮೂಲೆಯಿಂದ ಗೋಪುರದ ಕಾರ್ಯವನ್ನು ಆರಂಭಿಸಲಾಯಿತು. ಅದು ಸುಬ್ರಹ್ಮಣ್ಯ ಷಷ್ಠಿಯ ದಿವಸ. ಈ ಬಸದಿಯ ಕೆಲಸವು ಶಿಲಾನ್ಯಾಸ ಮಾಡಿ ಏಳು ತಿಂಗಲಲ್ಲಿ ಪೂರ್ಣಗೊಂಡು ಬಸದಿಯ ಜೀಣೋದ್ದಾರವಾಯಿತು. ಈ ಬಸದಿಯಲ್ಲಿ ನೋಂಪಿ ಉದ್ಯಾಪಣೆ ಮಾಡಿದ ಮೂರ್ತಿಗಳು ಇವೆ. ಅವುಗಳೆಂದರೆ ವೃಷಭನಾಥ ಮತ್ತು ಅನಂತನಾಥ ತೀರ್ಥಾಂಕರರ ಮೂರ್ತಿಗಳು. ಇದರಲ್ಲಿ ಅನಂತನಾಥ ಇದ್ದವು. ಅದರ ಕುರುಹುಗಳನ್ನು ಈ ಬಸದಿಯ ಸಮೀಪದ ಕಾಡಿನಲ್ಲಿ ಇಂದಿಗೂ ಕಾಣಬಹುದು. ಪ್ರಾಯಶಃ ಅವರ ಆಳ್ವಿಕೆಯ ಕಾಲದಲ್ಲಿ ಈ ಬಸದಿಯು ನಿರ್ಮಾಣಗೊಂಡು ಅವರಿಂದಲೇ ನಡೆಸಲ್ಪಡುತ್ತಿದ್ದು, ಅವರು ಪತನವಾದ ಸಮಯದಿಂದ ಇದೂ ಕೂಡ ಹಾಳು ಬೀಳತೊಡಗಿರಬೇಕು.[೧]
ಸ್ಥಳ
ಬದಲಾಯಿಸಿಈ ಪಾರ್ಶ್ವನಾಥ ಸ್ವಾಮಿ ಬಸದಿಯು ಬೆಳ್ತಂಗಡಿ ಪೇಟೆಯಿಂದ ೮ ಕಿ.ಮೀ ದೂರದಲ್ಲಿರುವ ಪಡಂಗಡಿ ಎಂಬ ಗ್ರಾನದಲ್ಲಿದ್ದು, ಈ ಗ್ರಾಮ ಕೇಂದ್ರದಿಂದ ಅರ್ಧ ಕಿ.ಮೀ ದೂರದಲ್ಲಿದೆ. ಅಲ್ಲಿಗೆ ಹೋಗಲು ಸಾರ್ವಜನಿಕ ವಾಹನಗಳ ವ್ಯವಸ್ಥೆ ಇದೆ. ಈ ಬಸದಿಯು ಬೆಳ್ತಂಗಡಿ ತಾಲೂಕು ಕೇಂದ್ರದಿಂದ ೪೮ಕಿ.ಮೀ ದೂರದಲ್ಲಿರುವ ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಾಲಯದಿಂದ ಅರ್ಧ ಕಿ.ಮೀ ದೂರದಲ್ಲಿ ಶ್ರಿ ಸೂರಜ್ ನೆಲ್ಲಿತ್ತಾಯ ಎಂಬವರ ಅಡಿಕೆ ತೋಡದಲ್ಲಿದೆ.
ಶಿಲಾ ವಿನ್ಯಾಸ
ಬದಲಾಯಿಸಿಇಲ್ಲಿನ ಮೂರ್ತಿಗೆ ಅಷ್ಟಮಹಾಪ್ರಾತಿಹಾರ್ಯಗಳಾದ ಚಾಮರ, ಮುಕೋಡೆ, ಪುಷ್ಪವೃಷ್ಠಿ, ದಿವ್ಯ ದ್ವನಿ ಇತ್ಯಾದಿ ಯಾವುದನ್ನೂ ತೋರಿಸಲಾಗಿಲ್ಲ. ಈ ತೀರ್ಥಾಂಕರರ ಬದಿಗಳಲ್ಲಿ ಪ್ರಭಾವಳಿಯಲ್ಲಿ ೨೪ ತೀರ್ಥಾಂಕರರ ಬಿಂಬಗಳಿವೆ. ಪಂಚಲೋಹದ ದ್ವಾದಶಾಮಗ, ಶ್ರುತ, ವೃಷಭಾದಿ ಅನಂತನಾಥ ಸ್ವಾಮಿಯರ ಕರಿಶಿಲಾಬಿಂಬ, ಪಂಚ ಪಾರ್ಶ್ವನಾಥ ಬಿಂಬ, ಸರ್ನಾಹ್ಣ ಯಕ್ಷ, ಉತ್ಸವ ಮೂರ್ತಿ ಮತ್ತು ಪದ್ಮಾವತಿ ದೇವಿಯ ಮೂರ್ತಿ ಇದೆ. ಧರಣೇಂದ್ರ, ಪದ್ಮಾವತಿಯರ ಬಿಂಬಗಳನ್ನು ನೆಲೆಯಿಂದ ಮಾಡಲಾಗಿದೆ. ಈ ತೀರ್ಥಾಂಕರ ಮೂರ್ತಿಯ ಕೆಳಗೆ ಸರ್ಪಲಾಂಛನವಿದೆ.
ಆಚರಣೆ
ಬದಲಾಯಿಸಿಶ್ರೀ ಪಾರ್ಶ್ವನಾಥ ಸ್ವಾಮಿಗೆ ಜಲ, ಗಂಧ, ಅಕ್ಷತೆ, ಪುಷ್ಟ, ಚರು, ದೀಪ, ಧೂಪಗಳಿಂದ ಅರ್ಘ್ಯ ಮಾಡಿ ಶಾಂತಿಧಾರೆಯನ್ನು ಮಾಡಿ ಪುಷ್ಪಾಂಜಲಿಯನ್ನು ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಬಳಿಕ ಶಾಮತಿಧಾರೆಯನ್ನು ಎಳೆದು ಪುನಃ ಪುಷ್ಪಾಂಜಲಿ ಅರ್ಪಿಸುತ್ತಾರೆ. ಈ ಹಿಂದೆ ಅಭಿಷೇಕ ಮಾಡುವಾಗ ಜಲ, ಕ್ಷೀರ, ಎಳನೀರು, ಗಂಧ ಮುಂತಾದುವುಗಳಿAದ ಅಭಿಷೇಕ ಮಾಡುತ್ತಿದ್ದರಂತೆ. ಪ್ರಸ್ತುತ ಬಸದಿಯಲ್ಲಿ ಶ್ರೀ ಮಲ್ಲಿನಾತ ಎಂಬ ಇಂದ್ರರು ಇರುತ್ತಾರೆ. ಹಿಂದೆ ಈ ಬಸದಿಯಲ್ಲಿ ದಿನಕ್ಕೆ ಮೂರು ಬಾರಿ ಅಭಿಷೇಕ, ಪೂಜೆ ನಡೆಯುತ್ತಿತ್ತು. ಕರ್ನಾಟಕ ಭೂ ಸುಧಾರಣೆಯ ನಂತರ ದಿವಸಕ್ಕೆ ಒಮ್ಮೆ ಪೂಜೆ ನಡೆಯುತ್ತದೆ ಹಾಗೂ ಶುಕ್ರವಾರ ಮತ್ತು ಆದಿತ್ಯವಾರ ಬೆಳಿಗ್ಗೆ ೯.೩೦ಕ್ಕೆ ಪೂಜೆ ನಡೆಯುತ್ತದೆ. ಆದರೆ ಕ್ರಿ.ಶ. ೧೮೨೮ ರಲ್ಲಿ ತುಳು ನಾಡಿನ ಎಲ್ಲಾ ಬಸದಿಗಳ ಕುರಿತು ಹೇಳುವಾಗ ಚಂದಯ್ಯ ಉಪಾಧ್ಯಾಯ ಎಂಬ ಕವಿಯು ತನ್ನ ‘ಜೈನಾಚಾರ’ ಎಂಬ ಸಾಂಗತ್ಯ ಗ್ರಂಥದ ೨೬ ನೇ ಸಂದಿಯಲ್ಲಿ "ಬೈಪಾಡಿ ಶಾಂತೀಶ ಬಲ್ಲನಾಡಾದೀಶ ದೆಶಿಲ ಚೆಲೆತ್ತ ಚಮದ್ರ ಜೆನೇಂದ್ರನು ಶೀರಾಡಿ” ಹೇಳಿರುವುದರಿಂದ ದೇಶಿಲ ಎಂದು ಕರೆಯಲ್ಪಡುತ್ತಿದ್ದ ಶಿಶಿಲದ ಈ ಜಿನಾಲಯದಲ್ಲಿ ಚಂದ್ರನಾಥ ತೀರ್ಥಾಂಕರನೇ ಪೂಜಿಸಲ್ಪಡುತಿದ್ದಿರಬೇಕು ಎಂದು ಹೇಳಬಹುದು.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. p. ೧೮೫-೧೮೭.