ಪಾರ್ಶ್ವನಾಥ ಸ್ವಾಮಿ ಬಸದಿ, ವೇಣೂರು

ಇತಿಹಾಸ ಬದಲಾಯಿಸಿ

ಶ್ರೀ ಪಾರ್ಶ್ವನಾಥ ಸ್ವಾಮಿಯ ಈ ಬಸದಿಯು ಸುಮಾರು ಒಂದು ಸಾವಿರ ವರ್ಷದ ಹಿಂದಿನದ್ದಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ಯಾವುದೇ ರೀತಿಯ ಪುರಾವೆಗಳಿಲ್ಲ. ಅಂದರೆ ಇಲ್ಲಿಯ ಶ್ರೀ ಬಾಹುಬಲಿಗಿಂತ ೬೦೦ ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂಬುದು ನಂಬಿಕೆ. ಈ ಪಾರ್ಶ್ವನಾಥ ಬಸದಿಯ ಎದುರಿನ ಪ್ರವೇಶ ಗೋಪುರದ ಎಡಬಲದಲ್ಲಿ ಇಬ್ಬರು ದ್ವಾರಪಾಲಕರ ಚಿತ್ರವಿದೆ. ಇವು ಮನುಷ್ಯನ ರೂಪದಲ್ಲಿವೆ. ನಂತರ ಬರುವುದೇ ಪ್ರವೇಶಗೋಪುರ.

  • ಪ್ರವೇಶ ಗೋಪುರ: ಇದರ ಎಡಬದಿಯಲ್ಲಿ ಕೋಣೆಯಿದೆ. ಮೊದಲು ಇದನ್ನು ದಿಗಂಬರ ಮುನಿಗಳು ವಿಶ್ರಾಂತಿಗಾಗಿ ಬಳಸುತ್ತಿದ್ದರು. ಇದನ್ನು ಮುನಿವಾಸ ಎಂದು ಕರೆಯಬಹುದು. ಪ್ರವೇಶಗೋಪುರದ ಮೇಲ್ಭಾಗ ಮರದ ಛಾವಣಿಯಿಂದ ಮಾಡಲ್ಪಟ್ಟಿದೆ.
  • ಘಂಟಾಮಂಟಪ: ಪ್ರವೇಶದ್ವಾರದಿಂದ ಸುಮಾರು ೯ ಅಡಿ ದೂರದಲ್ಲಿ ಬಸದಿಯ ಮೊದಲಿಗೆ ಘಂಟಾಮಂಟಪವಿದೆ. ಇದರ ಎರಡೂ ಬದಿಯಲ್ಲಿ ೨ ಗಂಟೆಗಳಿದ್ದು ಪೂಜೆಯ ವೇಳೆಯಲ್ಲಿ ನೈವೇದ್ಯಗಳು ಅಶುದ್ಧವಾಗದಂತೆ, ಭೂತೆ ಪ್ರೇತಗಳು ದೂರವಾಗುವಂತೆ ಹಾಗೂ ಜನರನ್ನು ಕರೆದೊಯ್ಯುವಂತೆ ಮಾಡಲು ಈ ಘಂಟೆಗಳನ್ನು ಬಾರಿಸುತ್ತಿದ್ದರು. ೫ ಮೆಟ್ಟಿಲುಗಳಿದ್ದು ಈ ಮೆಟ್ಟಿಲಿನ ಎಡಬಲದಲ್ಲಿ ನೆಗಳೆ ರೂಪದ ಆಕೃತಿಯ ಕಲ್ಲಿನ ಕೆತ್ತನೆಯಿದೆ. ನೆಗಳೆ ಒಂದು ಕಾಲ್ಪನಿಕ ಪ್ರಾಣಿ.
  • ಘಂಟಾಗೋಪುರ: ಇದರ ಎಡಬದಿಯಲ್ಲಿ ದ್ವಾರಪಾಲಕರ ಚಿತ್ರವಿದೆ. ಇವರು ದೇವತೆಗಳಂತೆ ಆಭರಣಗಳನ್ನು ಧರಿಸಿ ‘ತ್ರಿಭಂಗಿಯಲ್ಲಿ ನಿಂತಿದ್ದಾರೆ. ಅವರಿಗೆ ೪ ಕೈಗಳಿದ್ದು ಕೈಯಲ್ಲಿ ಗದೆ ಇದೆ ಮತ್ತು ಆ ಗದೆಯನ್ನು ಹಾವು ಸುತ್ತಿಕೊಂಡಿದೆ.ಶಾಸನ: “೭-೮-೧೯೩೮ ರಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಸೇವೆಗೆ ಪಾಪುದಡ್ಕ ಮರುದೇವಿಯ ಧರ್ಮಸೇವೆ” ಎಂದು ಬರೆದಿರುವ ಆಧುನಿಕ ಶಾಸನವೊಂದು ಇಲ್ಲಿದೆ. ಇದನ್ನು ಬಸದಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಬರೆಸಲಾಗಿತ್ತಂತೆ.
  • ಕಲಶಮಂಟಪ: ಕಲಶಮಂಟಪವು ೪ ಪೀಠಗಳಿಂದ ರಚಿತವಾಗಿದೆ. ಪೀಠದ ಸುತ್ತಳತೆ ೨.೫+೪ ಅಂದರೆ ಒಟ್ಟು ೧೩ ಅಡಿಗಳು. ಪ್ರತಿಯೊಂದು ಕಂಬವೂ ೧೬ ಮುಖಪಟ್ಟಿಯಿಂದ ನಿರ್ಮಿಸಲ್ಟಿದೆ. ಪ್ರತಿಯೊಂದು ಕಂಬದಲ್ಲಿ ನಾನಾ ರೀತಿಯ ಆಕೃತಿಗಳನ್ನು ಚಿತ್ರಿಸಲಾಗಿದೆ. ನವಿಲಿನ ಗರಿಗಳು, ಕುದುರೆಯ ಮುಖ, ಯಕ್ಷಮ ಮುಖ, ಹಾವಿನ ಮುಖ, ರಂಗೋಲಿ ಮುಂತಾದ ಸಂದರವಾದ ಕೆತ್ತನೆಯಿಂದ ಕೂಡಿದ ಕಲಶ ಮಂಟಪದಲ್ಲಿ ವಿಶೇಷ ಪೂಜೆಗಳ ಸಂಧರ್ಬದಲ್ಲಿ ಬಿಳಿ ಬಟ್ಟೆಯನ್ನು ಛಾವಣಿಯ ಮೇಲೆ ಹಾಕಿ ಅಲಂಕರಿಸುತ್ತಾರೆ. ಕಲಶ ಇಡುವಾಗ ಇಂತಿಷ್ಟೇ ಸ್ವಸ್ತಿಕ ಇಡಬೇಕು ಎನ್ನುವ ನಿಯಮವಿದೆಯಂತೆ ಮುಂದಕ್ಕೆ ಬರುವುದೇ ಗರ್ಬಗುಡಿದ್ವಾರ. ಇದನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಇದರ ಮೇಲ್ಭಾಗದಲ್ಲಿ ಕೆತ್ತನೆಯಿಂದ ಕೂಡಿದ ಜಿನಬಿಂಬವಿದೆ. ಅದರ ಕೆಳಗೆ ಎರಡು ಬದಿಗಳಲ್ಲಿ ದ್ವಾರಪಾಲಕರ ಮೂರ್ತಿಯನ್ನು ಕೆತ್ತಲಾಗಿದೆ. ಅದರ ಕೆಳಗೆ ದ್ವಾರದ ತಳದಂಡೆಯಲ್ಲಿ ಉಗ್ರನರಸಿಂಹನ ಮೂರ್ತಿ ಕೆತ್ತಲಾಗಿದೆ. ಇದು ಆಕ್ರಮಣಕಾರರನ್ನು ಪ್ರವೇಶಿಸಬಿಡದೆ ಹಿಮ್ಮೆಟ್ಟಿಸುವಂತೆ ಕಾಣುತ್ತದೆ ಎಂದು ಹೇಳುತ್ತಾರೆ. ನಂತರ ಬರುವುದೇ ಪೂಜಾ ಮಂಟಪ. [೧]

ಆವರಣ ಬದಲಾಯಿಸಿ

  • ಪೂಜಾ ಮಂಟಪ: ಪೂಜಾ ಮಂಟಪದಲ್ಲಿ ಗಂಧಕುಟಿಯಿದೆ. ಇದರಲ್ಲಿ ೨೪ ತೀರ್ಥಂಕರರ ಮೂರ್ತಿಗಳಿವೆ. ಇವುಗಳ ಲಾಂಛನವನ್ನು ನೋಡಿ ಯಾವ ತೀರ್ಥಂಕರರು ಎಂದು ಗುರುತಿಸಬಹುದು. ಇದರ ಕೆಳಗೆ ಸರ್ವಾಹ್ಣ ಯಕ್ಷನ ಉತ್ಸವ ಮೂರ್ತಿ ಇದೆ. ಇವನ ಕಾರ್ಯ ಜನರನ್ನು ಒಟ್ಟುಗೂಡಿಸುವುದು ಮತ್ತು ಎಲ್ಲಾ ದೇವತೆಗಳನ್ನು ಸ್ವಾಗತಿಸುವುದು. ಇವನು ಧರ್ಮ ಪ್ರಚಾರಕನಾಗಿದ್ದಾನೆ. ಪಾರ್ಶ್ವನಾಥ ಸ್ವಾಮಿಯ ಬಲಬದಿಯಲ್ಲಿ ಪದ್ಮಾವತಿಯಮ್ಮನ ಗುಡಿಯಿದೆ. ಅದು ಪ್ರತಿಯೊಂದು ಬಸದಿಯಲ್ಲಿ ಇರವಂತಾಗಿದೆ. ಇಲ್ಲಿ ಇದಕ್ಕೆ ವಿಶೇಷ ಪೂಜೆ ನಡೆಯುತ್ತದೆ.
  • ಗರ್ಭಗುಡಿ: ಈ ಗರ್ಭಗುಡಿಯ ಎದುರಿನಲ್ಲಿ ೫ ಮುಖದ್ವಾರಗಳಿವೆ. ಈ ಗರ್ಭಗುಡುಯಲ್ಲಿರುವ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಸರ್ಪಲಾಂಛನ ಇದೆ. ಮೂರ್ತಿಯ ಪಾದದ ಬಳಿ ದರ್ಪಣವಿದೆ. ಇದು ಹಿತ್ತಾಳೆಯದ್ದಾಗಿದೆ.ಧರಣೇಂದ್ರ ಯಕ್ಷ: ಪಾರ್ಶ್ವನಾಥ ತಪಸ್ಸು ಮಾಡುತ್ತಿದ್ದಾಗ ತಪಸ್ಸನ್ನು ಬಂಗಗೊಳಿಸಲು ಕಮಟವೆಂಬ ಮಾಯವಿಯು ಬೆಂಕಿಯ ಮಳೆಯನ್ನು ಸುರಿಸುತ್ತಾನೆ. ಆ ಸಂದರ್ಭದಲ್ಲಿ ಪಾತಾಳದಲ್ಲಿದ್ದ ಧರಣೇಂದ್ರ ಯಕ್ಷನು ಪಾರ್ಶ್ವನಾಥ ಸ್ವಾಮಿಯ ರಕ್ಷಣೆಗೋಸ್ಕರ ಆತನ ತಲೆಯ ಮೇಲೆ ಒಂಬತ್ತು ಎಡೆಯ ಹಾವಿನ ರೂಪದಲ್ಲಿ ನಿಂತಿದ್ದನು.

ಪಾರ್ಶ್ವನಾಥ ಬಸದಿಯ ಹಿನ್ನಲೆ ಬದಲಾಯಿಸಿ

ಇದನ್ನೇ ಈ ಮೂರ್ತಿಯಲ್ಲಿ ತೋರಿಸಲಾಗಿದೆ. ಶ್ರೀ ಪಾರ್ಶ್ವನಾಥ ಬಸದಿಯಲ್ಲಿ ದಿನಕ್ಕೆ ಮೂರು ಪೂಜೆಗಳು ನಡೆಯುತ್ತಿದ್ದು ಬೆಳಗ್ಗೆ ಮತ್ತು ಸಂಜೆ ಮಂಗಳಾರತಿ ಮತ್ತು ಮಧ್ಯಾನ ನೈವೇದ್ಯ ಸಹಿತ ಪೂಜೆ ನಡೆಯುತ್ತದೆ. ಈ ಬಸದಿಯ ಮುಂಭಾಗದಲ್ಲಿ ಮಾನಸ್ತಂಭ ಇಲ್ಲ. ಅದರ ಸಮೀಪದಲ್ಲಿ ಬಾಹುಬಲಿಯ ಬೆಟ್ಟದಲ್ಲಿ ಬ್ರಹ್ಮಸ್ತಂಭ ಶ್ರೀ ಪಾರ್ಶ್ವನಾಥ ಬಸದಿಯ ಉತ್ತರ ದಿಕ್ಕಿನಲ್ಲಿ ಬಾಃಉಬಲಿಯ ಬೆಟ್ಟವಿದೆ. ತೀರ್ಥಾಂಕರಿಗೆ ಮಾತ್ರ ಬಸದಿಯನ್ನು ಕಟ್ಟುತ್ತಾರೆ. ಆದರೆ ಬಾಹುಬಲಿಗೆ ತಪಸ್ಸಿಂದ ಮೋಕ್ಷ ಸಿಕ್ಕಿದ್ದರಿಂದ ಮತ್ತು ಸಮವಸರಣವನ್ನು ಏರ್ಪಡಿಸದೆ ಇದ್ದುದ್ದರಿಂದ ಅವರಿಗೆ ಬಸದಿ ಕಟ್ಟುವುದಿಲ್ಲ. ಇವರು ಒಂದು ವರ್ಷಕ್ಕಾಲ ತಪಸ್ಸು ಮಾಡಿದ್ದ ಪ್ರತೀಮಾ ಭಂಗಿಯಲ್ಲೇ ಈಸ್ವಾಮಿಯ್ನು ಆರಾಧಿಸುತ್ತಾರೆ. ಶ್ರೀ ಪಾರ್ಶ್ವನಾಥ ಬಸದಿಯು ೭೦ ಅಡಿ ಉದ್ದವಿದೆ ಮತ್ತು ೨೪೦ ಅಡಿ ಅಗಲವಿದೆ. ಪಂಜಾAಗವೂ ೩ ಅಂತಸ್ಥಿನಲ್ಲಿದೆ. ಇದರ ಸುತ್ತ ೧೬ ಕಂಬಗಳಿವೆ, ೧೦ ಬಲಿ ಕಲ್ಲುಗಳಿವೆ, ೨ ಮಹಡಿ ಇದೆ ಹಾಗೂ ೩ ಮುಗುಳಿಗಳಿವೆ. ಇವು ಹಿತ್ತಾಳೆಯದ್ದಾಗಿದೆ. ಬಸದಿಯ ಪೂರ್ವಭಿಮುಖವಾವಿ ಕ್ಷೇತ್ರಪಾಲ ಕಲ್ಲಿದೆ. ಕ್ಷೇತ್ರಪಾಲನ ಕೆಳಗೆ ಅರ್ಧಚಂದ್ರಾಕೃತಿಯ ಪೀಠವಿದೆ. ಇದರ ಎರಡೂ ಬದಿಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ನಾಗನ ಹೆಡೆಗಳಿವೆ. ಅದರ ಮಧ್ಯದಲ್ಲಿ ಪಂಚಾಭೂತಗಳೆನ್ನುವು ಗುಂಡು ಕಲ್ಲುಗಳಿವೆ. ಬಸದಿಯ ಉತ್ತರ ದಿಕ್ಕಿನಲ್ಲಿ ಬಲಿಪೀಠವಿದೆ. ಪಾರ್ಶ್ವನಾಥ ಸ್ವಾಮಿಯ ಅಭಿಷೇಕ ಸಂದರ್ಭದಲ್ಲಿ ಅಭಿಷೇಕದ ನೀರು ಹೊರ ಬರಲು ತೀರ್ಥಧ್ವಾರ ನಿರ್ಮಿಸಲಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೬೧.