ಪಾರ್ಶ್ವನಾಥ ಸ್ವಾಮಿ ಬಸದಿ, ವಳಾಲು, ಉಪ್ಪಿನಂಗಡಿ

ಸ್ಥಳ ಬದಲಾಯಿಸಿ

ವಳಾಲುಬಸದಿ ಎಂದೇ ಕರೆಯಲ್ಪಡುವ ಈ ಬಸದಿಯು ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ. ಇಲ್ಲಿ ಮೂಲ ನಾಯಕನಾಗಿ ಈ ಭಗವಾನ್ ಪಾರ್ಶ್ವನಾಥ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ಬಸದಿಯ ಪಕ್ಕದಲ್ಲೇ ನೇತ್ರಾವತಿ ನದಿ ಹರಿಯುತ್ತದೆ. ಉಪ್ಪಿನಂಗಡಿಯಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ೭ ಕಿಲೋ ಮೀಟರ್ ಮುಂದುವರೆದು ಪಡ್ಪು ಎಂಬಲ್ಲಿ ಎಡಕ್ಕೆ ತಿರುಗಿ ಮುನ್ನೂರು ಮೀಟರ್ ಹೋದರೆ ಈ ಬಸದಿಯನ್ನು ಸ್ಪರ್ಶಿಸಬಹುದು. ಬಯಲು ಗದ್ದೆಯ ಬದಿಯಲ್ಲಿ ಸಮತಟ್ಟಾದ ಜಾಗದಲ್ಲಿ ಈ ಬಸದಿ ನಿರ್ಮಾಣಗೊಂಡಿದೆ.

ಹಿನ್ನಲೆ ಬದಲಾಯಿಸಿ

ಈ ಬಸದಿಯು ಮೂಡುಬಿದರೆಯ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ಇದರ ಹತ್ತಿರದಲ್ಲಿರುವ ಮಾಣಿಕ್ಯ ರಾಜ ಮಡಿವಾಳರೇ ಇಂದ್ರರು ಇಲ್ಲದಿದ್ದರಿಂದ ಪೂಜೆ ನಡೆಸುತ್ತಾರೆ. ಬಸದಿಯನ್ನು ಈ ಮನೆಯ ಹಿರಿಯರು ಸುಮಾರು ೧೫೦ ವರ್ಷಗಳ ಹಿಂದೆ ಕಟ್ಟಿಸಿದ್ದರು.

ಶಿಲಾನ್ಯಾಸ ಬದಲಾಯಿಸಿ

ಕೆಳಗೆ ಗರ್ಭಗೃಹ ಬಳಿಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಇದ್ದು ಅದು ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಅಮ್ಮನವರ ಪಾದದ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಬಸದಿಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಗೋಪುರವಿದ್ದು ಅದು ಕೂಡ ಶಿಥಿಲಾವಸ್ಥೆಯಲ್ಲಿದೆ. ಬಸದಿ ಪ್ರವೇಶಿಸುವ ಅಂಗಳದಲ್ಲಿ ಒಂದು ಬಲಿಕಲ್ಲು ಇದೆ. ಪ್ರವೇಶ ದ್ವಾರದ ಎರಡೂ ಬದಿಗಳಲ್ಲಿ ದ್ವಾರಪಾಲಕರ ಸುಂದರವಾದ ವರ್ಣಚಿತ್ರಗಳಿವೆ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಮರದ ಕಂಬಗಳಿದ್ದು ಹತ್ತಿರದಲ್ಲೇ ಮಣಿ ಘಂಟೆ, ಜಾಗಟೆಗಳನ್ನು ತೂಗುಹಾಕಲಾಗಿದೆ. ಇಲ್ಲಿ ಪ್ರತ್ಯೇಕವಾಗಿ ತೀರ್ಥ ಮಂಟಪವಿದ್ದು ಅದರಲ್ಲಿ ಗಂಧಕುಟಿಯು ಇದೆ. ಇಲ್ಲಿ ಪ್ರತ್ಯೇಕವಾಗಿ ತೀರ್ಥಮಂಟಪವಿದ್ದು ಅದರ ಬಳಿಯಲ್ಲಿ ಶ್ರುತ, ಗಣಧರಪಾದದ ಮೂರ್ತಿಗಳಿದ್ದು ಇವುಗಳಿಗೆ ಸರಳ ಪೂಜೆ ನಡೆಯುತ್ತದೆ. ಬಸದಿಯ ಬಲ ಮೂಲೆಗಳಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಬಸದಿಯ ಸುತ್ತಲೂ ಮರ ಕಲ್ಲಿನಿಂದ ಕಟ್ಟಿದ ಪ್ರಕಾರ ಗೋಡೆ ಇದೆ.[೧]

ಉಲ್ಲೇಖ ಬದಲಾಯಿಸಿ

  1. ಶೆಣೈ, ಉಮಾನಾT ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ‌೨೪೨.