ಪಾರ್ಶ್ವನಾಥ ಸ್ವಾಮಿ ಬಸದಿ, ಕೂಡಿಬೈಲು
'''ಪಾರ್ಶ್ವನಾಥ ಸ್ವಾಮಿ ಬಸದಿ, ಕೂಡಿಬೈಲು'''
ಸ್ಥಳ
ಬದಲಾಯಿಸಿಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಚಿಲ್ಲಿ ಪಾದ ಎಂಬ ಸಣ್ಣ ಪೇಟೆಯ ಬಳಿ ಈ ಪಾರ್ಶ್ವನಾಥ ಸ್ವಾಮಿಯ ಕೂಡಿಬೈಲು ಬಸದಿ ಇದೆ . ಪಾಂತಬೈಲು ಬಸದಿಯಿಂದ ಇಲ್ಲಿಗೆ 2 ಕಿ.ಮೀ ದೂರ.
ನಿರ್ಮಾಣ
ಬದಲಾಯಿಸಿಅಜಿಲ ಮನೆತನದವರು ಕಟ್ಟಿಸಿದರು.
ಆಚರಣೆ
ಬದಲಾಯಿಸಿಶ್ರೀ ಅನಂತನಾಥ ಸ್ವಾಮಿ ಪೂಜಿಸಲ್ಪಡುತ್ತಿದ್ದಾರೆ. ಶ್ರೀ ಸ್ವಾಮಿಗೆ ದಿನವೂ ಕೇರಾಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿಗಳನ್ನು ನಡೆಸಲಾಗುತ್ತದೆ. ನವರಾತ್ರಿ ಮತ್ತು ದೀಪಾವಳಿ ಸಮಯದಲ್ಲಿ ವಿಶೇಷ ಸಮಯಗಳಲ್ಲಿ ಮಾಡಲಾಗುತ್ತದೆ . ಉಳಿದ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಹೀಗೆ ಎರಡು ಬಾರಿ ಪೂಜೆ ನಡೆಯುತ್ತದೆ. ಪರ್ವಗಳ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ನವರಾತ್ರಿಯ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಬಸದಿಯಲ್ಲಿ ಕಾರ್ತಿಕ ದೀಪೋತ್ಸವ ನಡೆಸಲಾಗುತ್ತದೆ . [೧]
ವಿಗ್ರಹ/ ಶಿಲಾ ವಿನ್ಯಾಸ
ಬದಲಾಯಿಸಿಗರ್ಭಗೃಹದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಜತೆಯಲ್ಲಿ ಪದ್ಮಾವತಿ ಅಮ್ಮನವರ ಮೂರ್ತಿಯೂ ಇದೆ. ಬಸದಿಯ ಪ್ರಾರ್ಥನಾ ಮಂಟಪಕ್ಕೆ ಮುಂದುವರೆಯುವಾಗ ಸಿಗುವ ದ್ವಾರದ ಎರಡೂ ಬದಿಗಳಲ್ಲಿ ದ್ವಾರಪಾಲಕರ ವರ್ಣ ಚಿತ್ರಗಳಿವೆ. ಗೋಡೆಗಳ ಮೇಲೆ ಸಂಮೇದ ಶಿಖರ್ಜಿ ಮತ್ತು ಗಿರ್ನಾರ್ ಕ್ಷೇತ್ರವನ್ನು ಪರಿಚಯಿಸುವ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ಜಯಗಂಟೆ ಮತ್ತು ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಇವುಗಳನ್ನು ದಾಟಿ ಮುಂದುವರೆದಾಗ ಸಿಗುವ ಮಂಟಪವೇ ತೀರ್ಥಂಕರ ಮಂಟಪ, ತೀರ್ಥಂಕರ ಮಂಟಪದ ಮುಂದಿನ ಮಂಟಪದಲ್ಲಿ ಗಂಧಕುಟ ಇದರ ಬಳಿಯಲ್ಲಿ ಶ್ರುತ, ಗಣಧರ ಪಾದ, ಬಹ ದೇವರು ಮುಂತಾದ ಮೂರ್ತಿಗಳಿವೆ. ಇಲ್ಲಿಯ ಇನ್ನೊಂದು ಪ್ರಮುಖ ಆಕರ್ಷಣೆ ಶ್ರೀ ಪದ್ಮಾವತಿ ದೇವಿಯ ಮೂರ್ತಿ, ದೇವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಅಮ್ಮನವರು ಉತ್ತರಕ್ಕೆ ಮುಖ ಮಾಡಿಕೊಂಡಿದ್ದು ತನ್ನ ಕಾಲ ಬಳಿಯಲ್ಲಿ ಕುಕ್ಕುಟ ಸರ್ಪವನ್ನು ಹೊಂದಿದ್ದಾರೆ. ಇಲ್ಲಿ ಪೂಜಿಸಲ್ಪಡುವ ಮೂಲಸ್ವಾಮಿ ಶ್ರೀ ಪಾರ್ಶ್ವನಾಥನ ಬಿಂಬವು ಶಿಲೆಯಿಂದ ಮಾಡಲ್ಪಟ್ಟಿದೆ. ಪರ್ಯಂಕಾಸ ಭಂಗಿಯಲ್ಲಿದೆ. ಸುತ್ತಲೂ ಪ್ರಭಾವಳಿಯನ್ನು ಹೊಂದಿದೆ. ಅಂಗಣದ ಬಲಬದಿಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದ್ದು ಅಲ್ಲಿ ಕೆಲವು ಮೂರ್ತಿಗಳು ತ್ರಿಶೂಲ ಹಾಗೂ ನಾಗರ ಕಲ್ಲುಗಳನ್ನು ಹೊಂದಿದೆ. ಗರ್ಭಗೃಹದ ಸುತ್ತಲೂ ಬಲಿಕಲ್ಲುಗಳು ಮತ್ತು ಅಷ್ಟದಿಕಾಲಕರ ಕಲ್ಲುಗಳು ಇದೆ. ಇವುಗಳಿಗೂ ಪೂಜೆಯನ್ನು ನಡೆಸಲಾಗುತ್ತದೆ. ಬಸದಿಯ ಸುತ್ತಲೂ ಮುರಕಲ್ಲಿನ ಪ್ರಾಕಾರ ಗೋಡೆಯನ್ನು ನಿರ್ಮಿಸಲಾಗಿದೆ. ಕಂಬದಂತಹ ಆಕೃತಿಗಳೂ ಅವುಗಳ ಮೇಲ್ಪಡೆ ಮಕರ ತೋರಣದ ಅಲಂಕಾರವೂ ಇದೆ . ಮಧ್ಯದಲ್ಲಿ ಮೇಲ್ಗಡೆ ಕೀರ್ತಿ ಮುಖವೂ ಇದೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರ ದರ್ಶನ (೧ ed.). ಉಜಿರೆ: ಮಂಜುಶ್ರೀ ಪಿಂಟರ್ಸ್. p. ೩೧೭-೩೧೮.