ಪಾದೇಕಲ್ಲು ವಿಷ್ಣು ಭಟ್ಟ


ಪಾದೇಕಲ್ಲು ವಿಷ್ಣು ಭಟ್ಟ ಇವರು ಕನ್ನಡ ತುಳು ಲೇಖಕರು, ತುಳು ನಿಘಂಟು ರಚನೆಯಲ್ಲಿ ಹಾಗೂ ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ

ಪಾದೇಕಲ್ಲು ವಿಷ್ಣು ಭಟ್ಟ
ಪಾದೇಕಲ್ಲು ವಿಷ್ಣು ಭಟ್ಟ
ಜನನಫೆಬ್ರುವರಿ, ೦೬ ೧೯೫೬
ಪಾದೇಕಲ್ಲು, ಕರೋಪಾಡಿಗ್ರಾಮ,ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ
ವೃತ್ತಿಉಪನ್ಯಾಸಕ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ , ಹಾಗೂ 21ನೆಯ ಶತಮಾನ
ಪ್ರಕಾರ/ಶೈಲಿಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯ, ಲೇಖನ, ವಿಮರ್ಶೆ, ತುಳು ಶಬ್ದಕೋಶ

ಪ್ರಭಾವಿತರು
  • ಸೇಡಿಯಾಪು ಕೃಷ್ಣ ಭಟ್ಟ

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಹುಟ್ಟಿದರು (ಫೆಬ್ರುವರಿ ೧೬ ೧೯೫೬) ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ-ಪ್ರೌಢಶಾಲಾ ವಿದ್ಯಾಭ್ಯಾಸಾನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದು (1976) ಮಂಗಳಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದ ಮೂಲಕ ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಗಳಿಸಿದರು (1978). ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು (1997). ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಈಗ ಅವರು ನಿವೃತ್ತರಾಗಿ ಉಡುಪಿಯ ಆತ್ರಾಡಿ ಎನ್ನುವ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಸಾಹಿತ್ಯ

ಬದಲಾಯಿಸಿ

ತುಳುನಿಘಂಟು ಯೋಜನೆಯ ಸಂಪಾದಕರು, ಇವರು ಖ್ಯಾತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರಿಗೆ ಲಿಪಿಕಾರರಾಗಿ ಸಹಾಯಕರಾಗಿದ್ದುದಲ್ಲದೆ ಅವರ ಹಲವು ಪುಸ್ತಕಗಳನ್ನು ಟಿಪ್ಪಣಿಗಳೊಂದಿಗೆ ಸಂಪಾದಿಸಿದ್ದಾರೆ. ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ

ಕೃತಿಗಳು

ಬದಲಾಯಿಸಿ

ಸ್ವಂತ ರಚನೆಗಳು

ಬದಲಾಯಿಸಿ
  1. ಸೇಡಿಯಾಪು - 1996
  2. ಸೇಡಿಯಾಪು ಕೃಷ್ಣ ಭಟ್ಟರು -1997
  3. ಪಂಡಿತವರೇಣ್ಯ - 2002
  4. ಶ್ರೀಭಾಗವತೊ - 2007
  5. ಪ್ರಸಂಗ ವಿಶ್ಲೇಷಣೆ - 2007
  6. ಏರ್ಯ ಲಕ್ಷ್ಮೀನಾರಾಯಣ ಆಳ್ವ
  7. ಶ್ರೀ ಕುಮಾರಿಲಭಟ್ಟರು - 2014
  8. ಬೆಳಗಿನ ನಲ್ನುಡಿ - 2016
  9. ಸಾಹಿತ್ಯಾಧ್ಯಯನ - 2016
  10. ಯಕ್ಷಗಾನಾಧ್ಯಾಯನ - 2016
  11. ಯಕ್ಷಗಾನ ಕಲಾತಪಸ್ವಿ ಮಾಂಬಾಡಿ ನಾರಾಯಣ ಭಾಗವತರು - 2016
  12. ಸ್ವಪ್ರಯತ್ನದ ಧೀಮಂತ ಲೇಖಕ ಅಂಬಾತನಯ ಮುದ್ರಾಡಿ - 2017
  13. ಹಳಗನ್ನಡ-ಹೊಸಗನ್ನಡಗಳ ಮಧ್ಯಮಣಿ ಕವಿ ಮುದ್ದಣ - 2017
  14. ಕನ್ನಡ ಸಾಹಿತ್ಯ ಪರಿಚಾರಕ ಪ್ರೊ. ಎಂ. ರಾಮಚಂದ್ರ - 2017
  15. ವೈಷ್ಣವಿದೇವೀಸಂದರ್ಶನ - 2018

ಸಂಪಾದಿತ ಕೃತಿಗಳು

ಬದಲಾಯಿಸಿ
  1. ವಿಚಾರ ಪ್ರಪಂಚ - 1992
  2. ಸ್ಕಂದ ವೈಭವ - 1993
  3. ಚಂದ್ರಖಂಡ (ಪರಿವರ್ಧಿತ ಮತ್ತು ಅನುಬಂಧಿತ) ಮತ್ತು ಕೆಲವು ಸಣ್ಣ ಕಾವ್ಯಗಳು - 1994
  4. ತುಳುವರಿವರು - 1997
  5. ಕೇಶಿರಾಜದರ್ಪಣ - 1999
  6. ಪುರಂದರದಾಸರ ಕೀರ್ತನೆಗಳು - 2001
  7. ಶಾರದಾರಾಧನಮ್ - 2003
  8. ಸಾವಿರದ ಗದ್ಯ - 2003
  9. ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗಳು - 2004
  10. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ -2004
  11. ಶ್ರೀರಾಮಾಶ್ವಮೇಧಂ - 2006
  12. ಸೇಡಿಯಾಪು ಛಂದಸ್ಸಂಪುಟ - 2006
  13. ಯಕ್ಷಗಾನ ಪ್ರಸಂಗ ಸಂಚಯ - 2006
  14. ಯಕ್ಷಗಾನ ಗ್ರಂಥಸೂಚಿ - 2006
  15. ಯಕ್ಷಗಾನ ಭಾಗವತ ಪ್ರಸಂಗಗಳು - 2006
  16. ಸುಕೃತಿ - 2006
  17. ತುಳುಛಂದೋವಿನ್ಯಾಸ - 2007
  18. ಶಬ್ದಾರ್ಥಶೋಧ - 2008
  19. ವೇದವೇದಾಂಗಪರಿವಾರ - 2010
  20. ಅನನ್ಯವ್ಯಕ್ತಿ - 2010
  21. ವಿದ್ವಜ್ಜೀವಿತ - 2011
  22. ಭಾನುಮತಿಯ ನೆತ್ತ - 2012
  23. ಭಾರತೀಯ ಸಂವೇದನೆ : ಸಂವಾದ - 2012
  24. ಮಹಾಜನಪದ - 2014
  25. ಪುರಾಣಲೋಕ - 2015
  26. ಯಕ್ಷಗಾನ ಪ್ರಸಂಗಸಂಪುಟ - 1- 2015
  27. ಯಕ್ಷಗಾನ ಶ್ರೀಕೃಷ್ಣದಿನಾಶ್ವಮೇಧ ಮತ್ತು ದ್ರೋಣಪರ್ವ - 2015
  28. ಯಕ್ಷಗಾನ ಪ್ರಸಂಗಸಂಪುಟ - 2- 2016

ಸಹಸಂಪಾದಿತ ಕೃತಿಗಳು

ಬದಲಾಯಿಸಿ
  1. ರಂಗವೈಖರಿ - 1981
  2. ಪೊನ್ನಕಂಠಿ - 1997
  3. ಏರ್ಯ - 1999
  4. ಮಂತ್ರಮಂಜರೀ - 2002
  5. ಶತಾಂಜಲಿ - 2002
  6. ಜ್ಯೋತಿಷಸÀಂವಾದ - 2003
  7. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಾವ್ಯ ಸಂಪುಟ - 2003
  8. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಾದಂಬರಿ ಸಂಪುಟ
  9. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಥಾಸಂಪುಟ - 2004
  10. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಗದ್ಯ ಸಂಪುಟ - 2004
  11. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ನಾಟಕ ಸಂಪುಟ - 2004
  12. ಯಕ್ಷಭೀಮನ ನೂರು ಹೆಜ್ಜೆಗಳು - 2004
  13. ಕಾಲಪುರುಷ - 2005
  14. ಹರಿದಾಸ ಕೀರ್ತನ - 2005
  15. ವಾಚಿಕ - 2009
  16. ಕನ್ನಡ ತುಳು ಶಬ್ದ ಪ್ರಯೋಗಕೋಶ - 2009
  17. ಸುಮನಸ - 2010
  18. ಜಗತ್‍ಸಾಹಿತ್ಯಪ್ರವೇಶಿಕೆ- 2016
  19. ಪುರೋಹಿತಸ್ಮರಣ (ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ, ಮೈಕೆ ಶಂಕರನಾರಾಯಣ ಭಟ್ಟ ಶತಮಾನ ಸಂಸ್ಮರಣಸಂಪುಟ) – 2018

ಅನುವಾದ ಕೃತಿಗಳು

ಬದಲಾಯಿಸಿ

ಸತೀ ಕಮಲೆ– 1997

ಪ್ರಶಸ್ತಿ/ಗೌರವಗಳು

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

  1. ಉಡುಪಿ ಶ್ರೀ ಶೀರೂರು ಮಠದಿಂದ ಶ್ರೀಕೃಷ್ಣನುಗ್ರಹ ಪ್ರಶಸ್ತಿ - 1996
  2. ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನದಲ್ಲಿ ಸಮ್ಮಾನ - 2011
  3. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್‍ಪ್ರಶಸ್ತಿ - 2014
  4. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಸೇಡಿಯಾಪು ಪ್ರಶಸ್ತಿ - 2015
  5. ಶೃಂಗೇರಿ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವರ್ಧಂತ್ಯುತ್ಸವ ವಿದ್ವತ್ ಸಮ್ಮಾನ - 2015
  6. ಉಡುಪಿ ಶ್ರೀ ಪೇಜಾವರ ಮಠದಿಂದ ರಾಮವಿಠಲ ಪ್ರಶಸ್ತಿ - 2016
  7. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ `ಯಕ್ಷಗಾನಾಧ್ಯಯನ’ ಕೃತಿಗೆ - 2017
  8. ಕಾಂತಾವರ ಕನ್ನಡ ಸಂಘದ `ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ `ಪಂಡಿತ ಪರಂಪರೆಯ ಪಾದೇಕಲ್ಲು ವಿಷ್ಣು ಭಟ್ಟ’ ಎಂಬ ಕೃತಿ ಬಿಡುಗಡೆಯಾಗಿದೆ. ಲೇಖಕರು - ಡಾ. ಎಸ್. ಅರ್. ಅರುಣಕುಮಾರ್ – 2018
  9. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ - 2018
  10. ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ವಿದ್ವತ್‍ಪ್ರಶಸ್ತಿ - 2018


ಉಲ್ಲೇಖ

ಬದಲಾಯಿಸಿ