ಪಲಕ್ ದಿಲ್ ಅಥವಾ ಪಾಲಾ ಟಿಪೊ (ಮಾರಾ ಭಾಷೆಯಲ್ಲಿ ಇದರರ್ಥ "ನುಂಗುವ ಸರೋವರ") ಈಶಾನ್ಯ ಭಾರತದ ದಕ್ಷಿಣ ಮಿಝೋರಂನಲ್ಲಿರುವ ಅತಿ ದೊಡ್ಡ ಸರೋವರವಾಗಿದೆ. ಇದು ಸೈಹಾ ಜಿಲ್ಲೆಯಲ್ಲಿ ಫುರಾ ಗ್ರಾಮದ ಹತ್ತಿರ, ಮಾರಾ ಸ್ವಾಯತ್ತ ಜಿಲ್ಲಾ ಪರಿಷತ್ತಿನೊಳಗೆ ಸ್ಥಿತವಾಗಿದೆ. ಇದು ಪ್ರಾಣಿ ಮತ್ತು ಸಸ್ಯ ಜಾತಿಗಳಲ್ಲಿ ಶ್ರೀಮಂತವಾಗಿದೆ. ಈ ಸರೋವರವು ಪಲಕ್ ವನ್ಯಜೀವಿ ಅಭಯಾರಣ್ಯದ ಪ್ರಮುಖ ಘಟಕವಾಗಿದೆ,[] ಮತ್ತು ಇದು ಅಭಯಾರಣ್ಯದ ಪ್ರಧಾನ ಜೀವವೈವಿಧ್ಯಕ್ಕೆ ಆಧಾರ ನೀಡುತ್ತದೆ.[]

ಪಲಕ್ ದಿಲ್ ಅಂಡಾಕಾರವಾಗಿದ್ದು ಇದರ ಉದ್ದ ೮೭೦ ಮೀಟರ್ ಅಗಲ ೭೦೦ ಮೀಟರ್ ಮತ್ತು ಆಳ ೧೭ ರಿಂದ ೨೫ ಮೀಟರ್‌ಗಳಷ್ಟಿದೆ.[] ಸರೋವರದ ಕೆಳಗೆ ಒಂದು ಹಳ್ಳಿ ಇದೆ ಎಂದು ನಂಬಲಾಗಿದೆ. ಸರೋವರದಲ್ಲಿ ದೆವ್ವಗಳು ಮತ್ತು ರಾಕ್ಷಸರು ಸುಳಿದಾಡುತ್ತಾರೆ ಎಂದು ಕೆಲವರು ನಂಬುತ್ತಾರೆ.[] ಈ ಸರೋವರಕ್ಕೆ ಹತ್ತಿರದ ಪರ್ವತಗಳಿಂದ ಎರಡು ಮುಖ್ಯ ಹೊಳೆಗಳು ನೀರುಣಿಸುತ್ತವೆ. ಇದರ ಜಲನಿರ್ಗಮನವು ಪಾಲಾ ಲೂಯಿ ಎಂಬ ಸಣ್ಣ ನದಿಯ ಮೂಲಕ ಆಗುತ್ತದೆ. ಈ ಜಲನಿರ್ಗಮನ ಪ್ರದೇಶವು ಕಣಿವೆಯ ಒಂದು ಹರಹನ್ನು ಸೃಷ್ಟಿಸುತ್ತದೆ. ಇದು ಮಾರಾ ಜನರ ಮುಖ್ಯ ಕೃಷಿ ಪ್ರದೇಶವಾಗಿ ಉಳಿದುಕೊಂಡಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Mizoram Wildlife". North-East India Tourism. Indo Vacations™. Archived from the original on 28 October 2013. Retrieved 11 April 2014.
  2. Lalramanghinglova, H; Lalnuntluanga; Jha, LK (2006). "Note on Ngengpui and Palak Wildlife Sanctuaries in South Mizoram". The Indian Forester. 132 (10): 1282–1291.
  3. B. Lalthangliana. Mizoram Encyclopedia. Archived from the original on 2017-11-17. Retrieved 2020-09-28.
  4. Sajnani, Manohar (2001). Encyclopaedia of Tourism Resources in India, Volume 1. Kalpaz Publication.
  5. Dr John (12 March 2012). "Palak Dil – Mizorama Dil Lian Ber" [Palak Dil – The Largest Lake in Mizorama]. www.misual.com (in Mizo). Archived from the original on 8 ಏಪ್ರಿಲ್ 2014. Retrieved 11 April 2014.{{cite web}}: CS1 maint: unrecognized language (link)