ಪರ್ವತ ಬಾನಾಡಿ
Conservation status
Scientific classification e
Unrecognized taxon (fix): Tachymarptis
ಪ್ರಜಾತಿ:
T. melba
Binomial name
Tachymarptis melba
Range of T. melba     Breeding      Resident      Non-breeding      Vagrant (seasonality uncertain)      Possibly Extant (passage)
Synonyms
  • Hirundo melba Linnaeus, 1758
  • Apus melba (Linnaeus, 1758)


ಪರ್ವತ ಬಾನಾಡಿ (Tachymarptis melba) ಒಂದು ಸ್ವಿಪ್ಟ್ (Swift,ಬಾನಡಿ) ಜಾತಿಗೆ ಸೇರಿದ ಪಕ್ಷಿಯಾಗಿದೆ. ಪ್ರಭೇದದ ಹೆಸರು ( Tachymarptis) ಪುರಾತನ ಗ್ರೀಕ್ ತಖ್ಹಸ್ (takhus) "ವೇಗದ", ಮತ್ತು ಮಾರ್ಪ್ಟಿಸ್ (marptis) "ಸೀಜರ್" ನಿಂದ ಬಂದಿದೆ.[] ದಕ್ಷಿಣ ಯುರೋಪ್ ನಿಂದ ಹಿಮಾಲಯ ಪರ್ವತಗಳಲ್ಲಿ ಪರ್ವತ ಬಾನಾಡಿಗಳು ಸಂತಾನವೃದ್ಧಿ ಮಾಡುತ್ತದೆ. ಪರ್ವತ ಬಾನಾಡಿಗಳು ಚಳಿಗಾಲದ ವಲಸೆಗಾರರಾಗಿದ್ದು, ದಕ್ಷಿಣ ಆಫ್ರಿಕದ ದಕ್ಷಿಣ ಬಾಗಗಳಲ್ಲಿ ತಮ್ಮ ಚಳಿಗಾಲದ ಕಾಲವನ್ನು ಕಳೆಯುತ್ತದೆ. ಬಾನಾಡಿಗಳು ಅತ್ಯಂತ ಸಣ್ಣದಾದ ಕಾಲುಗಳನ್ನು ಹೊಂದಿರುವುದರಿಂದ ಲಂಬವಾದ ಮೇಲ್ಮೈಗಳಿಗೆ ಅಂಟಿಕೊಳ್ಳಲು ಸಹಾಯವಾಗುತ್ತದೆ.

ವಿವರಣೆ ಮತ್ತು ಜೀವಶಾಸ್ತ್ರ

ಬದಲಾಯಿಸಿ

ಪರ್ವತ ಬಾನಾಡಿ, ಅವುಗಳ ದೊಡ್ಡ ಗಾತ್ರ ಮತ್ತು ಬಿಳಿ ಹೊಟ್ಟೆ ಮತ್ತು ಗಂಟಲುಗಳ ಮೂಲಕ ಸಾಮಾನ್ಯ ಬಾನಡಿಯಿಂದ ಸುಲಭವಾಗಿ ಬೇರ್ಪಡಿಸಬಹುದು. ಇವುಗಳು ತಮ್ಮ ಶ್ರೇಣಿಯಲ್ಲಿರುವ ಇತರ ಬಾನಡಿಗಳಿಗಿಂತ ಎರಡು ಪಟ್ಟು ದೊಡ್ಡದಾಗಿರುತ್ತದೆ. ಇದು ಸುಮಾರು ೨೦ ರಿಂದ ೨೩ ಸೆಂ.ಮೀ. (೭.೯ ರಿಂದ ೯.೧ ಇಂಚ್) ಉದ್ದವಿದ್ದು, ಇದರ ರೆಕ್ಕೆಯಗಲ ೫೭ ಸೆಂ.ಮೀ (೨೨ ಇಂಚು) ಇದ್ದು, ಮತ್ತು ಸುಮಾರು ೧೦೦ ಗ್ರಾಂ ತೂಕ ಹೊಂದಿರುತ್ತದೆ.[] ಇದರ ಒಟ್ಟಾರೆ ಬಣ್ಣ ಗಾಢ ಕಂದು ಮತ್ತು ಇದರ ಬಿಳಿ ಹೊಟ್ಟೆ ಮತ್ತು ಬಿಳಿ ಗಂಟಲುಗಳನ್ನು ಪ್ರತ್ಯೇಕಿಸುವ ಗಾಢವಾದ ಕುತ್ತಿಗೆ ಪಟ್ಟಿ ಇರುತ್ತದೆ. ಚಿಕ್ಕ ವಯಸ್ಸಿನ ಹಕ್ಕಿಗಳು ವಯಸ್ಕರಿಗೆ ಹೋಲುತ್ತವೆ, ಆದರೆ ಅವುಗಳ ಗರಿಗಳು ತೆಳುವಾದ ಅಂಚುಗಳನ್ನು ಹೊಂದಿರುತ್ತವೆ. []

ಅವಾಸ ಸ್ಥಾನ

ಬದಲಾಯಿಸಿ

ಪರ್ವತ ಬಾನಡಿಗಳು ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯವನ್ನು ಗಾಳಿಯಲ್ಲಿಯೆ ಕಳೆಯುತ್ತದ್ದೆ. ಮತ್ತು ಕೀಟಗಳ ಮೇಲೆ ವಾಸಿಸುತ್ತವೆ. ಪರ್ವತ ಬಾನಾಡಿಗಳು ಹಾರುವ ಸಮಯದಲ್ಲಿಯೆ ನೀರನ್ನು ಕುಡಿಯುತ್ತದೆ,ಮತ್ತು ಲಂಬವಾದ ಬಂಡೆಗಳು ಅಥವಾ ಗೋಡೆಗಳ ಮೇಲೆ ವಿಶ್ರಮಿಸುತ್ತವೆ. ೨೦೧೩ ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪರ್ವತ ಬಾನಾಡಿಗಳು ಆರು ತಿಂಗಳಗಳ ಕಾಲ ನಿರಂತರವಾಗಿ ಹಾರಾಡಬಹುದು. []. ನಿದ್ರೆ ಸೇರಿದಂತೆ ಎಲ್ಲ ಪ್ರಮುಖ ಶಾರೀರಿಕ ಪ್ರಕ್ರಿಯೆಗಳನ್ನು ಗಾಳಿಯಲ್ಲಿಯೆ ನಿರ್ವಹಿಸಬಹುದು.

 
ಪರ್ವತ ಬಾನಾಡಿಯ ಮೊಟ್ಟೆಗಳು

ಬಾಹ್ಯ ಕೊಂಡಿಗಳು

ಬದಲಾಯಿಸಿ
  • ಚಿತ್ರಗಳು [೧]
  • ಪಕ್ಷಿ ಕರೆಗಳು [೨]

ಉಲ್ಲೇಖಗಳು

ಬದಲಾಯಿಸಿ
  1. "Tachymarptis melba". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013. {{cite web}}: Invalid |ref=harv (help)
  2. Jobling, James A (2010). The Helm Dictionary of Scientific Bird Names. London: Christopher Helm. pp. 248, 327. ISBN 978-1-4081-2501-4.
  3. BTO Birdfacts - Alpine swift, British Trust for Ornithology, BTO.org website.
  4. Stevenson & Fanshawe. Field Guide to the Birds of East Africa: Kenya, Tanzania, Uganda, Rwanda, Burundi, Elsevier Science, 2001, ISBN 978-0856610790.
  5. Felix Liechti; Willem Witvliet; Roger Weber; Erich Bächler "First evidence of a 200-day non-stop flight in a bird", Nature website, Nature Communications, article number: 2554, received 11 January 2013, published: 8 October 2013, doi:10.1038/ncomms3554 (subscription).