ಪರಿಶೀಲನೆ
ಅತಿ ಸಾಮಾನ್ಯವಾಗಿ, ಪರಿಶೀಲನೆಯು ಸಂಘಟಿತ ಪರೀಕ್ಷೆ ಅಥವಾ ವಿಧ್ಯುಕ್ತ ಮೌಲ್ಯಮಾಪನ ಅಭ್ಯಾಸ. ಶಿಲ್ಪಶಾಸ್ತ್ರದ ಚಟುವಟಿಕೆಗಳಲ್ಲಿ ಪರಿಶೀಲನೆಯು ಒಂದು ವಸ್ತು ಅಥವಾ ಚಟುವಟಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಗುಣಲಕ್ಷಣಗಳಿಗೆ ಅನ್ವಯಿಸಲಾದ ಮಾಪನಗಳು, ಪರೀಕ್ಷೆಗಳು, ಮತ್ತು ಮಾಪಕಗಳನ್ನು ಒಳಗೊಳ್ಳುತ್ತದೆ. ವಸ್ತು ಅಥವಾ ಚಟುವಟಿಕೆ ಈ ಗುರಿಗಳಿಗೆ ಅನುಗುಣವಾಗಿ ಇದೆಯೇ ಎಂದು ನಿರ್ಧರಿಸಲು ಫಲಿತಾಂಶಗಳನ್ನು ಸಾಮಾನ್ಯವಾಗಿ ನಿರ್ದಿಷ್ಟಪಡಿಸಿದ ಅವಶ್ಯಕತೆಗಳು ಮತ್ತು ಮಾನದಂಡಗಳಿಗೆ ಹೋಲಿಸಲಾಗುತ್ತದೆ. ಸುಸಂಗತ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಹಲವುವೇಳೆ ಕಾರ್ಯಾಚರಣೆಯಲ್ಲಿರುವ ಪ್ರಮಾಣಕ ಪರಿಶೀಲನಾ ವಿಧಾನದೊಂದಿಗೆ ಮಾಡಲಾಗುತ್ತದೆ. ಪರಿಶೀಲನೆಗಳು ಸಾಮಾನ್ಯವಾಗಿ ವಿನಾಶರಹಿತವಾಗಿರುತ್ತವೆ.
ಪರಿಶೀಲನೆಗಳು ದೃಶ್ಯ ಪರಿಶೀಲನೆಯಾಗಿರಬಹುದು ಅಥವಾ ಶ್ರವಣಾತೀತ ಪರೀಕ್ಷೆಯಂತಹ ಸಂವೇದಿ ತಂತ್ರಜ್ಞಾನಗಳನ್ನು ಒಳಗೊಂಡಿರಬಹುದು ಮತ್ತು ನೇರ ಭೌತಿಕ ಉಪಸ್ಥಿತಿಯಿಂದ ಅಥವಾ ದೂರಸ್ಥ ದೃಶ್ಯ ಪರಿಶೀಲನೆಯಂತಹ ದೂರದಿಂದಲೇ ಸಾಧಿಸಲ್ಪಡಬಹುದು, ಮತ್ತು ಕೈಯಾರೆ ಅಥವಾ ಸ್ವಯಂಚಾಲಿತ ದ್ಯುತಿ ತಪಾಸಣೆಯಂತೆ ಸ್ವಯಂಚಾಲಿತವಾಗಿ ಮಾಡಲ್ಪಡಬಹುದು. ಸಂಪರ್ಕರಹಿತ ದ್ಯುತಿ ಮಾಪನ ಮತ್ತು ದ್ಯುತಿಚಿತ್ರಮಾಪನ ತಂತ್ರಗಳು ಉತ್ಪಾದಿತ ಘಟಕಗಳ ಪರಿಶೀಲನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿಸುವಿಕೆಗೆ ಸಾಮಾನ್ಯ ವಿನಾಶರಹಿತ ಪರೀಕ್ಷಾ ವಿಧಾನಗಳಾಗಿವೆ.
ಸ್ಕಾಟಿಶ್ ಸರ್ಕಾರದ ಒಂದು ವಿಶ್ಲೇಷಣೆಯು ಸಾರ್ವಜನಿಕ ಸೇವೆಗಳ ಪರಿಶೀಲನೆಯನ್ನು "ನಿರ್ದಿಷ್ಟ ಸೇವೆಗಳು ರಾಷ್ಟ್ರೀಯ ಹಾಗೂ ಸ್ಥಳೀಯ ಸಾಮರ್ಥ್ಯ ಮಾನದಂಡಗಳು, ಕಾನೂನು ಮತ್ತು ವೃತ್ತಿಪರ ಅಗತ್ಯಗಳು, ಮತ್ತು ಸೇವಾ ಬಳಕೆದಾರರ ಅವಶ್ಯಕತೆಗಳನ್ನು ಪೂರೈಸುತ್ತಿವೆಯೇ ಎಂದು ತಾಳೆನೋಡಲು ನಿಯತಕಾಲಿಕ, ಉದ್ದೇಶಿತ ಪರೀಕ್ಷೆ" ಎಂದು ವ್ಯಾಖ್ಯಾನಿಸಿತು.[೧]
ಅನಿರೀಕ್ಷಿತ ಪರಿಶೀಲನೆಯು ಘೋಷಿತ ಪರಿಶೀಲನೆಗಿಂತ ಭಿನ್ನ ಫಲಿತಾಂಶಗಳನ್ನು ಹೊಂದಿರುವ ಪ್ರವೃತ್ತಿ ಹೊಂದಿರುತ್ತದೆ. ತಮ್ಮ ಸಂಸ್ಥೆಯಲ್ಲಿ ಇತರರು ಹೇಗೆ ನಿರ್ವಹಿಸುತ್ತಾರೆ ಎಂದು ತಿಳಿದುಕೊಳ್ಳಲು ಬಯಸುವ ಮತ್ತು ಏನು ನಡೆಯುತ್ತದೆಂದು ನೋಡಲು ನಾಯಕರು ಯಾವುದೇ ಮುನ್ಸೂಚನೆ ಇಲ್ಲದೆ ಭೇಟಿ ನೀಡಬಹುದು. ಮೊದಲೇ ಪರಿಶೀಲನೆ ಇದೆ ಎಂದು ಗೊತ್ತಾದರೆ, ಅದು ಜನರಿಗೆ ಮುಚ್ಚಿಡಲು ಅಥವಾ ತಪ್ಪುಗಳನ್ನು ಸರಿಪಡಿಸಲು ಅವಕಾಶ ನೀಡಬಹುದು. ಇದು ದಾರಿತಪ್ಪಿಸುವ ಮತ್ತು ತಪ್ಪು ತೀರ್ಮಾನಗಳಿಗೆ ಕಾರಣವಾಗಬಹುದು. ಹಾಗಾಗಿ ಅನಿರೀಕ್ಷಿತ ಪರಿಶೀಲನೆಯು ಪರೀಕ್ಷಕರಿಗೆ ಪರಿಶೀಲಿಸಿದ ವಸ್ತು ಅಥವಾ ಪ್ರಕ್ರಿಯೆಯ ವಿಶಿಷ್ಟ ಸ್ಥಿತಿಯ ಹೆಚ್ಚು ಉತ್ತಮ ಚಿತ್ರವನ್ನು ನೀಡುತ್ತದೆ. ಇದು ಪರಿಶೀಲನಾ ಪ್ರಕ್ರಿಯೆಯಲ್ಲಿ ಬಾಹ್ಯ ವಿಶ್ವಾಸವನ್ನೂ ವರ್ಧಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ