ಪರಿಮಾಣ ವಾಚಕಗಳು
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಸೂಚಿಸುವ ಪದಗಳಿಗೆ ಪರಿಮಾಣ ವಾಚಕಗಳು ಎಂಬ ಹೆಸರು.
- ಅಷ್ಟು ದೊಡ್ಡ ಕಲ್ಲು
- ಇಷ್ಟು ಜನರ ಗುಂಪು
- ಎಷ್ಟು ಕಾಸುಗಳು?
ಈ ವಾಕ್ಯಗಳಲ್ಲಿ ಅಷ್ಟು, ಇಷ್ಟು, ಎಷ್ಟು ಪದಗಳು ಒಂದು ಗೊತ್ತಾದ ಅಳತೆ ಅಥವಾ ಸಂಖ್ಯೆಯನ್ನು ಹೇಳುವುದಿಲ್ಲ. ಅಂದರೆ, ಇಲ್ಲಿ ನಿರ್ದಿಷ್ಟವಾದ ಅಳತೆ, ಸಂಖ್ಯೆ ಇಲ್ಲಿ ಇಲ್ಲ. ಈ ಪದಗಳು ಕೇವಲ ಪರಿಮಾಣವನ್ನು ಮಾತ್ರ ತಿಳಿಸುತ್ತದೆ. ಇಂಥ ಪದಗಳಿಗೆ, ಪರಿಮಾಣ ವಾಚಕಗಳು ಎಂದು ಕರೆಯುತ್ತೇವೆ.
ಉದಾ: ಅಷ್ಟು, ಇಷ್ಟು, ಹಲವು, ಕೆಲವು, ಅನಿತು, ಇನಿತು, ಎನಿತು, ಸ್ವಲ್ಪ ಇತ್ಯಾದಿ.
- ಪರಿಮಾಣಕ್ಕೆ - ಹಲವು ದಿನಗಳು, ಕೆಲವು ಊರುಗಳು
- ಗಾತ್ರಕ್ಕೆ - ಗುಡ್ಡದಷ್ಟು, ಬೆಟ್ಟದಷ್ಟು, ಆನೆಯಷ್ಟು, ಪಲ್ಲದನಿತು
- ಅಳತೆಗೆ - ಅಷ್ಟು ದೂರ, ಇಷ್ಟು ಪುಸ್ತಕಗಳು