ಪರಮೇಶ್ವರಾಚಾರ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಸಿ.ಪರಮೇಶ್ವರಾಚಾರ್ ರವರು ಕರ್ನಾಟಕದ ಪ್ರಮುಖ ಶಿಲ್ಪಿಗಳಲ್ಲಿ ಓಬ್ಬರಾಗಿದ್ದರು. ಶ್ರೀಯುತರು ವಿಧಾನಸೌಧ ನಿರ್ಮಾಣ ಸಂದರ್ಭದಲ್ಲಿ ಮುಖ್ಯ ವಿನ್ಯಾಸಕಾರರಾಗಿ ಕಾರ್ಯ ನಿರ್ವಹಿಸಿದ್ದರು. ಇವರಿಗೆ ಕರ್ನಾಟಕ ಸರ್ಕಾರ ೧೯೯೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮೂಲತಃ ಮೈಸೂರಿನವರಾದ ಪರಮೇಶ್ವರ ಆಚಾರ್ಯ ಜ್ಯೋತಿಷಿ ಮಿರ್ಲೆ ಚೌಡಾಚಾರ್ ಅವರ ಪುತ್ರರು. ಮೈಸೂರು ಅರಸರ ಸಂಸ್ಥಾನದಲ್ಲಿ ಅಸ್ಥಾನ ಶಿಲ್ಪಿಯಾಗಿದ್ದ ಸಿದ್ಧಲಿಂಗಸ್ವಾಮಿಯವರ ಶಿಷ್ಯರಾಗಿದ್ದರು. ವಿಧಾನಸೌಧ ನಿರ್ಮಾಣ ಸಂದರ್ಭದಲ್ಲಿ ಮುಖ್ಯ ವಿನ್ಯಾಸಕರಾಗಿ ಇವರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ವಿಧಾನಸಭೆ, ವಿಧಾನಪರಿಷತ್ ಸಭಾಂಗಣದ ಒಳಾಂಗಣ ವಿನ್ಯಾಸ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. [೧]
ಉಲ್ಲೇಖಗಳು
ಬದಲಾಯಿಸಿ- ↑ http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%A8%E0%B2%97%E0%B2%B0/126926/%E2%80%8B%E0%B2%96%E0%B3%8D%E0%B2%AF%E0%B2%BE%E0%B2%A4-%E0%B2%B6%E0%B2%BF%E0%B2%B2%E0%B3%8D%E0%B2%AA%E0%B2%BF-%E0%B2%AA%E0%B2%B0%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0%E0%B2%BE%E0%B2%9A%E0%B2%BE%E0%B2%B0%E0%B3%8D%E2%80%8C-%E0%B2%A8%E0%B2%BF%E0%B2%A7%E0%B2%A8[ಶಾಶ್ವತವಾಗಿ ಮಡಿದ ಕೊಂಡಿ] ಸಿ.ಪರಮೇಶ್ವರಾಚಾರ್