ಪನೀರ್ ಟಿಕ್ಕಾ
ಪನೀರ್ ಟಿಕ್ಕಾ ಪನೀರ್‌ನ ತುಂಡುಗಳಿಂದ ತಯಾರಿಸಲ್ಪಡುವ ಒಂದು ಭಾರತೀಯ ಖಾದ್ಯವಾಗಿದೆ. ತುಂಡುಗಳನ್ನು ಸಂಬಾರ ಪದಾರ್ಥಗಳಲ್ಲಿ ಊರಿಟ್ಟು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ.[೧][೨] ಇದು ಚಿಕನ್ ಟಿಕ್ಕಾ ಮತ್ತು ಇತರ ಮಾಂಸದ ಖಾದ್ಯಗಳ ಸಸ್ಯಾಹಾರಿ ಪರ್ಯಾಯವಾಗಿದೆ.[೩][೪][೫] ಇದು ಭಾರತದಲ್ಲಿ ಮತ್ತು ಭಾರತೀಯ ವಲಸಿಗರಿರುವ ದೇಶಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಒಂದು ಜನಪ್ರಿಯ ಖಾದ್ಯವಾಗಿದೆ.[೬][೭]
ಸಂಬಾರ ಪದಾರ್ಥಗಳಲ್ಲಿ ಊರಿಟ್ಟ ಪನೀರ್‌ನ ತುಂಡುಗಳನ್ನು ಕ್ಯಾಪ್ಸಿಕಂ, ಈರುಳ್ಳಿ ಮತ್ತು ಟೊಮೇಟೊದೊಂದಿಗೆ ಒಂದು ಕೋಲಿನ ಮೇಲೆ ಜೋಡಿಸಲಾಗುತ್ತದೆ. ಈ ಕೋಲುಗಳನ್ನು ತಂದೂರ್‌ನಲ್ಲಿ ಬೇಯಿಸಲಾಗುತ್ತದೆ ಮತ್ತು ತಯಾರಾದ ಖಾದ್ಯವನ್ನು ನಂತರ ನಿಂಬೆ ರಸ ಹಾಗೂ ಚಾಟ್ ಮಸಾಲಾ ಹಾಕಿ ರುಚಿಗೊಳಿಸಿ ಬಿಸಿಯಾಗಿ ಬಡಿಸಲಾಗುತ್ತದೆ.[೮]
ಉಲ್ಲೇಖಗಳು
ಬದಲಾಯಿಸಿ- ↑ Dalal, Tarla (2007). Punjabi Khana. Sanjay & Co. p. 29. ISBN 8189491547.
- ↑ "Fine dining on Nizami fare". ದಿ ಹಿಂದೂ. 9 November 2011. Archived from the original on 22 ಏಪ್ರಿಲ್ 2012. Retrieved 20 March 2012.
- ↑ "Paneer tikka & kali dal at Kwality". Daily News and Analysis. 9 August 2008. Retrieved 20 March 2012.
- ↑ Kapoor, Sanjeev (2010). Paneer. Popular Prakashan. p. 3. ISBN 8179913309.
- ↑ "Paneer platter". ದಿ ಹಿಂದೂ. 26 May 2007. Archived from the original on 1 ಅಕ್ಟೋಬರ್ 2008. Retrieved 20 March 2012.
- ↑ "A new avatar". The Telegraph. 2 August 2009. Archived from the original on 29 ಜುಲೈ 2013. Retrieved 21 March 2012.
- ↑ "In US, Indian cuisines sell like hot curry!". The Economic Times. 20 December 2006. Archived from the original on 9 ಜೂನ್ 2013. Retrieved 21 March 2012.
- ↑ Kapoor, Sanjeev (2009). Punjabi. Popular Prakashan. pp. 13, 14. ISBN 8179913112.