ಪದ್ಮಾ ಹುಬ್ಳೀಕರ್ ರವರು, ಚಿನಕುರುಳಿ ಮತ್ತು ಚಿಂಗಾರಿ ಹಾಸ್ಯ ಚಿತ್ರಾಂಕಣಗಳನ್ನು ಬರೆಯುತ್ತಿದ್ದ ಸುಪ್ರಸಿದ್ಧ ಚಿತ್ರಕಾರ,ದಿವಂಗತ, ಜಿ. ವೈ ಹುಬ್ಳೀಕರ್ ರವರ, ಪತ್ನಿ. ಈಗ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ವಾಸ್ತವ್ಯ. ಹಲವಾರು ಬಗೆಯ ಅತ್ಯಾಕರ್ಷಕ ಮೈಸೂರು ಶೈಲಿಯ ಚಿತ್ರಗಳು ಅವರ ಕೈಯಲ್ಲಿ ಬೆಳೆದು ದೇಶ ವಿದೇಶಗಳ ಕಲಾರಸಿಕರ ದಿವಾನ್ ಖಾನೆಯ ಗೋಡೆಗಳ ಶೋಭೆಯಾಗಿವೆ. ಬಂಗಾರ ಬಣ್ಣ ಲೇಪಿತ, ರಾಮ-ಸೀತೆ-ಹನುಮಂತ, ರಾಧೆಯಜೊತೆ ಕೊಳನೂದುವ ಕೃಷ್ಣ, ಯಶೋದೆಯ ಮಡಿಲಿನಲ್ಲಿ ಕುಳಿತು ಆಟವಾಡುವ ಕೃಷ್ಣ, ದುರ್ಗಾದೇವಿ, 'ಶ್ರೀನಿವಾಸ ಕಲ್ಯಾಣದ ಸಂದರ್ಭ'ದ ಸುಂದರ ಚಿತ್ರ, ಇತ್ಯಾದಿ. ಸುಮಾರು ೧೫ ವರ್ಷಗಳ ಸತತ ಪರಿಶ್ರಮದಿಂದ ನೂರಾರು ಚಿತ್ರಗಳನ್ನು ರಚಿಸಿದ್ದಾರೆ. ಪ್ರತಿಚಿತ್ರದಲ್ಲೂ ಒಂದು ತರಹೆಯ ಆಕರ್ಶಣೆಯಿದೆ. ಈ ತರಹದ ಕಲಾ ಪ್ರಪಂಚದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳೆಯುತ್ತಿದ್ದಾರೆ.

ವ್ಯಕ್ತಿತ್ವ ಬದಲಾಯಿಸಿ

ಮೂಲತಃ ಮೈಸೂರಿನವರಾದ 'ಪದ್ಮಾ'ರವರು, ಮೈಸೂರಿನಲ್ಲಿ ಬೆಳೆದರು. ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿ ಇದ್ದರು. ತಾಯಿ ಕರಕುಶಲಕೆಲಸದಲ್ಲಿ ನೈಪುಣ್ಯತೆ ಗಳಿಸಿದ್ದರು. ಮೈಸೂರರಸರಿಂದ ಹಲವಾರು ಬಾರಿ ಬಹುಮಾನಗಳನ್ನು ಗಳಿಸಿದ್ದಾರೆ. ರವರ ಮನೆಯಲ್ಲಿ ಓದಿಗೆ ಬಹಳ ಪ್ರಾಶಸ್ತ್ಯಕೊಡುತ್ತಿದ್ದರು. ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹದೊರೆಯುತ್ತಿತ್ತು. ಚಿಕ್ಕವರಾಗಿದ್ದಾಗಲಿಂದ ಪದ್ಮಾ ಚಿತ್ರಕಲೆಬಿಡಿಸುವು ಗೀಳು, ದೈವದತ್ತವಾಗಿ ಬಂದ ಕೊಡುಗೆ. ಹಿಂದಿ ಭಾಷೆಯ ಬಗ್ಗೆ ಅತೀವ ಆಸಕ್ತಿ. ತಮ್ಮ ಶಾಲಾಕಾಲೇಜುಗಳ ದಿನದಲ್ಲಿ ಹಲವಾರು ಪಾರಿತೋಷಕಗಳನ್ನು ಪಡೆದಿದ್ದಾರೆ. ಕಲಾವಿಭಾಗದಲ್ಲಿ ಪದವಿಗಳಿಸಿದ ಬಳಿಕ ಚಿತ್ರಕಲೆಯಲ್ಲೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅವರ ಆಸಕ್ತಿಗಳನ್ನು ಕಂಡ ಮನೆಯವರು, ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಕಾಲೇಜ್ ನಲ್ಲಿ ಐದು ವರ್ಷಗಳ ಡಿಪ್ಲೊಮ ತರಬೇತಿಗೆ ಸೇರಿಸಿದರು. ಹಿಂದಿ ಭಾಷೆಯಲ್ಲೂ 'ವಿಶಾರದಾ ಪರೀಕ್ಷೆ'ಯಲ್ಲಿ ಉತ್ತಮ ಅಂಗಳನ್ನು ಗಳಿಸಿ ತೇರ್ಗಡೆಹೊಂದಿದರು.

ಮೈಸೂರಿನಿಂದ ಬೆಂಗಳೂರಿಗೆ ಬದಲಾಯಿಸಿ

ಇನ್ನೂ 'ಡಿಪ್ಲೊಮಾ ಪರೀಕ್ಷೆ'ಯಲ್ಲಿ ತರಬೇತುಪಡೆಯುತ್ತಿದ್ದಾಗಲೇ, ಸಂಪರ್ಕಕ್ಕೆ ಬಂದ ಕಲಾವಿದ, 'ಹುಬ್ಳೀಕರ್' ರವರನ್ನು ಪ್ರೀತಿಸಿ ಮದುವೆಯಾದರು. ಬೆಂಗಳೂರಿನ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ 'ವ್ಯಂಗ್ಯಚಿತ್ರಾಂಕಣ'ಗಳನ್ನು ಬರೆಯುತ್ತಿದ್ದ 'ಹುಬ್ಳೀಕರ್' ರವರು ಪತ್ನಿಗೆ ನೆರವಾದರು. ವೈವಾಹಿಕ ಜೀವನದ ಜೊತೆಗೆ ತಮ್ಮ ಹವ್ಯಾಸವಾದ ಚಿತ್ರಕಲಾ ರಂಗದಲ್ಲಿ ಏನನ್ನಾದರೂ ಸಾಧಿಸುವ ಪ್ರಯತ್ನಮಾಡಿದರು. ಮಕ್ಕಳಾದಾಗ, ನಂತರ ಅವರ ಶಾಲಾ ಕಾಲೇಜುಗಳ ಓದಿನ ದಿನಗಳನ್ನು ಮುಗಿಸಿ ದೊಡ್ಡವಾಗಿ ಬೆಳೆದ ತರುವಾಯ, ಪದ್ಮಾರವರು, ಪುನಃ ತಮ್ಮ ಕಲಾ ಕೃಷಿಯನ್ನು ಮುಂದುವರೆಸಿದರು. 'ಗಾಂಧೀ ಭವನ' ಮತ್ತು 'ಚಿತ್ರಕಲಾ ಪರಿಷತ್' ನಲ್ಲಿ ತರಬೇತಿ ನಡೆಯುತ್ತಿತ್ತು.

'ಮೈಸೂರು ಶೈಲಿಯ ಚಿತ್ರ ರಚನೆಯ,ವಿಧಿ-ವಿಧಾನಗಳು ಬದಲಾಯಿಸಿ

ದೊಡ್ಡ ಕಾರ್ಡ್ ಬೋರ್ಡ್ ನ ಮೇಲೆ ಗಮ್ ಸವರಬೇಕು. ಅದರ ಮೇಲೆ ಬಿಳಿ ಕಾಗದವನ್ನು ಗಾಳಿಯಾಡದ ತರಹ ಅಂಟಿಸಬೇಕು. ನಂತರ ನಾವು ಇಷ್ಟಪಟ್ಟ ಮೂರ್ತಿಯ ಚಿತ್ರವನ್ನು ಬಿಳಿಕಾಗದದ ಮೇಲೆ ಬರೆಯಬೇಕು. ಮುಂದಿನ ಕಾರ್ಯವೆಲ್ಲಾ ಕುಸುರಿ ಕೆಲಸದ ಹಲವು ಹಂತಗಳು. ಇದೇ ಈ ಕಲೆಯ ಪ್ರಮುಖ ಕಾರ್ಯವಿಧಿ. ಅದನ್ನು 'ಜೆಸ್ಸೋ ವರ್ಕ್' ಎಂದು 'ಪದ್ಮಾ' ವಿವರಿಸುತ್ತಾರೆ

ಜೆಸ್ಸೋ ಪದ್ಧತಿ ಬದಲಾಯಿಸಿ

ಜೆಸ್ಸೋ ಎನ್ನುವ ಮಿಶ್ರಣದಲ್ಲಿ ಮರದ ತುಂಡಿನ ತರಹೆಯ ವಸ್ತು(ನೈಸರ್ಗಿಕ ಬಣ್ಣ) ಗಮ್ (ಮರವಜ್ರವೆನ್ನುವ) ಅಥವಾ ಅರಾಬಿಕ್ ಅಂಟು (Crystals)ನ್ನು ಚೆನ್ನಾಗಿ ಅರೆಯಬೇಕು. ಈತರಹ ಅರೆದು ತಯಾರಿಸಿದ ಮಿಶ್ರಣವೇ 'ಜೆಸ್ಸೋ'. ಚಿತ್ರಪಟದಲ್ಲಿ ದೇವರಿಗೆ ಆಭರಣ ಚಿತ್ರಿಸಿರುವ ಜಾಗಕ್ಕೆ ಲೇಪಿಸಬೇಕು. ಮೊಟ್ಟಮೊದಲು ಬಿಳಿಕಾಗದಮೇಲೆ ಚಿತ್ರವನ್ನು ಬರೆದಿಟ್ಟುಕೊಳ್ಳಬೇಕು. ಚಿತ್ರದಲ್ಲಿ ಕೊರಳ ಹಾರ, ಕಿರೀಟ, ಕೈಕಡಗ, ಕಾಲ್ಗೆಜ್ಜೆ, ಸೊಂಟಪಟ್ಟಿ(ಡಾಬು) ಮುಂತಾದ ಒಡವೆಗಳಿಗೆ, ಜೆಸ್ಸೋ ಲೇಪಸರಿಯಾಗಿ ಮಾಡಿದರೆ ನೈಜತೆ ಬರುತ್ತದೆ. ಈ ತರಹದ ಕಲಾಕೃತಿಯ ಪಟಕ್ಕೆ ಅಚ್ಚುಕಟ್ಟಾದ ಮತ್ತು ಸರಿಯಾದ ವರ್ಣವಿನ್ಯಾಸದ ಕಟ್ಟುಹಾಕಬೇಕು.(ಫ್ರೇಮ್) ಈಕಲೆಯಲ್ಲಿ ಹಣ ಹೆಚ್ಚು ವ್ಯಯವಾಗುವುದರಿಂದ,ಒಳ್ಳೆಯ ಗುಣಮಟ್ಟದ ಪದಾರ್ಥಗಳನ್ನೇ ಬಳಸುವುದೊಳ್ಳೆಯರು. ಉದಾ : ಬಿಳಿಕಾಗದ, ಕಾರ್ಡ್ ಬೋರ್ಡ, ಪುಡಿಯಾಗಿ ಉದುರಿ ಬೀಳುವ ಸಂಭವವುಂಟು. ಕುಸುರಿಕೆಲಸಕ್ಕೆ ಬಹಳ ಸಮಯ ವ್ಯಯವಾಗುತ್ತದೆ. ಶ್ರದ್ಧೆ ಆಸಕ್ತಿ, ಮತ್ತು ಏಕಾಗ್ರತೆ ಅತ್ಯಾವಶ್ಯಕ. ಪ್ರತಿ ಕಲಾ ಪ್ರಕಾರಕ್ಕೂ ಕಲಾವಿದರು, ತಮ್ಮ ಸಂಪೂರ್ಣ ಸಮಯ ಮತ್ತು ನೂರಕ್ಕೆ ನೂರುಪಟ್ಟು ದೈಹಿಕ ಶ್ರಮವನ್ನು ಮುಡಿಪಾಗಿಡಬೇಕಾಗುವು.

ಮೈಸೂರು ಶೈಲಿಯ ಚಿತ್ರಕಲೆ-ದುಬಾರಿ ಬದಲಾಯಿಸಿ

ಕಲಾಕೃತಿಗಳಿಗೆ ಬಳಸುವ ಒಂದು [[ಚಿನ್ನದ]] ಹಾಳೆಗೆ ೧,೫೦೦-೧,೭೦೦ ರೂಪಾಯಿ ತಗಲುತ್ತದೆ. (ಒಂದು ಪುಸ್ತಕವೆಂದರೆ,೨೫ ಹಾಳೆಗಳ ಗುಚ್ಛ) ಇದು ಒಂದು ಭಿನ್ನವಾದ ಚಿತ್ರಕಲೆಯ ಪ್ರಕಾರ. ಇಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಯ ಕಥೆಗಳನ್ನು ಆಧರಿಸಿ ಆಯ್ದ ಕಲಾಕೃತಿಗಳೇ ಹೆಚ್ಚು ಬಳಕೆಯಲ್ಲಿವೆ. ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ಹಲವರು, 'ಪದ್ಮಾ'ರವರನ್ನು ಸಂಪರ್ಕಿಸಿ, ತಮ್ಮ ನೈಪುಣ್ಯವನ್ನು ಹೆಚ್ಚಿಸಿಕೊಳ್ಳಬಹುದು.'ಮೈಸೂರು ಶೈಲಿ' ಯ ಗೋಡೆ ಚಿತ್ರಪಟಗಳಿಗೆ ನಿಧಾನವಾಗಿ ಬೇಡಿಕೆಗಳು ಬರಲಾರಂಭಿಸಿವೆ. ಅದರ ಕೊಳ್ಳುವಿಕೆ ಕೆಲವೆಡೆಗಳಲ್ಲಿ ಈಗ ವ್ಯಾಪಿಸುತ್ತಿದೆ. ಈ ಪ್ರಾಚೀನ ಶೈಲಿಯ ಸಾಂಪ್ರದಾಯಿಕ ಕಲಾಪ್ರಕಾರವನ್ನು ಉಳಿಸಿಕೊಳ್ಳುವುದು ಅತಿ ಮುಖ್ಯ.

ಸಾಧನೆ ಬದಲಾಯಿಸಿ

೧೫೦ ಕ್ಕೂ ಮಿಗಿಲಾಗಿ ಈ ತರಹದ ಕಲಾಕೃತಿಗಳು ಹೊರಬಂದಿವೆ. ಬೇರೆದೇಶಗಳ ಕಲಾರಸಿಕರು ಅಪರೂಪದ ಚಿತ್ರಗಳಿಗೆ ಲಕ್ಷಗಟ್ಟಲೆ ಹಣಕೊಟ್ಟು ಕೊಂಡಿದ್ದಾರೆ. ಪದ್ಮರವರಿಗೆ, ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಆತ್ಮತೃಪ್ತಿ ಅತಿಮುಖ್ಯ. ಆಸಕ್ತರು ಬಂದು ಹೇಳಿಸಿಕೊಳ್ಳಲೂಬಹುದು.

ಪ್ರಶಸ್ತಿಗಳು ಬದಲಾಯಿಸಿ

  • ಬೆಂಗಳೂರಿನ ಉಪನಗರ ಮಲ್ಲೇಶ್ವರದಲ್ಲಿ,'ವೆಂಕಟಪ್ಪ ಗ್ಯಾಲರಿ'ಯಲ್ಲಿ ೨ ಬಾರಿ ಏಕವ್ಯಕ್ತಿ ಪ್ರದರ್ಶನ
  • ೧೯೯೦ ರಲ್ಲಿ 'ಆರೇಂಜ್ ಕೌಂಟಿ' ಮಣಿಪಾಲ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ
  • ೧೯೯೪ ರಲ್ಲಿ 'ಅಖಿಲಭಾರತ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ'
  • ೨೦೧೦ ರಲ್ಲಿ 'ಕಿನ್ನಾಳ ಹ್ಯಾಂಡಿಕ್ರಾಫ್ಟ್ ಕಲಾ ಅಕಾಡೆಮಿ' ಪ್ರಶಸ್ತಿ,
  • ಬೆಂಗಳೂರಿನಲ್ಲಿ ನಡೆಸಿದ ಚಿತ್ರಕಲಾ ಪರಿಷದ್ ವಸ್ತು ಪ್ರದರ್ಶನ, ದಲ್ಲಿ 'ಶ್ರೀರಾಮ ಪಟ್ಟಾಭಿಷೇಕ' ದ ಚಿತ್ರಕ್ಕೆ ಬಹುಮಾನ.

'ಮೈಸೂರ್ ಶೈಲಿಯ ಸಾಂಪ್ರದಾಯಿಕ ಶೈಲಿಯ ಕಲೆ' ಆರಂಭವಾಗಿದ್ದು, ೧೫-೧೬ ನೇ ಶತಮಾನದಲ್ಲಿ. ವಿಜಯನಗರ ಅರಸರ ಮತ್ತು ಮೈಸೂರು ರಾಜರ ಆಳ್ವಿಕೆಯಲ್ಲಿ ಈ ಕಲೆಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅರಸರ ಅಪ್ಪಣೆಯಂತ ಕಲವಿದರು ಆಸ್ಥಾನದಲ್ಲಿ ಅಗ್ರಸ್ಥಾನ ಪಡೆದ ವ್ಯಕ್ತಿಗಳ ಚಿತ್ರಗಳು ಹಾಗೂ ರಾಮಾಯಣ -ಮಹಾಭಾರತದ ಕಥೆಯ ಚಿತ್ರಗಳನ್ನು ಬರೆಯುತ್ತಿದ್ದರು. ಕೆಲವು ಶ್ರೀಮಂತರು ತಮ್ಮ ಅರಸರ ಭಾವಚಿತ್ರಗಳನ್ನು ಬರೆಸುತ್ತಿದ್ದರು.

ಪತಿ, (ದಿ)ಜಿ. ವೈ ಹುಬ್ಳೀಕರ್ ರವರ ಪರಿಚಯ ಬದಲಾಯಿಸಿ

'ಹುಬ್ಳೀಕರ್' ರವರು, ೧೯೬೪ ರಿಂದ ೧೯೭೧ ರ ವರೆಗೆ ಪ್ರಜಾವಾಣಿ ಬಳಗದವರ ಜೊತೆಗೂಡಿ ದುಡಿದರು. ೧೯೯೪ ರನಂತರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರತಿದಿನವೂ 'ಚಿನಕುರುಳಿ'ಯೆಂಬ ವ್ಯಂಗ್ಯಚಿತ್ರವನ್ನು ಸತತವಾಗಿ ಹಲವುವರ್ಷಗಳ ಕಾಲ ಬರೆದರು. ಅನೇಕ ಮಾಸಿಕ ವಿಶೇಷಾಂಕಗಳಿಗೆ ಮತ್ತು ಪುಸ್ತಕಗಳಿಗೆ ಕಥೆ, ಪ್ರಹಸನಗಳಿಗೆ ಸಹಾಯಕ ಚಿತ್ರಗಳನ್ನೂ ಬರೆದುಕೊಟ್ಟಿದ್ದಾರೆ.

ಹುಬ್ಳೀಕರ್ ಗಳಿಸಿದ ಪ್ರಶಸ್ತಿ ಗೌರವಗಳು ಬದಲಾಯಿಸಿ

  • 'ರಾಜ್ಯೋತ್ಸವ ಪ್ರಶಸ್ತಿ',
  • 'ಪತ್ರಿಕಾ ಅಕಾಡೆಮಿ ಪ್ರಶಸ್ತಿ',
  • 'ಲಲಿತಕಲಾ ಅಕಾಡೆಮಿಯ ಮಾಜೀ ಸದಸ್ಯ'ರಾಗಿದ್ದರು.

'ಹುಬ್ಳೀಕರ್' ರವರ, ನಿಧನ ಬದಲಾಯಿಸಿ

ಮೂತ್ರಪಿಂಡದ ಸಮಸ್ಯೆಯಿಂದ ಸುಮಾರು ೧ ವರ್ಷ ಬಳಲಿದ ಹುಬ್ಳೀಕರ್ ರವರು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ೨೦, ಜನವರಿ, ೨೦೦೯ ರಲ್ಲಿ ಸಂಜಯ ನಗರದ 'ನಾಗಶೆಟ್ಟಿಹಳ್ಳಿ'ಯ ನಿವಾಸದಲ್ಲಿ ನಿಧನರಾದರು. ಅವರು, ಪತ್ನಿ ಪದ್ಮಾ, ಹಾಗೂ ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ.

"https://kn.wikipedia.org/w/index.php?title=ಪದ್ಮಾ&oldid=784405" ಇಂದ ಪಡೆಯಲ್ಪಟ್ಟಿದೆ