ಪದಕವು ಆಭರಣದ ಸಡಿಲವಾಗಿ ತೂಗಾಡುವ ಭಾಗದ ರೂಪದಲ್ಲಿರುತ್ತದೆ. ಇದನ್ನು ಸಾಮಾನ್ಯವಾಗಿ ಸಣ್ಣ ಗಂಟಿನ ಮೂಲಕ ಕಂಠಹಾರಗಳಿಗೆ ಲಗತ್ತಿಸಲಾಗುತ್ತದೆ. ಇದು "ಪದಕದ ಕಂಠಹಾರ" ಎಂದು ಪರಿಚಿತವಾಗಬಹುದು.[೧] ಪದಕದ ಓಲೆ ಎಂದರೆ ಕೆಳಗೆ ತೂಗಾಡುತ್ತಿರುವ ಒಂದು ಭಾಗವಿರುವ ಓಲೆ. ಒಟ್ಟಾರೆ ಕಂಠಹಾರದಲ್ಲಿ ಪದಕದ ವಿನ್ಯಾಸವನ್ನು ಒಟ್ಟುಗೂಡಿಸುವ ಮಟ್ಟವು ಇವನ್ನು ಪ್ರತ್ಯೇಕ ವಸ್ತುಗಳಾಗಿ ಕಾಣುವುದನ್ನು ಯಾವಾಗಲೂ ನಿಖರವಾಗಿಸುವುದಿಲ್ಲ.[೨]

ಅಂಬರಿನ ಪದಕಗಳು

ಆದರೆ ಕೆಲವು ಸಂದರ್ಭಗಳಲ್ಲಿ, ಕಂಠಹಾರ ಮತ್ತು ಪದಕದ ನಡುವಿನ ಪ್ರತ್ಯೇಕತೆಯು ಹೆಚ್ಚು ಸ್ಪಷ್ಟವಾಗಿರುತ್ತದೆ.[೨]

ಪದಕಗಳು ಶಾರೀರಿಕ ಅಲಂಕರಣದ ಅತ್ಯಂತ ಹಳೆಯ ದಾಖಲಿತ ಪ್ರಕಾರಗಳ ಪೈಕೆ ಒಂದೆನಿಸಿಕೊಂಡಿವೆ. ಕಲ್ಲು, ಚಿಪ್ಪು, ಮಡಕೆಗಳು ಮತ್ತು ಹೆಚ್ಚಿನ ನಾಶಹೊಂದುವ ವಸ್ತುಗಳನ್ನು ಬಳಸಲಾಗುತ್ತಿತ್ತು. ಪ್ರಾಚೀನ ಐಗುಪ್ತದವರು ಸಾಮಾನ್ಯವಾಗಿ ಪದಕಗಳನ್ನು ಧರಿಸುತ್ತಿದ್ದರು, ಮತ್ತು ಕೆಲವು ಚಿತ್ರಲಿಪಿಗಳಂತೆ ಆಕಾರ ಹೊಂದಿರುತ್ತಿದ್ದವು.

ಉಲ್ಲೇಖಗಳು ಬದಲಾಯಿಸಿ

  1. "The Early Pendant: A Jewelry And A Talisman". Talismanamulet.org. Archived from the original on 8 ಡಿಸೆಂಬರ್ 2012. Retrieved 7 August 2012.
  2. ೨.೦ ೨.೧ Johns, Catherine (1996). The Jewellery of Roman Britain Celtic and classical Traditions. Routledge. p. 104. ISBN 9780415516129.