ಪತ್ರಿಕಾ ಪುರವಣಿ ಅಥವಾ ಹೆಚ್ಚುವರಿ ಆವೃತ್ತಿ ಅಥವಾ ವಿಶೇಷ ಆವೃತ್ತಿ ಎಂಬುದು ಪತ್ರಿಕೆಗಳ ಸಾಮಾನ್ಯ ಪ್ರಕಟಣೆಯ ವೇಳಾಪಟ್ಟಿಯ ಹೊರತಾಗಿ ಬಿಡುಗಡೆಯಾಗುವ ವಿಶೇಷ ಸಂಚಿಕೆ. ಇದನ್ನು ತಡವಾಗಿ ಲಭಿಸುವ ಸಂವೇದನಾಶೀಲ ಸುದ್ದಿಗಳನ್ನು ಅಂದರೆ ಯುದ್ಧದಲ್ಲಿ ಏಕಾಏಕಿ ನಡೆಯುವ ಬದಲಾವಣೆಗಳು, ಪ್ರಸಿದ್ಧ ವ್ಯಕ್ತಿಯ ಹತ್ಯೆಯಂತಹ ಸಂವೇದನಾಶೀಲ ಸುದ್ದಿಗಳ ಬಗ್ಗೆ ವರದಿ ಮಾಡಲು ಮಾಡಲಾಗುತ್ತದೆ.

ಪರ್ಲ್ ಹಾರ್ಬರ್ ಮೇಲಿನ ದಾಳಿಯ ನಂತರ ಹೊನೊಲುಲು ಸ್ಟಾರ್-ಬುಲೆಟಿನ್‌ನ ಪತ್ರಿಕಾ ಪುರವಣಿ

ಇಂತಹ ಪತ್ರಿಕೆಗಳ ಒಂದು ಬದಿಯಲ್ಲಿ ಮಾತ್ರ ಸುದ್ದಿಯನ್ನು ಮುದ್ರಿಸಲಾಗುತ್ತದೆ. ಇತರ ಪತ್ರಿಕೆಗಳಂತೆ ಇದರ ಎರಡೂ ಬದಿ ಮುದ್ರಣಗಳಿರುವುದಿಲ್ಲ. ಹಾಗಾಗಿ ಇದನ್ನು ಸಾರ್ವಜನಿಕ ಸ್ಥಳಗಳ ಗೋಡೆಗಳಿಗೆ ಅಂಟಿಸಬಹುದು.[]

೧೯ ನೇ ಶತಮಾನದ ಮಧ್ಯಭಾಗದಲ್ಲಿ ಅಮೆರಿಕಾದಲ್ಲಿ ವೃತ್ತಪತ್ರಿಕೆಯನ್ನು ಮಾರಾಟ ಮಾಡುವ ಬೀದಿ ಬದಿಯ ವ್ಯಾಪಾರಿಗಳು ಪತ್ರಿಕಾ ಪುರವಣಿಗಳನ್ನು ಮಾರಾಟ ಮಾಡುವಾಗ "ಹೆಚ್ಚುವರಿ! ಹೆಚ್ಚುವರಿ! ಅದರ ಬಗ್ಗೆ ಎಲ್ಲವನ್ನೂ ಓದಿ!" ಎಂದು ಕೂಗುತ್ತಿದ್ದರು. ಇದು ಚಲನಚಿತ್ರದ ಘಟನೆಗಳನ್ನು ಪರಿಚಯಿಸಲು ಸಾಮಾನ್ಯವಾಗಿ ಬಳಸುವ ತಂತ್ರವಾಯಿತು.

ರೇಡಿಯೊದ ಅಭಿವೃದ್ಧಿಯೊಂದಿಗೆ ೧೯೩೦ ರ ದಶಕದ ಆರಂಭದಲ್ಲಿ ಪತ್ರಿಕಾ ಪುರವಣಿಗಳ ಬಳಕೆ ಕಡಿಮೆಯಾಯಿತು (ಉತ್ತಮ ರೇಡಿಯೋ ಪ್ರಸಾರವನ್ನು ಹೊಂದಿದ್ದ ಪ್ರದೇಶಗಳಲ್ಲಿ). ಅದರ ಬದಲು ಬ್ರೇಕಿಂಗ್ ನ್ಯೂಸ್‌ನಂತಹ ಬುಲೆಟಿನ್‌ಗಳು ಬಂದವು. ೨೧ ನೇ ಶತಮಾನದಲ್ಲಿ ಕೆಲವೊಮ್ಮೆ ಪತ್ರಿಕಾ ಪುರವಣಿಗಳು ಕಾಣಿಸಿಕೊಂಡಿವೆ. ಉತ್ತರ ಅಮೆರಿಕಾದ ಪತ್ರಿಕೆಗಳು ೨೦೦೧ ಸೆಪ್ಟೆಂಬರ್ ೧೧ರ ಮಧ್ಯಾಹ್ನ ಆ ದಿನ ಬೆಳಗ್ಗೆ ನಡೆದ ಭಯೋತ್ಪಾದಕ ದಾಳಿಯ ಕುರಿತು ಪತ್ರಿಕಾ ಪುರವಣಿಯನ್ನು ಪ್ರಕಟಿಸಿದ್ದವು.[][]


ಟಿಪ್ಪಣಿಗಳು

ಬದಲಾಯಿಸಿ
  1. Annual Report of the Librarian of Congress, 1922, p. 59
  2. "PHOTOS: Star front pages Sept. 11-17, 2001". Toronto Star (in ಇಂಗ್ಲಿಷ್). Retrieved March 20, 2023.[ಮಡಿದ ಕೊಂಡಿ]
  3. Swanson, Lillian (September 16, 2001). "Behind the coverage of a tragic event". The Philadelphia Inquirer. p. C10. Retrieved September 12, 2023. 20 people worked to put together the paper's first Extra edition since O.J. Simpson's acquittal in 1995, and the only the fifth in 50 years.

ಉಲ್ಲೇಖಗಳು

ಬದಲಾಯಿಸಿ