ಪತ್ರಿಕಾಗೋಷ್ಠಿ (ವಾರ್ತಾಗೊಷ್ಠಿ) ಒಂದು ಮಾಧ್ಯಮ ಕಾರ್ಯಕ್ರಮವಾಗಿದ್ದು, ಇದರಲ್ಲಿ ಸುದ್ದಿಯೋಗ್ಯ ವ್ಯಕ್ತಿಗಳು ತಾವು ಮಾತನಾಡುವುದನ್ನು ಕೇಳಲು ಪತ್ರಕರ್ತರನ್ನು ಆಹ್ವಾನಿಸುತ್ತಾರೆ, ಮತ್ತು ಬಹುತೇಕ ವೇಳೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳುತ್ತಾರೆ.[] ಪ್ರತಿಯಾಗಿ ಜಂಟಿ ಪತ್ರಿಕಾಗೋಷ್ಠಿಯನ್ನು ಇಬ್ಬರು ಅಥವಾ ಹೆಚ್ಚು ಮಾತಾಡುವ ಪಕ್ಷಗಳ ನಡುವೆ ನಡೆಸಲಾಗುತ್ತದೆ.

ಅಭ್ಯಾಸ

ಬದಲಾಯಿಸಿ

ಪತ್ರಿಕಾಗೋಷ್ಠಿಯಲ್ಲಿ, ಒಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಹೇಳಿಕೆಗಳನ್ನು ನೀಡಬಹುದು, ನಂತರ ಪ್ರಶ್ನೆಗಳನ್ನು ಕೇಳಬಹುದು. ಕೆಲವೊಮ್ಮೆ ಕೇವಲ ಪ್ರಶ್ನೆಗಳನ್ನು ಕೇಳಲಾಗಬಹುದು; ಕೆಲವೊಮ್ಮೆ ಹೇಳಿಕೆಯಿದ್ದು ಪ್ರಶ್ನೆಗಳಿಗೆ ಅನುಮತಿ ಇರುವುದಿಲ್ಲ.

ರಾಜಕಾರಣಿಗಳು (ಉದಾಹರಣೆಗೆ ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ), ಕ್ರೀಡಾ ತಂಡಗಳು, ಪ್ರಸಿದ್ಧ ವ್ಯಕ್ತಿಗಳು ಅಥವಾ ಚಲನಚಿತ್ರ ನಿರ್ಮಾಣಶಾಲೆಗಳು, ಉತ್ಪನ್ನಗಳ ಪ್ರಚಾರಮಾಡಲು ವಾಣಿಜ್ಯ ಸಂಸ್ಥೆಗಳು, ಮೊಕದ್ದಮೆಗಳನ್ನು ಪ್ರಚಾರ ಮಾಡಲು ವಕೀಲರು ಹಲವುವೇಳೆ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ