ಸಂಬಳ

(ಪಗಾರ ಇಂದ ಪುನರ್ನಿರ್ದೇಶಿತ)

ಸಂಬಳವು (ವೇತನ, ಪಗಾರ) ಉದ್ಯೋಗದತನು ಉದ್ಯೋಗಿಗೆ ನೀಡುವ ಸಂದಾಯದ ಒಂದು ರೂಪ. ಇದನ್ನು ಉದ್ಯೋಗದ ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಹೇಳಿರಬಹುದು. ಇದು ಬಿಡಿಕೂಲಿಗೆ ವ್ಯತಿರಿಕ್ತವಾಗಿದೆ, ಏಕೆಂದರೆ ಬಿಡಿಗೂಲಿಯನ್ನು ಆವರ್ತಕ ಆಧಾರದ ಮೇಲೆ ನೀಡುವ ಬದಲಾಗಿ, ಪ್ರತಿ ಕೆಲಸ, ಗಂಟೆ ಅಥವಾ ಇತರ ಏಕಮಾನಕ್ಕೆ ಪ್ರತ್ಯೇಕವಾಗಿ ಪಾವತಿಸಲಾಗುತ್ತದೆ. ಒಂದು ಉದ್ಯಮವನ್ನು ನಡೆಸುವ ದೃಷ್ಟಿಯಿಂದ, ಸಂಬಳವನ್ನು ಕಾರ್ಯಗಳನ್ನು ನಡೆಸುವುದಕ್ಕಾಗಿ ಮಾನವ ಸಂಪನ್ಮೂಲಗಳನ್ನು ಪಡೆಯುವ ಮತ್ತು ಉಳಿಸಿಕೊಳ್ಳುವ ವೆಚ್ಚ ಎಂದೂ ನೋಡಬಹುದು. ಆಗ ಇದನ್ನು ಸಿಬ್ಬಂದಿ ಖರ್ಚು ಅಥವಾ ಸಂಬಳದ ಖರ್ಚು ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ಬದಲಾಯಿಸಿ

ಭಾರತದಲ್ಲಿ, ಸಾಮಾನ್ಯವಾಗಿ ಸಂಬಳಗಳನ್ನು ತಿಂಗಳ ಕೊನೆಯ ಕೆಲಸ ದಿನದಂದು ಪಾವತಿಸಲಾಗುತ್ತದೆ (ಸರ್ಕಾರಿ, ಸಾರ್ವಜನಿಕ ವಲಯದ ಇಲಾಖೆಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಜೊತೆಗೆ ಬಹುಪಾಲು ಇತರ ಖಾಸಗಿ ವಲಯದ ಕಂಪನಿಗಳು). ವೇತನ ಪಾವತಿ ಕಾಯಿದೆಯ ಪ್ರಕಾರ, ಒಂದು ಕಂಪನಿಯು ೧,೦೦೦ ಉದ್ಯೋಗಿಗಳಿಗಿಂತ ಕಡಿಮೆ ಹೊಂದಿದ್ದರೆ, ಕಂಪನಿಯು ಸಂಬಳವನ್ನು ಪ್ರತಿ ತಿಂಗಳ ೭ರಂದು ಪಾವತಿಸಬೇಕು. ಕಂಪನಿಯು ೧,೦೦೦ ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೆ, ಸಂಬಳವನ್ನು ಪ್ರತಿ ತಿಂಗಳ ೧೦ರೊಳಗೆ ಪಾವತಿಸಲಾಗುತ್ತದೆ.[೧]

ಉಲ್ಲೇಖಗಳು ಬದಲಾಯಿಸಿ

  1. "Last Date Of Payment Of Salary Employment Related Query". www.citehr.com (in ಇಂಗ್ಲಿಷ್). Retrieved 2018-06-14.
"https://kn.wikipedia.org/w/index.php?title=ಸಂಬಳ&oldid=914896" ಇಂದ ಪಡೆಯಲ್ಪಟ್ಟಿದೆ