ಪಂ.ಅಶೋಕ್ ಹಾಗೂ ಪಂ. ಚಂದ್ರಶೇಖರ್ ವಝೆ
"ಮುಂಬಯಿ ಸೋದರರೆಂದು" ಪ್ರಸಿದ್ಧರು
ಬದಲಾಯಿಸಿಪಂಡಿತ್.ಅಶೋಕ್, ಮತ್ತು ಪಂಡಿತ್. ಚಂದ್ರಶೇಖರ ವಝೆ,ಯವರು ಹಿಂದೂಸ್ತಾನಿ ಸಂಗೀತ ಶೈಲಿಯಲ್ಲಿ "ಮುಂಬಯಿ ಸೋದರರೆಂದು" ಪ್ರಸಿದ್ಧರಾಗಿದ್ದಾರೆ. 'ಜುಗಲ್ ಬಂದೀ ಸಂಗೀತ ಕಾರ್ಯಕ್ರಮ' ೨೦೦೭ ರ ಜನವರಿ, ೫ ರಂದು, ಮುಂಬಯಿನ ಸಹ್ಯಾದ್ರಿಯ ಡೀ. ಡಿ ನಲ್ಲಿ ರಾತ್ರಿ ೧೧ ಘಂಟೆಯ ಕಾರ್ಯಕ್ರಮದಲ್ಲಿ ಮೂಡಿಬಂದಿತ್ತು. 'ಜುಗಲ್ ಬಂದಿ ಕಾರ್ಯಕ್ರಮ,' ದ ವಿಶೇಷತೆಯೆಂದರೆ, ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತಗಳ ಹೊಳಹುಗಳನ್ನು ಸಮರ್ಥವಾಗಿ ಬೆಸೆಯುವ ಪರಿಕ್ರಮ. ಇದೇ ಮ್ಯೂಸಿಕ್ ಪ್ರಿಯರು ಫೂಶನ್ ಎಂದು ಹೇಳುವ ಮಾತು. ಅಶೋಕ್ ಮತ್ತು ವಝೆಯವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಅಪಾರ ಸಾಧನೆಗಳನ್ನು ಮಾಡಿ, 'ಜುಗಲ್ ಬಂದಿ' ಯಂತಹ ಒಂದು ಹೊಸ ಆಯಾಮವನ್ನು ಸೃಷ್ಟಿಸಿ ಅತ್ಯಂತ ಯಶಸ್ಸನ್ನು ಪಡೆದಿದ್ದಾರೆ. ದೇಶ-ವಿದೇಶಗಳಲ್ಲೂ ಈ ಪ್ರಾಕಾರದ ವೈವಿಧ್ಯತೆ, ಸಂಗೀತಾಭಿಲಾಷಿಗಳ ಮನವನ್ನು ಸೂರೆಗೊಂಡಿದೆ.
ಪಂ.ಟಿ.ಎನ್.ಅಶೋಕ್
ಬದಲಾಯಿಸಿಪಂ.ಟಿ.ಎನ್.ಅಶೋಕ್, ಎ.ಐ.ಆರ್.ಮುಂಬಯಿ, ಮತ್ತು ದೂರದರ್ಶನದಲ್ಲಿ 'ಎ' ಗ್ರೇಡ್ ಕಲಾವಿದರಾಗಿ ದುಡಿಯುತ್ತಿದ್ದಾರೆ. ಅವರು ಆಕಾಶವಾಣಿಯ ಕರ್ನಾಟಕ ಸಂಗೀತ ವಿಭಾಗದ ಮುಖ್ಯಸ್ತರು. 'ಶ್ರೀರಂಜಿನಿ ಗಾನ ಮಂದಿರ' ದ ಪ್ರಾಂಶುಪಾಲರು. 'ಶ್ರೀರಂಜಿನಿ ಸಂಗೀತ ಸಭ (ರಿ) ಡೊಂಬಿವಲಿ'ಯ ಸ್ಥಾಪಕ ಅಧ್ಯಕ್ಷರು. ಇವರು ಪುರುಂದರ ದಾಸರ ಪದಗಳನ್ನು, ಭಜನೆಯನ್ನು ಹಾಡುವುದರಲ್ಲಿ ಎತ್ತಿದ ಕೈ. ಇವರ ಸಂಗೀತ ಕಛೇರಿಗಳು, 'ಟಾಟಾ ನ್ಯಾಷನಲ್ ಸೆಂಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್,' ' ಶಣ್ಮುಖಾನಂದಾ ಸಭಾ', 'ನಾದಾಂಜಲಿ', 'ರಾಗಮುದ್ರಾ ಫೈನ್ ಆರ್ಟ್ಸ್', 'ಮೈಸೂರ್ ಅಸೋಸಿಯೆಷನ್, ಮುಂಬಯಿ', 'ಪುಣೆ ಕನ್ನಡ ಸಂಘ', 'ಗುರುವಾಯೂರಿನ ಚೆಂಬೈ ಆರಾಧನಾ ಫೆಸ್ಟಿವಲ್', ಚೆನ್ನೈ, ಮಧುರೈ, ತುಮಕೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬರೋಡ, ಮತ್ತು ಹಲವು ಸ್ಥಳಗಳಲ್ಲಿ ನಡೆದಿವೆ.
ಪಂ. ಅಶೋಕರ ಗುರುಗಳು
ಬದಲಾಯಿಸಿಪಂ. ಅಶೋಕರು, 'ಶ್ರೀ. ವಿದ್ವಾನ್ ಪಾಲ್ಘಾಟ್, ರಘು', 'ಶ್ರೀ. ಟೀ. ಎ. ಎಸ್. ಮಣಿ', 'ಶ್ರಿ. ಈರೋಡ್ ಎ. ಗುರುರಾಜನ್,, ಮತ್ತು 'ಶ್ರೀ ಟೀ. ಎನ್. ರಮೇಶ್' ರವರಿಗೆ ಲಯವಿನ್ಯಾಸ ಹಾಡಿದ್ದಾರೆ. ಮುಂಬಯಿ ನಲ್ಲಿ, 'ಸ್ವರಂಕುರ್,' ನಡೆಸಿಕೊಟ್ಟ, 'ಸಂಗೀತ ಮಹಾಯಜ್ಞ' ದಲ್ಲಿ ಭಾಗವಹಿಸಿದ ೧೫೦ ಕರ್ನಾಟಕ್ ಮತ್ತು ಹಿಂದೂಸ್ತಾನಿ ಶೈಲಿಯ ಸಂಗೀತಕಾರರರ ಕೂಟದಲ್ಲಿ ೫೦ ಗಂಟೆ ಬಿಡುವಿಲ್ಲದೆ ಹೇಳಿದ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡಿದ್ದರು. ಇದನ್ನು 'ಗಿನಿಸ್ ಬುಕ್ ಆಫ್ ರಿಸರ್ಚ್ ಅಕ್ಯಾಡಮಿ', ಲಂಡನ್, ತನ್ನ ಮೆಚ್ಚುಗೆ ವ್ಯಕ್ತ ಪಡಿಸಿತ್ತು.
ದೇಶ-ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳು
ಬದಲಾಯಿಸಿ೧೯೮೦ ರಲ್ಲಿ ಲಂಡನ್, ಶ್ರೆಸ್ ಬರಿ, ಜರ್ಮನಿ, ಸ್ವಿಟ್ಜರ್ ಲ್ಯಾಂಡ್, ನಡೆದ The International Youth Music Festival ವಿದ್ವಾನ್ ಶ್ರೀ ಪಾಲ್ಘಾಟ್ ವಿ. ಮಣಿಯವರ ನೇತೃತ್ವದಲ್ಲಿ ಪ್ರಮುಖ ಸಂಗೀತಕಾರರಾಗಿ ಭಾಗವಹಿಸಿದ್ದರು. ಡಾ. ಪ್ರಕಾಶ್ ಸಂಗೀತ್, ಅರುನ್ ಕಾಶಲ್ ಕರ್, ಚಂದ್ರಶೇಖರ್ ವಝೆ ಜೊತೆಯಲ್ಲಿ 'ಜುಗಲ್ಬಂದಿ ಸಂಗೀತ' ಹಾಡಿದ್ದಾರೆ. ಜಾಝ್ ಸಂಗೀತವನ್ನು ಲೂಇಸ್ ಬ್ಯಾಂಕ್ಸ್, ಎಂಬ್ರಿಯೋ, ಚಾರ್ಲಿ ಮಾರಿಯಾನೊ, ಜರ್ಮನಿ ಮೈನಾರ್ಡ್, ಫರ್ಗ್ಯುಸನ್ ( ಯು.ಎಸ್.ಎ) ಎನ್. ಗಿರೋವ್ (ಬಲ್ಗೇರಿಯ) ಡಾನ್ ಬಾರೋ ಮತ್ತು ತುಂಕೀ ಬೇರ್ (ಆಸ್ಟ್ರೇಲಿಯ) ಜೊತೆಗೂಡಿ ಪ್ರದರ್ಶಿಸಿದ್ದರು.
ಅಶೋಕ್ ರವರ ಸೋದರ, 'ಟೀ. ಎನ್. ರಮೆಶ್', ಮೃದಂಗಂ, ಮತ್ತು ಘಟಂ ವಾದ್ಯದಲ್ಲಿ ನಿಪುಣರು. ಸೋದರಿ, ಶ್ರೀಮತಿ ಲತಾ ಶ್ಯಾಮ್, ಒಳ್ಳೆಯ ಸಂಗೀತಕಾರರು. ಅಶೋಕರ ಮಗಳು, 'ಕು. ಲಾವಣ್ಯ', ಮತ್ತು 'ಶ್ರೀಮತಿ. ಸುಜಾತ ಅಶೋಕ್', ಶಾಸ್ತ್ರೀಯ ಸಂಗೀತದಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ.
ಬೆಂಗಳೂರಿನಲ್ಲಿ 'ತಾಳ ತರಂಗಿಣಿ' ಎಂಬ ಒಂದು 'ಧ್ವನಿ ಮುದ್ರಿಕೆ' ಯನ್ನು ಬಿಡುಗಡೆಮಾಡಿದರು. ಅವರ ಮನೆ, ಸಂಗೀತ, ನಾಟಕ, ಸಾಹಿತ್ಯಗಳ ಖನಿಜವೆಂದರೆ, ಅತಿಶಯೋಕ್ತಿಯಲ್ಲ. 'ಬೆಳ್ಳಾವಿ ನರಹರಿ ಶಾಸ್ತ್ರಿಗಳು', 'ಸಂಗೀತ ವಿದ್ವಾನ್ ಟೀ. ಕೆ. ರಾಮಮೂರ್ತಿಗಳು', ಅಶೋಕರ ವಂಶಜರು.
ಅಶೋಕರ ತಾಯಿ-ತಂದೆಯರು
ಬದಲಾಯಿಸಿತಂದೆ, 'ಟೀ. ವೀ. ನಾಗರಾಜು', ತಾಯಿ, 'ಟೀ. ಎನ್. ಲಕ್ಷ್ಮೀದೇವಮ್ಮ'- ಇವರಿಬ್ಬರೂ ಸಹಜವಾಗಿಯೇ ಅಶೋಕರಿಗೆ ಸಂಗೀತವನ್ನು ಅಭ್ಯಸಿಸಲು ಸ್ಪೂರ್ತಿ ನೀಡಿದ್ದರು. ಅಶೋಕ್ ತಮ್ಮ ಸಂಗೀತದ ತಾಲೀಮನ್ನು ಮೊದಲು ಪ್ರಾರಂಭಿಸಿದ್ದು, ಗುರು, ವಿದ್ವಾನ್ ಬೆಳ್ಳಾರಿ ಎಮ್. ಶೇಷಗಿರಿ ಆಚಾರ್, ಬಳಿಯಲ್ಲಿ. (ಬಳ್ಳಾರಿ ಸೋದರರೆಂದು ಖ್ಯಾತರಾಗಿದ್ದ ) ನಂತರದಲ್ಲಿ ಅವರಿಗೆ ಗಾನಕಲಾಶ್ರೀ ಶ್ರೀಮತಿ, ಆರ್. ಎ. ರಮಾಮಣಿ ಎಮ್. ಎ. (ಮ್ಯೂಸಿಕ್) ಸಂಗೀತ ಹೇಳಿಕೊಟ್ಟರು. ಆಕೆ, ಕರ್ನಾಟಕದಲ್ಲಿ " ಅವಧಾನ ಪಲ್ಲವಿ" ಯನ್ನು ಹಾಡಿದ ಪ್ರಥಮ ವಿದುಷಿ). ಶ್ರೀ ಅಶೋಕ್, ಬೀ. ಕಾಮ್ ಪದವೀಧರರು. ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ಡಿಪ್ಲೊಮಾ, ಹಾಸಿಲ್ ಮಾಡಿಕೊಂಡಿದ್ದಾರೆ.
'ಚಂದ್ರಶೇಖರ ವಝೆ', ಬಾಲ್ಯ ಮತ್ತು ವಿದ್ಯಾಭ್ಯಾಸ
ಬದಲಾಯಿಸಿಮುಂಬಯಿ ವಿಶ್ವವಿದ್ಯಾಲಯದಲ್ಲಿ ವೋಕಲ್ ಸಂಗೀತದಲ್ಲಿ ಮಾಸ್ಟರ್ಸ್ ಪದವಿ ಪಡೆದ, ಅವರ ಮನೆ ಸಂಗೀತದ ತವರು. ಅವರ ತಾತ, 'ಶ್ರೀ ಮಾಮಾ ಪೆಡ್ಸೆ', 'ಗುರುತುಲ್ಯ' ಮರಾಠಿ ಸ್ಟೇಜ್ ಕಲಾವಿದರಾಗಿದ್ದರು. ಎಳೆಯ ವಯಸ್ಸಿನಲ್ಲಿ ಸಂಗೀತದ ಬೀಜ, ಬಿತ್ತಿ ಅದಕ್ಕೆ ನೀರೆರೆದವರು ಅವರ ತಂದೆ, ಪಂ. ರಘುನಾಥ ವಝೆ. ಅವರು ಹಾಡುಗಾರಿಕೆಯಲ್ಲಿ ನಿಸ್ಸೀಮರು, ಮತ್ತು ಸಂಗೀತ ಸಂಯೋಜಕರೂ ಕೂಡ. ಪಂ. ಬೀ. ಡೀ. ತಂಬೆ. ಮತ್ತು ಪಂ. ಸದಾಶಿವ ಪವಾರ್ ಬಳಿ ಇದ್ದಾಗ, ಅವರ ತಬಲಾವಾದನದಲ್ಲಿ ಅಭಿರುಚಿ ಬೆಳೆಯಿತು. ಅದರಲ್ಲಿ ಪ್ರಾವೀಣ್ಯತೆಯನ್ನೂ ಪಡೆದರು. ಪಂ. ಫಿರೋಝ್ ದಸ್ತೂರ್, ಬೇಗಮ್ ಪರ್ವೀನ್ ಸುಲ್ತಾನಾ, ಪದ್ಮಶ್ರೀ ಉಸ್ತಾದ್ ಅಬ್ದುಲ್ ಹಲೀಮ್ ಜಾಫರ್ ಖಾನ್, ಪಂ. ಅಜಯ್ ಪೋಹನ್ ಕರ್, ಶ್ರೀಮತಿ ಅಶ್ವಿನೀ ಭಿಡೆ ದೇಶ್ಪಾಂಡೆ, ಶ್ರೀಮತಿ ಆರತಿ ಅಂಕಲೀ ಕರ್, ಗಳಿಗೆ ಪಕ್ಕವಾದ್ಯದಲ್ಲಿ ತಬಲ ಬಾರಿಸುತ್ತಿದ್ದರು. 'ಡಾ. ವಿದ್ಯಾಧರ್ ವ್ಯಾಸ್', ಇವರನ್ನು ಕೆನಡಾ, ಮತು ಅಮೆರಿಕೆಗೆ, ಜೊತೆಯಲ್ಲಿ ಕರೆದುಕೊಂಡು ಹೋದರು. ವಝೆಯವರು ತಬಲ ಬಾರಿಸುವುದರ ಜೊತೆಗೆ ಉಪನ್ಯಾಸವನ್ನು ಕೊಟ್ಟು, ಅದರ ವಿಶೇಷತೆಗಳನ್ನು ಸ್ಯಾಂಡಿಯಾಗೋ ಮತ್ರು ಇಲಿನಾಯ್ ಸ್ಟೇಟ್ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳ ಮೂಲಕ ಪ್ರದರ್ಶಿಸಿದರು. ತಂದೆಯವರು ವೋಕಲ್ ಸಂಗೀತಕ್ಕೆ ಒತ್ತುಕೊಟ್ಟು ಅದರಲ್ಲಿ ಮುಂದುವರೆಯಲು ಹೇಳಿದರು.
'ಮುಂಬಯಿ-ಆಕಾಶವಾಣಿಯ 'ಎ ಗ್ರೇಡ್ ಕಲಾವಿದರು'
ಬದಲಾಯಿಸಿಮುಂಬಯಿನ ಪಂ.ಟಿ.ಎನ್ . ಅಶೋಕ್,ಕೆಲಸ ಮಾಡುತ್ತಿರುವ ಪಂ.ವಝೆ,'ರಿಸರ್ಚ್ ಅಕ್ಯಾಡಮಿ ಸ್ಕಾಲರ್,' ಆಗಿದ್ದಾರೆ. ಭಾರತದಾದ್ಯಂತ ಸಂಗೀತ ಸಮ್ಮೆಳನಗಳಲ್ಲಿ ಭಾಗವಹಿಸಿದ್ದಾರೆ. ಅವರ ಕಂಠ ಮಾಧುರ್ಯವೂ ಅದ್ಭುತವಾಗಿದೆ. ಅವರು ಕೆಲವು ಮ್ಯೂಸಿಕ್ ಕ್ಯಾಸೆಟ್ಗಳನ್ನು ಬೇಗಮ್ ಪರ್ವೀನ್ ಸುಲ್ತಾನಾ, ಜೊತೆಗೆ ಹೆಳಿದ್ದಾರೆ. ಗಜಾನನ ಹೊರತಂದಿದ್ದಾರೆ. ಅವುಗಳಲ್ಲಿ ಹಲವು ಹಾಡುಗಳು ಅಪಾರಜನಪ್ರಿಯವಾಗಿವೆ. ಉದಾ : 'ಗಣರಾಯಾ ಗಜಮುಖಾ', 'ಮೋಹನ್ ಸಾಯಿ', ಮುಂತಾದ ನಂಬರ್ ಗಳು ಪ್ರಸಿದ್ಧವಾಗಿವೆ.
ಪಂ.ಭೀಮಸೇನ ಜೋಶಿಯವರ ಬಗ್ಗೆ ಸ್ಮರಣೆ
ಬದಲಾಯಿಸಿಜನವರಿ ೨೦೧೨ರಲ್ಲಿ ಗುರು, ಭೀಮಸೇನ್ ಜೋಶಿಯವರಿಗೆ, ಸಂಗೀತ ಕಾರ್ಯಕ್ರಮ ಕೊಡುವುದರ ಮೂಲಕ ಪಂ. ಚಂದ್ರಶೇಖರ ವಝೆಯವರು, ತಮ್ಮ ಗೌರವವನ್ನು ಅರ್ಪಿಸಿದರು.[೧]
ಇವರುಗಳು ಭಾಗವಹಿಸಿದ ಸಂಗೀತ ಕಾರ್ಯಕ್ರಮಗಳು ಹೀಗಿವೆ
ಬದಲಾಯಿಸಿ- ೧೯೯೮- ೨೩, ಆಗಸ್ಟ್, ೧೯೯೮ 'ರಾಗಮುದ್ರಾ', ಡೊಂಬಿವಲಿ.
- ೧೯೯೯-೧೫, ಆಕ್ಟೋಬರ್, ಅಯ್ಯಪ್ಪನ್ ದೇವಸ್ಥಾನ ಕಲ್ಯಾಣ.
- ೨೦೦೦- ೨೦, ಮೇ, 'ಆಯೋಜನ್ ಸಂಗೀತ ಸಭ' , ಕಲ್ಯಾಣ.
- ೨೦೦೦- ೩೦, ಮೇ, 'ಸತ್ಯಸಾಯಿ ಸೇವಾ ಮಂಡಲ್', ಕಲ್ಯಾಣ.
- ೨೦೦೦- ೧೬, ಸೆಪ್ಟೆಂಬರ್, 'ರಾಗಮುದ್ರ', ಗುರುವಾಯೂರ್ ದೇವಸ್ಥಾನ, ಡೊಂಬಿವಲಿ.
- ೨೦೦೨- ೨೫, ಮೇ, ಕರ್ಣಾಟಕ ಕಾಲೇಜಿನಲ್ಲಿ, 'ಮಲ್ಲೇಶ್ವರಂ ಸಂಗೀತ ಸಭ', ಮತ್ತು 'ಅನನ್ಯ ಕಲ್ಚರಲ್ ಅಕ್ಯಾಡಮಿ, ಬೆಂಗಳೂರು.
- ೨೦೦೩- ೧೦, ಜೂನ್, 'ಮಲಾಡ್ ಮ್ಯೂಸಿಕ್ ಸರ್ಕಲ್', ಮುಂಬಯಿ.
- ೨೦೦೪- ೧೫ ರಿಂದ ಏಪ್ರಿಲ್ ೨೩ ರ ವರೆಗೆ, 'ಸಂಗೀತ ಸರಿತ' ಕಾರ್ಯಕ್ರಮಗಳನ್ನು ಆಕಾಶವಾಣಿ, 'ವಿವಿಧ ಭಾರತಿ' ಇಂದ ಪ್ರಸಾರ. (ಸೋಮನಾಥರ ರಾಗಾವಳಿ, ೯ ರಾಗ ಎಪಿಸೊಡ್ ಗಳ, ಮಾಲಿಕೆ)
- ೨೦೦೪-೧ನೆಯ ಜುಲೈ ನಲ್ಲಿ ವಾರ್ಷಿಕ ಸಂಗೀತೋತ್ಸವದ ಕಾರ್ಯಕ್ರಮ, ಬೆಂಗಳೂರಿನ ಶಾರದಾ ಸಂಗೀತಸಭಾದಲ್ಲಿ.
- ೨೦೦೪-೩೧ರಂದು ಅಕ್ಟೋಬರ್ ನಲ್ಲಿ ವಿಶ್ವ ಸಂಗೀತದಿನೋತ್ಸವದ ಅಂಗವಾಗಿಮುಂಬಯಿ ಆಕಾಶವಾಣಿಯಲ್ಲಿ ರಾತ್ರಿ ೧೧ ಕ್ಕೆ ಕಾರ್ಯಕ್ರಮ.
- ೨೦೦೫-ಭಾರತೀಯ ಭವನದಲ್ಲಿ ಮಾಸಿಕ ಕಾರ್ಯಕ್ರಮ,
- ೨೦೦೫ ಸ್ವಾಮಿ ಹರಿದಾಸರ ೫೦ನೆಯ ಸಂಗೀತೋತ್ಸವ ಸುರ ಸಂಸದ್ ಮುಂಬಯಿ ನಲ್ಲಿ
- ೨೦೦೬-ಮೇ ೩ ರಂದು, ಶ್ರೀರಂಜಿನೀ ಸಂಗೀತ, ಸಭದಲ್ಲಿ ಮಾಸಿಕ ಕಾರ್ಯಕ್ರಮ [೨]
- ೨೦೦೬- ಡಿಸೆಂಬರ್ ೧೦ ರಂದು, ಆಕಾಶವಾಣಿ, ಸಹ್ಯಾದ್ರಿಯಲ್ಲಿ ರಾತ್ರಿ ೧೧ ಘಂಟೆಗೆ
ಪಂ.ಅಶೋಕ್ ರವರ ೬೦ ನೇ ಹುಟ್ಟುಹಬ್ಬ
ಬದಲಾಯಿಸಿಮುಂಬಯಿನಲ್ಲಿ ಪಂ.ಅಶೋಕರವರ ೬೦ ನೆಯ ಹುಟ್ಟುಹಬ್ಬವನ್ನು ಅವರ ಪ್ರಿಯ ಸಂಗೀತ ವಿದ್ಯಾರ್ಥಿಗಳು, ಸ್ನೇಹಿತರು, ಮತ್ತು ಹಿತೈಷಿಗಳು ೨೩, ಡಿಸೆಂಬರ್, ೨೦೧೮ ರಂದು ಮುಂಬಯಿನ ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ಆಯೋಜಿಸಿದ್ದರು.[೩]
ಉಲ್ಲೇಖಗಳು
ಬದಲಾಯಿಸಿ- ↑ tribute to Pandit Bhimsen Joshi
- ↑ "ಡೊಂಬಿವಲಿಯ ಶ್ರೀರಂಜಿನಿ ಸಂಗೀತ ಸಭದಲ್ಲಿ ಕಾರ್ಯಕ್ರಮ". Archived from the original on 2014-04-26. Retrieved 2014-04-27.
- ↑ Sangeetha Vidwan. Pt. T.N. Ashok, was felicitated at Mumbai. 23rd, Dec, 2018