ಶಿವಕುಮಾರ್ ಶರ್ಮಾ
(ಪಂಡಿತ್ ಶಿವಕುಮಾರ್ ಶರ್ಮಾ ಇಂದ ಪುನರ್ನಿರ್ದೇಶಿತ)
ಪಂಡಿತ್ ಶಿವಕುಮಾರ್ ಶರ್ಮಾ(ಜನನ:ಜನವರಿ ೧೩,೧೯೩೮, ಮರಣ :ಮೇ ೧೦,೨೦೨೨) ಇವರು ಹಿಂದುಸ್ತಾನಿ ಸಂಗೀತ ಶೈಲಿಯ ಸಂತೂರ್ ವಾದ್ಯದ ವಾದಕರು. ಸಂತೂರ್ ಇದು ಕಾಶ್ಮೀರ ಕೊಳ್ಳದ ಒಂದು ಜಾನಪದ ವಾದ್ಯ, ಇದನ್ನು ಕೆತ್ತಿದ ಕಟ್ಟಿಗೆಯ ತುಂಡುಗಳಿಂದ ನುಡಿಸಲಾಗುತ್ತದೆ.
ಪಂಡಿತ್. ಶಿವಕುಮಾರ್ ಶರ್ಮ. | |
---|---|
ಹಿನ್ನೆಲೆ ಮಾಹಿತಿ | |
ಜನನ | Jammu, Jammu and Kashmir, British Raj | ೧೩ ಜನವರಿ ೧೯೩೮
ಮರಣ | 10 May 2022[೧] ಮುಂಬಯಿ, ಮಹಾರಾಷ್ಟ್ರ, ಭಾರತ | (aged 84)
ಸಂಗೀತ ಶೈಲಿ | ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ |
ವೃತ್ತಿ | ಧ್ವನಿ ರಚನಾಕಾರರು. , ಸಂಗೀತಕಾರರು |
ವಾದ್ಯಗಳು | ಸಂತೂರ್, ತಬಲ |
ಸಕ್ರಿಯ ವರ್ಷಗಳು | ೧೯೫೫-೨೦೨೨ |
Associated acts | ರಾಹುಲ್ ಶರ್ಮ ಹರಿಪ್ರಸಾದ್ ಚೌರಸಿಯ |
ಅಧೀಕೃತ ಜಾಲತಾಣ | santoor |
ಜೀವನ ಮತ್ತು ಸಂಗೀತ ಸಾಧನೆ
ಬದಲಾಯಿಸಿಪ್ರಮುಖ ಮೈಲಿಗಲ್ಲುಗಳು
ಬದಲಾಯಿಸಿ- ೧೯೩೮ ಜನವರಿ ೧೩ರಂದು ಜಮ್ಮುವಿನಲ್ಲಿ ಜನನ.
- ೧೯೪೩ ತಂದೆಯವರಾದ ಪಂಡಿತ್ ಉಮಾ ದತ್ ಶರ್ಮರ ಬಳಿ ಗಾಯನ, ತಬಲಾ ಶಿಕ್ಷಣ ಪ್ರಾರಂಭ.
- ೧೯೫೦ ತಂದೆಯ ಬಳಿ ಸಂತೂರ್ ಶಿಕ್ಷಣ ಪ್ರಾರಂಭ.
- ೧೯೫೫ ಡಾ. ಕರಣ್ ಸಿಂಘರ ಒತ್ತಯದ ಬಳಿಕ ಸುರ್ ಸಿಂಗಾರ್ ಸಂಸದ್ನ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಸಂತೂರ ವಾದನ ಪ್ರಸ್ತುತಿ.
- ಮುಂದಿನ ೧೦ ವರ್ಷಗಳ ಕಾಲ ಸಂತೂರ ಪರಿಷ್ಕರಣೆ, ಮುಖ್ಯ ವಾದ್ಯವಾಗಿ ಪರಿವರ್ತನೆ
- ಸಂಗೀತ ನಿರ್ದೇಶಕ ವಸಂತ್ ದೇಶಯಿಯವರ ಜೊತೆಗೆ ಕೆಲಸ, ವಣಕುದುರೆ ಶಾಂತಾರಾಮರ 'ಝನಕ್ ಝನಕ್ ಪಾಯಲ್ ಬಾಜೇ' ಚಿತ್ರಕ್ಕೆ ಅನೇಕ ಚಿಕ್ಕ ಸಂಗೀತ ಕೃತಿಗಳ ಕಾಣಿಕೆ.
- ಎಚ್.ಎಮ್.ವಿ ಮೂಲಕ ಪ್ರಥಮ ಧ್ವನಿ ಮುದ್ರಿಕೆ.
- ಪಂ. ಹರಿಪ್ರಸಾದ್ ಚೌರಾಸಿಯ ಮತ್ತು ಪಂ. ಬ್ರಿಜ್ ಭೂಷಣ್ ಕಾಬ್ರಾ ಜೊತೆಗೂಡಿ 'ಕಾಲ್ ಅಫ್ ದಿ ವ್ಯಾಲಿ' ಧ್ವನಿಮುದ್ರಿಕೆ ರಚನೆ, ಇದು ಅತೀ ಹೆಚ್ಚು ಮಾರಾಟವಾದ ಹಿಂದುಸ್ತಾನಿ ಶೈಲಿಯ ಧ್ವನಿಮುದ್ರಿಕೆಯಾಯಿತು.
- ೧೯೮೦ ಪಂ. ಹರಿಪ್ರಸಾದ್ ಚೌರಾಸಿಯ ಜೊತೆಗೂಡಿ ಶಿವ-ಹರಿ ಜೋಡಿ ಸಂಗೀತ ನಿರ್ದೇಶಕ, ಯಶ್ ಛೋಪ್ರಾರ 'ಸಿಲ್ಸಿಲೇ' ಚಿತ್ರಕ್ಕೆ ಸಂಗೀತ ನಿರ್ದೇಶನ.
- ೧೯೮೫ ಅಮೇರಿಕೆಯ ಬಾಲ್ಟಿಮೋರ್ ನಗರದ ಗೌರವ ಪ್ರಜೆಯಾಗಿ ಸನ್ಮಾನ.
- ೧೯೮೬ ಕೇಂದ್ರ ಸಂಗೀತ ಕಲಾ ಅಕ್ಯಾಡೆಮಿಯ ಪ್ರಶಸ್ತಿ.
- ೧೯೮೭ ಅಮೇರಿಕೆಯ ಅಮೀರ್ ಖುಸ್ರೋ ಸೊಸೈಟಿಯ 'ನಝ್ರ್ ಎ ಖುಸ್ರೋ' ಪ್ರಶಸ್ತಿ.
- ೧೯೯೦ ಮಹಾರಾಷ್ಟ್ರ ಗೌರವ್ ಪುರಸ್ಕಾರ.
- ೧೯೯೦ ಶತತಂತ್ರಿ ಶಿರೋಮಣಿ ಬಿರುದು(ಜೋಧಪುರ)
- ೧೯೯೧ ಪದ್ಮಶ್ರೀ ಪ್ರಶಸ್ತಿ.
- ೧೯೯೪ ಜಮ್ಮು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
- ೧೯೯೬ ಉಸ್ತಾದ ಹಾಫೀಜ್ ಅಲಿ ಖಾನ್ ಪ್ರಶಸ್ತಿ.
- ೧೯೯೭ ಮಗ ರಾಹುಲ್ ಶರ್ಮಾ ಸಂಗೀತ ರಂಗಕ್ಕೆ ಪಾದಾರ್ಪಣೆ.
- ೨೦೦೧ ಪದ್ಮವಿಭೂಷಣ ಪ್ರಶಸ್ತಿ.
ನಿಧನ
ಬದಲಾಯಿಸಿಪಂಡಿತ್ ಶಿವಕುಮಾರ ಶರ್ಮರವರು (೮೪) ಸ್ವಲ್ಪ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ೧೦, ಮೇ, ೨೦೨೨ ರಂದು ಮುಂಬಯಿನಲ್ಲಿ ನಿಧನರಾದರು.[೨]
ಧ್ವನಿಮುದ್ರಣ ಪ್ರಶಸ್ತಿಗಳು
ಬದಲಾಯಿಸಿ- 'ಕಾಲ್ ಅಫ್ ದಿ ವ್ಯಾಲಿ'ಗೆ ಪ್ಲ್ಯಾಟಿನಮ್ ಡಿಸ್ಕ್
- 'ಸಿಲ್ಸಿಲಾ' ಚಿತ್ರದ ಧ್ವನಿ ಮುದ್ರಣಕ್ಕೆ ಪ್ಲ್ಯಾಟಿನಮ್ ಡಿಸ್ಕ್
ಉಲ್ಲೇಖಗಳು
ಬದಲಾಯಿಸಿ- ↑ "Santoor maestro Pandit Shivkumar Sharma passes away". The Indian Express. 10 May 2022. Archived from the original on 11 May 2022. Retrieved 10 May 2022.
- ↑ Santoor maestro Shivkumar Sharma passes away, The Hindu Bureau