ನ್ಯೂಟನ್‍ನ ಚಲನೆಯ ನಿಯಮಗಳು
ನ್ಯೂಟನ್ನನ ಚಲನೆಯ ನಿಯಮಗಳು[೧] ಮೂರು ಭೌತಿಕ ನಿಯಮಗಳಾಗಿದ್ದು ಇವು ಒಟ್ಟಿಗೆ ಶಾಸ್ತ್ರೀಯ ಯಂತ್ರಶಾಸ್ತ್ರಕ್ಕೆ ಅಡಿಪಾಯ ಹಾಕಿವೆ. ಅವು ಕಾಯ ಮತ್ತು ಅದರ ಮೇಲೆ ವರ್ತಿಸುತ್ತಿರುವ ಶಕ್ತಿ ಮತ್ತು ಶಕ್ತಿಗನುಗುಣವಾಗಿ ಅದರ ಚಲನೆ ಇವುಗಳ ನಡುವಿನ ಸಂಬಂಧವನ್ನು ವಿವರಿಸುತ್ತವೆ. ಸುಮಾರು ಮೂರು ಶತಮಾನಗಳ, ಹಿಂದೆ ಅವರು ಇದನ್ನು ಅನೇಕ ವಿಧಗಳಲ್ಲಿ ವಿವರಿಸಿದರು. ಈ ಕೆಳಗಿನಂತೆ ಅರ್ಥಗರ್ಭಿತವಾಗಿ ಸಾರಂಶಿಕರಿಸಲಾಗಿದೆ.
ಮೊದಲನೇ ನಿಯಮ : ಒಂದು ಜಡತ್ವದ ಚೌಕಟ್ಟಿನಲ್ಲಿ, ವಸ್ತುವನ್ನು ವೀಕ್ಷಿಸಿದಾಗ ಬಾಹ್ಯ ಶಕ್ತಿಯಿಂದ ಪರಿಣಾಮಕ್ಕೊಳಗಾಗದ ಹೊರತು, ಅದು ಸ್ಥಿರ ಅಥವಾ ಸ್ಥಿರ ವೇಗದಲ್ಲಿ ಚಲಿಸುತ್ತಿರುತ್ತದೆ.[೨]
ಎರಡನೆ ನಿಯಮ: F = ma: ವಸ್ತುವಿನ ಮೇಲೆ ಬಾಹ್ಯ ಶಕ್ತಿಗಳಿಂದಾದ ವೆಕ್ಟರ್ ಮೊತ್ತವು ವಸ್ತುವಿನ ದ್ರವ್ಯರಾಶಿಯನ್ನು ಅದರ ಒತ್ತಡದೇರಿಕೆಯೊಂದಿಗೆ ಗುಣಿಸಿದಾಗ ಬರುವ ಫಲಿತಾಂಶಕ್ಕೆ ಸಮಾನವಾಗಿರುತ್ತದೆ.
ಮೂರನೇ ನಿಯಮ: ಒಂದು ದೇಹ ಎರಡನೇ ದೇಹದ ಮೇಲೆ ಒತ್ತಡ ಹೇರಿದರೆ, ಎರಡನೇ ದೇಹ ಏಕಕಾಲದಲ್ಲಿ ಮೊದಲ ದೇಹದ ಮೇಲೆ ವಿರುದ್ಧ ದಿಕ್ಕಿನಲ್ಲಿ ಮತ್ತು ಪರಿಮಾಣದಲ್ಲಿ ಸಮನಾಗಿರುವ ಒಂದು ಶಕ್ತಿಯನ್ನು ಬೀರುತ್ತದೆ.
ಚಲನೆಯ ಮೂರು ನಿಯಮಗಳನ್ನು ಮೊದಲು ನ್ಯೂಟನ್ ವಿವರಿಸಿದರು. ನಂತರ ಅನೇಕ ಭೌತಿಕ ವಸ್ತು ಮತ್ತು ವ್ಯವಸ್ಥೆಗಳ ಚಲನೆಯ ತನಿಖೆಯಲ್ಲಿ ಬಳಕೆಯಾಯಿತು. 1687 ರಲ್ಲಿ ಪ್ರಕಟವಾದ ಅವರ ಫಿಲಾಸೊಫೇ ನ್ಯಾಚುರಲೀಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾದಲ್ಲಿ (ನ್ಯಾಚುರಲ್ ಫಿಲಾಸಫಿ ಮ್ಯಾಥೆಮೆಟಿಕಲ್ ಪ್ರಿನ್ಸಿಪಲ್ಸ್), ಮೊದಲು ಸಂಕಲಿಸಲಾಗಿದೆ. ಉದಾಹರಣೆಗೆ, ಪಠ್ಯದ ಮೂರನೆಯ ಸಂಪುಟದಲ್ಲಿ, ನ್ಯೂಟನ್ರು ವಿವರಿಸಿದ ಸಾರ್ವತ್ರಿಕ ಗುರುತ್ವಾಕರ್ಷಣೆ ನಿಯಮ ಸೇರಿ ಚಲನೆಯ ಈ ನಿಯಮಗಳು, ಕೆಪ್ಲರನ ಗ್ರಹಗಳ ಚಲನೆಯ ನಿಯಮಗಳನ್ನು ವಿವರಿಸುತ್ತವೆಂದು ತೋರಿಸಿಕೊಟ್ಟರು.
ಅವಲೋಕನ
ಬದಲಾಯಿಸಿಐಸಾಕ್ ನ್ಯೂಟನ್ (1643-1727), ಸೂತ್ರಗಳನ್ನು ನಿರೂಪಿಸಿದ ಭೌತಶಾಸ್ತ್ರಜ್ಞ.
ನ್ಯೂಟನ್‍ನ ನಿಯಮಗಳನ್ನು ಏಕ ಬಿಂದು ದ್ರವ್ಯರಾಶಿಗಳಾಗಿ ಆದರ್ಶೀಕರಿಸಿದ ವಸ್ತುಗಳಿಗೆ ಅನ್ವಯಿಸಲಾಗುತ್ತದೆ, ವಸ್ತುವಿನ ಕಾಯದ ಗಾತ್ರ ಮತ್ತು ಆಕಾರವನ್ನು ಹೆಚ್ಚು ಸುಲಭವಾಗಿ ಅದರ ಚಲನೆಯ ಮೇಲೆ ಗಮನಕೊಡಲು ನಿರ್ಲಕ್ಷಿಸಲಾಗುತ್ತದೆ ಎಂಬ ಅರ್ಥದಲ್ಲಿ. ಇದನ್ನು ವಸ್ತುವು ಅದರ ವಿಶ್ಲೇಷಣೆಯಲ್ಲಿ ಒಳಗೊಂಡಿರುವ ದೂರಗಳಿಗೆ ಹೋಲಿಸಿದಾಗ ಸಣ್ಣದಾಗಿದ್ದರೆ, ಅಥವಾ ಕಾಯದ ವಿರೂಪ ಮತ್ತು ಪರಿಭ್ರಮಣ ಯಾವುದೇ ಪ್ರಾಮುಖ್ಯ ಹೊಂದಿಲ್ಲವಾದಾಗ ಮಾಡಬಹುದು. ಈ ರೀತಿಯಲ್ಲಿ, ಒಂದು ಗ್ರಹವನ್ನೂ ನಕ್ಷತ್ರದ ಸುತ್ತ ಅದರ ಕಕ್ಷೀಯ ಚಲನೆಯ ವಿಶ್ಲೇಷಣೆಗಾಗಿ ಒಂದು ಕಣವಾಗಿ ಆದರ್ಶೀಕರಿಸಬಹುದು.
ತಮ್ಮ ಮೂಲ ರೂಪದಲ್ಲಿ, ನ್ಯೂಟನ್ನನ ಚಲನೆಯ ನಿಯಮಗಳು ಗಡುಸು ಕಾಯಗಳು ಮತ್ತು ವಿರೂಪವಾಗುವ ಕಾಯಗಳ ಚಲನೆಯನ್ನು ನಿರೂಪಿಸಲು ಸಾಕಾಗುವುದಿಲ್ಲ. 1750 ರಲ್ಲಿ ಲಿಯೊನಾರ್ಡ್ ಯೂಲರ್ ಯೂಲರ್‍ನ ಚಲನೆಯ ನಿಯಮಗಳು ಎಂದು ಕರೆಯಲಾದ ಗಡುಸು ಕಾಯಗಳಿಗೆ ನ್ಯೂಟನ್ ನ ಚಲನೆಯ ನಿಯಮಗಳ ಸಾಮಾನ್ಯೀಕರಣವನ್ನು ಪರಿಚಯಿಸಿದರು, ನಂತರ ಇವನ್ನು ವಿರೂಪವಾಗುವ ವಸ್ತುಗಳಿಗೂ ಅನ್ವಯಿಸಲಾಯಿತು. ಪ್ರತಿ ನ್ಯೂಟನ್ನನ ಚಲನೆಯ ನಿಯಮಗಳಿಂದ, ಯೂಲರ್‍ನ ನಿಯಮಗಳನ್ನು ಪಡೆಯಬಹುದು.
ಉಲ್ಲೇಖಗಳು
ಬದಲಾಯಿಸಿ