ನ್ಯೂಕ್ಲೀಯ ಶಕ್ತಿ
ಬೈಜಿಕ ಕ್ರಿಯೆಗಳಿಂದ ಬಿಡುಗಡೆಯಾದ ಶಕ್ತಿಯೇ ಬೈಜಿಕ ಅಥವಾ ನ್ಯೂಕ್ಲೀಯ ಶಕ್ತಿಯಾಗಿದೆ. ನಮ್ಮ ಈ ಆಧುನಿಕ ಯುಗದಲ್ಲಿ ನ್ಯೂಕ್ಲೀಯ ಶಕ್ತಿಯ ಬಳಕೆಯು ಪರ್ಯಾಯ ಶಕ್ತಿಯ ಮೂಲವಾಗಿ ಭರವಸೆ ಹುಟ್ಟಿಸಿದೆ. ನ್ಯೂಕ್ಲೀಯ ಕ್ರಿಯೆಗಳ ಪ್ರಮುಖ ಅನುಕೂಲವೆಂದರೆ ವಿಕಿರಣಪಟು ಮತ್ತು ವಿಕಿರಣಪಟುವಲ್ಲದ ಐಸೋಟೋಪುಗಳನ್ನು ತಯಾರಿಸುವುದು ನ್ಯೂಕ್ಲೀಯ ಕ್ರಿಯೆ ನಡೆಸಿ, ವಿಕಿರಣಪಟುವಾಗಿರುವ ಐಸೋಟೋಪುಗಳನ್ನು ಪಡೆಯುವ ಪ್ರಕ್ರಿಯೆಗೆ ಕೃತಕ ವಿಕಿರಣಪಟುಗಳೆಂದು ಹೆಸರು. ನ್ಯೂಕ್ಲೀಯ ಕ್ರಿಯೆಯು ಆಕಸ್ಮಿಕ ಸಂಭವನೀಯ ಕ್ರಿಯೆಯಾಗಿರುವುದರಿಂದ, ಬಿಡುಗಡೆಯಾಗುವ ಉತ್ಪನ್ನಗಳು ಅತ್ಯಲ್ಪ. ನ್ಯೂಕ್ಲೀಯ ಕ್ರಿಯೆಯ ಅತೀ ದೊಡ್ಡ ಸವಾಲು ಎಂದರೆ ಅದರ ನಿರಂತರತೆಯನ್ನು ಕಾಯ್ದುಕೊಳ್ಳುವುದು. ಈ ಕ್ರಿಯೆಗಳು ಆಕಸ್ಮಿಕವಾಗಿ ನಡೆಯುವುದರಿಂದ ಅವು ನಿರಂತರವಾಗಿ ನಡೆಯವು. ಆದ್ದರಿಂದ ನ್ಯೂಕ್ಲೀಯ ಕ್ರಿಯೆಗಳು ಸೈದ್ಧಾಂತಿಕವಾಗಿ ಪ್ರಮುಖವಾಗಿಯೇ ಹೊರತು ವ್ಯಾವಹಾರಿಕವಾಗಿ ಸಾಧುವಲ್ಲ ಎಂದು ಭಾವಿಸಲಾಯಿತು. ಆದರೆ ಈ ಆಲೋಚನೆಗೆ ಇದ್ದಕ್ಕಿದ್ದಂತೆ ಹೊಸದೊಂದು ತಿರುವು ದೊರೆಯಿತು. ನ್ಯೂಕ್ಲೀಯವಿದಳನ ಕ್ರಿಯೆಯು ಸರಪಳಿ ಕ್ರಿಯೆಯಾಗಿದ್ದು, ಅದನ್ನು ನಿರಂತರವಾಗಿ ನಡೆಸಬಹುದೆಂಬ ಅಂಶ ತಿಳಿಯಿತು. ನ್ಯೂಕ್ಲೀಯ ವಿದಳನ ಮತ್ತು ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳನ್ನು ನಿರಂತರವಾಗಿ ನಡೆಸುವ ಆಲೋಚನೆ ಮೂಡಿತು. ಹೀಗೆ ನ್ಯೂಕ್ಲೀಯ ಕ್ರಿಯೆಗಳಿಂದ ಅಪಾರ ಪ್ರಮಾಣದ ಶಕ್ತಿಯು ಬಿಡುಗಡೆಯಾಗುತ್ತದೆಂದು ತಿಳಿದು ಬಂತು.[೧]
ನ್ಯೂಕ್ಲೀಯ ವಿದಳನ ಸರಪಳಿ ಕ್ರಿಯೆ
ಬದಲಾಯಿಸಿಒಂದು ಭಾರವಾದ ಪರಮಾಣುವಿನ ನ್ಯೂಕ್ಲಿಯಸ್ ಒಡೆದು ಎರಡು ಮಧ್ಯಮ ಪ್ರಮಾಣದ ಬೀಜಗಳನ್ನು ಉಂಟುಮಾಡಿ ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ನ್ಯೂಕ್ಲೀಯ ವಿದಳನ ಎನ್ನುತ್ತಾರೆ. ಈ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್ಗಳು ಮಧ್ಯಮ ಪ್ರಮಾಣದ ಬೀಜಗಳಲ್ಲಿ ವಿದಳನ ಕ್ರಿಯೆಯನ್ನು ಉಂಟುಮಾಡಿ ಸರಪಳಿ ಕ್ರಿಯೆ ಸಾಧ್ಯವಾಗುತ್ತದೆ. ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್ ಗಳು ಪ್ರತೀ ವಿದಳನದ ನಂತರ ಗುಣಕದೋಪಾದಿಯಲ್ಲಿ ಗುಣೋತ್ತರ ಶ್ರೇಢಿಯಂತೆ ಮುಂದುವರೆದು ವಿದಳನ ಹೊಂದುವ ವಸ್ತುವು ಸಂಪೂರ್ಣವಾಗಿ ಕ್ಷಯಿಸುವ ತನಕ ನಡೆಯುವ ವಿದಳನ ಕ್ರಿಯೆಯನ್ನು ಸರಪಳಿ ಕ್ರಿಯೆ ಎನ್ನುತ್ತೇವೆ. ಒಂದು ಸರಪಳಿ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್ ಗಳ ಸಂಖ್ಯೆಯನ್ನು ಸ್ಥಿರವಾಗಿರುವಂತೆ ಮಾಡಿದಾಗ ಅದು ನಿಯಂತ್ರಿತ ಸರಪಳಿ ಕ್ರಿಯೆಯಾಗುತ್ತದೆ. ಸರಪಳಿ ಕ್ರಿಯೆಯನ್ನು ನಿಯಂತ್ರಿಸದಿದ್ದರೆ ,ಅದು ನ್ಯೂಟೋನ್ ಗಳ ಸಂಖ್ಯೆ ಹೆಚ್ಚಿ ಸ್ಫೋಟಕ್ಕೆ ಕಾರಣವಾಗುತ್ತದೆ. ನ್ಯೂಕ್ಲೀಯ ಕ್ರಿಯಾಕಾರಿಗಳಲ್ಲಿ ಸರಪಳಿ ಕ್ರಿಯೆಯನ್ನು ನಿಯಂತ್ರಿಸಲಾಗುತ್ತದೆ. ಆದರೆ ನ್ಯೂಕ್ಲೀಯ ಬಾಂಬ್ಅಥವಾ ಪರಮಾಣು ಬಾಂಬ್ ನಲ್ಲಿ ಈ ಕ್ರಿಯೆ ಅನಿಯಂತ್ರಿತವಾಗಿದೆ.
ನಿಯಂತ್ರಿತ ನ್ಯೂಕ್ಲೀಯ ಕ್ರಿಯೆಗಳು
ಬದಲಾಯಿಸಿನ್ಯೂಕ್ಲೀಯ ವಿದಳನ ಕ್ರಿಯೆಯು ಎರಡಕ್ಕಿಂತ ಹೆಚ್ಚು ನ್ಯೂಟೋನ್‍ಗಳನ್ನು ಬಿಡುಗಡೆ ಮಾಡುತ್ತದೆ. ಪ್ರತೀ ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರೋನ್‍ಗಳನ್ನು ಹೀರಿಕೊಳ್ಳುವಂತೆ ಮಾಡಿ ಪ್ರತೀ ವಿದಳನಕ್ಕೆ ಒಂದು ನ್ಯೂಟ್ರೋನ್ ಇರುವಂತೆ ನಿಯಂತ್ರಿಸಲಾಗುತ್ತದೆ. ಇದೇ ನಿಯಂತ್ರಿತ ಸರಪಳಿ ಕ್ರಿಯೆ.
ನ್ಯೂಕ್ಲೀಯ ಸಮ್ಮಿಳನ
ಬದಲಾಯಿಸಿಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹಗುರವಾದ ಎರಡು ಧಾತುಗಳ ನ್ಯೂಕ್ಲಿಯಸ್ ಗಳು ಸಮ್ಮಿಳನ ಹೊಂದಿ ಒಂದು ಭಾರವಾದ ಹೆಚ್ಚಿನ ಪರಮಾಣು ಸಂಖ್ಯೆಯನ್ನು ಹೊಂದಿರುವ ಧಾತುವಿನ ಬೀಜವಾಗಿ ಪರಿವರ್ತಿತವಾಗಬಲ್ಲವು. ಎರಡು ಹಗುರ ನ್ಯೂಕ್ಲಿಯಸ್‍ಗಳು ಸಮ್ಮಿಳನ ಹೊಂದಿ ಒಂದು ಭಾರವಾದ ಬೀಜವಾಗಿ, ಬೃಹತ್ ಪ್ರಮಾಣದ ಶಕ್ತಿ ಬಿಡುಗಡೆಯಾಗುವ ನ್ಯೂಕ್ಲೀಯ ಕ್ರಿಯೆಯೇ ನ್ಯೂಕ್ಲೀಯ ಸಮ್ಮಿಳನ .ಹಗುರವಾದ ನ್ಯೂಕ್ಲಿಯಸ್‍ಗಳು ಸೇರಿ ಭಾರವಾದ ಬೀಜಗಳಾಗುವುದರಿಂದ ಶಕ್ತಿ ಉತ್ಪಾದನೆಯಾಗುತ್ತದೆ. ಇಂತಹ ಕ್ರಿಯೆಗಳನ್ನು ಉಷ್ಣ ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳು ಎನ್ನುತ್ತೇವೆ.
ನ್ಯೂಕ್ಲೀಯ ಆಯುಧಗಳು
ಬದಲಾಯಿಸಿನ್ಯೂಕ್ಲೀಯ ವಿದಳನ ಮತ್ತು ನ್ಯೂಕ್ಲೀಯ ಸಮ್ಮಿಳನ ಕ್ರಿಯೆಗಳ ತತ್ವದ ಆಧಾರದ ಮೇಲೆ ಪರಮಾಣು ಬಾಂಬ್ವಿದಳನ ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಸಮ್ಮಿಳನ ಬಾಂಬ್‍ಗಳನ್ನು ತಯಾರಿಸಲಾಗುತ್ತದೆ. ಇಡೀ ಜನ ಸಮುದಾಯವನ್ನು ನಾಶ ಮಾಡುವ ಸಾಮರ್ಥ್ಯವಿರುವ ಈ ಬಾಂಬ್‍ಗಳ ತಯಾರಿಕೆಯನ್ನು ನಿಯಂತ್ರಿಸುವುದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸವಾಲಾಗಿದೆ.
ನ್ಯೂಕ್ಲೀಯ ವಸ್ತು ಗಳ ಬಳಕೆ ಮತ್ತು ವಿಲೇವಾರಿ
ಬದಲಾಯಿಸಿನ್ಯೂಕ್ಲೀಯ ಕ್ರಿಯಾಕಾರಿಗಳಲ್ಲಿ ಉಳಿಯುವ ತ್ಯಾಜ್ಯವಸ್ತುಗಳೂ ಸಹ ವಿಕಿರಣಪಟು ವಸ್ತುಗಳಾಗುತ್ತವೆ. ಕಡಿಮೆ ಅರ್ಧಾಯುಷ್ಯವನ್ನು ಹೊಂದಿರುವ ವಿಕಿರಣಪಟು ಧಾತುಗಳು ವಿಲೇವಾರಿಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಆದರೆ, ದೀರ್ಘ ಅರ್ಧಾಯುಷ್ಯವನ್ನು ಹೊಂದಿರುವ ವಿಕಿರಣಪಟು ಧಾತುಗಳು ಭವಿಷ್ಯದಲ್ಲಿ ಹೆಚ್ಚು ಮಾರಕವಾಗಬಲ್ಲುದು.ಇವುಗಳ ನಿರ್ವಹಣೆಯೇ ಬಹು ಮುಖ್ಯ ಅಂಶವಾಗಿರುತ್ತದೆ.