ನ್ಯೂಕ್ಲಿಯ ವಿದಳನ ಸರಪಳಿ ಕ್ರಿಯೆ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

೧೯೩೯ರಲ್ಲಿ ಯುರೇನಿಯಂ - ೨೩೫ ಐಸೋಟೋಪನ್ನು ನ್ಯೂಟ್ರಾನ್ ಗಳಿಂದ ತಾಡಿಸಿದಾಗ ವಿಭಿನ್ನವಾಗಿ ದ್ರವ್ಯಾಂತರಣವಾದದ್ದನ್ನು ಕಂಡುಹಿಡಿಯಲ್ ಆಯಿತು. ಯುರೇನಿಯಂ -೨೩೫, ವಿಕಿರಣವನ್ನಾಲೀ ಉತ್ಸರ್ಜಿಸದೆ, ಎರಡು ನ್ಯೂಕ್ಲೀಯಸ್ಸ ಗಳಾಗಿ ಒಡೆಯಿತು. ಈ ಪ್ರಕ್ರಿಯೆಯಲ್ಲಿ ೨೦೦ ನಷ್ಟು ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಯಿತು. ಹೀಗೆ ಒಂದು ಭಾರವಾದ ಪರಮಾಣುವಿನ ನ್ಯೂಕ್ಲೀಯಸ್ಸ್ ಒಡೆದು ಎರಡು ಮಧ್ಯಮ ಪ್ರಮಾಣದ ಬೀಜಗಳನ್ನು ಉಂಟುಮಾಡಿ ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆಮಾಡುವ ಪ್ರಕ್ರಿಯೆಯೇ ನ್ಯೂಕ್ಲೀಯ ವಿದಳನ್. ಈ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರಾನ್ ಗಳು, ಮಧ್ಯಮ ಪ್ರಮಾಣ್ದ ಬೀಜಗಳಲ್ಲಿ ವಿದಳನ ಕ್ರಿಯೆಯನ್ನು ಉಂಟುಮಾಡಿ, ಸರಪಳಿ ಕ್ರಿಯೆ ಸಾಧ್ಯವಾಗುತ್ತದೆ.

ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರಾನ್ ಗಳು ಪ್ರತಿ ವಿದಳನದ ನಂತರ ಗುಣಕದೋಪಾದಿಯಲ್ಲಿ ಗುಣೋತ್ತರ ಶ್ರೀಢಿಯಂತೆ ಮುಂದುವರೆದು, ವಿದಳನ ಹೊಂದುವ ವಸ್ತುವು ಸಂಪೂರ್ಣವಾಗಿ ಕ್ಷಯಿಸುವ ತನಕ ನಡೆಯುವ ವಿದಳನ ಕ್ರಿಯೆಯನ್ನು ಸಂಪಳಿ ಕ್ರಿಯೆ ಎನ್ನುತ್ತೇವೆ.

ಒಂದು ಸರಪಳಿ ಕ್ರಿಯೆಯಲ್ಲಿ ಬಿಡುಗಡೆಯಾದ ನ್ಯೂಟ್ರಾನ್ ಗಳ ಸಂಖ್ಯೆಯನ್ನು ಸ್ಥಿರವಾಗಿರುವಂತೆ ಮಾಡಿದಾಗ ಅದು ನಿಯಂತ್ರಿತ ಸರಪಳಿ ಕ್ರಿಯೆಯಾಗುತ್ತದೆ. ಸರಪಳಿ ಕ್ರಿಯೆಯನ್ನು ನಿಯಂತ್ರಿಸದಿದ್ದರೆ, ಅದು ನ್ಯೂಟ್ರಾನ್ ಗಳ ಸಂಖ್ಯೆಯಹೆಚ್ಚಿ, ಸ್ಫೋಟಕ್ಕೆ ಕಾರಣವಾಗುತ್ತದೆ. ನ್ಯೂಕ್ಲೀಯ ಕ್ರಿಯಾಕಾರಿಗಳಲ್ಲಿ ಸರಪಳಿ ಕ್ರಿಯೆಯನ್ನು ನಿಯಂತ್ರಿಸಲಾಗುತ್ತದೆ. ಆದರೆ, ನ್ಯೂಕ್ಲೀಯ ಬಾಂಬ್ ಅಥವಾ ಪರಮಾಣು ಬಾಂಬ್ ನಲ್ಲಿ ಈ ಕ್ರಿಯೆ ಅನಿಯಂತ್ರಿತವಾಗಿದೆ.