ನ್ಯಾಯಾಲಯ ನಿಂದನೆಯು ನ್ಯಾಯಾಲಯದ ಅಧಿಕಾರ, ನ್ಯಾಯ, ಮತ್ತು ಘನತೆಯನ್ನು ವಿರೋಧಿಸುವ ಅಥವಾ ನಿರಾಕರಿಸುವ ವರ್ತನೆಯ ರೂಪದಲ್ಲಿ ನ್ಯಾಯಾಲಯ ಮತ್ತು ಅದರ ಅಧಿಕಾರಿಗಳಿಗೆ ಅವಿಧೇಯವಾಗಿರುವ ಅಥವಾ ಅಗೌರವ ತೋರಿಸುವ ಅಪರಾಧ. ಅದು ನ್ಯಾಯಾಲಯದ ಅಧಿಕಾರದ ಉದ್ದೇಶಪೂರ್ವಕ ಕಡೆಗಣಿಕೆ ಅಥವಾ ಅಗೌರವದ ರೂಪದಲ್ಲಿ ವ್ಯಕ್ತವಾಗುತ್ತದೆ, ಮತ್ತು ಅನೇಕವೇಳೆ ಇದು ಅಕ್ರಮ ವರ್ತನೆ ಏಕೆಂದರೆ ಇದು ಒಂದು ನ್ಯಾಯಾಲಯದ ನಿಯಮಗಳನ್ನು ಪಾಲಿಸುವುದಿಲ್ಲ ಅಥವಾ ಗೌರವಿಸುವುದಿಲ್ಲ.

ವಿಶಾಲಾರ್ಥದಲ್ಲಿ ನ್ಯಾಯಾಲಯ ನಿಂದನೆಯ ಎರಡು ವರ್ಗಗಳಿವೆ: ನ್ಯಾಯಾಲಯದಲ್ಲಿ ಕಾನೂನು ಅಧಿಕಾರಿಗಳ ವಿರುದ್ಧ ಅಸಭ್ಯವಾಗಿ ವರ್ತಿಸುವುದು ಅಥವಾ ಅಗೌರವ ತೋರಿಸುವುದು, ಅಥವಾ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಫಲವಾಗುವುದು. ನ್ಯಾಯಸಮ್ಮತ ಪರಿಹಾರಗಳನ್ನು ಜಾರಿಗೊಳಿಸಲು ತಡೆಯಾಜ್ಞೆಗಳಂತಹ ನಿಂದನೆ ವಿಚಾರಣೆಗಳನ್ನು ವಿಶೇಷವಾಗಿ ಬಳಸಲಾಗುತ್ತದೆ.

ಭಾರತದಲ್ಲಿ ನ್ಯಾಯಾಲಯ ನಿಂದನೆ ಎರಡು ಪ್ರಕಾರದ್ದಿವೆ: ನಾಗರಿಕ ನಿಂದನೆ ಮತ್ತು ಕ್ರಿಮಿನಲ್ ನಿಂದನೆ.