ನೊರೆ
ನೊರೆಯು (ಬುರುಗು) ಅನಿಲದ ಪ್ರದೇಶಗಳು ಒಂದು ದ್ರವ ಅಥವಾ ಘನ ಪದಾರ್ಥದಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ರೂಪಗೊಳ್ಳುವ ವಸ್ತು.[೧][೨][೩]
ಸ್ನಾನದ ಸ್ಪಂಜು ಅಥವಾ ಗ್ಲಾಸಿನಲ್ಲಿರುವ ಬೀರಿನ ಶಿರವು ನೊರೆಗಳ ಉದಾಹರಣೆಗಳಾಗಿವೆ. ಬಹುತೇಕ ನೊರೆಗಳಲ್ಲಿ, ಅನಿಲದ ಪ್ರಮಾಣವು ಹೆಚ್ಚಿಗೆಯಿದ್ದು ಅನಿಲದ ಪ್ರದೇಶಗಳನ್ನು ದ್ರವ ಅಥವಾ ಘನ ಪದಾರ್ಥದ ತೆಳು ಪದರಗಳು ಪ್ರತ್ಯೇಕಿಸುತ್ತವೆ.
ನೊರೆಗಳು ಚದುರಿದ ಮಾಧ್ಯಮಗಳ ಉದಾಹರಣೆಯಾಗಿವೆ. ಸಾಮಾನ್ಯವಾಗಿ, ಅನಿಲವು ಇರುವುದರಿಂದ ಅದು ವಿಭಿನ್ನ ಗಾತ್ರದ ಅನಿಲದ ಗುಳ್ಳೆಗಳಾಗಿ ವಿಭಜನೆಗೊಳ್ಳುತ್ತದೆ (ಅಂದರೆ ಈ ವಸ್ತುವು ಬಹುಚದರು ಗುಣದ್ದು)—ಮತ್ತು ಪದರಗಳನ್ನು ರೂಪಿಸಬಹುದಾದ ದ್ರವ ಪ್ರದೇಶಗಳಿಂದ ಪ್ರತ್ಯೇಕಗೊಂಡಿರುತ್ತದೆ. ವ್ಯವಸ್ಥೆಯ ಪದರಗಳಿಂದ ದ್ರವ ಹಂತವು ಹರಿದು ಹೋದಾಗ ಇವು ಹೆಚ್ಚೆಚ್ಚು ತೆಳುವಾಗುತ್ತ ಹೋಗುತ್ತವೆ.[೪]
ಉಲ್ಲೇಖಗಳು
ಬದಲಾಯಿಸಿ- ↑ "Foam". Merriam-Webster. Archived from the original on 2014-12-09.
- ↑ D. Weaire, S. Hutzler, "The Physics of Foams", Oxford University Press, 1999, ISBN 0198510977, ISBN 978-0-1985-1097-0
- ↑ I. Cantat, S. Cohen-Addad, F. Elias, F. Graner, R. Höhler, O. Pitois, F. Rouyer, A. Saint-Jalmes, "Foams: structure and dynamics", Oxford University Press, ed. S.J. Cox, 2013, ISBN 9780199662890
- ↑ Lucassen, J. (1981). Lucassen-Reijnders, E. H. (ed.). Anionic Surfactants – Physical Chemistry of Surfactant Action. NY, USA: Marcel Dekker.