ನೇತರ್ಹಾಟ್
ನೇತರ್ಹಾಟ್ ಭಾರತದ ಝಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿರುವ[೧] (ಮೊದಲು ಹಿಂದಿನ ಪಲಾಮು ಜಿಲ್ಲಿಯಲ್ಲಿತ್ತು[೨]) ಒಂದು ಗಿರಿಧಾಮವಾಗಿದೆ.[೩] ಇದನ್ನು "ಛೋಟಾನಾಗ್ಪುರ್‌ನ ರಾಣಿ" ಎಂದೂ ಕರೆಯಲಾಗುತ್ತದೆ.[೪] ಈ ಪಟ್ಟಣ ೧೯೫೪ರಲ್ಲಿ ಸ್ಥಾಪಿತವಾದ ನೇತರ್ಹಾಟ್ ವಸತಿ ಶಾಲೆಗೂ ಪ್ರಸಿದ್ಧವಾಗಿದೆ.
ಪ್ರವಾಸೋದ್ಯಮ
ಬದಲಾಯಿಸಿನೇತರ್ಹಾಟ್ ಬೇಸಿಗೆ ತಿಂಗಳುಗಳಲ್ಲಿ ಕಾಣಿಸುವ ಸೂರ್ಯೋದಯಗಳು ಮತ್ತು ಸೂರ್ಯಾಸ್ತಗಳಿಗೆ ಪರಿಚಿತವಾಗಿದೆ.[೫]
ನೇತರ್ಹಾಟ್‍ನಲ್ಲಿ ಹಲವು ಪ್ರವಾಸಿಗರ ಆಸಕ್ತಿಯ ಸ್ಥಳಗಳಿವೆ -
- ಮೇಲಿನ ಘಾಘ್ರಿ ಜಲಪಾತ ನೇತರ್ಹಾಟ್‍ನಿಂದ ೪ ಕಿ.ಮಿ. ದೂರದಲ್ಲಿದೆ.
- ಲೋಧ್ ಜಲಪಾತವು ಝಾರ್ಖಂಡ್‍ನ ಅತಿ ಎತ್ತರದ ಜಲಪಾತವಾಗಿದ್ದು ಸಾಲ್ ಅರಣ್ಯದಲ್ಲಿ ಸ್ಥಿತವಾಗಿದೆ.
- ಮಹುವಾಡಾಂಡ್ ತೋಳ ಅಭಯಾರಣ್ಯ, ತೋಳಗಳ ರಕ್ಷಣೆಗಾಗಿ ಭಾರತದಲ್ಲಿರುವ ಏಕೈಕ ಅಭಯಾರಣ್ಯ.[೬]
- ಮ್ಯಾಗ್ನೋಲಿಯಾ ಬಿಂದು, ಸೂರ್ಯಾಸ್ತಕ್ಕಾಗಿ ಪರಿಚಿತವಾಗಿದೆ.
- ಸೂರ್ಯೋದಯ ಬಿಂದು.
- ಕೆಳಗಿನ ಘಾಘ್ರಿ ಜಲಪಾತ ನೇತರ್ಹಾಟ್‍ನಿಂದ ೧೦ ಕಿ.ಮಿ. ದೂರದಲ್ಲಿದೆ.
- ಕೋಯಲ್ ನದಿ ನೋಟದ ಬಿಂದು.
- ಸುಗ್ಗಾ ಬಾಂಧ್ ಜಲಪಾತ.
- ಸದನಿ ಜಲಪಾತ ನೇತರ್ಹಾಟ್‍ನಿಂದ ೩೫ ಕಿ.ಮಿ. ದೂರದಲ್ಲಿದೆ.[೪]
- ಬೇಟ್ಲಾ ರಾಷ್ಟ್ರೀಯ ಉದ್ಯಾನ ೯೪ ಕಿ.ಮಿ. ದೂರದಲ್ಲಿದೆ.
- ನೇತರ್ಹಾಟ್ ವಸತಿಶಾಲೆ ಭಾರತದಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ಆಧುನಿಕ ಗುರುಕಲಗಳಲ್ಲಿ ಒಂದಾಗಿದೆ.
- ಪೆಯರ್ ತೋಟಗಳು ಮತ್ತು ಪೈನ್ ಅರಣ್ಯಗಳು - ಸ್ಥಳೀಯ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿವೆ.
ಉಲ್ಲೇಖಗಳು
ಬದಲಾಯಿಸಿ- ↑ "Latehar Road Map". mapsofindia. Retrieved 2010-04-29.
- ↑ "Gazetteer of Palamu District". Archived from the original on 2011-07-21. Retrieved 2010-04-29.
- ↑ "Gumla -'The land of Gaw-Mela'". traveljharkhand.com. Retrieved 2010-04-17.
- ↑ ೪.೦ ೪.೧ "Destinations – Netarhat". Bihar State tourism Development Corporation. Archived from the original on 2010-03-29. Retrieved 2010-04-17.
- ↑ "Netarhat Tour, Netarhat Sightseeing, Sunset Point, Netarhat School - Travel News India". travelnewsindia.com. 2017-02-19.[permanent dead link]
- ↑ "IN: Official apathy hits country's lone wolf sanctuary | Timber Wolf Information Network" (in ಅಮೆರಿಕನ್ ಇಂಗ್ಲಿಷ್). Archived from the original on 2021-02-23. Retrieved 2019-11-24.