ನೃತ್ಯಗ್ರಾಮ ತನ್ನ ಮನಮೋಹಕ ನೋಟದಿಂದಾಗಿ ಮತ್ತು ವಿಶಾಲವಾದ ಪ್ರದೇಶದಿಂದಾಗಿ ನೋಡಲು ಯೋಗ್ಯವಾದ ಸ್ಥಳವಾಗಿದೆ. ಈ ಅನುಪಮವಾದ ನಾಟ್ಯಕ್ಕೆ ಮೀಸಲಾದ ಗ್ರಾಮವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಘಟ್ಟದಲ್ಲಿ ನೆಲೆಗೊಂಡಿದೆ. ಇದು ಬೆಂಗಳೂರಿನಿಂದ ಕೇವಲ 35 ಕಿ.ಮೀ ದೂರದಲ್ಲಿದ್ದು ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದು.

ನೃತ್ಯಗ್ರಾಮ
ಸ್ಥಾಪನೆಮೇ 11, 1990 (1990-05-11)
Purposeನೃತ್ಯಶಾಲೆ ಭಾರತದ ಶಾಸ್ಟ್ರೀಯ ನೃತ್ಯಕ್ಕೆ
ಸ್ಥಳ
ಕಕ್ಷೆಗಳು13°09′40″N 77°27′00″E / 13.161°N 77.45°E / 13.161; 77.45 []
ಅಧಿಕೃತ ಜಾಲತಾಣOfficial website

ಈ ಗ್ರಾಮದ ಹಿಂದಿನ ವಾಸ್ತವಾಂಶಗಳು

ಬದಲಾಯಿಸಿ

ಈ ಗ್ರಾಮವು ಪ್ರಸಿದ್ಧ ಒಡಿಸ್ಸಿ ನೃತ್ಯಗಾರ್ತಿಯಾದ ಪ್ರೊತಿಮಾ ಬೇಡಿಯ ಪರಿಕಲ್ಪನೆಯಾಗಿದೆ. ಆಕೆಯು ನಾಟ್ಯಕ್ಕಾಗಿಯೇ ಮೀಸಲಾದ ಒಂದು ಹಳೆಯ ಗುರುಕುಲ ಮಾದರಿಯ ಗ್ರಾಮವನ್ನು ನಿರ್ಮಿಸಬೇಕು ಎಂಬ ಆಲೋಚನೆಯೆ ಸಾಕಾರವಾಗಿ ಈ ಗ್ರಾಮ ಜನ್ಮ ತಳೆಯಿತು. ಈ ನೃತ್ಯಗ್ರಾಮದಲ್ಲಿ ನೃತ್ಯತಂಡಗಳ ಮೇಳಗಳಿಗೆ ಪ್ರಸಿದ್ಧವಾಗಿದೆ. ಆದಾಗಿಯು ಇಲ್ಲಿನ ಪ್ರಾಕೃತಿಕ ವೈಭವ ಮತ್ತು ನೈಸರ್ಗಿಕ ಪರಿಕರಗಳ ಬಳಸಿ ನಿರ್ಮಿಸಲಾಗಿರುವ ಗ್ರಾಮದ ಸೌಂದರ್ಯವು ಮರೆಯಲಾಗದ ಅನುಭವ ಒದಗಿಸುತ್ತದೆ.

ಈ ಗ್ರಾಮದ ವಿನ್ಯಾಸವನ್ನು ಸುಪ್ರಸಿದ್ಧ ವಾಸ್ತುಶಿಲ್ಪಿಯಾದ ಗೆರಾರ್ಡ್ ಡ ಕ್ಯುಂಚರವರು ರಚಿಸಿದರು. ತೆರೆದ ಖಾಲಿ ಜಾಗಗಳು, ಹಸಿರು ಮರಗಳು ಮತ್ತು ಮಣ್ಣಿನ ಮನೆಗಳು ಹಾಗು ಕಟ್ಟಡಗಳು ನೃತ್ಯಗ್ರಾಮಕ್ಕೆ ಒಂದು ದೇಸಿ ಕಳೆಯನ್ನು ಒದಗಿಸಿವೆ. ವಸಂತ ಋತುವಿನ ಆಗಮನವನ್ನು ಸ್ವಾಗತಿಸಲು ಇಲ್ಲಿ ಜರುಗುವ ವಸಂತ ಹಬ್ಬ ಉತ್ಸವದ ಸಮಯ ಇಲ್ಲಿಗೆ ಭೇಟಿ ನೀಡಲು ಹೇಳಿ ಮಾಡಿಸಿದಂತಹ ವೇಳೆಯಾಗಿದೆ.ಆಗ ಇಲ್ಲಿನ ಬಯಲು ರಂಗ ಮಂದಿರದಲ್ಲಿ ವಿಶ್ವದ ನಾನಾ ಮೂಲೆಗಳಿಂದ ಆಗಮಿಸಿದಂತಹ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡುತ್ತಾರೆ.

ನೃತ್ಯಗ್ರಾಮಕ್ಕೆ ಭೇಟಿ ನೀಡಿದಾಗ ನಿಮಗೆ ಅಲ್ಲಿನ ಹೆಸರುಘಟ್ಟ ಕೆರೆ ನೋಡುವ ಅವಕಾಶ ಸಿಗುತ್ತದೆ. ಇದು ನೃತ್ಯಗ್ರಾಮದಿಂದ ಐದು ಕಿಲೋ ಮೀಟರ್ ದೂರದಲ್ಲಿದೆ. ಈ ಕೆರೆಯು ಮಾನವ ನಿರ್ಮಿತ ಕೆರೆಯಾಗಿದ್ದು 1124 ಎಕರೆಯಷ್ಟು ವ್ಯಾಪಿಸಿದೆ. ಇದನ್ನು 1894ರಲ್ಲಿ ಕಟ್ಟಲಾಯಿತು.

ಉಲ್ಲೇಖಗಳು

ಬದಲಾಯಿಸಿ