ನೀಲಿ (ಮರ)
ಯುಡಿಕೋಟ್ ಆದೇಶ ಮಾಲ್ಪಿಘಿಯಲ್ಸ್ನಲ್ಲಿ ಹೂಬಿಡುವ ಸಸ್ಯಗಳ ಒಂದು ಕುಟುಂಬವಾಗಿದೆ .
ನೀಲಿ | |
---|---|
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಪಂಗಡ: | Bischofieae
|
ಕುಲ: | ಬಿಸ್ಚೊಫಿಯ (Bischofia) |
ಪ್ರಜಾತಿ: | B. javanica
|
Binomial name | |
ಬಿಸ್ಚೊಫಿಯ ಜವನಿಕ |
ನೀಲಿ (ನೀರುಳ್ಳಿ,ಗೊಬ್ರ ನೇರಳೆ)ಇದು ದೊಡ್ಡ ಪ್ರಮಾಣದ ಪರ್ಣಪಾತಿ ಮರ.ಪಶ್ಚಿಮ ಘಟ್ಟ ಕಾಡುಗಳಲ್ಲಿ ಕಂಡುಬರುತ್ತದೆ. ಇದು ಮುಖ್ಯವಾಗಿ ದಕ್ಷಿಣ ಎಷಿಯಾ,ಆಸ್ಟ್ರೇಲಿಯ,ಚೀನಾ ದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
ಬದಲಾಯಿಸಿಇದು ಪೈಲಾಂಥೇಸಿ (Phyllanthaceae) ಕುಟುಂಬಕ್ಕೆ ಸೇರಿದ್ದು,ಬಿಸ್ಚೊಫಿಯ ಜವನಿಕ (Bischofia javanica) ಎಂದು ಸಸ್ಯಶಾಸ್ತ್ರೀಯ ಹೆಸರು.
ಸಸ್ಯದ ಗುಣಲಕ್ಷಣಗಳು
ಬದಲಾಯಿಸಿದೊಡ್ಡ ಹಂದರದ ಹಚ್ಚ ಹಸಿರಿನ ತ್ರಿಪತ್ರಿ (Trifoliate)ಎಲೆಗಳು.ತೊಗಟೆ ಕರಿ ಕಂದು,ನಯವಾಗಿರುತ್ತದೆ.ಎಲೆಗಳು ಉದುರುವ ಮುನ್ನ ಕೆಂಪು ಛಾಯೆಗೆ ತಿರುಗುವುದು.ಸಣ್ಣ ಹೂಗಳು.ದಾರಿವಿ ಕೆಂಪು ಛಾಯೆಯಿಂದ ಕೂಡಿದೆ.
ಉಪಯೋಗಗಳು
ಬದಲಾಯಿಸಿದಾರುವು ಬಾಳಿಕೆಯುತವಾಗಿದೆ.ಗೃಹ ನಿರ್ಮಾಣ,ಆಸರೆ ಕಂಬ ಇತ್ಯಾದಿಗಳಿಗೆ ಉಪಯುಕ್ತ.ನೀರಿನಲ್ಲಿ ಹೆಚ್ಚು ಬಾಳಿಕೆ ಇದೆ.ಎಲೆಗಳು ಗೊಬ್ಬರಕ್ಕೆ ಉಪಯುಕ್ತವಾಗಿದೆ.ಬೇರುಗಳು ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.ಹಣ್ಣಿನಿಂದ ವೈನ್ ತಯಾರಿಸುತ್ತಾರೆ.
ಆಧಾರ ಗ್ರಂಥಗಳು
ಬದಲಾಯಿಸಿ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ