ನೀರಜಾ ಭಾನೋಟ್

ಅಶೋಕ ಚಕ್ರ ಪುರಸ್ಕೃತ ಭಾರತೀಯ ಗಗನಸಖಿ

ಪ್ಯಾನ್ ಅಮೆರಿಕನ್ ಕ್ಲಿಪ್ಪರ್-೭೩ ವಿಮಾನದ ಗಗನ ಸಖಿಯರ ಮುಖ್ಯಸ್ಥೆಯಾಗಿದ್ದ ಭಾರತೀಯ ವೀರ ಮಹಿಳೆ, ನೀರಜಾ ಭಾನೋಟ್ ವಿಮಾನ ಯಾನದ ಇತಿಹಾಸದಲ್ಲಿ ಒಂದು ಮರೆಯಲಾರದ ವಿಕ್ರಮವನ್ನು ಸ್ಥಾಪಿಸಿದ್ದರು. ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಬಂಧಿತವಾಗಿದ್ದ ಪ್ಯಾನ್ ಅಮೆರಿಕನ್ ವಿಮಾನದ ಪರಿಚಾರಿಕೆಯಾಗಿದ್ದ ನೀರಜಾರವರ ಹಣೆಗೆ ಗುಂಡಿಟ್ಟು ನಿಂತಿದ್ದ ೪ ಜನ ಭಯೋತ್ಪಾದಕರಿಂದ ೩೦೦ ಕ್ಕೂ ಅಧಿಕಮಂದಿ ಪ್ರಯಾಣಿಕರಿಗೆ ಪುನರ್ಜನ್ಮಕೊಟ್ಟು ತಮ್ಮ ಜೀವವನ್ನೇ ಆಹುತಿಯಾಗಿ ಅರ್ಪಿಸಿದ 'ನೀರಜಾ ಭಾನೋಟ್', ತಮ್ಮ ೨೪ ನೇ ವರ್ಷದ ಹುಟ್ಟುಹಬ್ಬದಂದು ಈ ಶೌರ್ಯದ ಕಾರ್ಯವೆಸಗಿ ಅಮರರಾದರು.

ನೀರಜಾ ಭಾನೋಟ್
ನೀರಜಾ ಭಾನೋಟ್ - ೨೦೦೪ರ ಭಾರತದ ಅಂಚೆಚೀಟಿ
ಜನನ(೧೯೬೩-೦೯-೦೭)೭ ಸೆಪ್ಟೆಂಬರ್ ೧೯೬೩
ಮರಣ5 September 1986(1986-09-05) (aged 22)
ರಾಷ್ಟ್ರೀಯತೆಭಾರತ
ಇತರೆ ಹೆಸರುಲಾಡೊ
ವೃತ್ತಿಗಗನಸಖಿ

ಜನನ, ಬಾಲ್ಯ

ಬದಲಾಯಿಸಿ

ನೀರಜಾರವರ ತಂದೆ, 'ಹರೀಶ್ ಭಾನೋಟ್' ಒಬ್ಬ ವಿಶೇಷ ವರದಿಗಾರ. ಹಿಂದೂಸ್ಥಾನ್ ಟೈಮ್ಸ್ ನಲ್ಲಿ ದುಡಿಯುತ್ತಿದ್ದರು. ತಾಯಿ,'ರಮಾ ಭಾನೋಟ್'.ಈ ದಂಪತಿಗಳಿಗೆ ಮಗಳಾಗಿ ಜನಿಸಿದ ನೀರಜಾ ಭಾನೋಟ್, ಚಂದೀಘಡದಲ್ಲಿ ೭, ಸೆಪ್ಟೆಂಬರ್, ೧೯೬೨ ರಲ್ಲಿ ಜನಿಸಿದರು.[] ಹರೀಶ್ ರವರ ಮೊದಲ ಇಬ್ಬರು ಗಂಡುಮಕ್ಕಳ ಬಳಿಕ ಜನಿಸಿದರು. ಅವರ ಪ್ರೀತಿಯ ತಂದೆ, ಹರೀಶ್ ಭಾನೋಟ್ ರವರು ಮಗಳನ್ನು 'ಲಾಡೋ'(ಪ್ರೀತಿಪಾತ್ರಳು ಎಂಬರ್ಥದಲ್ಲಿ),ಎಂದು ಸಂಬೋಧಿಸುತ್ತಿದ್ದರು.

ಶಿಕ್ಷಣ ಹಾಗೂ ವೃತ್ತಿಜೀವನ

ಬದಲಾಯಿಸಿ

ಹರೀಶ್ ರವರಿಗೆ ಮುಂಬೈನಗರಕ್ಕೆ ವರ್ಗವಾಯಿತು. ನೀರಜಾ ಮುಂಬೈನ ಸೇಂಟ್ ಝೇವಿಯರ್ಸ್ ಕಾಲೇಜ್ ನಲ್ಲಿ ತಮ್ಮ ಪದವಿ ಮುಗಿಸಿದಾಗ ಅವರ ವಯಸ್ಸು, ಕೇವಲ ೧೭ ವರ್ಷ. ಆಗಲೇ ಮುಂಬೈನ ಪ್ರಸಿದ್ಧ ದಿನಪತ್ರಿಕೆಯೊಂದು ನೀರಜಾ ಒಬ್ಬ ಅಪ್ರತಿಮ ಸುಂದರಿಯೆಂದು ವರದಿಮಾಡಿತ್ತು. ಹಾಗಾಗಿ ಪದವಿಯ ನಂತರ ಭಾನೋಟ್ ಅನೇಕ ಜಾಹಿರಾತುಗಳಿಗೆ ರೂಪದರ್ಶಿಯಾಗಿ ಕೆಲಸಮಾಡಿದರು.

ವೈವಾಹಿಕ ಜೀವನ

ಬದಲಾಯಿಸಿ

೨೨ನೇ ವಯಸ್ಸಿನಲ್ಲಿ ಹಿರಿಯರಲ್ಲಾ ನೋಡಿ ಮೆಚ್ಚಿದ ಅನುರೂಪ ವರನೊಂದಿಗೆ ವಿವಾಹವೂ ನಡೆಯಿತು. ಕೇವಲ ೫ ತಿಂಗಳು ಪತಿಯೊಡನೆ ಸಂಸಾರ ಮಾಡಿದ ನೀರಜಾ,ಶಾರ್ಜಾದಲ್ಲಿದ್ದು ಅನಂತ ಮುಂಬೈಗೆ 'ಚಾರ್ಮಿಸ್ ಕ್ರೀಮ್'ಜಾಹಿರಾತಿನ ಒಪ್ಪಂದದ ಕೊನೆಯ ಹಂತದ ಚಿತ್ರೀಕರಣಕ್ಕೆ ಮುಂಬೈಗೆ ಬಂದಾಗ, ಆ ವಾರದ ಕೊನೆಯಲ್ಲೇ ಪತಿಯಿಂದ ಒಂದು ಆಘಾತಕರ ಪತ್ರ ಬಂದಿತ್ತು. ಅದರಲ್ಲಿ, 'ನಾನು ಬರೆದಿರುವ ನಿಯಮಗಳನ್ನು ಒಪ್ಪುವಹಾಗಿದ್ದರೆ ಸೊಲ್ಲೆತ್ತದೆ ಹಿಂದಿರುಗಿ ಬಾ,' ಇಲ್ಲದೆ ಹೋದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದೇನೆ, ಲೆಟ್ ಅಸ್ ಸಪರೇಟ್, ಎಂಬ ಒಕ್ಕಣಿಕೆಯೊಂದಿಗೆ ಪತ್ರ ಅಂತ್ಯಗೊಂಡಿತ್ತು. ಮಾನಸಿಕ ಸಾಂಗತ್ಯ,ಮಧುರ ಭವಿಷ್ಯದ ಭರವಸೆ ನೀಡದ ಮದುವೆಯ ಬಂಧನದಿಂದ ಹೊರಬರಲು ನೀರಜಾ ಬಯಸಿ, 'ವಿವಾಹ ವಿಚ್ಛೇದನ'ಕ್ಕೆ ಒಪ್ಪಿಗೆಯ ಸಹಿ ಹಾಕಿದರು.

ಪ್ಯಾನ್ ಅಮೆರಿಕ ವಿಮಾನ ಸಂಸ್ಥೆಗೆ ಪಾದಾರ್ಪಣೆ

ಬದಲಾಯಿಸಿ

ಸೆಪ್ಟೆಂಬರ್, ೧೯೮೫ರಲ್ಲಿ ಅಮೆರಿಕದ 'ಪ್ಯಾನ್ ಅಮೆರಿಕನ್ ವಿಮಾನದ ಫ್ಲೈಟ್ ಅಟೆಂಡೆಂಟ್' ಪದವಿಗೆ ಅರ್ಜಿ ಸಲ್ಲಿಸಿದರು. ಸುಮಾರು ೧೦ ಸಾವಿರ ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಕೊನೆಯ ೮೦ ಜನ ಮಹಿಳೆಯರಲ್ಲಿ 'ನೀರಜಾ ಭಾನೋಟ್' ಒಬ್ಬರಾಗಿ ತರಬೇತಿಗೆ ಆಯ್ಕೆಯಾಗಿದ್ದರು. ಅಮೆರಿಕದ ಮಯಾಮಿಯಲ್ಲಿ ಜರುಗಿದ ತರಬೇತಿಯಲ್ಲಿ ಜಯಗಳಿಸಿದ ಅವರನ್ನು ಚೀಫ್ ಫ್ಲೈಟ್ ಪರ್ಸರ್ ಆಗಿ ನೇಮಿಸಿದರು. 'ಟೆರರಿಸಂ ವಿರುದ್ಧದ ಟ್ರೈನಿಂಗ್' ನಲ್ಲೂ ಅವರಿಗೆ ಸಾಕಷ್ಟು ತರಬೇತಿ ನೀಡಲಾಗಿತ್ತು. 'ಮುಂದಾಳತ್ವದ ಗುಣ' ಅವರಿಗೆ ಬಹಳ ಸಹಾಯಕವಾಯಿತು. ೧೨ ಜನ ಮಹಿಳೆಯರು/ಪುರುಷರನ್ನೊಳಗೊಂಡ ಟೀಮ್ ನ ಉಸ್ತುವಾರಿಯ ಜವಾಬ್ದಾರಿ ಅವರ ಹೆಗಲ ಮೇಲಿತ್ತು.

ಪ್ರಾಣಾರ್ಪಣೆ

ಬದಲಾಯಿಸಿ

ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಬಂಧಿತವಾಗಿದ್ದ ಪ್ಯಾನ್ ಅಮೆರಿಕನ್ ವಿಮಾನದ ಪರಿಚಾರಿಕೆಯಾಗಿದ್ದ ನೀರಜಾರವರ ಹಣೆಗೆ ಗುಂಡಿಟ್ಟು ನಿಂತಿದ್ದ ೪ ಜನ ಭಯೋತ್ಪಾದಕರಿಂದ ೩೦೦ಕ್ಕೂ ಅಧಿಕಮಂದಿ ಪ್ರಯಾಣಿಕರಿಗೆ ಪುನರ್ಜನ್ಮಕೊಟ್ಟು ತಮ್ಮ ತಮ್ಮ ಜೀವವನ್ನೇ ಆಹುತಿಯಾಗಿ ಅರ್ಪಿಸಿದ 'ನೀರಜಾ ಭಾನೋಟ್', ತಮ್ಮ ೨೪ನೇ ವರ್ಷದ ಹುಟ್ಟುಹಬ್ಬದಂದು ಈ ಶೌರ್ಯದ ಕಾರ್ಯವೆಸಗಿ ಅಮರರಾದರು. ಎಲ್ಲರಿಗಿಂತ ಮೊದಲೇ ಈ ಜಾಲದಿಂದ ತಪ್ಪಿಸಿಕೊಳ್ಳುವ ಸುವರ್ಣಾವಕಾಶವಿದ್ದಾಗ್ಯೂ ನೀರಜಾ ತಮ್ಮ ಜೀವವನ್ನು ಒತ್ತೆಯಾಗಿಟ್ಟು ಎಲ್ಲರಿಗೂ ಮಾದರಿಯಾದ ಕಾರ್ಯವೆಸಗಿದರು.

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Neerja Bhanot Husband, Death Cause, Biography & More » StarsUnfolded". StarsUnfolded. Retrieved 9 March 2020.