ಸನ್ಯಾಸಿಗಳಿಗೆ ಸ್ಮಾರಕಗಳನ್ನು ಮಾಡುವ ಪದ್ಧತಿ ಜೈನ ವಿಶೇಷವಾಗಿದ್ದಿತು. ಈ ರೀತಿ ಸಲ್ಲೇಖನ ವ್ರತದಿಂದ ಮರಣ ಹೊಂದಿದವರ ಜ್ಞಾಪಕಾರ್ಥವಾಗಿ ನಿಲ್ಲುತ್ತಿದ್ದ ಕಲ್ಲುಗಳಿಗೆ ನಿಸಿದಕಲ್ಲುಗಳೆಂದು ಹೆಸರು.

ಇತಿಹಾಸ

ಬದಲಾಯಿಸಿ

ಸಾಮಾನ್ಯವಾಗಿ ನಿಸಿದಿಕಲ್ಲುಗಳು ಜೈನ ಬಸದಿ ಗಳ ಮುಂದೆ ಕಾಣಬರುತ್ತವೆ. ಶ್ರವಣಬೆಳಗೊಳ ಈ ರೀತಿಯ ಸ್ಮಾರಕಗಳು. ಇವೆ. ಇವುಗಳಲ್ಲಿ ಎರಡಂತಸ್ತಿನ ಇಲ್ಲವೇ ಮೂರಂತಸ್ತಿನ ಚಿತ್ರಗಳು ಇರುತ್ತವೆ. ಅವುಗಳಲ್ಲಿ ಜನ ಗುರುವಿನ ಮುಂದೆ ಈ ವ್ರತವನ್ನು ಕೈಗೊಂಡಿರುವವನ ಚಿತ ಮುಂತಾದವು ಕಾಣಬರುತ್ತವೆ. ನಿಸಿದಿಕಲ್ಲಿನಲ್ಲಿ ವೀರಗಲ್ಲಿನಂತೆ ಸತ್ತವರನ್ನು ವಿಮಾನದಲ್ಲಿ ಜಿನನ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯವೂ, ಕೊನೆಯ ಹಂತದಲ್ಲಿ ಅವರು ಜಿನ ಸಾನ್ನಿಧ್ಯವನ್ನು ಪಡೆದಿರುವುದೂ ಚಿತ್ತಿತವಾಗಿರುವುದು ಕಾಣುತ್ತದೆ.

ಶಾಸನ ಆಕಾರ

ಬದಲಾಯಿಸಿ

ಶಾಸನಗಳು ಅನೇಕ ವೇಳೆ ಮಹಾವ್ಯಕ್ತಿಗಳ ವಿಷಯದಲ್ಲಿ ಪ್ರಮಾಣಪೂರ್ಣವಾದ ಮಾಹಿತಿಯನ್ನು ಒದಗಿಸುತ್ತವೆ. ವೀರಶೈವ ಮತಸ್ಥಾಪಕ ಬಸವಣ್ಣನವರ ಬಗ್ಗೆ ಶಾಸನಗಳಲ್ಲಿ ಉಲ್ಲೇಖವೇ ಇರಲಿಲ್ಲ. ಆದುದರಿಂದ ಅವರ ಜೀವಿತಕಾಲ ಮುಂತಾದವುಗಳ ಬಗೆಗೆ ವಿದ್ವಾಂಸರಲ್ಲಿ ಒಮ್ಮತವಿರಲಿಲ್ಲ. ಇಂತಹ ಸಮಯದಲ್ಲಿ ಸೇವುಣ ರಾಜಕೃಷ್ಣನ ಕಾಲದ ಅರ್ಜುನವಾಡ ಶಾಸನವು ಬೆಳಕಿಗೆ ಬ೦ದಿತು. ಇದರಲ್ಲಿ ಬಸವಣ್ಣನವರ ಬಗೆಗೆ ಖಚಿತವಾದ ಉಲ್ಲೇಖವು ಕಾಣಬರುತ್ತದೆ. ಒಟ್ಟಾರೆಯಾಗಿ ಸ್ಮಾರಕಗಳು ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಅರಿಯಲು ಅತ್ಯಂತ ಸಹಾಯಕವಾಗಿವೆ. ಆಕರಗಳು ಹೇಗೆ ಸಾಂಸ್ಕೃತಿಕ ಚರಿತ್ರೆಯನ್ನು ತಿಳಿಯಲು ಸಹಾಯ ಮಾಡುತ್ತವೆಂದು ನೀವು ತಿಳಿದಿದ್ದೀರಿ. ಇಂತಹ ಆಕರಗಳನ್ನು ಮುಂದೆ ಅಧ್ಯಯನದ ದೃಷ್ಟಿಯಿಂದಲೇ ಗಮನಿಸಿದರೆ ನಿಮ್ಮ ತಿಳಿವು ಇನ್ನಷ್ಟು ವಿಶಾಲವಾಗುವುದು.

ಉಲ್ಲೇಖಗಳು

ಬದಲಾಯಿಸಿ

ಮಾಹಿತಿ ಮೂಲ : ಎಪಿಗ್ರಾಫಿಕಾ ಕರ್ನಾಟಕ